ಹೊಸ ತಲೆಮಾರಿನ ನಾಯಕ ಉದಯ ಎಂದು ಅಲ್ಲು ಅರ್ಜುನ್ ಹೊಗಳಿದ್ದು ಯಾರನ್ನು?

ನಟ ಅಲ್ಲು ಅರ್ಜುನ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಂತೆ ಅವರು ಹೆಚ್ಚಾಗಿ ಹೊಸ ತೆಲುಗು ಸಿನಿಮಾಗಳನ್ನು ನೋಡುವುದಿಲ್ಲವಂತೆ. ಪ್ರೀಮಿಯರ್‌ ಶೋ ಗಳಲ್ಲಿ ಪಾಲ್ಗೊಳ್ಳುವುದು ಸಹ ಕಡಿಮೆಯೆ. ಆದರೆ ಈಗ ಅಲ್ಲು ಅರ್ಜುನ್‌ ಅವರು ತೆಲುಗು ಸಿನಿಮಾ ಒಂದನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

ನಿನ್ನೆಯಷ್ಟೆ ಬಿಡುಗಡೆ ಆದ ತೆಲುಗು ಸಿನಿಮಾ 'ಜಾತಿರತ್ನಾಲು' ನೋಡಿರುವ ಅಲ್ಲು ಅರ್ಜುನ್ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಸಿನಿಮಾ ನಿರ್ದೇಶಕ ಹಾಗೂ ನಟರನ್ನು ಹೊಗಳಿದ್ದಾರೆ.

'ನಿನ್ನೆ ರಾತ್ರಿ 'ಜಾತಿರತ್ನಾಲು' ಸಿನಿಮಾ ನೋಡಿದೆ. ಅದ್ಭುತವಾದ ಸಿನಿಮಾ ಅದು. ಸಿನಿಮಾ ನೋಡುವಾಗ ಬಹಳ ನಕ್ಕೆ ನಾನು. ಇತ್ತೀಚಿನ ವರ್ಷಗಳಲ್ಲಿ ಇಷ್ಟೋಂದು ನಕ್ಕಿರಲಿಲ್ಲ' ಎಂದಿದ್ದಾರೆ ಅಲ್ಲು ಅರ್ಜುನ್.

Allu Arjun Praises Naveen Polishetty Movie Jathi Rathnalu

'ನವೀನ್ ಪೋಲಿಶೆಟ್ಟಿ ತಮ್ಮ ಅದ್ಭುತ ನಟನೆಯಿಂದ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಹೊಸ ಜನರೇಶನ್‌ನ 'ಪರ್ಫಾಮರ್' ಅವರು. ಹೊಸ ತಲೆಮಾರಿನ ನಾಯಕ ನಟನ ಉದಯವಾಗಿದೆ' ಎಂದು ನವೀನ್ ಅನ್ನು ಹೊಗಳಿದ್ದಾರೆ ಅಲ್ಲು ಅರ್ಜುನ್.

'ರಾಹುಲ್ ರಾಮಕೃಷ್ಣ ಅವರದ್ದು ಶ್ರಮರಹಿತ ಸಹಜ ನಟನೆ. ಪ್ರಿಯದರ್ಶಿ ಮತ್ತು ಫರಿಯಾ ಸಹ ತಮ್ಮ ನಟನೆಯಿಂದ ಗಮನ ಸೆಳೆಯುತ್ತಾರೆ. ಸಿನಿಮಾದಲ್ಲಿ ನಟಿಸಿರುವ ಎಲ್ಲರ ಅಭಿನಯವೂ ಚೆನ್ನಾಗಿದೆ' ಎಂದಿದ್ದಾರೆ ಅಲ್ಲು ಅರ್ಜುನ್.

'ಸಿನಿಮಾದಲ್ಲಿ ಕೆಲಸ ಮಾಡಿರುವ ಎಲ್ಲ ತಂತ್ರಜ್ಞರಿಗೂ ನನ್ನ ಅಭಿನಂದನೆ. ಸಿನಿಮಾದ ನಿರ್ಮಾಪಕರಾದ ನಾಗ್ ಅಶ್ವಿನ್‌ಗೆ ವಿಶೇಷ ಗೌರವ ಮತ್ತು ಬಹಳ ಮುಖ್ಯವಾಗಿ ಸಿನಿಮಾದ ನಿರ್ದೇಶಕ ಅನುದೀಪ್ ಕೆವಿ ಗೆ ಅಭಿನಂದನೆ ಸಲ್ಲಿಸಲೇ ಬೇಕು. ಅವರು ಎಲ್ಲರನ್ನೂ ರಂಜಿಸಿದ್ದಾರೆ' ಎಂದಿದ್ದಾರೆ ಅಲ್ಲು.

'ಏಜೆಂಟ್ ಸಾಯಿ ಶ್ರೀನಿವಾಸ ಆತ್ರೇಯ', ಹಿಂದಿಯ 'ಚಿಚೋರೆ' ಸಿನಿಮಾಗಳಲ್ಲಿ ನಟಿಸಿದ್ದ ನವೀನ್ ಪೋಲಿಶೆಟ್ಟಿ ನಟನೆಯ 'ಜಾತಿರತ್ನಾಲು' ಸಿನಿಮಾಕ್ಕೆ ಬಹಳ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Recommended Video

ಕಥೆಗೆ ಟೈಟಲ್ ಹೇಗೆ ಸೆಲೆಕ್ಟ್ ಆಯ್ತು ಅಂತಾ ಹೇಳಿದ್ರು ಡೈರೆಕ್ಟರ್ ಹೇಮಂತ್ | Filmibeat Kannada

ನಟ ಅಲ್ಲು ಅರ್ಜುನ್ ಪ್ರಸ್ತುತ 'ಪುಷ್ಪ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾವನ್ನು ಸುಕುಮಾರ್ ನಿರ್ದೇಶಿಸುತ್ತಿದ್ದು, ನಾಯಕಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ತಮಿಳಿನ ಚಿಯಾನ್ ವಿಕ್ರಂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
llu Arjun praised Naveen Polishetty's movie Jathi Rathnalu. He said Naveen in new age performer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X