ಹುಟ್ಟುಹಬ್ಬಕ್ಕೆ ಅಲ್ಲು ಭರ್ಜರಿ ಗಿಫ್ಟ್: ಹೊಸ ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ರಿಲೀಸ್

ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 38ನೇ ವಸಂತಕ್ಕೆ ಕಾಲಿಟ್ಟ ಅಲ್ಲು ಮನೆಯಲ್ಲಿಯೇ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಲಾಕ್ ಡೌನ್ ಹಿನ್ನಲೆ ಹುಟ್ಟುಹಬ್ಬ ಆಚರಣೆ ಸರಳವಾಗಿದ್ದರು, ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

Recommended Video

MAN VS WILD RAJINI :ಮ್ಯಾನ್ vs ವೈಲ್ಡ್ ಕಾರ್ಯಕ್ರಮದಲ್ಲಿ ರಜಿನಿಕಾಂತ್ | RAJNIKANTH | FILMIBEAT KANNADA

ಹೌದು, ಜನ್ಮ ದಿನದ ಸಡಗರದಲ್ಲಿರುವ ಅಲ್ಲು ಹೊಸ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ರಿಲೀಸ್ ಮಾಡುವ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ್ದಾರೆ. ಅಲಾ ವೈಕುಂಠಪುರಂಲೋ ಸಿನಿಮಾ ಸಕ್ಸಸ್ ನ ಬಳಿಕ ಅಲ್ಲು ಅರ್ಜುನ್ ನಿರ್ದೇಶಕ ಸುಕುಮಾರ್ ಸಾರಥ್ಯದ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹುಟ್ಟುಹಬ್ಬ ಪ್ರಯುಕ್ತ ರಿಲೀಸ್ ಆಗಿರುವ ಫಸ್ಟ್ ಲುಕ್ ಚಿತ್ರದ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಮುಂದೆ ಓದಿ...

ಕುತೂಹಲ ಮೂಡಿಸಿದೆ ಸಿನಿಮಾ ಟೈಟಲ್

ಕುತೂಹಲ ಮೂಡಿಸಿದೆ ಸಿನಿಮಾ ಟೈಟಲ್

ಅಲಾ ವೈಟುಂಠಪುರಂಲೋ ಸಿನಿಮಾ ನಂತರ ಅಲ್ಲು ಅರ್ಜುನ್ ಮತ್ತೊಂದು ವಿಭಿನ್ನ ಟೈಟಲ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅಂದ್ಹಾಗೆ ಅಲ್ಲು ಹೊಸ ಸಿನಿಮಾಗೆ "ಪುಷ್ಪ" ಎಂದು ಟೈಟಲ್ ಇಡಲಾಗಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಪುಷ್ಪಕ್ ನಾರಾಯಣ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನಿರೀಕ್ಷೆ ಹೆಚ್ಚಿಸಿದೆ ಫಸ್ಟ್ ಲುಕ್

ನಿರೀಕ್ಷೆ ಹೆಚ್ಚಿಸಿದೆ ಫಸ್ಟ್ ಲುಕ್

ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಟೈಟಲ್ ಬಹಿರಂಗ ಪಡಿಸುವ ಜೊತೆಗೆ ಚಿತ್ರತಂಡ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಿದೆ. ಉದ್ದ ಕೂದಲು ಮತ್ತು ದಾಡಿ ಬಿಟ್ಟಿರುವ ಅಲ್ಲು ರಗಡ್ ಲುಕ್ ಅಭಿಮಾನಿಗಳ ನಿದ್ದೆಗೆಡಿಸಿದೆ. ಈ ಲುಕ್ ನೋಡಿದರೆ ಇದು ಪಕ್ಕಾ ಆಕ್ಷನ್-ಥ್ರಿಲ್ಲಿಂಗ್ ಸಿನಿಮಾ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಈ ಸಿನಿಮಾದಲ್ಲಿ ಅಲ್ಲು ಲಾರಿ ಡ್ರೈವರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ.

ಟ್ವೀಟ್ ಮಾಡಿರುವ ಅಲ್ಲು ಅರ್ಜುನ್

"ನನ್ನ ಮುಂದಿನ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಪುಷ್ಪ. ಸುಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ನನ್ನ ಆತ್ಮೀಯ ಗೆಳೆಯ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಬಗ್ಗೆ ನಿಜವಾಗಿಯೂ ಉತ್ಸುಕನಾಗಿದ್ದೇನೆ. ನಿಮ್ಮೆಲ್ಲರಿಗೂ ಇಷ್ಟವಾಗಲಿದೆ ಎಂದು ಭಾವಿಸುತ್ತೇವೆ" ಎಂದು ಟ್ವೀಟ್ ಮಾಡಿದ್ದಾರೆ.

ಸುಕುಮಾರ್ ನಿರ್ದೇಶನ

ಸುಕುಮಾರ್ ನಿರ್ದೇಶನ

2004ರಲ್ಲಿ ರಿಲೀಸ್ ಆದ ಸೂಪರ್ ಹಿಟ್ 'ಆರ್ಯ' ಸಿನಿಮಾ ಮೂಲಕ ಮೋಡಿ ಮಾಡಿದ್ದ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಜೋಡಿ ಈಗ ಮೂರನೆ ಬಾರಿಗೆ ಒಂದಾಗಿದ್ದಾರೆ. ಆರ್ಯ ನಂತರ ಮತ್ತೆ ಆರ್ಯ-2 ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಈ ಜೋಡಿ ಈಗ ಪುಷ್ಪ ಮೂಲಕ ಮತ್ತೆ ಒಂದಾಗಿರುವುದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.

ಸೇತುಪತಿ ವಿಲನ್, ರಶ್ಮಿಕಾ ನಾಯಕಿ

ಸೇತುಪತಿ ವಿಲನ್, ರಶ್ಮಿಕಾ ನಾಯಕಿ

ಅಲ್ಲು ಅರ್ಜುನ್ ಪುಷ್ಪ ಸಿನಿಮಾದಲ್ಲಿ ವಿಲನ್ ಆಗಿ ವಿಜಯ್ ಸೇತುಪತಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಪ್ರಕಾಶ್ ರೈ, ಜಗಪತಿ ಬಾಬು ಸೇರಿದಂತೆ ದೊಡ್ಡ ಕಲಾವಿದ ಬಳಗವೇ ಸಿನಿಮಾದಲ್ಲಿದೆ. ಇನ್ನೂ ವಿಶೇಷ ಅಂದರೆ ಅಲ್ಲು ಅರ್ಜುನ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಸಿಕೊಳ್ಳುತ್ತಿದ್ದಾರೆ.

ಕನ್ನಡದಲ್ಲೂ ಬರ್ತಿದೆ ಪುಷ್ಪ

ಕನ್ನಡದಲ್ಲೂ ಬರ್ತಿದೆ ಪುಷ್ಪ

ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾವನ್ನು ಕನ್ನಡ ಅಭಿಮಾನಿಗಳು ವೀಕ್ಷಿಸ ಬಹುದು. ಹುಟ್ಟುಹಬ್ಬದ ದಿನ ಅಲ್ಲು ಕನ್ನಡ ಅಭಿಮಾನಿಗಳಿಗೂ ಸರ್ಪ್ರೈಸ್ ನೀಡಿದ್ದಾರೆ. ಹೌದು, ಇಂದು ಪುಷ್ಪ ಸಿನಿಮಾದ ಕನ್ನಡ ಲುಕ್ ಕೂಡ ಬಿಡುಗಡೆ ಮಾಡಿದ್ದಾರೆ. ಪುಷ್ಪ ಸಿನಿಮಾ ತೆಲುಗು ಮತ್ತು ಕನ್ನಡ ಮಾತ್ರವಲ್ಲದೆ ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲೂ ತೆರೆಗೆ ಬರುತ್ತಿದ್ದು ಈ ಎಲ್ಲಾ ಭಾಷೆಯ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಈ ಎಲ್ಲಾ ಪೋಸ್ಟರ್ ಗಳನ್ನು ನಟ ಅಲ್ಲು ಅರ್ಜುನ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

More from Filmibeat

English summary
Telugu Actor Allu Arjun new movie title and First look released for his Birthday. His movie titled Pushpa.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X