For Quick Alerts
  ALLOW NOTIFICATIONS  
  For Daily Alerts

  ಕಲೆಕ್ಷನ್ ನಲ್ಲಿ ಮಹೇಶ್ ಬಾಬು ಸಿನಿಮಾ ಹಿಂದಿಕ್ಕಿ ದಾಖಲೆ ಬರೆದ ನಟ ಅಲ್ಲು ಅರ್ಜುನ್

  |

  ತೆಲುಗಿನ ಇಬ್ಬರು ಸೂಪರ್ ಸ್ಟಾರ್ ಗಳಾದ ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್ ಸಿನಿಮಾ ಒಂದು ದಿನದ ಅಂತರದಲ್ಲಿ ಬಿಡುಗಡೆಯಾಗಿದೆ. ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಮತ್ತು ಅಲ್ಲು ಅರ್ಜುನ್ ಅಭಿನಯದ 'ಅಲಾ ವೈಕುಂಠಪುರಂಲೋ' ಈ ಎರಡು ಸಿನಿಮಾಗಳು ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿವೆ. ಈ ಎರಡು ಬಹುನಿರೀಕ್ಷೆಯ ಸಿನಿಮಾಗಳೀಗ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸುತ್ತಿವೆ.

  'ಸರಿಲೇರು ನೀಕೆವ್ವರು' ಸಿನಿಮಾ ನೋಡಿ ರಶ್ಮಿಕಾ ತಂಗಿ ಹೇಳಿದ್ದೇನು?'ಸರಿಲೇರು ನೀಕೆವ್ವರು' ಸಿನಿಮಾ ನೋಡಿ ರಶ್ಮಿಕಾ ತಂಗಿ ಹೇಳಿದ್ದೇನು?

  ಈ ಎರಡು ಸಿನಿಮಾಗಳು ಪೈಪೂಟಿಗೆ ಬಿದ್ದಂತೆ ಕೋಟಿ ಕೋಟಿ ಲೂಟಿ ಮಾಡುತ್ತಿವೆ. ಮಹೇಶ್ ಬಾಬು ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಿದ್ಯಾ ಅಥವಾ ಅಲ್ಲು ಅರ್ಜುನ್ ಸಿನಿಮಾ ಹೆಚ್ಚು ಗಳಿಕೆ ಮಾಡಿದೆಯಾ ಎನ್ನುವ ಲೆಕ್ಕಾಚಾರ ಶುರುವಾಗಿದೆ. ವಿಶೇಷ ಅಂದರೆ ವಿದೇಶದಲ್ಲಿ ಭಾರತದ ಐದು ಸಿನಿಮಾಗಳು ಉತ್ತಮ ಪ್ರದರ್ಶನ ಕಾಣುತ್ತಿವೆ. ಅದರಲ್ಲಿ ಅಲ್ಲು ಅರ್ಜುನ್ 'ಅಲಾ ವೈಕುಂಠಪುರಂಲೋ' ಸಿನಿಮಾ ಮಹೇಶ್ ಬಾಬು ಸಿನಿಮಾವನ್ನು ಹಿಂದಿಕ್ಕಿ ಅತೀ ಹಚ್ಚು ಗಳಿಕೆ ಮಾಡಿ ದಾಖಲೆ ಮಾಡಿದೆ.

  'ಯು ಎಸ್ ಎ'ಲ್ಲಿ ಭಾರತೀಯ ಸಿನಿಮಾಗಳ ದರ್ಬಾರ್

  'ಯು ಎಸ್ ಎ'ಲ್ಲಿ ಭಾರತೀಯ ಸಿನಿಮಾಗಳ ದರ್ಬಾರ್

  ಯು ಎಸ್ ಎ ಯಲ್ಲಿ ಭಾರತದ ಐದು ಸಿನಿಮಾಗಳು ಪೈಪೂಟಿಗೆ ಬಿದ್ದಂತೆ ಪ್ರದರ್ಶನ ನೀಡುತ್ತಿವೆ. ವಿಶೇಷ ಅಂದರೆ ಈ ಐದು ಸಿನಿಮಾಗಳಲ್ಲಿ ದಕ್ಷಿಣ ಭಾರತದ ಮೂರು ಸಿನಿಮಾಗಳಿವೆ. ಸರಿಲೇರು ನೀಕೆವ್ವರು, 'ಅಲಾ ವೈಕುಂಠಪುರಂಲೋ' ಮತ್ತು ದರ್ಬಾರ್ ಸಿನಿಮಾಗಳು ವಿದೇಶ ನೆಲದಲ್ಲೂ ರಾರಾಜಿಸುತ್ತಿವೆ. ಇದೆ ಮೊದಲ ಬಾರಿಗೆ ದಕ್ಷಿಣ ಭಾರತೀಯ ಸಿನಿಮಾಗಳು ವಿದೇಶಿ ನೆಲದಲ್ಲಿ ಎಲ್ಲಾ ಸಿನಿಮಾಗಳನ್ನು ಹಿಂದಿಕ್ಕಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

  ರಶ್ಮಿಕಾಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ ಮಹೇಶ್ ಬಾಬು ಪುತ್ರಿರಶ್ಮಿಕಾಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ ಮಹೇಶ್ ಬಾಬು ಪುತ್ರಿ

  ಮಹೇಶ್ ಬಾಬು ಸಿನಿಮಾ ಹಿಂದಿಕ್ಕಿದ್ದ ಅಲ್ಲು ಅರ್ಜುನ್

  ಮಹೇಶ್ ಬಾಬು ಸಿನಿಮಾ ಹಿಂದಿಕ್ಕಿದ್ದ ಅಲ್ಲು ಅರ್ಜುನ್

  ಯು ಎಸ್ ಎ ನಲ್ಲಿ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಸಿನಿಮಾ ಕಲೆಕ್ಷನ್ ಅನ್ನು ಹಿಂದಿಕ್ಕಿ 'ಅಲಾ ವೈಕುಂಠಪುರಂಲೋ' ಸಿನಿಮಾ ದಾಖಲೆ ಮಾಡಿದೆ. ಮಹೇಶ್ ಬಾಬು ಸಿನಿಮಾ USD 23,287 ಗಳಿಕೆ ಮಾಡಿದರೆ, ಅಲ್ಲು ಅರ್ಜುನ್ ಸಿನಿಮಾ USD 81,383 ಬಾಚಿಕೊಂಡಿದೆ. 'ಸರಿಲೇರು ನೀಕೆವ್ವರು' ಸಿನಿಮಾಗಿಂತ 'ಅಲಾ ವೈಕುಂಠಪುರಂಲೋ' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲು ಅರ್ಜುನ್ ಜೊತೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ.

  ಸಾರ್ವಕಾಲಿಕ ದಾಖಲೆ ಮಾಡಿದ ಅಲ್ಲು ಸಿನಿಮಾ

  ಸಾರ್ವಕಾಲಿಕ ದಾಖಲೆ ಮಾಡಿದ ಅಲ್ಲು ಸಿನಿಮಾ

  'ಅಲಾ ವೈಕುಂಠಪುರಂಲೋ' ಸಿನಿಮಾ ನ್ಯೂಜಿಲ್ಯಾಂಡ್ ನಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಇದುವರೆಗೂ ತೆಲುಗು ಸಿನಿಮಾ ಮಾಡದೆ ಇರುವಷ್ಟು ಕಲೆಕ್ಷನ್ ಅಲ್ಲು ಅರ್ಜುನ್ ಸಿನಿಮಾ ಮಾಡಿದೆ. ತೆಲುಗಿನ ಸೂಪರ್ ಹಿಟ್ ಬಾಹುಬಲಿ ಸಿನಿಮಾ ಕೂಡ ಮಾಡದೆ ಇರುವಷ್ಟು ಕಲೆಕ್ಷನ್ ಅಲ್ಲು ಅರ್ಜುನ್ ಸಿನಿಮಾ ಮಾಡಿದೆ. 'ಅಲಾ ವೈಕುಂಠಪುರಂಲೋ' NZD 34,625 ಕಲೆಕ್ಷನ್ ಮಾಡಿದೆ. ಬಾಹುಬಲಿ ಸಿನಿಮಾ NZD 20,750 ಬಾಚಿಕೊಂಡಿತ್ತು

  'ಬಾಹುಬಲಿ' ಪ್ರಭಾಸ್ ರೆಕಾರ್ಡ್ ನ ಪೀಸ್ ಪೀಸ್ ಮಾಡಿದ ಅಲ್ಲು ಅರ್ಜುನ್.!'ಬಾಹುಬಲಿ' ಪ್ರಭಾಸ್ ರೆಕಾರ್ಡ್ ನ ಪೀಸ್ ಪೀಸ್ ಮಾಡಿದ ಅಲ್ಲು ಅರ್ಜುನ್.!

  ಹಿಂದಿ ಸಿನಿಮಾಗಳನ್ನು ಹಿಂದಿಕ್ಕಿದ ದಕ್ಷಿಣದ ಸಿನಿಮಾ

  ಹಿಂದಿ ಸಿನಿಮಾಗಳನ್ನು ಹಿಂದಿಕ್ಕಿದ ದಕ್ಷಿಣದ ಸಿನಿಮಾ

  ಮೊದಲ ಬಾರಿಗೆ ಹಿಂದಿ ಸಿನಿಮಾಗಳನ್ನು ಹಿಂದಿಕ್ಕಿ ದಕ್ಷಿಣ ಭಾರತೀಯ ಚಿತ್ರಗಳು ವಿದೇಶಿ ನೆಲದಲ್ಲಿ ರಾರಾಜಿಸುತ್ತಿವೆ. ಯು ಎಸ್ ಎ ರಿಪೋರ್ಟ್ ನೋಡುವುದಾದರೆ 'ಅಲಾ ವೈಕುಟಂಠಪುರಂಲೋ' ಸಿನಿಮಾ ಅತೀ ಹೆಚ್ಚು ಕಲೆಕ್ಷನ್ ಮಾಡಿ ಟಾಪ್ ನಲ್ಲಿ ಇದೆ. ಇನ್ನು ನಂತರದ ಸ್ಥಾನದಲ್ಲಿ ಹಿಂದಿಯ ಐತಿಹಾಸಿಕ ಸಿನಿಮಾ 'ತನ್ಹಾಜಿ' ಇದೆ. ಆ ನಂತರದ ಸ್ಥಾನದಲ್ಲಿ 'ಸರಿಲೇರು ನೀಕೆವ್ವರು', 'ಚಪಾಕ್' ಮತ್ತು 'ದರ್ಬಾರ್' ಸಿನಿಮಾಗಳಿವೆ.

  English summary
  Tollywood actor Allu Arjun's starrer Ala Vaikunta Puram film beats Mahesh Babu starrer sarleru neekevvaru in USA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X