ಟ್ರೆಂಡಿಂಗ್‌ನಲ್ಲಿರೋ ಟಾಲಿವುಡ್ ಸ್ಟಾರ್ ನಿರ್ದೇಶಕರ ಪತ್ನಿ ಯಾರು ಗೊತ್ತೇ?

By ಫಿಲ್ಮಿಬೀಟ್ ಡೆಸ್ಕ್

ಸೋಶಿಯಲ್ ಮೀಡಿಯಾ ಅದೆಷ್ಟೋ ಮಂದಿಯ ಐಡೆಂಟಿಟಿ ಆಗಿಬಿಟ್ಟಿದೆ. ಇನ್‌ಸ್ಟಾಗ್ರಾಂ ಅಂತಹ ಸೋಶಿಯಲ್ ಮೀಡಿಯಾ ಮೂಲಕ ತನ್ನ ಪ್ರತಿಭೆಯನ್ನು ತೋರಿಸುವುದಕ್ಕೆ ಮುಂದಾಗುತ್ತಾರೆ. ಇಲ್ಲವೇ ಕೆಲವರು ಫಿಟ್ನೆಸ್ ಟಿಪ್ಸ್ ಕೊಡುತ್ತಾರೆ. ಇಲ್ಲವೇ ಫಿಟ್ನೆಸ್‌ಗೆ ಪ್ರೇರಣೆಯಾಗುತ್ತಾರೆ. ಹೀಗೆ ಒಂದು ವಿಡಿಯೋ, ಫೋಟೊಗಳನ್ನು ಶೇರ್ ಮಾಡುತ್ತಾ? ತನ್ನ ಲೋಕದಲ್ಲೇ ಜನಪ್ರಿಯತೆ ಗಿಟ್ಟಿಕೊಂಡವರಿದ್ದಾರೆ.

ಇವರಲ್ಲಿ ಕೇವಲ ಸೆಲೆಬ್ರಿಟಿಗಳಷ್ಟೇ ಅಲ್ಲ. ಸೆಲೆಬ್ರಿಟಿಗಳ ಪತ್ನಿಯರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಇದ್ದಾರೆ. ನಟರು, ನಿರ್ದೇಶಕರು, ತಂತ್ರಜ್ಞರ ಪತ್ನಿಯರನ್ನು ಫಾಲೋ ಮಾಡುತ್ತಿರುವವರ ಸಂಖ್ಯೆ ಏನೂ ಕಮ್ಮಿಯಿಲ್ಲ. ಕೆಲವರಂತೂ ನಾಯಕಿಯರಿಗೆ ಕಾಂಪಿಟೇಷನ್ ಕೊಡುವಷ್ಟು ಫೇಮಸ್ ಆಗಿದ್ದಾರೆ.

Allu Arjun Pushpa 2 Movie director Sukumar wife photos trending in social media

ಕಳೆದ ಕೆಲವು ದಿನಗಳಿಂದ ತೆಲುಗು ಮಂದಿ ಟಾಲಿವುಡ್‌ನ ಪ್ಯಾನ್‌ ಇಂಡಿಯಾ ನಿರ್ದೇಶಕರ ಪತ್ನಿ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ತಮ್ಮ ಫಿಟ್ನೆಸ್‌ನಿಂದ, ಸೌಂದರ್ಯದಿಂದ ತೆಲುಗು ಮಂದಿಯೆ ಗಮನ ಸೆಳೆದಿದ್ದಾರೆ. ಅಷ್ಟಕ್ಕೂ ಈಕೆ ಕೇವಲ ಪತಿಯ ಹೆಸರಿನಿಂದ ಫೇಮಸ್ ಆಗಿಲ್ಲ. ಈಕೆ ಉದ್ಯಮಿ ಕೂಡ ಹೌದು. ಹಾಗಿದ್ದರೆ, ತೆಲುಗಿನ ಸ್ಟಾರ್ ನಿರ್ದೇಶಕನ ಪತ್ನಿಯ ಹಿನ್ನೆಲೆ ಏನು? ತಿಳಿಯಲು ಮುಂದೆ ಓದಿ.

ಟಾಲಿವುಡ್‌ನಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಇಬ್ಬರು ನಿರ್ದೇಶಕರಲ್ಲಿ ಒಬ್ಬರು ರಾಜಮೌಳಿ. ಇನ್ನೊಬ್ಬರು 'ಪುಷ್ಪ 2' ಸಿನಿಮಾದ ಸುಕುಮಾರ್. ಈ ಇಬ್ಬರು ನಿರ್ದೇಶಕರಿಗೆ ಸದ್ಯ ಸಿಕ್ಕಾಪಟ್ಟೆ ಬೇಡಿಕೆಯಿದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿರುವವರು ನಿರ್ದೇಶಕ ಸುಕುಮಾರ್ ಪತ್ನಿ ತಬಿತಾ.

ತಬಿತಾ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಫಿಟ್ನೆಸ್ ಕಡೆಗೆ ಹೆಚ್ಚು ಗಮನ ಹರಿಸುವ ತಬಿತಾ ಸುಕುಮಾರ್ ನಿರಂತರವಾಗಿ ವಿಡಿಯೋ ಹಾಗೂ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಫಿಟ್ನೆಸ್ ವಿಡಿಯೋಗಳಿಂದ ಹಿಡಿದು ಟ್ರಾವೆಲ್ ಮಾಡಿದ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅದು ಬಿಟ್ಟರೆ, ತನಿತಾ ಸುಕುಮಾರ್ ಪತಿಯ ಸಿನಿಮಾಗಳ ಪೋಸ್ಟರ್‌ಗಳು, ತೆಲುಗು ಸೆಲೆಬ್ರಿಟಿಗಳೊಂದಿಗಿನ ತೆಗೆಸಿಕೊಂಡ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.

Allu Arjun Pushpa 2 Movie director Sukumar wife photos trending in social media

ಕಳೆದ ಕೆಲವು ದಿನಗಳಿಂದ ತಬಿತಾ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು, ಯಾವ ಹೀರೋಯಿನ್‌ಗೂ ಕಮ್ಮಿಯಿಲ್ಲ ಅಂತ ನೆಟ್ಟಿಗರು ಕಾಮೆಂಟ್ ಮಾಡುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ. ತನಿತಾಗೆ ಸೋಶಿಯಲ್ ಮೀಡಿಯಾದಲ್ಲಿ ಸದ್ಯ 88.6 ಸಾವಿರ ಇವರನ್ನು ಫಾಲೋ ಮಾಡುತ್ತಿದ್ದಾರೆ.

ಇನ್ನೊಂದು ಕಡೆ ತಬಿತಾ ಸುಕುಮಾರ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಉದ್ಯಮಿ ಅಂತಲೂ ಬರೆದು ಕೊಂಡಿದ್ದಾರೆ. ಸದ್ಯ ತೆಲುಗು ಮಂದಿ ಸುಕುಮಾರ್ ಪತ್ನಿ ಸೌಂದರ್ಯಕ್ಕೆ ಶಹಬ್ಬಾಸ್ ಗಿರಿಯ ನೀಡುತ್ತಿದ್ದಾರೆ. ಸುಕುಮಾರ್ ಸದ್ಯ 'ಪುಷ್ಪ 2' ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈಗಾಗಲೇ ಸಿನಿಮಾ ನೋಡುವುದಕ್ಕೆ ತುದಿಗಾಲ್ಲಿ ನಿಂತಿದ್ದಾರೆ. ಇದೇ ಸಂದರ್ಭದಲ್ಲಿ ಪತ್ನಿ ತಬಿತಾ ಕೂಡ ಟ್ರೆಂಡಿಂಗ್‌ನಲ್ಲಿದ್ದಾರೆ.

More from Filmibeat

English summary
Pushpa 2 movie director Sukumar's wife looks like a heroine:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X