For Quick Alerts
  ALLOW NOTIFICATIONS  
  For Daily Alerts

  ನಟಿ ಸಮಂತಾ ಚಿತ್ರದಲ್ಲಿ ಅಲ್ಲು ಅರ್ಜುನ್ ಮಗಳು ಎಂಟ್ರಿ

  |

  ತೆಲುಗು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಗುರುವಾರ ತಮ್ಮ ಮಗಳು ಚಿತ್ರರಂಗ ಪ್ರವೇಶಿಸುತ್ತಿರುವ ಬಗ್ಗೆ ಖಚಿತಪಡಿಸಿದ್ದಾರೆ. ನಟಿ ಸಮಂತಾ ನಟಿಸಲಿರುವ ಹೊಸ ಚಿತ್ರದಲ್ಲಿ ಅಲ್ಲು ಅರ್ಜುನ್ ಮಗಳು ಆರ್ಹಾ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

  ಸಮಂತಾ ಅಕ್ಕಿನೇನಿ ನಟಿಸುತ್ತಿರುವ 'ಶಾಕುಂತಲ' ಚಿತ್ರದಲ್ಲಿ ಅಲ್ಲು ಅರ್ಜುನ್ ಮಗಳು ರಾಜಕುಮಾರ ಭರತನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಅಲ್ಲು ಅರ್ಜುನ್ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

  Jr.NTR ಅಥವಾ ಅಲ್ಲು ಅರ್ಜುನ್ ಪುತ್ರ; ಸಮಂತಾ ಮಗನ ಪಾತ್ರಕ್ಕೆ ಸ್ಟಾರ್ ಮಕ್ಕಳ ಪೈಪೋಟಿJr.NTR ಅಥವಾ ಅಲ್ಲು ಅರ್ಜುನ್ ಪುತ್ರ; ಸಮಂತಾ ಮಗನ ಪಾತ್ರಕ್ಕೆ ಸ್ಟಾರ್ ಮಕ್ಕಳ ಪೈಪೋಟಿ

  'ರುದ್ರಮದೇವಿ' ಸಿನಿಮಾ ಖ್ಯಾತಿಯ ಗುಣಶೇಖರ್ ನಿರ್ದೇಶನದಲ್ಲಿ ತಯಾರಾಗಲಿರುವ ಪೌರಾಣಿಕ ಸಿನಿಮಾ 'ಶಾಕುಂತಲ' ಚಿತ್ರದ ಸಮಂತಾ ಶಾಕುಂತಲ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ಶಾಕುಂತಲ' ಮಗ ಭರತನ ಪಾತ್ರಕ್ಕೆ ಅಲ್ಲು ಅರ್ಜುನ್ ಮಗಳು ಎಂಟ್ರಿಯಾಗಿದ್ದಾರೆ. ನೀಲಿಮಾ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

  ಅಂದ್ಹಾಗೆ, ಅಲ್ಲು ಅರ್ಹಾ ಎಂಟ್ರಿ ಮೂಲಕ ಅಲ್ಲು ಕುಟುಂಬದಿಂದ ನಾಲ್ಕನೇ ಪೀಳಿಗೆ ಸಿನಿಮಾ ಜಗತ್ತಿಗೆ ಪರಿಚಯ ಆಗಿದೆ. ತೆಲುಗು ಇಂಡಸ್ಟ್ರಿಯ ಖ್ಯಾತ ನಟ ಅಲ್ಲು ರಾಮಲಿಂಗಯ್ಯ, ಅವರ ಮಗ ಅಲ್ಲು ಅರವಿಂದ್ (ನಿರ್ಮಾಪಕ), ಅರವಿಂದ್ ಮಗ ಅಲ್ಲು ಅರ್ಜುನ್ ಈಗ ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ ಬಣ್ಣದ ಲೋಕಕ್ಕೆ ಬಂದಿದ್ದಾರೆ.

  ಅಲ್ಲು ಅರ್ಹಾ ನಾಲ್ಕು ವರ್ಷದ ಮಗು. ಅಲ್ಲು ಅರ್ಜುನ್ ಮತ್ತು ಅಲ್ಲು ಸ್ನೇಹ ರೆಡ್ಡಿ ದಂಪತಿಯ ಮುದ್ದಿನ ಮಗಳು ಅದಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್. ಮುದ್ದಾದ ಫೋಟೋ ಮತ್ತು ವಿಡಿಯೋಗಳ ಮೂಲಕ ಆಕರ್ಷಣೆಯಾಗಿದ್ದಾರೆ.

  Allu Arjuns daughter Arha to make her acting debut with Samanthas Shaakuntalam
  ಇಂದ್ರಜಿತ್ ಲಂಕೇಶ್ ಕೊಟ್ಟ ದೂರಿನಲ್ಲಿ ಏನಿದೆ? | Filmibeat Kannada

  'ಫ್ಯಾಮಿಲಿ ಮ್ಯಾನ್-2' ವೆಬ್ ಸಿರೀಸ್ ಸಕ್ಸಸ್ ಬಳಿಕ ಸಮಂತಾ ತಮ್ಮ ಕನಸಿನ ಪ್ರಾಜೆಕ್ಟ್‌ಗೆ ಚಾಲನೆ ಕೊಡಲಿದ್ದಾರೆ. ರಾಜ ದುಶ್ಯಂತ ಮತ್ತು ಶಾಕುಂತಲಾ ಪ್ರೇಮಕಥೆಯನ್ನಾಧರಿಸಿ ಈ ಸಿನಿಮಾ ತಯಾರಾಗುತ್ತಿದ್ದು, ಮಲಯಾಳಂ ನಟ ದೇವ್ ಮೋಹನ್ ದುಶ್ಯಂತ ರಾಜನಾಗಿ ನಟಿಸುತ್ತಿದ್ದಾರೆ. ಇನ್ನುಳಿದ ಕಲಾವಿದರ ಬಗ್ಗೆ ವಿವರ ಸಿಗಬೇಕಿದೆ.

  English summary
  Telugu Actor Allu Arjun's daughter Arha to make her acting debut with Samantha's Shaakuntalam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X