For Quick Alerts
    ALLOW NOTIFICATIONS  
    For Daily Alerts

    'ಆ' ಸಿನಿಮಾಗಿ ಅಲ್ಲು ಅರ್ಜುನ್ ಹೊಸ ಸ್ಟೈಲಿಶ್ ಲುಕ್!

    |

    ನಟ ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾದ ಬಳಿಕ ತಮ್ಮ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್‌ಗಳ ಪೈಕಿ ಅಲ್ಲು ಅರ್ಜುನ್ ಸ್ಟೈಲಿಷ್ ಸ್ಟಾರ್ ಅಂತಲೇ ಖ್ಯಾತಿ ಗಳಿಸಿದವರು. 'ಪುಷ್ಪ 2'ನಲ್ಲಿ ಗ್ಲಾಮರ್ ಲುಕ್ ಬಿಟ್ಟು ವಿಭಿನ್ನ ಸ್ಟೈಲ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದ್ದರೂ ಅಲ್ಲು ಅರ್ಜುನ್.

    ಹಾಗಾಗಿ 'ಪುಷ್ಪ 2' ಸಿನಿಮಾದಲ್ಲಿ ಅಲ್ಲು ಅರ್ಜುನ್ ಯಾವ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ಆದರೆ 'ಪುಷ್ಪ 2' ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಸಿನಿಮಾ ತಂಡ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳುತ್ತಲೂ ಇಲ್ಲ. ಹಾಗಾಗಿ ಸಿನಿಮಾ ಮತ್ತಷ್ಟು ತಡವಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

    'ಕೆಜಿಎಫ್ 2' ಆಯ್ತು ಈಗ 'ವಿಕ್ರಾಂತ್ ರೋಣ' ತಂತ್ರದ ಹಿಂದೆ ಬಿದ್ದ 'ಪುಷ್ಪ 2'! 'ಕೆಜಿಎಫ್ 2' ಆಯ್ತು ಈಗ 'ವಿಕ್ರಾಂತ್ ರೋಣ' ತಂತ್ರದ ಹಿಂದೆ ಬಿದ್ದ 'ಪುಷ್ಪ 2'!

    'ಪುಷ್ಪ 2' ಸಿನಿಮಾದ ಬಗ್ಗೆ ಚರ್ಚೆಗಳು ಜೋರಾಗುತ್ತಾ ಇರುವಾಗಲೇ, ಅಲ್ಲು ಅರ್ಜುನ್ ತಮ್ಮ ಹೊಸ ಲುಕ್ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಇತ್ತೀಚೆಗೆ ತಮ್ಮ ಲುಕ್‌ನಿಂದಲೇ ಅಲ್ಲು ಅರ್ಜುನ್ ಟ್ರೋಲ್ ಆಗಿದ್ದರು. ಇದೀಗ ಅವರ ಹೊಸ ಅವತಾರ ಕೊಂಡಾಡುವಂತೆ ಮಾಡಿದೆ.

    ಗಾಸಿಪ್ ಶೂರರಿಗೆ ತಿರುಗೇಟು; 'ಪುಷ್ಪ' ಪಾರ್ಟ್- 3 ಬಗ್ಗೆ ಫಹಾದ್ ಫಾಸಿಲ್ ಸುಳಿವು!ಗಾಸಿಪ್ ಶೂರರಿಗೆ ತಿರುಗೇಟು; 'ಪುಷ್ಪ' ಪಾರ್ಟ್- 3 ಬಗ್ಗೆ ಫಹಾದ್ ಫಾಸಿಲ್ ಸುಳಿವು!

    'ಪುಷ್ಪ 2'ನಲ್ಲಿ ಅಲ್ಲುಅರ್ಜುನ್ ಲುಕ್!

    'ಪುಷ್ಪ 2'ನಲ್ಲಿ ಅಲ್ಲುಅರ್ಜುನ್ ಲುಕ್!

    'ಪುಷ್ಪ' ಸಿನಿಮಾದ ಪಾತ್ರ ವಿಭಿನ್ನವಾಗಿರುವ ಕಾರಣಕ್ಕೆ ಅಲ್ಲು ಅರ್ಜುನ್‌ಗೆ ಭಿನ್ನ ಲುಕ್ ನೀಡಲಾಗಿತ್ತು. 'ಪುಷ್ಪ 2' ಚಿತ್ರದಲ್ಲಿ ಕೂಡ ಅದೇ ಪಾತ್ರದಲ್ಲಿ, ಅಂದರೆ ಪುಷ್ಪರಾಜ್ ಪಾತ್ರದಲ್ಲಿ ಮುಂದುವರೆಯುತ್ತಾ ಇರುವುದರಿಂದ 'ಪುಷ್ಪ 2' ಚಿತ್ರದಲ್ಲಿ ಕೂಡ ಅದೇ ಲುಕ್ ಇರಲಿದೆ ಎನ್ನಲಾಗಿದೆ. ಆದರೆ ಕಥೆಯಲ್ಲಿ ಪುಷ್ಪರಾಜ್ ಬೇರೆ ರೀತಿಯ ದಾರಿ ಹಿಡಿದಿದ್ದಾರೆ ಅವನ ಲುಕ್ ಕೂಡ ಬದಲಾಗಲಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುಳಿವು ಕೊಟ್ಟಿದೆ ಹೊಸ ಫೋಟೊ.

    ಅಲ್ಲು ಅರ್ಜುನ್ ಹೊಸ ಲುಕ್!

    ಹೌದು, ನಟ ಅಲ್ಲು ಅರ್ಜುನ್ ಹೊಸದೊಂದು ಫೋಟೊದಲ್ಲಿ ರಿವೀಲ್ ಮಾಡಿದ್ದಾರೆ. ಅಲ್ಲು ಅರ್ಜುನ್ ಹೇರ್ ಸ್ಟೈಲ್ ಸಂಪೂರ್ಣ ಬದಲಾಗಿದೆ. ಕಪ್ಪು ಟೀ ಶರ್ಟ್ ಧರಿಸಿ ಹೊಸ ಲುಕ್‌ನಲ್ಲಿ ಮತ್ತಷ್ಟು ಹ್ಯಾಂಡ್ಸಮ್ ಮತ್ತು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೊ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನಟ ಅಲ್ಲು ಅರ್ಜುನ್ 'ಪುಷ್ಪ 2' ಸಿನಿಮಾದಲ್ಲಿ ಇದೇ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

    ಟ್ರೋಲ್ ಆಗಿದ್ದ ಅಲ್ಲು ಅರ್ಜುನ್!

    ಟ್ರೋಲ್ ಆಗಿದ್ದ ಅಲ್ಲು ಅರ್ಜುನ್!

    ಇನ್ನು ಇತ್ತೀಚೆಗೆ ಅಲ್ಲು ಅರ್ಜುನ್ ತಮ್ಮ ಲುಕ್‌ನಿಂದಲೇ ಟ್ರೋಲ್ ಆಗಿದ್ದರು. ಅಲ್ಲು ಅರ್ಜುನ್ ಕೊಂಚ ದಪ್ಪವಾಗಿ ಕಾಣಿಸಿಕೊಂಡಿದ್ದು ಮತ್ತು ಹೇರ್ ಸ್ಟೈಲ್ ಕೂಡ ಸರಿಯಾಗಿರಲಿಲ್ಲ. ಹಾಗಾಗಿ ಅಲ್ಲು ಅರ್ಜುನ್ ಇತ್ತೀಚಿನ ಹಳೆಯ ಲುಕ್ ನೆಗೆಟಿವ್ ಕಮೆಂಟ್ಸ್ ಗಿಟ್ಟಿಸಿಕೊಂಡಿತ್ತು. ಅಲ್ಲು ಅರ್ಜುನ್ ಅವರನ್ನು ಪಾವ್ ಭಾಜಿ ಎಂದು ಕರೆದು ಟ್ರೋಲ್ ಮಾಡಲಾಗಿತ್ತು. ಆದರೆ ಈಗ ಅದೆಲ್ಲದಕ್ಕೂ ತಮ್ಮ ಹೊಸ ಸ್ಟೈಲ್ ಮೂಲಕ ಖಡಕ್ ಉತ್ತರ ಕೊಟ್ಟಿದ್ದಾರೆ ಸ್ಟೈಲಿಸ್ಟ್ ಸ್ಟಾರ್.

    'ಪುಷ್ಪ 2' ಶೂಟಿಂಗ್

    'ಪುಷ್ಪ 2' ಶೂಟಿಂಗ್

    ಅಲ್ಲು ಅರ್ಜುನ್ ತಮ್ಮ ಲುಕ್‌ ಬದಲಿಸಿ ಕೊಳ್ಳುತ್ತಿದ್ದ ಹಾಗೆ 'ಪುಷ್ಪ 2' ಸಿನಿಮಾದ ಬಗ್ಗೆ ಕುತೂಹಲಗಳು ಹುಟ್ಟಿಕೊಂಡಿವೆ. ಸಿನಿಮಾ ಶೂಟಿಂಗ್ ಇನ್ನು ಕೂಡ ಶುರುವಾಗಿಲ್ಲ. ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಸಿನಿಮಾ ಭರ್ಜರಿಯಾಗಿ ಶೂಟಿಂಗ್ ಶುರು ಮಾಡಲಿದೆ ಎನ್ನುವ ಮಾಹಿತಿ ಇದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ 'ಪುಷ್ಪ' ರಿಲೀಸ್ ಆಗಿತ್ತು. ಈಗ 'ಪುಷ್ಪ 2' 2023ರಲ್ಲಿ ತೆರೆಗೆ ಬರಲಿದೆ.

    English summary
    Allu Arjun New Stylish Look, Photo Viral In Social Media

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X