ವಿಶ್ವ ದಾಖಲೆ ಪಟ್ಟಿ ಸೇರಿದ ಅಲ್ಲು ಅರ್ಜುನ್ ಪುತ್ರಿ

ನಟ ಅಲ್ಲು ಅರ್ಜುನ್ ಕುಟುಂಬದಲ್ಲಿ ಪ್ರತಿಭೆ ಎಂಬುದು ತಲೆಮಾರಿನಿಂದ ತಲೆ ಮಾರಿಗೆ ಹರಿಯುತ್ತಿದೆ ಎನಿಸುತ್ತದೆ. ಅಲ್ಲು ಅರ್ಜುನ್ ತಾತ ಜನಪ್ರಿಯ ನಟರಾಗಿದ್ದರು, ಅಲ್ಲು ಅರ್ಜುನ್ ತಂದೆ ಯಶಸ್ವಿ ನಿರ್ಮಾಪಕರು, ಇದೀಗ ಅಲ್ಲು ಅರ್ಜುನ್ ಸಹ ಅದ್ಭುತ ನಟ. ಈಗಲೇ ಈ ಕುಟುಂಬದ ನಾಲ್ಕನೇ ಕುಡಿಯೂ ತನ್ನ ಪ್ರತಿಭೆಯಿಂದ ವಿಶ್ವಮಟ್ಟದಲ್ಲಿ ಹೆಸರು ದಾಖಲಾಗುವಂತೆ ಮಾಡಿದೆ.

ಅಲ್ಲು ಅರ್ಜುನ್ ಪುತ್ರಿ ಅಲ್ಲು ಆರ್ಹಾ ಈಗ ನೋಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದ್ದಾಳೆ. ಅದೂ ಸಣ್ಣ-ಪುಟ್ಟ ಸಾಧನೆ ಮಾಡಿ ಅಲ್ಲ. ವಿಶ್ವದ ಅತಿ ಸಣ್ಣ ವಯಸ್ಸಿನ ಚೆಸ್ ಟ್ರೈನರ್ ಬಿರುದು ಈಗ ಅಲ್ಲು ಆರ್ಹ ಹೆಸರಿಗೆ ಸೇರ್ಪಡೆಯಾಗಿದೆ.

ಕೇವಲ ಐದು ವರ್ಷದ ಅಲ್ಲು ಆರ್ಹ ಚೆಸ್ ಕ್ರೀಡೆಯಲ್ಲಿ ಪ್ರಾವಿಣ್ಯತೆ ಸಾಧಿಸಿದ್ದು ಒಟ್ಟಿಗೆ ಚೆಸ್‌ ಕ್ರೀಡೆಯ ಬಗ್ಗೆ ಚೆನ್ನಾಗಿ ಕಲಿತಿರುವ ಜೊತೆಗೆ ಮತ್ತೊಬ್ಬರಿಗೆ ಪಾಠ ಮಾಡುವಷ್ಟು ಹಿಡಿತ ಸಾಧಿಸಿದ್ದಾರೆ. ಅಲ್ಲು ಆರ್ಹಾ ನೋಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರ್ಪಡೆಯಾದ ವಿಡಿಯೋವನ್ನು ಬಾಲಕಿಯ ತಾಯಿ ಸ್ನೇಹ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Allu Arjuns Daughter Allu Arha Enters Nobel Book Of World Records

ದೊಡ್ಡದಾಗಿ ಜೋಡಿಸಿದ್ದ ಚೆಸ್ ಟೇಬಲ್‌ನಲ್ಲಿ ಇಡಲಾಗಿದ್ದ ಹಲವು ಚೆಸ್‌ ಬೋರ್ಡ್‌ಗಳಲ್ಲಿ ವಿವಿಧ ಚೆಸ್ ಮೂಮೆಂಟ್‌ಗಳನ್ನು ಅಲ್ಲು ಆರ್ಹ ಗುರುತಿಸಿದ್ದಾರೆ. ವಿಶ್ಲೇಷಣೆ ನೀಡಿದ್ದಾರೆ ಇದನ್ನು ಗಮನಿಸಿದ ನೋಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಸಿಬ್ಬಂದಿ ಅಲ್ಲು ಆರ್ಹಗೆ ಪದಕವೊಂದನ್ನು ತೊಡಿಸಿ ಪ್ರಮಾಣ ಪತ್ರವೊಂದನ್ನು ನೀಡಿದ್ದಾರೆ. ಮಗಳ ಈ ಸಾಧನೆಯನ್ನು ಪೋಷಕರಾದ ಅಲ್ಲು ಅರ್ಜುನ್-ಸ್ನೇಹ ಅಲ್ಲು ಅಭಿನಂಧಿಸಿದ್ದಾರೆ. ಅಜ್ಜ ಅಲ್ಲು ಅರವಿಂದ್ ಸಹ ಮೊಮ್ಮಗಳ ಸಾಧನೆ ಕಂಡು ಉಲ್ಲಸಿತರಾಗಿದ್ದಾರೆ. ಅಣ್ಣ ಅಯಾನ್ ಸಹ ತಂಗಿಯ ಸಾಧನೆಗೆ ಅಪ್ಪಿ ಅಭಿನಂದನೆ ಹೇಳಿದ್ದಾರೆ.

ಅಲ್ಲು ಆರ್ಹಾ ಈಗಾಗಲೇ ಸಿನಿಮಾ ನಟನೆಗೂ ಎಂಟ್ರಿ ಕೊಟ್ಟಾಗಿದೆ. ನಟಿ ಸಮಂತಾ ಜೊತೆಗೆ 'ಶಕುಂತಲಾ' ಸಿನಿಮಾದಲ್ಲಿ ಅಲ್ಲು ಆರ್ಹಾ ನಟಿಸುತ್ತಿದ್ದಾರೆ. ಪುಟ್ಟ ಬಾಲಕಿ ಅಲ್ಲು ಆರ್ಹಾ ಮೊದಲ ಬಾರಿಗೆ ಸಿನಿಮಾಕ್ಕಾಗಿ ಬಣ್ಣ ಹಚ್ಚಿಸಿಕೊಳ್ಳುತ್ತಿರುವ ವಿಡಿಯೋವನ್ನು ತಾಯಿ ಸ್ನೇಹ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ವಿಡಿಯೋಕ್ಕೆ ಪ್ರತಿಕ್ರಿಯಿಸಿದ್ದ ಅಲ್ಲು ಅರ್ಜುನ್ 'ತಂದೆಯಾಗಿ ಇದು ನನಗೆ ಹೆಮ್ಮೆಯ ಕ್ಷಣ' ಎಂದಿದ್ದರು. ಈ ಹಿಂದೆ ಅಲ್ಲು ಅರ್ಜುನ್ ಅವರೇ ನಿರ್ಮಿಸಿದ್ದ 'ಅಂಜಲಿ, ಅಂಜಲಿ, ಅಂಜಲಿ' ಹಾಡಿನಲ್ಲಿಯೂ ಅಲ್ಲು ಆರ್ಹಾ ನಟಿಸಿದ್ದರು. ಆ ವಿಡಿಯೋ ಸಹ ಸಖತ್ ಹಿಟ್ ಆಗಿತ್ತು.

ಅಲ್ಲು ಅರ್ಜುನ್ ಹಾಗೂ ಸ್ನೇಹ ದಂಪತಿಗಳಿಗೆ ಇಬ್ಬರು ಮಕ್ಕಳು ಒಂದು ಗಂಡು, ಒಂದು ಹೆಣ್ಣು. ದೊಡ್ಡ ಮಗನ ಹೆಸರು ಅಲ್ಲು ಅಯಾನ್. ಆತ ಈವರೆಗೆ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಅಲ್ಲು ಅರ್ಜುನ್ ಕೇವಲ ಎರಡು ವರ್ಷದ ಮಗುವಾಗಿದ್ದಾಗಲೇ ಸಿನಿಮಾದಲ್ಲಿ ನಟಿಸಿದ್ದರು. 2001 ರಲ್ಲಿ ಬಿಡುಗಡೆ ಆದ ಚಿರಂಜೀವಿ ನಟನೆಯ 'ಡ್ಯಾಡಿ' ಸಿನಿಮಾದಲ್ಲಿ ಅಲ್ಲು ಅರ್ಜನ್ ಮಾಡಿದ ಡ್ಯಾನ್ಸರ್ ಪಾತ್ರ ಬಹಳ ಹಿಟ್ ಆಯಿತು. ಆ ಸಿನಿಮಾದ ನಟನೆಯಿಂದಲೇ ಅಲ್ಲು ಅರ್ಜುನ್‌ಗೆ 'ಗಂಗೋತ್ರಿ' ಸಿನಿಮಾದಲ್ಲಿನ ಪಾತ್ರ ಧಕ್ಕಿತು. ಆ ಸಿನಿಮಾದ ಬಳಿಕ ಬಿಡುಗಡೆ ಆದ 'ಆರ್ಯ' ಸಿನಿಮಾ ಅಲ್ಲು ಅರ್ಜುನ್ ಅನ್ನು ದೊಡ್ಡ ಸ್ಟಾರ್ ಅನ್ನಾಗಿ ಮಾಡಿಬಿಟ್ಟಿತು. 'ಆರ್ಯ' ಸಿನಿಮಾ ನಿರ್ದೇಶಿಸಿದ್ದ ಸುಕುಮಾರ್ ಇದೀಗ ಅಲ್ಲು ಅರ್ಜುನ್‌ಗಾಗಿ 'ಪುಷ್ಪ' ಸಿನಿಮಾ ನಿರ್ದೇಶನ ಮಾಡಿದ್ದಾರೆ. 'ಪುಷ್ಪ' ಸಿನಿಮಾವು ಡಿಸೆಂಬರ್ 17 ರಂದು ಬಿಡುಗಡೆ ಆಗಲಿದೆ.

More from Filmibeat

English summary
Allu Arjun's daughter Allu Arha enters Nobel book of worlds records. She awarded as youngest chess trainer in the world.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X