ತಂಬಾಕು ಜಾಹೀರಾತನ್ನು ನಿರಾಕರಿಸಿದ ಅಲ್ಲು ಅರ್ಜುನ್: ಜೈ ಎಂದ ಅಭಿಮಾನಿಗಳು

ತಂಬಾಕು ಜಾಹೀರಾತಿನಲ್ಲಿ ಸ್ಟಾರ್ ನಟರು ನಟಿಸುವುದು ಸರಿಯೇ-ತಪ್ಪೇ? ಎಂಬ ಬಗ್ಗೆ ದೊಡ್ಡ ಚರ್ಚೆ ನಡೆದಿದೆ. ಇದೇ ಸಮಯದಲ್ಲಿ ನಟ ಅಲ್ಲು ಅರ್ಜುನ್ ತಮ್ಮ ಅಭಿಮಾನಿಗಳ ಆರೋಗ್ಯ ದೃಷ್ಟಿಯಲ್ಲಿಟ್ಟುಕೊಂಡು ತಾವು ತಂಬಾಕು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ತಂಬಾಕು ಉತ್ಪನ ತಯಾರಿಸುವ ಸಂಸ್ಥೆಯೊಂದು ತಂಬಾಕು ಉತ್ಪನ್ನದ ಜಾಹೀರಾತಿಗೆ ಅಲ್ಲು ಅರ್ಜುನ್ ಅವರನ್ನು ಕೇಳಿತ್ತು, ಭಾರಿ ಮೊತ್ತದ ಸಂಭಾವನೆ ನೀಡುವುದಾಗಿಯೂ ಹೇಳಿತ್ತು. ಆದರೆ ಅಲ್ಲು ಅರ್ಜುನ್, ತಾವು ತಂಬಾಕು ಜಾಹೀರಾತಿನಲ್ಲಿ ನಟಿಸುವುದಿಲ್ಲವೆಂದು ಹೇಳಿದ್ದಾರೆ.

ತಮ್ಮ ಅಭಿಮಾನಿಗಳು, ಪ್ರೇಕ್ಷಕರ ಆರೋಗ್ಯಕ್ಕೆ ಹಾನಿ ಉಂಟಾಗುವಂತಹಾ ಯಾವುದೇ ಉತ್ಪನ್ನಗಳ ಜಾಹೀರಾತಿನಲ್ಲಿ ನಟಿಸುವುದಿಲ್ಲ ಎಂಬ ನಿಲವು ತಳೆದು ಅಲ್ಲು ಅರ್ಜುನ್ ಈ ಜಾಹೀರಾತು ನಿರಾಕರಿಸಿದ್ದಾರೆ.

Allu Arjun Refuses To Act In Tobacco Related Advertisement

ಈ ಹಿಂದೆ ಧೂಮಪಾನ ವಿರುದ್ಧ ಸಹ ಜಾಗೃತಿ ಮೂಡಿಸುವ ಕಾರ್ಯವನ್ನು ಅಲ್ಲು ಅರ್ಜುನ್ ಮಾಡಿದ್ದರು. ಸಿನಿಮಾಗಳಲ್ಲಿ ಸಿಗರೇಟು ಸೇದದೇ ಇರುವುದು ನನ್ನ ಆದ್ಯತೆ ಆದರೆ ಅದು ನನ್ನ ಕೈಯಲ್ಲಿಲ್ಲ, ಆದರೆ ನಿಜ ಜೀವನದಲ್ಲಿ ಧೂಮಪಾನ ಮಾಡುವುದಿಲ್ಲ ಎಂದು ಅಲ್ಲು ಅರ್ಜುನ್ ಹೇಳಿದ್ದರು, ಅಭಿಮಾನಿಗಳು ಸಹ ಧೂಮಪಾನ ಮಾಡಬಾರದು ಎಂದು ಮನವಿ ಮಾಡಿದ್ದರು.

ತಂಬಾಕು ಜಾಹೀರಾತು ತ್ಯಜಿಸಿದ ಅಲ್ಲು ಅರ್ಜುನ್ ಸಮಾಜಮುಖಿ ಗುಣವನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ತೆಲುಗಿನ ಮತ್ತೊಬ್ಬ ಸ್ಟಾರ್ ನಟ ಮಹೇಶ್ ಬಾಬು ಇತ್ತೀಚೆಗೆ ತಂಬಾಕು ಜಾಹೀರಾತಿನಲ್ಲಿ ನಟಿಸಿದ್ದಾರೆ. ಜಾಹೀರಾತು ಪ್ರಸಾರವಾಗುತ್ತಿದೆ.

ನಟ ಅಕ್ಷಯ್ ಕುಮಾರ್ ಸಹ ವಿಮಲ್ ಇಲಾಯ್ಚಿ ಜಾಹೀರಾತಿನಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು. ಅಕ್ಷಯ್, ಗುಟ್ಕಾ ಉತ್ಪನ್ನ ತಯಾರಿಕಾ ಬ್ರ್ಯಾಂಡ್‌ ಪ್ರಚಾರ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಅಕ್ಷಯ್ ವಿರುದ್ಧ ಅಸಮಾಧಾನ ಕೇಳಿಬಂದಿತ್ತು, ಕೊನೆಗೆ ಅಕ್ಷಯ್ ಕುಮಾರ್ ಬಹಿರಂಗವಾಗಿ ಕ್ಷಮೆ ಕೇಳಿದರಲ್ಲದೆ, ಜಾಹೀರಾತಿನಿಂದ ಬಂದ ಹಣವನ್ನು ಸಾಮಾಜಿಕ ಕಾರ್ಯಕ್ಕೆ ಬಳಸುವುದಾಗಿ ಹೇಳಿದರು.

ಅದೇ ಜಾಹೀರಾತಿನಲ್ಲಿ ಅಜಯ್ ದೇವಗನ್, ಶಾರುಖ್ ಖಾನ್ ಸಹ ಇದ್ದಾರೆ. ಗುಟ್ಕಾ ಜಾಹೀರಾತಿನಲ್ಲಿ ನಟಿಸುತ್ತಿರುವ ಬಗ್ಗೆ ವ್ಯಕ್ತವಾಗುತ್ತಿರುವ ಅಸಮಾಧಾನದ ಬಗ್ಗೆ ಮಾತನಾಡಿರುವ ನಟ ಅಜಯ್ ದೇವಗನ್, ''ನಾವು ನಟಿಸುತ್ತಿರುವುದು ಗುಟ್ಕಾ ಜಾಹೀರಾತಿನಲ್ಲಿ ಅಲ್ಲ ಬದಲಿಗೆ ಇಲಾಯ್ಚಿ ಜಾಹೀರಾತಿನಲ್ಲಿ. ಒಂದು ವೇಳೆ ಯಾವುದಾದರೂ ಉತ್ಪನ್ನದಿಂದ ಜನರಿಗೆ ತೊಂದರೆ ಆಗುತ್ತದೆ ಎಂದರೆ ಆ ಉತ್ಪವನ್ನು ತಯಾರು ಮಾಡಲು ಅನುಮತಿ ನೀಡಬಾರದು. ಅದನ್ನು ಮಾರುಕಟ್ಟೆಗೆ ಬರಲು ಬಿಡಬಾರದು. ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಬಿಟ್ಟು ನಂತರ ಅದನ್ನು ಬಳಸಬೇಡಿ ಎನ್ನುವುದು ಸರಿಯಲ್ಲ'' ಎಂದಿದ್ದರು.

ನಟ-ನಟಿಯರು ತಂಬಾಕು ಉತ್ಪನ್ನ ತಯಾರಿಕಾ ಸಂಸ್ಥೆಗಳ ಜಾಹೀರಾತಿನಲ್ಲಿ ನಟಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.

ಅಜಯ್ ದೇವಗನ್, ಶಾರುಖ್ ಖಾನ್, ಅಮಿತಾಬ್ ಬಚ್ಚನ್, ರಣ್ವೀರ್ ಸಿಂಗ್, ಹೃತಿಕ್ ರೋಷನ್, ಸೈಫ್ ಅಲಿ ಖಾನ್, ಟೈಗರ್ ಶ್ರಾಫ್, ಮಹೇಶ್ ಬಾಬು ಸೇರಿದಂತೆ ಹಲವು ತಂಬಾಕು ಉತ್ಪನ್ನ ತಯಾರಿಸುವ ಸಂಸ್ಥೆಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Actor Allu Arjun refuses to act in Tobacco company's advertisement. He took this decision keeping in mind of his fans health.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X