For Quick Alerts
  ALLOW NOTIFICATIONS  
  For Daily Alerts

  ಅಲ್ಲು ಅರ್ಜುನ್ ಅನ್ನು ನಾಲಾಯಕ್ ಎಂದುಕೊಂಡಿದ್ದರಂತೆ!

  |

  'ಪುಷ್ಪ' ಸಿನಿಮಾದ ಬಳಿಕ ನಟ ಅಲ್ಲು ಅರ್ಜುನ್ ಳಿಕ ನಟ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬದಲಾಗಿದ್ದಾರೆ. 'ಪುಷ್ಪ' ಸಿನಿಮಾದ ಮುಂಚೆಯೂ ಅಲ್ಲು ಅರ್ಜುನ್ ದೊಡ್ಡ ಸ್ಟಾರ್ ನಟರೇ ಆಗಿದ್ದರು.

  ಆದರೆ ಅಲ್ಲು ಅರ್ಜುನ್‌ ಬಗ್ಗೆ ಅವರ ಮನೆಯ ಹಿರಿಯರಿಗೆ ನಂಬಿಕೆ ಇರಲಿಲ್ಲವಂತೆ, ಅಲ್ಲು ಅರ್ಜುನ್ ಕುಟುಂಬದ ಮೊದಲ ಸಿನಿಮಾ ತಾರೆ , ಅಲ್ಲು ಅರ್ಜುನ್ ಅವರ ತಾತ ಅಲ್ಲು ರಾಮಲಿಂಗಯ್ಯ ಅವರಿಗೆ ಅಲ್ಲು ಅರ್ಜುನ್ ಮೇಲೆ ತುಸುವೂ ನಂಬಿಕೆ ಇರಲಿಲ್ಲವಂತೆ. ಅಲ್ಲು ಅರ್ಜುನ್ ದೊಡ್ಡ ನಿಶ್ಪಯೋಜಕ ಆಗುತ್ತಾನೆ ಎಂದುಕೊಂಡಿದ್ದರಂತೆ.

  ಈ ವಿಷಯವನ್ನು ಸ್ವತಃ ಅಲ್ಲು ಅರ್ಜುನ್ ಅವರು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ತಮ್ಮ ತಾತ ಅಲ್ಲು ರಾಮಲಿಂಗಯ್ಯ ಕುರಿತಾದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಅಲ್ಲು ಅರ್ಜುನ್, ಈ ವಿಷಯವನ್ನು ಹಂಚಿಕೊಂಡಿದ್ದಾರೆ.

  ಅಲ್ಲು ರಾಮಲಿಂಗಯ್ಯ ಅವರ ನೂರನೇ ಹುಟ್ಟು ಹಬ್ಬದ ಪ್ರಯುಕ್ತ ಅವರ ಕುರಿತಾದ ಪುಸ್ತಕವೊಂದನ್ನು ಬಿಡುಗಡೆ ಮಾಡಲಾಯ್ತು. ಈ ಸಂದರ್ಭದಲ್ಲಿ ಮಾತನಾಡಿದ ಅಲ್ಲು ಅರ್ಜುನ್, ''ಈ ದಿನ ನಾನು ಹಲವರಿಗೆ ಧನ್ಯವಾದಗಳನ್ನು ಹೇಳಬೇಕು. ಧನ್ಯವಾದ ಹೇಳಬೇಕಾದವರ ಪಟ್ಟಿ 1950 ರಿಂದ ಪ್ರಾರಂಭವಾಗುತ್ತದೆ. ನಮ್ಮ ತಾತ ಅಲ್ಲು ರಾಮಲಿಂಗಯ್ಯ ಅವರಿಗೆ ಮೊದಲ ಸಿನಿಮಾದಲ್ಲಿಯೇ ಹಿಟ್ ಕೊಟ್ಟ ಗರಿಕವೇಟಿ ರಾಜಾರಾಮ್ ಅವರಿಂದ ಆರಂಭಗೊಂಡು ಹಲವರಿಗೆ ಧನ್ಯವಾದ ಹೇಳಬೇಕಿದೆ.

  ಹಲವು ಸ್ಟಾರ್ ನಟರೊಟ್ಟಿಗೆ ನಟನೆ

  ಹಲವು ಸ್ಟಾರ್ ನಟರೊಟ್ಟಿಗೆ ನಟನೆ

  ಅಲ್ಲು ರಾಮಲಿಂಗಯ್ಯ ಅವರ 50 ವರ್ಷ ನಟನಾ ವೃತ್ತಿಯಲ್ಲಿ ಹಲವು ನಿರ್ದೇಶಕರು, ನಟರು ಅವರೊಟ್ಟಿಗೆ ಕೆಲಸ ಮಾಡಿದ್ದಾರೆ. ಸೂಪರ್ ಸ್ಟಾರ್ ಕೃಷ್ಣ ಹಾಗೂ ನಮ್ಮ ತಾತ 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರೊಟ್ಟಿಗೆ ಕೆಲಸ ಮಾಡಿರುವ ಎನ್‌ಟಿಆರ್, ಶೋಭನ್ ಬಾಬು, ಎಂಜಿಆರ್ ಸೇರಿ ಅನೇಕರು ನಟಿಸಿದ್ದಾರೆ. ಬ್ರಹ್ಮಾನಂದಂ ಹಾಗೂ ಅಲಿ ಸಹ ಅಲ್ಲು ರಾಮಲಿಂಗಯ್ಯ ಅವರೊಟ್ಟಿಗೆ ನಟಿಸಿದ್ದಾರೆ ಎಂದರು ಅಲ್ಲು ಅರ್ಜುನ್.

  ಚಿರಂಜೀವಿಯಿಂದ ಗೌರವ ಹೆಚ್ಚಾಯಿತು

  ಚಿರಂಜೀವಿಯಿಂದ ಗೌರವ ಹೆಚ್ಚಾಯಿತು

  ಅಲ್ಲು ರಾಮಲಿಂಗಯ್ಯ ಅವರಿಗೆ ಅಳಿಯನಾಗಿ ಬಂದ ಚಿರಂಜೀವಿ ತಮ್ಮ ಮಾವನ ಸ್ಥಾನವನ್ನು ಭಾರಿ ಎತ್ತರಕ್ಕೆ ಕೊಂಡೊಯ್ದರು. ಅಲ್ಲು ರಾಮಲಿಂಗಯ್ಯ ಅವರು ಬಹಳ ಅದೃಷ್ಟವಂತರು. ಅವರಿಗೆ ಒಳ್ಳೆಯ ಮಕ್ಕಳು ಸಿಕ್ಕಿದರು, ಒಳ್ಳೆಯ ಅಳಿಯ, ಮೊಮ್ಮಕ್ಕಳು ಸಿಕ್ಕಿದರು ಎಂದ ಅಲ್ಲು ಅರ್ಜುನ್, ಅಲ್ಲು ರಾಮಲಿಂಗಯ್ಯ ಅವರ ಪುಸ್ತಕ ಬಿಡುಗಡೆ ಮಾಡಿದ ವೆಂಕಯ್ಯನಾಯ್ಡು ಅವರಿಗೂ ಧನ್ಯವಾದ ಹೇಳಿದರು.

  ನಿಶ್ಪ್ರಯೋಜಕ ಎಂದುಕೊಂಡಿದ್ದರಂತೆ ಅಲ್ಲು ರಾಮಲಿಂಗಯ್ಯ

  ನಿಶ್ಪ್ರಯೋಜಕ ಎಂದುಕೊಂಡಿದ್ದರಂತೆ ಅಲ್ಲು ರಾಮಲಿಂಗಯ್ಯ

  ಅಲ್ಲು ರಾಮಲಿಂಗಯ್ಯ ಅವರಿಗೆ ತಮ್ಮ ಮೇಲೆ ನಂಬಿಕೆ ಇಲ್ಲದ ಬಗ್ಗೆಯೂ ಮಾತನಾಡಿರುವ ಅಲ್ಲು ಅರ್ಜುನ್, ಮನೆಯಲ್ಲಿ ಯಾರಿಗೂ ಇಲ್ಲದಂತೆ ನನಗೆ ಮಾತ್ರ 10 ಲಕ್ಷ ಇನ್ಶುರೆನ್ಸ್ ಹಣ ಒಮ್ಮೆ ಬಂದಿತು. ಆಗ ಗೊತ್ತಾಯಿತು ತಾತನಿಗೆ ನನ್ನ ಮೇಲೆ ನಂಬಿಕೆ ಇರಲಿಲ್ಲವೆಂದು. ಇವನು ದೊಡ್ಡ ನಿಶ್ಪ್ರಯೋಜಕ ಆಗುತ್ತಾನೆ ಎಂದು ಎಣಿಸಿದ್ದ ಅಲ್ಲು ರಾಮಲಿಂಗಯ್ಯ ಅವರು ನಾನು ನಾಲ್ಕನೇ ತರಗತಿಯಲ್ಲಿದ್ದಾಗಲೇ ನನ್ನ ಹೆಸರಿಗೆ ವಿಮೆ ಮಾಡಿಸಿದ್ದರು. ಅದರ ಹತ್ತು ಲಕ್ಷ ರುಪಾಯಿ ಹಣ ನಾನು 18 ವರ್ಷ ದಾಟಿದ ಮೇಲೆ ನನ್ನ ಕೈ ಸೇರಿತ್ತು ಎಂದರು ಅಲ್ಲು ಅರ್ಜುನ್.

  ಸ್ಟುಡಿಯೋ ನಿರ್ಮಾಣ ಮಾಡಿದ್ದಾರೆ

  ಸ್ಟುಡಿಯೋ ನಿರ್ಮಾಣ ಮಾಡಿದ್ದಾರೆ

  ಅಲ್ಲು ಅರ್ಜುನ್ ಕುಟುಂಬದವರು, ತಾತ ಅಲ್ಲು ರಾಮಲಿಂಗಯ್ಯ ಅವರ ಹೆಸರಿನಲ್ಲಿ ದೊಡ್ಡ ಸಿನಿಮಾ ಸ್ಟುಡಿಯೋವನ್ನು ಸಹ ನಿರ್ಮಾಣ ಮಾಡಿದ್ದಾರೆ. ಈ ಸ್ಟುಡಿಯೋವನ್ನು ನಟ ಚಿರಂಜೀವಿ ಉದ್ಘಾಟನೆ ಮಾಡಿದ್ದಾರೆ. ಅಲ್ಲು ರಾಮಲಿಂಗಯ್ಯ ಅವರ ಮಗಳನ್ನೇ ಮೆಗಾಸ್ಟಾರ್ ಚಿರಂಜೀವಿ ವಿವಾಹವಾಗಿರುವುದು. ಇನ್ನು ಅಲ್ಲು ಅರ್ಜುನ್ ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ ತೆಲುಗು ಚಿತ್ರರಂಗದಲ್ಲಿ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಆಹಾ ಒಟಿಟಿ ಪ್ರಾರಂಭಿಸಿರುವ ಅಲ್ಲು ಅರ್ಜುನ್, ಇದೀಗ ಸ್ಟುಡಿಯೋ ಸಹ ಕಟ್ಟಿದ್ದಾರೆ. ಎರಡು ಪ್ರೊಡಕ್ಷನ್ ಹೌಸ್‌ಗಳನ್ನು ಸಹ ನಡೆಸುತ್ತಿದ್ದಾರೆ.

  English summary
  Allu Arjun shared interesting incident about his grand father Allu Ramalingaiah. He said his grand father thought he wont be success in his life.
  Wednesday, October 5, 2022, 11:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X