ಗಾಯಗೊಂಡ ಅಭಿಮಾನಿಗಳು: ಭಾವನಾತ್ಮಕ ಪತ್ರ ಬರೆದ ಅಲ್ಲು ಅರ್ಜುನ್!

ನಿಗಳು: ಭಾವನಾತ್ಮಕ ಪತ್ರ ಬರೆದ ಅಲ್ಲು ಅರ್ಜುನ್!

ನಟ ಅಲ್ಲು ಅರ್ಜುನ್‌ಗೆ ಬಹುದೊಡ್ಡ ಅಭಿಮಾನಿ ಬಳಗ ಇದೆ. ಅಲ್ಲು ಅರ್ಜುನ್ ಅವರನ್ನು ದೇವರಂತೆ ಪೂಜಿಸುವ ಅಭಿಮಾನಿಗಳು ಇದ್ದಾರೆ. ನಟ ಅಲ್ಲುಗಾಗಿ ಬಂದ ಅಭಿಮಾನಿಗಳು ಪೆಟ್ಟು ತಿಂದು ಹಿಂದಿರುಗಿದ್ದು, ಅದಕ್ಕಾಗಿ ಅಲ್ಲು ಅರ್ಜುನ್ ಕ್ಷಮೆ ಕೋರಿದ್ದಾರೆ.

ಸದ್ಯ ಪುಷ್ಪ ಚಿತ್ರದ ಪ್ರಚಾರ ಕಾರ್ಯದಲ್ಲಿ ನಟ ಅಲ್ಲು ಅರ್ಜುನ್ ಬ್ಯುಸಿ ಆಗಿದ್ದಾರೆ. ಆದರೆ ಈ ನಡುವೆ ಅಲ್ಲು ಅರ್ಜುನ್ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದರು. ಹಾಗಾಗಿ ಚಿತ್ರದ ಕೆಲಸಗಳ ನಡುವೆಯೂ ಅಲ್ಲು ಅರ್ಜುನ್ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಲು ಮುಂದಾಗಿದ್ದರು.

ಇದು ಪುಷ್ಪ ಚಿತ್ರದ ಪ್ರಮೋಷನ್ ಭಾಗವೇ ಆಗಿತ್ತು. ಅದರೆ ಅಲ್ಲು ಅರ್ಜುನ್ ಅಂದುಕೊಂಡಂತೆ ಅವರು ಅಭಿಮಾನಿಗಳನ್ನು ಭೇಟಿ ಮಾಡಿಲ್ಲ. ನಡೆದ ಎಡವಟ್ಟಿನಿಂದ ಅಲ್ಲು ಅರ್ಜುನ್ ಕ್ಷಮೆ ಕೇಳಿ ಪತ್ರ ಬರೆದಿದ್ದಾರೆ.

ಅಲ್ಲು ಅರ್ಜುನ್‌ಗಾಗಿ ಬಂದಿದ್ದರು 10 ಸಾವಿರ ಅಭಿಮಾನಿಗಳು!

ಅಲ್ಲು ಅರ್ಜುನ್‌ಗಾಗಿ ಬಂದಿದ್ದರು 10 ಸಾವಿರ ಅಭಿಮಾನಿಗಳು!

ಹೈದ್ರಾಬಾದ್‌ನ ನಾಗಾರ್ಜುನ ಕನ್ವೆನ್ಷನ್ ಹಾಲ್‌ನಲ್ಲಿ ಅಲ್ಲು ಅರ್ಜುನ್ ಅಭಿಮಾನಿಗಳನ್ನು ಭೇಟಿ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ಅಭಿಮಾನಿಗಳ ಜೊತೆಗೆ ಮಾತನಾಡುವ ಯೋಜನೆ ಹಾಕಿ ಕೊಂಡಿದ್ದರು. ಮೈತ್ರಿ ಮೂವೀಸ್ ಮತ್ತು ಶ್ರೇಯಸ್‌ ಮೀಡಿಯಾ ಸೇರಿ ಈ ಕಾರ್ಯಕ್ರವನ್ನು ಆಯೋಜಿಸಿತ್ತು. ಆದರೆ ಈ ಕಾರ್ಯಕ್ರಮ ಯಶಸ್ವಿ ಆಗಿಲ್ಲ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರು. ನೂಕು, ನುಗ್ಗಲು ಗಲಾಟೆ ಆಗಿ ಒಂದಷ್ಟು ಜನ ಅಭಿಮಾನಿಗಳು ಗಾಯಗೊಂಡಿದ್ದಾರೆ.


ಈ ಕಾರ್ಯಕ್ರಮದಲ್ಲಿ 200 ಜನರಿಗೆ ಮಾತ್ರ ಅವಕಾಶ ಇತ್ತು. ಆದರೆ ಅಲ್ಲು ಅರ್ಜುನ್‌ ಬರುತ್ತಾರೆ ಎಂದು 10 ಸಾವಿರ ಅಭಿಮಾನಿಗಳು ಸೇರಿ ಬಿಟ್ಟಿದ್ದರು. ಪರಿಸ್ಥಿತಿ ನಿಭಾಯಿಸುವುದು ಪೊಲೀಸರಿಗೂ ಸವಾಲಾಗಿತ್ತು. ಇದೆ ವೇಳೆ ಕೆಲ ಅಭಿಮಾನಿಗಳು ಗಾಯಗೊಂಡಿದ್ದಾರೆ.

ಅಭಿಮಾನಿಗಳಿಗಾಗಿ ಭಾವನಾತ್ಮಕ ಪತ್ರ ಬರೆದ ಅಲ್ಲು ಅರ್ಜುನ್!

ಅಭಿಮಾನಿಗಳಿಗಾಗಿ ಭಾವನಾತ್ಮಕ ಪತ್ರ ಬರೆದ ಅಲ್ಲು ಅರ್ಜುನ್!

ಈ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಗಾಯಗೊಂಡಿದ್ದಾರೆ. ಹಾಗಾಗಿ ಅಲ್ಲು ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. " ಫ್ಯಾನ್‌ ಮೀಟ್‌ ಕಾರ್ಯಕ್ರಮದಲ್ಲಿ ನನ್ನ ಕೆಲವು ಅಭಿಮಾನಿಗಳು ಗಾಯಗೊಂಡಿರುವ ಕಹಿ ಘಟನೆ ಬಗ್ಗೆ ತಿಳಿಯಿತು. ನನ್ನ ತಂಡ ಅವರನ್ನು ನೋಡಿಕೊಳ್ಳುತ್ತಿದೆ. ಮತ್ತು ನನಗೆ ಮಾಹಿತಿ ನೀಡುತ್ತಿದೆ. ಇನ್ನು ಮುಂದೆ ಈ ರೀತಿಯ ಅಹಿತಕರ ಘಟನೆ ನಡೆಯದಂತೆ ನೋಡಿ ಕೊಳ್ಳುತ್ತೇನೆ. ನಿಮ್ಮ ಪ್ರೀತಿ, ಅಭಿಮಾನವೇ ನನ್ನ ದೊಡ್ಡ ಶಕ್ತಿ. ನಾನು ಅದನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ" ಎಂದು ಅಭಿಮಾನಿಗಳ ಬಗ್ಗೆ ಭಾವನಾತ್ಮವಾಗಿ ಬರೆದುಕೊಂಡಿದ್ದಾರೆ.

ಅಭಿಮಾನಿಗಳನ್ನು ಭೇಟಿ ಆಗದೆ ಹೊರಟ ಅಲ್ಲು ಅರ್ಜುನ್!

ಅಭಿಮಾನಿಗಳನ್ನು ಭೇಟಿ ಆಗದೆ ಹೊರಟ ಅಲ್ಲು ಅರ್ಜುನ್!

ಅಷ್ಟಕ್ಕೂ ಅಲ್ಲು ಅರ್ಜುನ್ ಮತ್ತು ಅವರಿಗಾಗಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್‌ ಭಾಗಿ ಆಗಲೇ ಇಲ್ಲ. ಹೆಚ್ಚಿನ ಜನ ಸೇರಿದ್ದರಿಂದ ಅಲ್ಲು ಅರ್ಜುನ್‌ ಕಾರ್ಯಕ್ರಮದ ಸ್ಥಳಕ್ಕೆ ಬರಲಿಲ್ಲ. ಗಲಾಟೆಯ ವಿಚಾರ ತಿಳಿದ ಬಳಿಕ ಅಲ್ಲು ಅರ್ಜುನ್ ಅರ್ಧ ದಾರಿಯಿಂದಲೇ ವಾಪಸ್ ಮನೆಗೆ ತೆರಳಿದ್ದಾರೆ. ಆಗಲೂ ಸಾಕಷ್ಟು ಅಭಿಮಾನಿಗಳು ಅವರನ್ನು ಮನೆವರೆಗೂ ಹಿಂಬಾಲಿಸಿದ್ದಾರೆ. ಕೇವಲ 200 ಜನರನ್ನು ಮಾತ್ರ ಹಾಲ್‌ ಒಳಗೆ ಬಿಡಲಾಗಿತ್ತು. ಆದರೆ ಹೊರಗೆ ಇದ್ದವರು ಒಳಗೆ ಬಿಡುವಂತೆ ಗಲಾಟೆ ಮಾಡುತ್ತಿದ್ದರು. ಅಲ್ಲಿಗೆ ಅಲ್ಲು ಅರ್ಜುನ್‌ ಬಂದರೆ ಹೆಚ್ಚಿನ ತೊಂದರೆ ಆಗುತ್ತದೆ ಎಂದು ಕಾರ್ಯಕ್ರಮವನ್ನು ರದ್ದು ಮಾಡಲಾಯಿತು.

ಪುಷ್ಪ ಚಿತ್ರದ ಪ್ರಮೋಷನ್‌ನಲ್ಲಿ ಅಲ್ಲು ಅರ್ಜುನ್!

ಪುಷ್ಪ ಚಿತ್ರದ ಪ್ರಮೋಷನ್‌ನಲ್ಲಿ ಅಲ್ಲು ಅರ್ಜುನ್!

ನಟ ಅಲ್ಲು ಅರ್ಜುನ್ ಸದ್ಯ ಪುಷ್ಪ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಡಿಸೆಂಬರ್‌ 17ಕ್ಕೆ ಪುಷ್ಪ ರಿಲೀಸ್‌ ಆಗಲಿದೆ. ಆದರೆ ಅತಿ ಕಡಿಮೆ ಸಮಯದಲ್ಲಿ ಪುಷ್ಪಚಿತ್ರದ ಪ್ರಚಾರ ಕಾರ್ಯಗಳು ನಡೆಯುತ್ತಿವೆ. ಸದ್ಯ ಚೆನ್ನೈನಲ್ಲಿ ಪ್ರಚಾರಕ್ಕೆ ತೆರಳಿದೆ ಚಿತ್ರ ತಂಡ. ಇನ್ನು ಪ್ರಚಾರಕ್ಕಾಗಿ ಹಲವು ಸಿಟಿಗಳನ್ನು ಸುತ್ತುವ ಯೋಜನೆ ಚಿತ್ರ ತಂಡಕ್ಕೆ ಇದೆ.

More from Filmibeat

English summary
Allu Arjun Pens A Heartfelt Note For His Fans, Because His Fans Get Injured In Fan Meet Programme,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X