'ಪುಷ್ಪ- 2' ಕಥೆ ಕೂಡ 'KGF'- 2 ಕಾಪಿನಾ? ಟೀಸರ್ ಬಿಚ್ಚಿಟ್ಟ ರಾಬಿನ್ ಹುಡ್ ಕಥೆಯೇನು?

ಇಂಗ್ಲೀಷ್ ಸಾಹಿತ್ಯದಲ್ಲಿ ರಾಬಿನ್ ಹುಡ್ ಒಂದು ಕಾಲ್ಪನಿಕ ಪಾತ್ರ. 17ನೇ ಶತಮಾನದಲ್ಲಿ ಶ್ರೀಮಂತರಿಂದ ದೋಚಿ ಬಡವರಿಗೆ ಸಹಾಯ ಮಾಡಿತ್ತಿದ್ದ ಕಳ್ಳನ ಕಥೆ. ಇದೇ ರಾಬಿನ್ ಹುಡ್ ಕಥೆ ನೂರಾರು ಸಿನಿಮಾಗಳಿಗೆ ಸ್ಪೂರ್ತಿಯಾಗಿದೆ. ಕಳ್ಳತನ ಕ್ರೈಂ ಆಗಿದ್ದರೂ ಬಡವರಿಗೆ ಸಹಾಯ ಮಾಡುವ ಒಳ್ಳೆತನ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಇದೇ ಕಾನ್ಸೆಪ್ಟ್‌ನಲ್ಲಿ ಕನ್ನಡದಲ್ಲೂ ಸಾಕಷ್ಟು ಸಿನಿಮಾಗಳು ಬಂದಿವೆ.

'ಪುಷ್ಪ' ಚಿತ್ರದಲ್ಲಿ ನಿರ್ದೇಶಕ ಸುಕುಮಾರ್ ಒಬ್ಬ ರಕ್ತಚಂದನ ಸ್ಮಗ್ಲರ್ ಕಥೆಯನ್ನು ಹೇಳಲು ಬಯಸಿದರು. ಹಿಂದುಳಿದ ಸಮುದಾಯದ 'ಪುಷ್ಪ'ರಾಜ್ ಚಿಕ್ಕಂದಿನಿಂದಲೂ ಭಾರೀ ಶೋಷಣೆಗೆ ಗುರಿಯಾಗುತ್ತಾನೆ. ಆರ್ಥಿಕವಾಗಿ, ಸಾಮಾಜಿಕವಾಗಿ ತಾನು ವಂಚಿತನಾಗಿದ್ದನ್ನು ಹೇಗಾದರೂ ಮಾಡಿ ಪಡೆಯಬೇಕು ಎಂದುಕೊಳ್ಳುತ್ತಾನೆ. ಚಿತ್ರದ ಮೊದಲ ಭಾಗದ ಕಥೆ ಇದೇ ಹಾದಿಯಲ್ಲಿ ಸಾಗುತ್ತದೆ. ಬೇರೆಯವರಿಗೆ ಸಹಾಯ ಮಾಡಬೇಕು ಎನ್ನುವ ಆಲೋಚನೆ ಅವನಿಗೆ ಇರುವುದಿಲ್ಲ.

Allu Arjuns Pushpa 2 Story inspired by Yashs KGF Series

'KGF' ಚಿತ್ರದಲ್ಲಿ ಪ್ರಶಾಂತ್‌ ನೀಲ್ ರಾಕಿ ಪಾತ್ರವನ್ನು ಕೂಡ ಇದೇ ರೀತಿ ಡಿಸೈನ್ ಮಾಡಿದ್ದರು. ಇಡೀ ಸಿನಿಮಾ ರಾಕಿ ಭಾಯ್ ಗುರಿ ಒಂದೇ. ಆತನಿಗೆ ದಯಾ ದಾಕ್ಷಿಣ್ಯ ಇರುವುದಿಲ್ಲ. ತನ್ನ ಗುರಿ ಸಾಧನೆಗಾಗಿ ದೊಡ್ಡ ದೊಡ್ಡ ಡಾನ್‌ಗಳ ತಲೆ ಕಡಿಯುತ್ತಾ ಹೋಗುತ್ತಾನೆ. ನರಾಚಿಯನ್ನು ತನ್ನ ಅಧೀನಕ್ಕೆ ಪಡೆದ ಮೇಲೂ ಆತ ಬದಲಾಗಲ್ಲ. ಗಣಿ ಕಾರ್ಮಿಕರನ್ನು ದುಡಿಸಿಕೊಂಡು ಬಂಗಾರ ತೆಗೆಯುತ್ತಾನೆ. ಆದರೆ 'ಚಾಪ್ಟರ್‌- 2' ಕೊನೆಗೆ ಆ ಕಾರ್ಮಿಕರಿಗೆ ಸಹಾಯ ಮಾಡುತ್ತಾನೆ.

ಅಲ್ಲಿವರೆಗೂ ಬರೀ ತನ್ನ ಸ್ವಾರ್ಥ ಸಾಧನೆಗಾಗಿ ರಾಕಿ ಇದೆಲ್ಲಾ ಮಾಡುತ್ತಿದ್ದ ಅಂತ ಎಲ್ಲರೂ ಅಂದುಕೊಂಡಿದ್ದರು. ಕೊನೆಗೆ ಕಾರ್ಮಿಕರಿಗೆಲ್ಲಾ ಮನೆ ಕಟ್ಟಿಸಿಕೊಡುತ್ತಾನೆ. ಅಲ್ಲಿಯವರೆಗೂ ರಾಕ್ಷಸನಂತೆ ಬಿಂಬಿಸಲಾದ ಆತನಲ್ಲೂ ಕೊನೆಗೆ ಹೀರೊಯಿಸಂ ತೋರಿಸಿ ನಿರ್ದೇಶಕರು ಗೆದ್ದಿದ್ದರು. ಈ ಹಿಂದೆ 'ಪುಷ್ಪ' ಸಿನಿಮಾ ನೋಡಿದವರು ಇದು 'KGF' ಕಾಪಿ ಎಂದಿದ್ದರು. ಇದು ಚಿನ್ನದ ಕಥೆ, ಅದು ರಕ್ತ ಚಂದನ ಕಥೆ ಅಷ್ಟೇ ಉಳಿದಿದ್ದೇಲ್ಲಾ ಸೇಮ್ ಅಂದಿದ್ದರು.

Allu Arjuns Pushpa 2 Story inspired by Yashs KGF Series

'ಪುಷ್ಪ' ಸಿನಿಮಾ ನೋಡಿದ ಕೆಲವರು ಇದೇ ಪ್ರಶ್ನೆ ಎತ್ತಿದ್ದರು. ಒಬ್ಬ ಸ್ಮಗ್ಲರ್‌ನ ಹೀರೊ ರೀತಿ ತೋರಿಸೋದು ಎಷ್ಟು ಸರಿ. ಇದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆ ಆಗುತ್ತದೆ ಎಂದು ಟೀಕಿಸಿದ್ದರು. ಹಾಗಾಗಿ ಈ ಕಥೆಯನ್ನು ಯಾವ ರೀತಿ ಸುಕುಮಾರ್ ಮುಗಿಸುತ್ತಾರೆ ಎನ್ನುವ ಅನುಮಾನ ಇತ್ತು. ಸದ್ಯ ರಿಲೀಸ್ ಆಗಿರುವ ಕಾನ್ಸೆಪ್ಟ್ ಟೀಸರ್‌ನಲ್ಲಿ ಅದಕ್ಕೆ ಉತ್ತರ ಸಿಕ್ಕಿದೆ. ಚಿತ್ರದಲ್ಲಿ 'ಪುಷ್ಪ'ರಾಜ್‌ನ ಸುಕುಮಾರ್ ಇಂಡಿಯನ್ ರಾಬಿನ್ ಹುಡ್ ಮಾಡಿಬಿಟ್ಟಿದ್ದಾರೆ.

'ಪುಷ್ಪ' ಚಿತ್ರದಲ್ಲಿ ರಾಬಿನ್ ಹುಡ್ ಆದರೂ ಕಳ್ಳ ಅಲ್ಲ. ಬದಲಿಗೆ ರಕ್ತಚಂದನ ಸ್ಮಗ್ಲರ್. ಅಕ್ರಮವಾಗಿ ಸಂಪಾದಿಸಿದ ಹಣದಲ್ಲಿ ಬಡವರಿಗೂ ಸಹಾಯ ಮಾಡುತ್ತಾನೆ. ಆ ಮೂಲಕ ಹಳೇ ಕಥೆಯೇ ರಿಪೀಟ್ ಆಗಿದೆ. ಆದರೆ ಇದಕ್ಕಿಂತ ಬೇರೆನೋ ಮಾಡೋಕೆ ಸಾಧ್ಯವಿರಲಿಲ್ಲ ಎನಿಸುತ್ತದೆ. ಸೀಕ್ವೆಲ್‌ನಲ್ಲಿ ರಕ್ತ ಚಂದನ ಸ್ಮಗ್ಲಿಂಗ್ ಸಿಂಡಿಕೇಟ್ ಕೈವಶ ಮಾಡಿಕೊಂಡ 'ಪುಷ್ಪ' ಡಾನ್ ಆಗಿ ಬೆಳೆಯುತ್ತಾನೆ. ತನ್ನವರಿಗೆ ಸಹಾಯ ಮಾಡುತ್ತಾನೆ ಇದೇ ಚಿತ್ರದ ಇನ್ನುಳಿದ ಕಥೆ.

Allu Arjuns Pushpa 2 Story inspired by Yashs KGF Series

ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ರಿಲೀಸ್ ಆದ ಕಾನ್ಸೆಪ್ಟ್ ಟೀಸರ್‌ನಲ್ಲಿ ಬಹುತೇಕ ಸಿನಿಮಾ ಕಥೆ ರಿವೀಲ್ ಆಗಿದೆ. ಆದರೆ ಅದನ್ನು ಹೇಗೆ ಸುಕುಮಾರ್ ಕಟ್ಟಿಕೊಟ್ಟಿದ್ದಾರೆ ಅನ್ನುವ ಕುತೂಹಲ ಸಿನಿರಸಿಕರಲ್ಲಿದೆ. 'ಪುಷ್ಪ' ಬಲಗೈ ಬಂಟ ಕೇಶವಾ ಏನಾದ? ಮಾಫಿಯಾ ಡಾನ್ 'ಪುಷ್ಪ' ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ಹೇಗೆ? ಬನ್ವರ್ ಸಿಂಗ್ ವರ್ಸಸ್ ಪುಷ್ಪರಾಜ್ ಫೈಟ್ ಹೇಗಿರುತ್ತೆ? ತನ್ನ ಗುರಿ ಸಾಧಿಸಿದ ನಂತರ 'ಪುಷ್ಪ' ಸ್ಮಗ್ಲಿಂಗ್ ಬಿಡ್ತಾನಾ? ಅನ್ನುವ ಒಂದಷ್ಟು ಪ್ರಶ್ನೆಗಳ ಜೊತೆ ಸೀಕ್ವೆಲ್‌ಗಾಗಿ ಕಾಯುವಂತಾಗಿದೆ.

More from Filmibeat

English summary
Allu Arjun's Pushpa 2 Story inspired by Yash's KGF Series. concept teaser hints Sukumar Directed Pushpa 2 Story. know miore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X