ರಾಮ್ ಚರಣ್ ಪತ್ನಿ ಸೀಮಂತ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್, ಸಾನಿಯಾ ಮಿರ್ಜಾ: ಪೋಟೊ ವೈರಲ್
ರಾಮ್ ಚರಣ್ ಹಾಗೂ ಉಪಾಸನಾ ದಂಪತಿಗೆ ಸಂಭ್ರಮವೋ ಸಂಭಮ. ಬರೊಬ್ಬರಿ 10 ವರ್ಷಗಳ ಬಳಿಕ ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಮೆಗಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.
ಕಳೆದ ಕೆಲವು ದಿನಗಳಿಂದ ಮೆಗಾ ಕುಟುಂಬದಲ್ಲಿ ಕಾರ್ಯಕ್ರಮಗಳ ಮೇಲೆ ಕಾರ್ಯಕ್ರಮ ಮಾಡುತ್ತಲೇ ಇದ್ದಾರೆ. ಇತ್ತೀಚೆಗೆ ರಾಮ್ ಚರಣ್ ಹಾಗೂ ಕುಟುಂಬ ದುಬೈನಲ್ಲಿ ಉಪಾಸನಾ ವಾರ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಈಗ 3 ವಾರದ ಹಿಂದಷ್ಟೇ ದುಬೈನಲ್ಲಿ ಅದ್ಧೂರಿಯಾಗಿ ನಡೆದ ಸೀಮಂತ ಸಂಭ್ರಮದ ಬಳಿಕ ಮತ್ತೊಂದು ಕಾರ್ಯಕ್ರಮ ನಡೆದಿದೆ. ಹೈದ್ರಾಬಾದ್ ರಾಮ್ ಚರಣ್ ನಿವಾಸದಲ್ಲಿ ಮತ್ತೊಂದು ಸೀಮಂತ ಕಾರ್ಯಕ್ರಮ ಜರುಗಿದೆ.

ಹೈದ್ರಾಬಾದ್‌ನ ಸೀಮಂತ ಕಾರ್ಯಕ್ರಮಕ್ಕೆ ಮೆಗಾ ಕುಟುಂಬ ಆತ್ಮೀಯರನ್ನು ಹಾಗೂ ಕುಟುಂಬಸ್ಥರಿಗೆ ಆಹ್ವಾನ ನೀಡಿತ್ತು. ಈ ಕಾರ್ಯಕ್ರಮಕ್ಕೆ ಟಾಲಿವುಡ್‌ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಆಗಮಿಸಿದ್ದರು.
ರಾಮ್ ಚರಣ್ ಹಾಗೂ ಉಪಾಸನಾ ಸುಂದರವಾಗಿ ಕಾಣುತ್ತಿದ್ದರು. ಅಲ್ಲದೆ ಕಾರ್ಯಕ್ರಮಕ್ಕೆ ಸಾನಿಯಾ ಮಿರ್ಜಾ, ಕನಿಕಾ ಕಪೂರ್, ಪಿಂಕಿ ರೆಡ್ಡಿ, ಸೇರಿದಂತೆ ಅವರ ಕುಟುಂಬ ಸೇರಿತ್ತು. ಜೊತೆ ಚಿರಂಜೀವಿ ಮತ್ತು ಸುರೇಖಾ ಕೊನಿಡೇಲ, ಸಹೋದರಿಯರಾದ ಸುಶ್ಮಿತಾ ಮತ್ತು ಶ್ರೀಜಾ, ಉಪಾಸನಾ ಅವರ ತಾಯಿ, ಶ್ರೀಮತಿ ಶೋಬನಾ ಕಾಮಿನೇನಿ, ಸಂಗೀತಾ ರೆಡ್ಡಿ ಸೇರಿದಂತೆ ಆಪ್ತರು ಭಾಗವಹಿಸಿದ್ದರು.
ಇತ್ತೀಚೆಗೆ ರಾಮ್ ಚರಣ್ ಡಬಲ್ ಸಂಭ್ರಮದಲ್ಲಿ ಇದ್ದಾರೆ. ಒಂದ್ಕಡೆ ಅವರೇ ನಟಿಸಿದ RRR ಸಿನಿಮಾದ ನಾಟು ನಾಟು ಹಾಡು ಆಸ್ಕರ್ ಗೆದ್ದಿತ್ತು. ಈ ಮೂಲಕ ರಾಮ್ ಚರಣ್ ಗ್ಲೋಬಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಅದೇ ಇನ್ನೊಂದು ಕಡೆ ತಂದೆಯಾಗುತ್ತಿರುವ ಖುಷಿನೂ ಇದೆ.
ಈ ಮಧ್ಯೆ ರಾಮ್ ಚರಣ್ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಶಂಕರ್ ನಿರ್ದೇಶನದ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಇನ್ನೊಂದು ಕಡೆ ಹಾಲಿವುಡ್‌ಗೂ ಕಾಲಿಡುವ ಸಾಧ್ಯತೆಗಳಿವೆ. ಹೀಗಾಗಿ ಈ ವರ್ಷ ರಾಮ್ ಚರಣ್ ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಯಶಸ್ಸು ಕಂಡಿದ್ದಾರೆ.


Click it and Unblock the Notifications











