ಯಾವ ಚಿತ್ರವೂ ಮಾಡದ ವಿಶೇಷ ದಾಖಲೆ ಬರೆದ ಅಲ್ಲು ಅರ್ಜುನ್ ನಟನೆಯ 'ಸರೈನೋಡು'
ಬೊಯಾಪತಿ ಶ್ರೀನು ನಿರ್ದೇಶನದಲ್ಲಿ ಅಲ್ಲು ಅರ್ಜುನ್, ಶ್ರೀಕಾಂತ್, ಕ್ಯಾಥರಿನ್ ಥ್ರೆಸಾ, ರಕೂಲ್ ಪ್ರೀತ್ ಸಿಂಗ್ ಮುಂತಾದವರು ನಟಿಸಿದ್ದ 'ಸರೈನೋಡು' ಚಿತ್ರ 2016ರಲ್ಲಿ ತೆರೆಕಂಡಿತ್ತು. ದೊಡ್ಡ ಬಜೆಟ್‌ನ ಚಿತ್ರ ಅದರ ದುಪ್ಪಟ್ಟು ಗಳಿಕೆ ಕಂಡಿತ್ತು.
Recommended Video
ತೆಲುಗಿನಲ್ಲಿ ಯಶಸ್ವಿಯಾಗಿದ್ದ ಈ ಚಿತ್ರವನ್ನು 2017ರಲ್ಲಿ ಹಿಂದಿ ಭಾಷೆಗೆ ಡಬ್ ಮಾಡಿ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಮೂರು ವರ್ಷದ ಬಳಿಕ 300 ಮಿಲಿಯನ್‌ಗೂ ಹೆಚ್ಚು ಬಾರಿ ಇದನ್ನು ಜನರು ವೀಕ್ಷಿಸಿದ್ದಾರೆ. ಈ ಮೂಲಕ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ಸಿನಿಮಾ ಎಂದು ಖ್ಯಾತಿ ಗಳಿಸುವ ಮೂಲಕ 'ಸರೈನೋಡು' ಹೊಸ ದಾಖಲೆಯನ್ನೇ ಬರೆದಿದೆ. ಮುಂದೆ ಓದಿ.

ಅತಿ ಹೆಚ್ಚು ವೀಕ್ಷಣೆ
ಸೂಪರ್ ಹಿಟ್ ಚಿತ್ರ 'ಸರೈನೋಡು' ಹಿಂದಿ ಡಬ್ಬಿಂಗ್ ಆವೃತ್ತಿಯು ಯೂಟ್ಯೂಬ್‌ನಲ್ಲಿ 300 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ. ಇದು ಭಾರತದಲ್ಲಿ ಚಿತ್ರವೊಂದು ಅತಿ ಹೆಚ್ಚು ವೀಕ್ಷಣೆಗೆ ಒಳಗಾಗಿರುವ ದಾಖಲೆಯಾಗಿದೆ. ಬೇರೆ ಯಾವ ಭಾಷೆಯ ಯಾವ ಚಿತ್ರವೂ ಯೂಟ್ಯೂಬ್‌ನಲ್ಲಿ ಇಷ್ಟು ವೀಕ್ಷಣೆ ಪಡೆದಿಲ್ಲ.

ಮೊದಲ ಸಿನಿಮಾ
ಅಲ್ಲು ಅರ್ಜುನ್ ಸಿನಿಮಾ ಈ ದಾಖಲೆ ಸೃಷ್ಟಿಸಿರುವ ಮಾಹಿತಿಯನ್ನು ವಿಶ್ಲೇಷಕ ಕೋಮಲ್ ನಹ್ತಾ ನೀಡಿದ್ದಾರೆ. 'ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಸಿನಿಮಾ ಸರೈನೋಡು (ಹಿಂದಿ ಡಬ್ ಆವೃತ್ತಿ) ಚಿತ್ರವು ಯೂಟ್ಯೂಬ್‌ನಲ್ಲಿ ಮೊದಲ ಬಾರಿಗೆ 300+ ಮಿಲಿಯನ್ ವೀಕ್ಷಣೆ ಪಡೆದ ಭಾರತದ ಮೊದಲ ಸಿನಿಮಾ ಎನಿಸಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.

ಆಕ್ಷನ್ ಲವ್ ಸ್ಟೋರಿ
ಗೀತಾ ಆರ್ಟ್ಸ್ ಬ್ಯಾನರ್‌ನಲ್ಲಿ ಅಲ್ಲು ಅರವಿಂದ್ ಈ ಚಿತ್ರವನ್ನು ನಿರ್ಮಿಸಿದ್ದರು. ಕಾನೂನು ವ್ಯವಸ್ಥೆಯ ದೋಷದಿಂದಾಗಿ ಶಿಕ್ಷೆಯಿಂದ ತಪ್ಪಿಸಿಕೊಂಡ ವಿಲನ್‌ಗಳನ್ನು ಹೊಡೆಯುವ ಯುವಕನ ಪಾತ್ರದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದರು. ಪರಿಪೂರ್ಣ ಆಕ್ಷನ್ ಲವ್ ಸ್ಟೋರಿಯ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿತ್ತು.

ಪುಷ್ಪ ಚಿತ್ರದಲ್ಲಿ ನಟನೆ
ಅಲ್ಲು ಅರ್ಜುನ್ ಪ್ರಸ್ತುತ ಸುಕುಮಾರ್ ನಿರ್ದೇಶನನದ 'ಪುಷ್ಪ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಿಗೆ ಈ ಚಿತ್ರ ಡಬ್ ಆಗಲಿದೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಚಿತ್ರವು, ಕಾಡಿನಲ್ಲಿ ನಡೆಯುವ ರಕ್ತಚಂದನದ ಕಳ್ಳಸಾಗಣೆಯ ಕಥೆ ಹೊಂದಿದೆ.


Click it and Unblock the Notifications











