ಅಲ್ಲು ಅರ್ಜುನ್ ಹೊಸ ಸಿನಿಮಾ 'ಪುಷ್ಪಾ' ಕತೆ ಬಹಿರಂಗ!?
ಟಾಲಿವುಡ್ ಜನಪ್ರಿಯ ನಟ ಅಲ್ಲು ಅರ್ಜುನ್ ಅವರ ಹೊಸ ಸಿನಿಮಾ 'ಪುಷ್ಪ' ತನ್ನ ಪೋಸ್ಟರ್ ನಿಂದಲೇ ಗಮನ ಸೆಳೆದಿದೆ.
ಪೋಸ್ಟರ್ ಬಿಡುಗಡೆ ಆಗಿದ್ದೇ ತಡ, ಸಿನಿಮಾ ಸುತ್ತಾ ಕುತೂಹಲ ರೂಪುಗೊಂಡಿದೆ. ಅಲ್ಲು ಅರ್ಜುನ್ ಅಭಿಮಾನಿಗಳು ಮಾತ್ರವಲ್ಲದೆ, ಇತರ ಸಿನಿ ಪ್ರಿಯರು ಸಹ ಕತೆ ಏನಿರಬಹುದು ಎಂಬ ಲೆಕ್ಕಾಚಾರಕ್ಕೆ ಇಳಿದಿದ್ದಾರೆ.
ಪೋಸ್ಟರ್ ನೋಡಿದರೆ ಅಲ್ಲು ಅರ್ಜುನ್ ರಕ್ತ ಚಂದನ ಸಾಗಣೆಕಾರ ಎಂಬುದು ಗೊತ್ತಾಗುತ್ತಿದೆ. ಆದರೆ ಸಿನಿಮಾದ ಟೈಟಲ್ 'ಪುಷ್ಪ' ಹೀರೋ ನ ಹೆಸರೇ ಅಥವಾ ನಾಯಕಿಯದ್ದೇ. ಸಿನಿಮಾದ ಕತೆ ಏನಿರಬಹುದು? ಎಂಬೆಲ್ಲಾ ಕುತೂಹಲ ಇದೆ.
ಇದೀಗ ಸಿನಿಮಾದ ಕತೆಯ ಎಳೆಯೊಂದು ಲೀಕ್ ಆಗಿದ್ದು, ಸಿನಿಮಾದ ಕತೆ ಇದೇ ಇರಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ಪುಷ್ಪಾ ನಾಯಕನ ಹೆಸರೇ ಅಥವಾ ನಾಯಕಿಯದ್ದೇ?
'ಪುಷ್ಪಾ' ಎಂಬುದು ಸಿನಿಮಾ ನಾಯಕನ ಹೆಸರಲ್ಲ, ಬದಲಿಗೆ ನಾಯಕಿಯ ಹೆಸರು ಎನ್ನಲಾಗುತ್ತಿದೆ. ಸಿನಿಮಾದ ನಾಯಕಿ ಕನ್ನಡತಿ ರಶ್ಮಿಕಾ ಮಂದಣ್ಣ ಆಗಿದ್ದು, ಸಿನಿಮಾದಲ್ಲಿ ರಶ್ಮಿಕಾ ಹೆಸರು 'ಪುಷ್ಪಾ' ಎಂದಿದೆಯಂತೆ.

ಪುಷ್ಪಾ ಅರಣ್ಯಾಧಿಕಾರಿ ಆಗಿರುತ್ತಾಳೆ?
ಈಗ ಹರಿದಾಡುತ್ತಿರುವ ಕತೆಯ ಎಳೆಯ ಪ್ರಕಾರ, ನಾಯಕಿ ಪುಷ್ಪಾ ಅರಣ್ಯಾಧಿಕಾರಿ ಆಗಿದ್ದು, ಆಕೆ ಕುಖ್ಯಾತ ರಕ್ತ ಚಂದನ ಕಳ್ಳಸಾಗಣೆಕಾರ (ಅಲ್ಲು ಅರ್ಜುನ್) ಅನ್ನು ಹಿಡಿಯುತ್ತಾರಂತೆ. ಆತನನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ನಾಯಕಿ ಮಾಡುತ್ತಾಳೆ. ಈ ಸಮಯ ಇಬ್ಬರಿಗೂ ಪ್ರೇಮವೂ ಮೂಡುತ್ತದೆ.

ಈ ಸಮಯ ನಾಯಕಿಯ ಹತ್ಯೆ ಆಗುತ್ತದೆ
ಒರಟು ವ್ಯಕ್ತಿತ್ವದ ನಾಯಕನನ್ನು ಬದಲಾವಣೆ ಮಾಡುವ ಪ್ರಯತ್ನದಲ್ಲಿದ್ದಾಗ ನಾಯಕಿಯ ಹತ್ಯೆಯಾಗುತ್ತದೆ. ಹತ್ಯೆ ಮಾಡಿದವರ ವಿರುದ್ಧ ದ್ವೇಷ ತೀರಿಸಿಕೊಳ್ಳಲು ನಾಯಕ ಮತ್ತೆ ತನ್ನ ಹಳೆಯ ವ್ಯಕ್ತಿತ್ವಕ್ಕೆ ಇಳಿಯುತ್ತಾನೆ. ಇದು ಸಿನಿಮಾದ ಕತೆಯ ಎಳೆ.

ಲಾಕ್‌ಡೌನ್ ಬಳಿಕ ಚಿತ್ರೀಕರಣ ನಡೆಯಲಿದೆ
ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಸ್ವಲ್ಪ ಭಾಗವಷ್ಟೆ ಚಿತ್ರೀಕರಣ ಆಗಿದೆ. ಕೊರೊನಾ ಲಾಕ್‌ಡೌನ್ ಮುಗಿದ ಬಳಿಕ ಸಿನಿಮಾ ಚಿತ್ರೀಕರಣ ಮುಂದುವರೆಯಲಿದೆ. ಚಿತ್ರವನ್ನು ಸುಕುಮಾರ್ ನಿರ್ದೇಶಿಸುತ್ತಿದ್ದು, ತೀವ್ರ ನಿರೀಕ್ಷೆ ಹುಟ್ಟಿಸಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.


Click it and Unblock the Notifications











