For Quick Alerts
  ALLOW NOTIFICATIONS  
  For Daily Alerts

  ಗಾಸಿಪ್ ಶೂರರಿಗೆ ತಿರುಗೇಟು; 'ಪುಷ್ಪ' ಪಾರ್ಟ್- 3 ಬಗ್ಗೆ ಫಹಾದ್ ಫಾಸಿಲ್ ಸುಳಿವು!

  |

  ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ' ಪಾರ್ಟ್ -2 ಯಾವಾಗ ಬರುತ್ತೋ ಅಂತ ಅಭಿಮಾನಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯ್ತಿದ್ದಾರೆ. ಇಂತಹ ಹೊತ್ತಲ್ಲೇ ನಟ ಫಹಾದ್ ಫಾಸಿಲ್ ಪಾರ್ಟ್-2 ಮಾತ್ರವಲ್ಲ, ಪಾರ್ಟ್- 3 ಕೂಡ ಬರುತ್ತೆ ಅನ್ನೋ ಕ್ರೇಜಿ ನ್ಯೂಸ್ ಕೊಟ್ಟಿದ್ದಾರೆ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಕಾಂಬಿನೇಷನ್‌ನಲ್ಲಿ ಬಂದ ಮಾಸ್ ಮಸಾಲಾ ಎಂಟರ್‌ಟೈನರ್ 'ಪುಷ್ಪ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಾಕ್ಸಾಫೀಸ್ ಶೇಕ್ ಮಾಡಿತ್ತು.

  ಬಾಲಿವುಡ್‌ ಪ್ರೇಕ್ಷಕರು ಕೂಡ ಪುಷ್ಪರಾಜ್ ಆರ್ಭಟಕ್ಕೆ ಕ್ಲೀನ್ ಬೋಲ್ಡ್ ಆಗಿದ್ದರು. 360 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್ ಸೇರಿಕೊಂಡಿದೆ. ಪ್ರೀಕ್ವೆಲ್‌ಗೆ ಸಿಕ್ಕ ರೆಸ್ಪಾನ್ಸ್ ನೋಡಿ ನಿರ್ದೇಶಕ ಸುಕುಮಾರ್ ಸೀಕ್ವೆಲ್ ಕಥೆಯನ್ನು ಬದಲಿಸುತ್ತಿದ್ದಾರೆ. ಫಾಹಾದ್ ಫಾಸಿಲ್ ಪಾತ್ರವನ್ನು ಕತ್ತರಿಸಿ, ವಿಜಯ್ ಸೇತುಪತಿಯನ್ನು ಮತ್ತೊಬ್ಬ ವಿಲನ್ ಆಗಿ ಪರಿಚಯಿಸ್ತಿದ್ದಾರೆ ಅನ್ನೋ ಗುಸುಗುಸು ಕೇಳಿಬಂದಿತ್ತು. ಇಂತಹ ಗಾಸಿಪ್‌ಗಳಿಗೆಲ್ಲಾ ಫಹಾದ್ ಫಾಸಿಲ್ ಸ್ಪಷ್ಟನೆ ನೀಡಿದ್ದಾರೆ. ಪಾರ್ಟ್- 3 ಇದೆಲ್ಲದರ ನಡುವೆ ನಟ ಫಹಾದ್ ಫಾಸಿಲ್ ಮತ್ತೊಂದು ಸೀಕ್ವೆಲ್ ಬಗ್ಗೆ ಸುಳಿವು ಕೊಟ್ಟಿದ್ದಾರೆ.

  ಮ್ಯೂಸಿಕ್ ಡೈರೆಕ್ಟರ್‌ ದೇವಿ ಶ್ರೀ ಪ್ರಸಾದ್‌ರಿಂದ 'ಪುಷ್ಪ 2' ಅಪಾಯ!?ಮ್ಯೂಸಿಕ್ ಡೈರೆಕ್ಟರ್‌ ದೇವಿ ಶ್ರೀ ಪ್ರಸಾದ್‌ರಿಂದ 'ಪುಷ್ಪ 2' ಅಪಾಯ!?

  ಅಚ್ಚರಿ ಅನ್ನಿಸಿದ್ರು, ಇದು ನಿಜ. ಸದ್ಯ ಭಾರತೀಯ ಚಿತ್ರರಂಗದಲ್ಲಿ ಸೀಕ್ವೆಲ್ ಸಿನಿಮಾಗಳ ಟ್ರೆಂಡ್ ನಡೀತಿದೆ. 'ಬಾಹುಬಲಿ' ಸೀರಿಸ್ ನಂತ್ರ 'ಕೆಜಿಎಫ್' ಸೀರಿಸ್ ರಿಲೀಸ್ ಆಗಿ ಸೂಪರ್ ಸಕ್ಸಸ್ ಕಂಡಿದೆ. ಈಗ 'ಪುಷ್ಪ' ಸೀರಿಸ್ ಸರದಿ. ರಕ್ತ ಚಂದನ ಸ್ಮಗ್ಲರ್ ಪುಷ್ಪರಾಜ್ ಕಥೆಯನ್ನು ಸುಕುಮಾರ್ ಬಹಳ ಸೊಗಸಾಗಿ ಕಟ್ಟಿಕೊಟ್ಟು ಗೆದ್ದಿದ್ದಾರೆ. ಸುಕ್ಕು ಡೈರೆಕ್ಷನ್, ಅಲ್ಲು ಅರ್ಜುನ್ ಪರ್ಫಾರ್ಮೆನ್ಸ್, ಸಮಂತಾ ಐಟಂ ಸಾಂಗ್, ವಿಲನ್ ಆಗಿ ಫಹಾದ್ ಫಾಸಿಲ್ ಅಬ್ಬರ ಎಲ್ಲಾ ಸೇರಿ ಸಿನಿಮಾ ನಿರೀಕ್ಷೆ ಮೀರಿ ಸಕ್ಸಸ್ ಕಂಡಿತ್ತು. ಎಸ್‌ಪಿ ಭನ್ವರ್ ಸಿಂಗ್ ಶೇಖಾವತ್ ರೋಲ್‌ನಲ್ಲಿ ಕೆಲವೇ ನಿಮಿಷಗಳು ಕಾಣಿಸಿಕೊಂಡರೂ, ಸಹಜ ನಟ ಫಹಾದ್ ಫಾಸಿಲ್ ಪ್ರೇಕ್ಷಕರ ಗಮನ ಸೆಳೆದಿದ್ದರು. ಅಷ್ಟೇ ಅಲ್ಲ ಸೀಕ್ವೆಲ್‌ನಲ್ಲಿ ಅಲ್ಲು ಅರ್ಜುನ್ ಹಾಗೂ ಫಹಾದ್ ಫಾಸಿಲ್ ಫೈಟ್ ರೋಚಕವಾಗಿರುತ್ತೆ ಅನ್ನೋ ಕುತೂಹಲ ಮೂಡಿದೆ. ಕೆಲವರು ಒಂದೇ ಚಿತ್ರದಲ್ಲಿ ಎಲ್ಲಾ ಕಥೆ ಹೇಳಿ ಮುಗಿಸಬಹುದಿತ್ತು ಅಂದರೆ, ಇನ್ನು ಕೆಲವರು ಪಾರ್ಟ್- 2 ಹೇಗಿರುತ್ತೋ ಅಂತ ಕಾಯ್ತಿದ್ದಾರೆ. ಇದೆಲ್ಲದರ ನಡುವೆಯೇ ಪಾರ್ಟ್-3 ಬಗ್ಗೆ ಬ್ರೇಕಿಂಗ್ ನ್ಯೂಸ್ ಬಂದಿದೆ.

   'ಪುಷ್ಪ' ಸೆಕೆಂಡ್ ಸೀಕ್ವೆಲ್ ಬಗ್ಗೆ ಫಹಾದ್ ಫಾಸಿಲ್ ಹೇಳಿಕೆ

  'ಪುಷ್ಪ' ಸೆಕೆಂಡ್ ಸೀಕ್ವೆಲ್ ಬಗ್ಗೆ ಫಹಾದ್ ಫಾಸಿಲ್ ಹೇಳಿಕೆ

  ಸುಕುಮಾರ್ ನಿರ್ದೇಶನದ 'ಪುಷ್ಪ' ಪಾರ್ಟ್- 2 ಬಗ್ಗೆ ದಿನಕ್ಕೊಂದು ಗಾಸಿಪ್ ಗಿರಿಕಿ ಹೊಡೀತಿದೆ. ಇದೆಲ್ಲದರ ನಡುವೆ ಸ್ವತ: ಫಹಾದ್ ಫಾಸಿಲ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಪಾರ್ಟ್- 2 ಅಷ್ಟೇ ಅಲ್ಲ, ಪಾರ್ಟ್- 3 ಕುರಿತು ಹಿಂಟ್ ಕೊಟ್ಟಿದ್ದಾರೆ. 'ಸುಕ್ಕು ಸರ್ ಮೊದಲು ನನಗೆ ಕಥೆ ಹೇಳಿದಾಗ 'ಪುಷ್ಪ' ಸಿನಿಮಾ ಮಾತ್ರ ಇದೆ ಅಂದಿದ್ದರು. ಪೊಲೀಸ್ ಸ್ಟೇಷನ್ ಸೀನ್ ಸೆಕೆಂಡ್ ಹಾಫ್‌ನಲ್ಲಿ ನನ್ನ ಪಾತ್ರದ ನಂತರ ಎರಡು ಭಾಗಗಳಾಗಿ ಬದಲಾಯಿತು. ಇತ್ತೀಚೆಗೆ ಸುಕುಮಾರ್ ಸರ್ ನನ್ನ ಜೊತೆ ಮಾತನಾಡಿದಾಗ 'ಪುಷ್ಪ' 3ಗೂ ಸ್ಕೋಪ್ ಇದೆ ಅಂದರು. ಪಾರ್ಟ್- 3ಗೆ ಬೇಕಾದ ಕಥೆ ಸುಕುಮಾರ್ ಬಳಿ ಸಿದ್ಧವಿದೆ' ಅಂದಿದ್ದಾರೆ. ಈ ಸುದ್ದಿ ಕೇಳಿ ಅಲ್ಲು ಅರ್ಜುನ್ ಫ್ಯಾನ್ಸ್ ಖುಷಿಯಾಗಿದ್ದಾರೆ. 'ಪುಷ್ಪ'-3 Also Loading ಅಂತ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡ್ತಿದ್ದಾರೆ.

   ಹೇಗಿರಲಿದೆ ಗೊತ್ತಾ 'ಪುಷ್ಪ' ಪಾರ್ಟ್- 2

  ಹೇಗಿರಲಿದೆ ಗೊತ್ತಾ 'ಪುಷ್ಪ' ಪಾರ್ಟ್- 2

  ಕೊರೊನಾ 2ನೇ ಅಲೆಯ ನಂತ್ರ 'ಪುಷ್ಪ' ದಿ ರೈಸ್ ಸಿನಿಮಾ ಬಿಡುಗಡೆ ಆಗಿತ್ತು. ಕೊರೋನಾ ಭೀತಿಯಿಂದ ಪ್ರೇಕ್ಷಕರು ಥಿಯೇಟರ್‌ಗಳಿಗೆ ಬರ್ತಾರಾ ಇಲ್ವಾ ಅನ್ನೋ ಗೊಂದಲ ಇತ್ತು. ಅಂತಹ ಸಮಯದಲ್ಲಿ ಬಂದ 'ಪುಷ್ಪ' ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಕೋಟಿ ಕೋಟಿ ಕೊಳ್ಳೆ ಹೊಡೆದು ಎಲ್ಲರ ಹುಬ್ಬೇರಿಸಿತ್ತು. ದಕ್ಷಿಣ ಭಾರತ ಅಷ್ಟೇ ಅಲ್ಲ ಹಿಂದಿ ಬೆಲ್ಟ್‌ನಲ್ಲೂ ಸಿನಿಮಾ ಸಖತ್ ಸೌಂಡ್ ಮಾಡಿತ್ತು. ಹಿಂದಿ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿದ್ದರು. ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದರು. ಟಾಲಿವುಡ್‌ಗಿಂತ ಬಾಲಿವುಡ್‌ನಲ್ಲೇ 'ಪುಷ್ಪ' ದಿ ರೂಲ್ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

   ಸೀಕ್ವೆಲ್‌ನಲ್ಲಿ ವಿಲನ್ ಆಗ್ತಾರಾ ಸೇತುಪತಿ?

  ಸೀಕ್ವೆಲ್‌ನಲ್ಲಿ ವಿಲನ್ ಆಗ್ತಾರಾ ಸೇತುಪತಿ?

  'ಕೆಜಿಎಫ್' - 2 ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದ್ಮೇಲೆ 'ಪುಷ್ಪ'- 2 ಮೇಲಿನ ನಿರೀಕ್ಷೆ ದುಪ್ಪಟ್ಟಾಗಿರೋದು ಸುಳ್ಳಲ್ಲ. ಇದೇ ವಿಚಾರ ಈಗ ನಿರ್ದೇಶಕ ಸುಕುಮಾರ್‌ಗೆ ತಲೆನೋವು ತಂದಿದೆ. ಏನಾದರೂ ಮಾಡಿ ಸೆಕೆಂಡ್ ಪಾರ್ಟ್‌ನ ದೊಡ್ಡಮಟ್ಟದಲ್ಲಿ ಗೆಲ್ಲಿಸಬೇಕು ಅನ್ನುವ ಹಠಕ್ಕೆ ಬಿದ್ದಿದ್ದಾರೆ. ಹಾಗಾಗಿ ಸಿನಿಮಾ ಕಥೆಯನ್ನು ಬದಲಿಸುತ್ತಿದ್ದಾರೆ ಅನ್ನೋ ಚರ್ಚೆ ಟಾಲಿವುಡ್‌ನಲ್ಲಿ ನಡೀತಿದೆ. ಸೆನ್ಸೇಷನಲ್ ಸ್ಟಾರ್ ವಿಜಯ್ ಸೇತುಪತಿಯನ್ನು ವಿಲನ್ ಆಗಿ ಕರೆ ತರೋ ಪ್ರಯತ್ನ ಮಾಡ್ತಿದ್ದಾರೆ ಅನ್ನಲಾಗ್ತಿತ್ತು. ಇದೇ ಕಾರಣಕ್ಕೆ ಫಹಾದ್ ಫಾಸಿಲ್ ರೋಲ್ ಟ್ರಿಮ್ ಆಗುತ್ತೆ ಅನ್ನು ಗುಸುಗುಸು ಶುರುವಾಗಿತ್ತು. ಆದರೆ ಈಗ ಫಹಾದ್ ಫಾಸಿಲ್ ಮಾತು ಕೇಳ್ತಿದ್ರೆ, ಪಾರ್ಟ್‌-3ನಲ್ಲೂ ಇರ್ತಾರೆ ಅನ್ನಿಸ್ತಿದೆ.

   ಮುಂದಿನ ತಿಂಗಳು ಮತ್ತೆ ಅಖಾಡಕ್ಕೆ ಪುಷ್ಪರಾಜ್

  ಮುಂದಿನ ತಿಂಗಳು ಮತ್ತೆ ಅಖಾಡಕ್ಕೆ ಪುಷ್ಪರಾಜ್

  'ಪುಷ್ಪ' ಪ್ರೀಕ್ವೆಲ್ ರಿಲೀಸ್ ಆಗಿ 7 ತಿಂಗಳು ಕಳೆದ್ರು, ಸೀಕ್ವೆಲ್ ಸಿನಿಮಾ ಇನ್ನು ಸೆಟ್ಟೇರಿಲ್ಲ. ಎಲ್ಲಾ ಅಂದುಕೊಂಡಂತೆ ಆದರೆ ಈ ತಿಂಗಳ ಕೊನೆಗೆ ಅಥವಾ ಆಗಸ್ಟ್‌ನಲ್ಲಿ ದೇವರಿಗೆ ಕೈ ಮುಗಿದು ನಿರ್ದೇಶಕ ಸುಕುಮಾರ್ ಚಿತ್ರೀಕರಣಕ್ಕೆ ಚಾಲನೆ ಕೊಡಲಿದ್ದಾರೆ. ಈ ತಿಂಗಳಾಂತ್ಯಕ್ಕೆ ಶೂಟಿಂಗ್ ಕಂಪ್ಲೀಟ್ ಮಾಡಿ ಮುಂದಿನ ವರ್ಷ ಸಮ್ಮರ್‌ನಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನದಲ್ಲಿದೆ ಚಿತ್ರತಂಡ.

   'ಪುಷ್ಪ' ದಿ ರೂಲ್ ಬಜೆಟ್ ಎಷ್ಟು ಕೋಟಿ ?

  'ಪುಷ್ಪ' ದಿ ರೂಲ್ ಬಜೆಟ್ ಎಷ್ಟು ಕೋಟಿ ?

  'ಪುಷ್ಪ' ಬರೋಬ್ಬರಿ 350 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಆದರೆ ಸೆಕೆಂಡ್ ಪಾರ್ಟ್ ಬಜೆಟ್‌ 350 ಕೋಟಿ ರೂ. ಅನ್ನೋ ಮಾತುಗಳು ಟಾಲಿವುಡ್ ಅಂಗಳದಲ್ಲಿ ಕೇಳಿ ಬರ್ತಿದೆ. ಇದೆಲ್ಲ ಬರೀ ಊಹಾಪೋಹ ಎನ್ನಲಾಗ್ತಿದ್ದು, 'ಪುಷ್ಪ-2' ಬಜೆಟ್ ಎಷ್ಟು ಅನ್ನೋದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ ಪ್ರೀಕ್ವೆಲ್ ಸಕ್ಸಸ್ ನೋಡ್ತಿದ್ರೆ, ಸಹಜವಾಗಿಯೇ ಪಾರ್ಟ್ - 2 ಸಿನಿಮಾ ಬಜೆಟ್ ಹೆಚ್ಚಾಗಲಿದೆ.

  English summary
  Allu Arjun, Rashmika Mandanna Starrer Pushpa part 3 Also on Cards, confirmed by actor Fahadh Faasil. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X