'ಬಾಹುಬಲಿ' ಮತ್ತು 'RRR' ಸಿನಿಮಾದ ದಾಖಲೆ ಮುರಿದ ಅಲ್ಲು ಅರ್ಜುನ್ 'ಪುಷ್ಪ'

ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಸದ್ಯ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಬಹುನಿರೀಕ್ಷೆಯ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷ ಎಂದರೆ ಪುಷ್ಪ ಟೀಸರ್ ಟಾಲಿವುಡ್ ನ ಆರ್ ಆರ್ ಆರ್ ಸಿನಿಮಾದ ದಾಖಲೆಯನ್ನು ಬ್ರೇಕ್ ಮಾಡಿದೆ.

ವೀಕ್ಷಣೆ ವಿಚಾರದಲ್ಲಿ ಪುಷ್ಪ ಟೀಸರ್ ಟಾಲಿವುಡ್ ನಲ್ಲಿ ದಾಖಲೆ ನಿರ್ಮಿಸಿದೆ. ಬಿಡುಗಡೆಯಾಗಿ 24 ಗಂಟೆಯಲ್ಲಿ ಭರ್ಜರಿ ವೀಕ್ಷಣೆ ಕಂಡು ನಂಬರ್ ಒನ್ ಸ್ಥಾನಕ್ಕೆ ಏರಿದೆ. ಪ್ರಭಾಸ್ ನಟನೆಯ ರಾಧೆ ಶ್ಯಾಮ್, ಆರ್ ಆರ್ ಆರ್ ಮತ್ತು ಬಾಹುಬಲಿ ಸಿನಿಮಾದ ಎಲ್ಲಾ ದಾಖಲೆಯನ್ನು ಮುರಿದು ಪುಷ್ಪ ಮುನ್ನುಗ್ಗುತ್ತಿದೆ.

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕ್ರೇಜ್ ಗೆ ದಕ್ಷಿಣ ಭಾರತೀಯ ಸಿನಿಮಾರಂಗ ಮಾತ್ರವಲ್ಲದೇ ಬಾಲಿವುಡ್ ಕೂಡ ನಿಬ್ಬೆರಗಾಗಿದೆ. ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಅಲ್ಲು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಆಕ್ಷನ್, ಡೈಲಾಗ್ ಎಲ್ಲವೂ ಸಹ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಶ್ರೀಗಂಧದ ಕಳ್ಳಸಾಗಣಿಕೆ ಬಗ್ಗೆ ಇರುವ ಸಿನಿಮಾ ಇದಾಗಿದ್ದು, ಚಿತ್ರ ನೋಡಲು ಅಭಿಮಾನಿಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

Allu Arjuns Pushpa movie teaser breaks Baahubali and RRR movie record

ಯುಟ್ಯೂಬ್ ಟ್ರೆಂಡಿಂಗ್ ನಂ.1 ಆಗಿರೋ ಪುಷ್ಪ ರಿಲೀಸ್ ಆದ ಕೇವಲ 24 ಗಂಟೆಗಳನ್ನೇ 25 ಮಿಲಿಯನ್ ವೀವ್ಸ್ ಹಾಗೂ 792 ಸಾವಿರ ಲೈಕ್ಸ್ ಪಡೆದು ದಾಖಲೆ ಸೃಷ್ಟಿಸಿದೆ. ಈಗಾಗಲೇ 35 ಮಿಲಿಯನ್ ವೀವ್ಸ್ ಹಾಗೂ 1 ಮಿಲಿಯನ್ ಲೈಕ್ಸ್ ಗಳಿಸಿ ಮುನ್ನುಗುತ್ತಿದೆ.

ಅಂದಹಾಗೆ ಪುಷ್ಪ ಸಿನಿಮಾದಲ್ಲಿ ಖಳನಟನಾಗಿ ಮಲಯಾಳಂನ ಖ್ಯಾತ ನಟ ಫಹಾದ್ ಫಾಸಿಲ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ವಿಶೇಷ ಎಂದರೆ ಕನ್ನಡ ನಟ ಡಾಲಿ ಧನಂಜಯ್ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಪುಷ್ಪ ಟೀಸರ್ ರಿಲೀಸ್ ಆದ ಬಳಿಕ ಡಾಲಿ ಲುಕ್ ಹೇಗಿರಲಿದೆ ಎನ್ನುವ ಕನ್ನಡಿಗರಲ್ಲಿ ಹೆಚ್ಚಾಗಿದೆ.

ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ಪುಷ್ಪ ಸಿನಿಮಾ ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು ಮತ್ತು ಮಲಯಾಳಂ ಜೊತೆಗೆ ಹಿಂದಿಯಲ್ಲೂ ತೆರೆಗೆ ಬರುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಅಲ್ಲು ಅರ್ಜುನ್ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮುತ್ತಿದ್ದಾರೆ.

More from Filmibeat

English summary
Allu Arjun's Pushpa movie teaser breaks Baahubali and RRR movie record.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X