ಹೊಸ ದಾಖಲೆ ಬರೆದ 'ಬುಟ್ಟ ಬೊಮ್ಮಾ' ಹಾಡು, ಸೂಪರ್ ಎಂದ ವಾರ್ನರ್

ಅಲ್ಲು ಅರ್ಜುನ್-ಪೂಜಾ ಹೆಗ್ಡೆ ನಟನೆಯ 'ಅಲಾ ವೈಕುಂಟಪುರಂಲೋ' ಸಿನಿಮಾದ 'ಬುಟ್ಟ ಬೊಮ್ಮಾ' ಹಾಡು ಹೊಸ ದಾಖಲೆ ಬರೆದಿದೆ.

'ಬುಟ್ಟಾ ಬೊಮ್ಮ' ಹಾಡನ್ನು ಯೂಟ್ಯೂಬ್ ನಲ್ಲಿ 45 ಕೋಟಿ ಬಾರಿ ವೀಕ್ಷಣೆ ಮಾಡಲಾಗಿದೆ. ತೆಲುಗು ಸಿನಿಮಾಗಳ ಮಟ್ಟಿಗೆ ಯಾವುದೇ ಸಿನಿಮಾದ ಹಾಡನ್ನು ಇಷ್ಟು ಬಾರಿ ಯೂಟ್ಯೂಬ್‌ನಲ್ಲಿ ನೋಡಲಾಗಿಲ್ಲ.

'ಬುಟ್ಟ ಬೊಮ್ಮಾ' ಹಾಡಿನ ಅಭಿಮಾನಿ ಆಗಿರುವ ಡೇವಿಡ್ ವಾರ್ನರ್ ಈ ಖುಷಿ ವಿಷಯವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, 'ವೆಲ್ ಡನ್' ಎಂದು ಬರೆದಿದ್ದಾರೆ. ನಟ ಅಲ್ಲು ಅರ್ಜುನ್ ಅನ್ನು ಟ್ಯಾಗ್ ಸಹ ಮಾಡಿದ್ದಾರೆ ವಾರ್ನರ್.

Allu Arjuns Butta Bomma Song Crosses 450 Million in YouTube

'ಅಲಾ ವೈಕುಂಟಪುರಂಲೋ' ಸಿನಿಮಾವನ್ನು ತ್ರಿವಿಕ್ರಮ್ ನಿರ್ದೇಶಿಸಿದ್ದರು. ಸಿನಿಮಾ ಭರ್ಜರಿ ಹಿಟ್ ಆಗಿತ್ತು. ಎಸ್.ತಮನ್ ಸಂಗೀತ ನೀಡಿದ್ದ ಸಿನಿಮಾದ ಹಾಡುಗಳು ಸಖತ್ ಹಿಟ್ ಆಗಿದ್ದವು. 'ಸಾಮಜವರಗಮನ' ಹಾಡು ಸಹ ಭಾರಿ ಹಿಟ್ ಆಗಿತ್ತು.

ಪ್ರಸ್ತುತ ಅಲ್ಲು ಅರ್ಜುನ್, ಪುಷ್ಪಾ ಸಿನಿಮಾದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಸುಕುಮಾರ್ ನಿರ್ದೇಶಿಸುತ್ತಿದ್ದಾರೆ. ನಟಿ ಪೂಜಾ ಹೆಗ್ಡೆ, ಪ್ರಭಾಸ್ ಜೊತೆ 'ರಾಧೆ-ಶ್ಯಾಮ್' ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್ ಸಿನಿಮಾ ಸಹ ಬಿಡುಗಡೆ ಆಗಬೇಕಿದೆ.

More from Filmibeat

English summary
Allu Arjun-Pooja Hegde's Butta Bomma song from Ala Vaikuntapuramlo movie crosses 450 million in YouTube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X