For Quick Alerts
  ALLOW NOTIFICATIONS  
  For Daily Alerts

  'ಪುಷ್ಪಾ' ಸಿನಿಮಾ ಸೆಟ್‌ಗೆ ಅಲ್ಲು ಅರ್ಜುನ್-ರಶ್ಮಿಕಾ ಹಾಜರ್

  |

  ತೆಲುಗಿನ ಬಹುನಿರೀಕ್ಷಿತ ಸಿನಿಮಾ 'ಪುಷ್ಪಾ' ನಾಳೆಯಿಂದ (ನವೆಂಬರ್ 10) ರಿಂದ ಆರಂಭವಾಗಲಿದೆ. ರಶ್ಮಿಕಾ-ಅಲ್ಲು ಅರ್ಜುನ್ ನಟಿಸುತ್ತಿರುವ ಈ ಸಿನಿಮಾವನ್ನು ಸುಕುಮಾರ್ ನಿರ್ದೇಶಿಸುತ್ತಿದ್ದಾರೆ.

  ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುತ್ತಿರುವುದನ್ನು ವಿಡಿಯೋ ಮೂಲಕ ಪ್ರಕಟಿಸಿದೆ ಪುಷ್ಪಾ ಚಿತ್ರತಂಡ. ಅಲ್ಲು ಅರ್ಜುನ್, ನಿರ್ದೇಶಕ ಸುಕುಮಾರ್ ಜೊತೆಗೆ ಮಾತನಾಡುತ್ತಿರುವ, ಹಾಗೂ ಇತರೆ ಚಿತ್ರೀಕರಣ ಕಾರ್ಯಗಳಲ್ಲಿ ತೊಡಗಿಕೊಂಡಿರುವ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.

  ನೌಕರನಿಗೆ ಸರ್ಪ್ರೈಸ್ ಪಾರ್ಟಿ ಕೊಟ್ಟ ನಟ ಅಲ್ಲು ಅರ್ಜುನ್

  ಸಿನಿಮಾದ ಮೊದಲ ಷೆಡ್ಯೂಲ್‌ ಚಿತ್ರೀಕರಣಕ್ಕಾಗಿ ದೊಡ್ಡ ಸೆಟ್ ಒಂದನ್ನು ನಿರ್ಮಿಸಲಾಗಿದ್ದು, ಸೆಟ್‌ನಲ್ಲಿ ನಾಳೆಯಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ರಶ್ಮಿಕಾ ಮಂದಣ್ಣ ಸಹ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.

  ಅಲ್ಲು ಅರ್ಜುನ್‌ ಲುಕ್‌ಗೆ ಅಂತಿಮ ಸ್ಪರ್ಷ

  ಅಲ್ಲು ಅರ್ಜುನ್‌ ಲುಕ್‌ಗೆ ಅಂತಿಮ ಸ್ಪರ್ಷ

  ಇಂದು ಕೆಲವು ನಟರು ಸೆಟ್‌ ಗೆ ಭೇಟಿ ನೀಡಿದ್ದು, ಕಾಸ್ಟ್ಯೂಮ್ ಟೆಸ್ಟ್, ಇನ್ನಿತರೆ ವಿಷಯಗಳ ಬಗ್ಗೆ ತಾಲೀಮು ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲು ಅರ್ಜುನ್‌ ರ ಹೊಸ ಲುಕ್‌ಗೆ ಅಂತಿಮ ಸ್ಪರ್ಶ ಸಹ ನೀಡಲಾಗಿದೆ. ಅಲ್ಲು ಅರ್ಜುನ್ ಭಿನ್ನವಾದ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಖ್ಯಾತ ನಟರು ಇರಲಿದ್ದಾರೆ

  ಖ್ಯಾತ ನಟರು ಇರಲಿದ್ದಾರೆ

  ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಈ ಸಿನಿಮಾದಲ್ಲಿ ಜಗಪತಿ ಬಾಬು ಹಾಗೂ ಕನ್ನಡಿಗ ಡಾಲಿ ಧನಂಜಯ್ ಸಹ ಇರಲಿದ್ದಾರೆ ಎನ್ನಲಾಗಿದೆ. ಆದರೆ ಸಿನಿಮಾದ ಇತರೆ ಪಾತ್ರಗಳ ಬಗ್ಗೆ ಚಿತ್ರತಂಡ ಮಾಹಿತಿ ಬಿಟ್ಟುಕೊಟ್ಟಿಲ್ಲ.

  ಪುಷ್ಪಾ ಸಿನಿಮಾಕ್ಕಾಗಿ ಶಾಲೆಗೆ ಸೇರಿದ ರಶ್ಮಿಕಾ ಮಂದಣ್ಣ!

  ವೃತ್ತಿಜೀವನದ ಅತ್ಯಂತ ಸವಾಲಿನ ಪಾತ್ರ: ಅಲ್ಲು ಅರ್ಜುನ್

  ವೃತ್ತಿಜೀವನದ ಅತ್ಯಂತ ಸವಾಲಿನ ಪಾತ್ರ: ಅಲ್ಲು ಅರ್ಜುನ್

  'ಈ ಸಿನಿಮಾದ ಪಾತ್ರವು ನನ್ನ ವೃತ್ತಿಜೀವನದ ಅತ್ಯಂತ ಸವಾಲಿನ ಪಾತ್ರ' ಎಂದಿದ್ದಾರೆ ಅಲ್ಲು ಅರ್ಜುನ್. ಸುಕುಮಾರ್ ಜೊತೆಗೆ ಇದು ಅವರ ಮೂರನೇ ಸಿನಿಮಾ. ಈ ಮೊದಲು ಅಲ್ಲು ಅರ್ಜುನ್ ಅಭಿನಯದ ಆರ್ಯ ಮತ್ತು ಆರ್ಯಾ 2 ಸಿನಿಮಾ ನಿರ್ದೇಶಿಸಿದ್ದರು ಸುಕುಮಾರ್. ಎರಡೂ ಸಿನಿಮಾ ಸೂಪರ್ ಹಿಟ್ ಆಗಿತ್ತು.

  Vijay Deverakonda ತಮ್ಮನಿಗೋಸ್ಕರ ಸಾಲು ಸಾಲು ಟ್ವೀಟ್ ಮಾಡಿದ Rashmika | Filmibeat Kannada
  ಮುರುಗದಾಸ್ ಜೊತೆಗೆ ಅಲ್ಲು ಅರ್ಜುನ್ ಸಿನಿಮಾ

  ಮುರುಗದಾಸ್ ಜೊತೆಗೆ ಅಲ್ಲು ಅರ್ಜುನ್ ಸಿನಿಮಾ

  ಹಿಟ್ ಮೇಲೆ ಹಿಟ್ ನೀಡುತ್ತಿರುವ ಅಲ್ಲು ಅರ್ಜುನ್, ಪುಷ್ಪಾ ನಂತರ ಮುರುಗದಾಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದಕ್ಕೆ ಐಕಾನ್ ಎಂದು ಹೆಸರಿಡಲಾಗಿದೆ. ನಂತರ ಕೊರಟಾಲ ಶಿವಾ ನಿರ್ದೇಶನದ ಸಿನಿಮಾದಲ್ಲಿ ಸಹ ನಟಿಸಲಿದ್ದಾರೆ.

  ತೆಲುಗು ಸಿನಿಮಾದಲ್ಲಿ ಮಾಧವನ್ ವಿಲನ್ ಪಾತ್ರ: ಟ್ವೀಟ್ ಮೂಲಕ ಸ್ಪಷ್ಟನೆ

  English summary
  Allu Arjun and Rashmika Mandanna will start shooting for Pushpa movie from November 10. Movie directing by Sukumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X