ದುಬೈನಿಂದ ಬಂದ ಅಲ್ಲು ಅರ್ಜುನ್‌ಗೆ ಮಗಳ ಪ್ರೀತಿಯ ಸ್ವಾಗತ!
ಪುಪ್ಪ ಸಿನಿಮಾ ರಿಲೀಸ್ ಆಗಿ ವರ್ಲ್ಡ್ ವೈಡ್ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಸಿನಿಮಾ ಸೂಪರ್ ಹಿಟ್ ಆಗಿದೆ. ಸಿನಿಮಾ ಬಿಡುಗಡೆ ಆದ ಕೇವಲ 20 ದಿನಕ್ಕೆ ಒಟಿಟಿಯಲ್ಲಿ ಬಿಡುಗಡೆ ಕೂಡ ಆಗಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಚಿತ್ರ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಬಾಕ್ಸಾಫಿಸ್‌ನಲ್ಲಿ ಪುಷ್ಪ ಎಲ್ಲಿಲ್ಲದ ಸದ್ದು ಮಾಡುತ್ತಿದೆ. ಗಳಿಕೆಯಲ್ಲಿ ಒಂದೊಂದೇ ದಾಖಲೆಗಳನ್ನು ಬ್ರೇಕ್ ಮಾಡಿಕೊಂಡು ಬಂದಿತ್ತು. ಇದೀಗ ಒಟಿಟಿ ನಲ್ಲೂ ಸಿನಿಮಾ ಸಖತ್ ಸೌಂಡ್ ಮಾಡುತ್ತಿದೆ.
'ಪುಷ್ಪ' ಚಿತ್ರದಲ್ಲಿರುವ ಹಾಡುಗಳು ಕೂಡ ಸಖತ್ ಸೌಂಡ್ ಮಾಡುತ್ತಿದೆ. ಪುಷ್ಪ ಸಿನಿಮಾವನ್ನು ಮೆಚ್ಚಿಕೊಂಡ ಅದೆಷ್ಟೋ ಅಭಿಮಾನಿಗಳು ಇದೀಗ ಪುಷ್ಪ ಪಾರ್ಟ್ 2 ಗಾಗಿ ಎದುರು ನೋಡುತ್ತಿದ್ದಾರೆ. ಪುಷ್ಪ 2 ಸಿನಿಮಾ ಹೇಗೆ ಇರಲಿದೆ, ಯಾವ ರೀತಿ ಮೂಡಿ ಬರಲಿದೆ, ಪುಷ್ಪರಾಜ್ ಹೇಗೆ ಕಾಣಿಸಿಕೊಳ್ಳಲಿದ್ದಾನೆ ಎಂಬ ಬಗ್ಗೆ ಹಲವು ಕುತೂಹಲಗಳನ್ನು ಇಟ್ಟುಕೊಂಡು ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಪುಷ್ಪ 2 ಚಿತ್ರೀಕರಣ ಆರಂಭಕ್ಕೆ ಮುನ್ನ ನಟ ಅಲ್ಲು ಅರ್ಜುನ್ ದುಬೈ ಪ್ರವಾಸ ಕೈಗೊಂಡಿದ್ದು ಗೊತ್ತೆ ಇದೆ. ಕಳೆದ 16 ದಿನಗಳಿಂದ ದುಬೈನಲ್ಲಿ ಕಾಲಕಳೆದಿದ್ದ ಅಲ್ಲು ಅರ್ಜುನ್ ಇದೀಗ ವಾಪಸ್ ಮನೆಗೆ ಆಗಮಿಸಿದ್ದಾರೆ. ಈ ಸಂದರ್ಭ ಅವರಿಗೆ ಮಗಳು ಅಲ್ಲು ಅರ್ಹ ಕಡೆಯಿಂದ ಸ್ವೀಟ್ ಸರ್ಪ್ರೈಸ್ ಕಾದಿತ್ತು.
ಹೌದು 16 ದಿನ ದುಬೈನಲ್ಲಿ ಬೀಡು ಬಿಟ್ಟಿದ್ದ ನಟ ಅಲ್ಲು ಅರ್ಜುನ್ ಮನೆಗೆ ವಾಪಸ್ ಆದಾಗ ಮಗಳು ಅಪ್ಪನನ್ನು ಮುದ್ದಾಗಿ ಸ್ವಾಗತಿಸಿದ್ದಾಳೆ. ಅಪ್ಪನ ಬರುವಿಕೆಗಾಗಿ ಕಾದಿದ್ದ ಅಲ್ಲು ಅರ್ಹ ವಿಶೇಷವಾಗಿ ತಯಾರಿ ಮಾಡಿಕೊಂಡಿದ್ದಳು, ಹೂವಿನ ದಳಗಳು ಮತ್ತು ಎಲೆಗಳಿಂದ 'ಸುಸ್ವಾಗತ ಅಪ್ಪ' ಎಂದು ಬರೆದಿದ್ದಳು. ಇದನ್ನು ನೋಡಿ ಅಲ್ಲು ಅರ್ಜುನ್ ಖುಷಿ ಪಟ್ಟಿದ್ದಾರೆ. ಮಗಳ ಪ್ರೀತಿ ಕಂಡು ಸಂತಸಗೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಸಂದರ್ಭದಲ್ಲಿ ತೆಗೆದ ಫೊಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ . ಹಾಗೇ 'ಪ್ರೀತಿಯ ಸ್ವಾಗತ ದುಬೈನ 16 ದಿನ ಪ್ರವಾಸದ ಬಳಿಕ' ಎಂದು ಅಲ್ಲು ಅರ್ಜುನ್ ಬರೆದುಕೊಂಡಿದ್ದಾರೆ. ಈ ಫೊಟೋಗೆ ಹಲವರು ಕಮೆಂಟ್ ಮಾಡುತ್ತಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳು ಶೇರ್ ಕೂಡ ಮಾಡುತ್ತಿದ್ದಾರೆ.

ಅಲ್ಲು ಅರ್ಜುನ್ ಮನೆಗೆ ಬಂದಾಗ ಕೇವಲ ಮಗಳು ಅಲ್ಲು ಅರ್ಹ ಮಾತ್ರವಲ್ಲ. ಕುಟುಂಬ ಸದಸ್ಯರು ಸ್ನೇಹಿತರು ಕೂಡ ಸರ್ಪ್ರೈಸ್ ನೀಡಿದ್ದಾರೆ. ಪುಷ್ಪ ಸಿನಿಮಾದ ಯಶಸ್ಸಿಗೆ ವಿಶೇಷ ಕೇಕ್ ಒಂದನ್ನು ಮಾಡಿಸಿ, ಹೂವಿನ ಬೊಕ್ಕೆಗಳನ್ನು ನೀಡಿ ಗ್ರ್ಯಾಂಡ್ ವೆಲ್‌ಕಮ್ ಮಾಡಲಾಗಿದೆ. ಈ ಫೊಟೋಗಳನ್ನು ಅಲ್ಲು ಅರ್ಜುನ್ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದು, 'ಧನ್ಯವಾದಗಳು ನಿಮ್ಮ ಈ ನಿಷ್ಕಲ್ಮಷ ಪ್ರೀತಿಗೆ' ಎಂದು ಬರೆದುಕೊಂಡಿದ್ದಾರೆ.
ಪುಷ್ಪ ಸಿನಿಮಾ ಈಗಾಗಲೇ ರಿಲೀಸ್ ಆಗಿ ಥಿಯೇಟರ್ ಕಲೆಕ್ಷನ್ ಮತ್ತು ಓಟಿಟಿಯಲ್ಲಿ ಉತ್ತಮ ಪ್ರದರ್ಶನ ಕಾಣುವುದರ ಜೊತೆಗೆ ಗಳಿಕೆಯಲ್ಲೂ ಸಾಕಷ್ಟು ರೆಕಾರ್ಡ್‌ಗಳನ್ನು ಬ್ರೇಕ್ ಮಾಡಿದೆ. ಹೀಗೆ ರಿಲೀಸ್ ಆಗಿ ಕೋರೊನಾ ನಡುವೆಯೂ ಗಲ್ಲಾಪೆಟ್ಟಿಗೆ ಉಡೀಸ್ ಮಾಡಿರುವ ಚಿತ್ರದ ಪಾರ್ಟ್ 2 ಕೂಡ ಬರೋದಕ್ಕೆ ಸಿದ್ಧತೆಗಳು ಜೋರಾಗಿದೆ. ಪುಷ್ಪ 2 ರಿಲೀಸ್‌ಗು ಮುನ್ನವೇ ಚಿತ್ರಕ್ಕೆ ಭಾರೀ ಬೇಡಿಕೆ ಹೆಚ್ಚಿದೆ. ರಿಲೀಸ್‌ಗು ಮುನ್ನವೇ ಕೋಟಿ ಕೋಟಿ ಆಫರ್‌ಗಳು ಈ ಚಿತ್ರಕ್ಕೆ ಬರುತ್ತಿದೆ. ಅಭಿಮಾನಿಗಳು ಕೂಡ ಪುಷ್ಪ 2 ನೋಡಲು ಕಾತುರರಾಗಿದ್ದಾರೆ.

ರಕ್ತ ಚಂದನದ ಕಳ್ಳ ಸಾಗಾಣಿಕೆಯ ಕಥಾ ಹಂದರದ ಪುಷ್ಪ ಸಿನಿಮಾದಲ್ಲಿ ಟಾಲಿವುಡ್‌ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿ ಕಾಣಿಸಿಕೊಂಡು ನೋಡುಗರ ಮನಸ್ಸು ಕದ್ದಿದ್ದಾರೆ. ಪುಷ್ಪ ಮೊದಲ ಭಾಗದ ಸಿನಿಮಾ ಭರ್ಜರಿ ಯಶಸ್ಸನ್ನು ಕಂಡ ಬೆನ್ನಲ್ಲೇ ಸಿನಿಮಾದ ಮುಂದುವರೆದ ಭಾಗವನ್ನು ಇನ್ನಷ್ಟು ಒತ್ತು ಕೊಟ್ಟು ನಿರ್ಮಾಣ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದ್ದು, ಶೀಘ್ರದಲ್ಲೇ ಪುಷ್ಪ ಎರಡನೇ ಭಾಗದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂಬ ಸುದ್ದಿ ಕೂಡ ಕೇಳಿಬರುತ್ತಿದೆ. ಪುಷ್ಪ ಚಿತ್ರದಲ್ಲಿ ದೊಡ್ಡ ದೊಡ್ಡ ತಾರಾಬಳಗವೇ ಇದ್ದು, ಜಗಪತಿ ಬಾಬು, ಅನಸೂಯಾ ಭಾರದ್ವಾಜ್, ವೆನ್ನೆಲಾ ಕಿಶೋರ್ ಪೋಷಕ ಪಾತ್ರಗಳಲ್ಲಿ ನಟಿಸಿ ಜನ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಮಲಯಾಳಂ ನಟ ಫಹದ್ ಫಾಸಿಲ್ ಎದುರಾಳಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಮುತ್ತಮ್ಸೆಟ್ಟಿ ಮೀಡಿಯಾ ಜಂಟಿಯಾಗಿ ನಿರ್ಮಿಸಿವೆ.


Click it and Unblock the Notifications











