Pushpa-2: ಏಕಾಏಕಿ ಅಭಿಮಾನಿಗಳನ್ನು 'ಪುಷ್ಪ' ಕೋಟೆಗೆ ಕರ್ಕೊಂಡ್ ಹೋದ ಅಲ್ಲು ಅರ್ಜುನ್

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. ಇತ್ತೀಚೆಗಷ್ಟೆ ಅಲ್ಲು ಅರ್ಜುನ್ ನಟನೆಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ಇದೆಲ್ಲದರ ನಡುವೆ ಸ್ಟೈಲಿಶ್ ಸ್ಟಾರ್ ಅಭಿಮಾನಿಗಳಿಗೆ ಬಿಗ್ ಸರ್‌ಪ್ರೈಸ್ ನೀಡಿದ್ದಾರೆ. 'ಪುಷ್ಪ-2' ಮೇಕಿಂಗ್ ಝಲಕ್ ತೋರಿಸಿದ್ದಾರೆ.

ಈ ಸ್ಪೆಷಲ್ ವಿಡಿಯೋಗೆ ಇನ್‌ಸ್ಟಾಗ್ರಾಮ್ ಕೈ ಜೋಡಿಸಿದೆ. ಅಲ್ಲು ಅರ್ಜುನ್ ದಿನಚರಿ ಹೇಗಿರುತ್ತದೆ ಎನ್ನುವ ಸ್ಪೆಷಲ್ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಹಂಚಿಕೊಂಡಿದೆ. ಇನ್‌ಸ್ಟಾಗ್ರಾಮ್ ತಂಡವೇ ಸ್ಟೈಲಿಶ್ ಸ್ಟಾರ್ ಹೈದರಾಬಾದ್ ಮನೆಗೆ ಹೋಗಿ ಅಲ್ಲಿಂದ ರಾಮೋಜಿ ಫಿಲ್ಮ್ ಸಿಟಿಗೆ ಹೋಗಿ ಸ್ಪೆಷಲ್ ವಿಡಿಯೋ ಶೂಟ್ ಮಾಡಿ ಶೇರ್ ಮಾಡಿದೆ. ಅಲ್ಲು ಅರ್ಜುನ್‌ ಇನ್‌ಸ್ಟಾ ಟೀಂ ಜೊತೆ ಮಾತನಾಡಿದ ಮಾತುಗಳು, ತೋರಿಸಿರುವ ವಿಷ್ಯುವಲ್ಸ್ ಸಖತ್ ವೈರಲ್ ಆಗುತ್ತಿದೆ.

Allu Arjun shares a BTS video from Pushpa-2 set: watch

ಅಲ್ಲು ಅರ್ಜುನ್ ಬೆಳಗ್ಗೆ ಬೇಗ ಎದ್ದು ತಮ್ಮ ಮನೆಯ ಗಾರ್ಡನ್ ಮತ್ತು ಸ್ವಿಮ್ಮಿಂಗ್ ಪೂಲ್ ಏರಿಯಾದಲ್ಲಿ ಚಿಲ್ ಆಗುತ್ತಾರೆ. ನಂತರ ಕಾಫಿ. ಬಳಿಕ ಸೆಟ್‌ಗೆ ಹೋಗುವ ದಾರಿಯಲ್ಲಿ ಮಧ್ಯಾಹ್ನ 1 ಗಂಟೆಗೆ, ಪ್ರತಿದಿನ ತನ್ನ ಮಕ್ಕಳ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಾರೆ. 'ಪುಷ್ಪ-2' ಸೆಟ್‌ಗೆ ಹೀಗೆ ಹೋಗುತ್ತೇನೆ ಎಂದು ರಾಮೋಜಿ ಫಿಲ್ಮ್‌ ಸಿಟಿಗೆ ಕರೆದೊಯ್ದಿದ್ದಾರೆ. ಅಲ್ ತಮಗಾಗಿ ಕಾಯುತ್ತಿರುವ ಅಭಿಮಾನಿಗಳನ್ನು ನೋಡಿ ಮಾತನಾಡಿಸಿ ಜಗತ್ತಿನಲ್ಲಿ ಎಲ್ಲೂ ಈ ರೀತಿ ನಮ್ಮ ಭಾರತದ ಅಭಿಮಾನಿಗಳು ಇರಲ್ಲ ಎಂದಿದ್ದಾರೆ.

ಅಲ್ಲಿಂದ ಮುಂದೆ ಸೆಟ್‌ಗೆ ತೆರಳಿದ ಸ್ಟೈಲಿಶ್ ಸ್ಟಾರ್ ಚಿತ್ರದಲ್ಲಿ ತಾವು ಬಳಸುವ ಪ್ರಾಪರ್ಟೀಸ್, ಬಳಸುವ ಕಾಸ್ಟ್ಯೂಮ್ಸ್, ಮೇಕಪ್ ಹಾಕಿಕೊಳ್ಳುವುದು, ಕ್ಯಾರಾವಾನ್‌ನಲ್ಲಿ ನಿರ್ದೇಶಕ ಸುಕುಮಾರ್ ಭೇಟಿ, ಬಳಿಕ 'ಪುಷ್ಪ'ರಾಜ್ ಆಗಿ ಕ್ಯಾಮರಾ ಮುಂದೆ ನಿಲ್ಲೋದು ಹೀಗೆ ಇಡೀ ದಿನದ ಶೂಟಿಂಗ್‌ ಪ್ರಕ್ರಿಯೆಯನ್ನು ತೋರಿಸಿ ವಿವರಿಸಿದ್ದಾರೆ.

ನಿರ್ದೇಶಕ ಸುಕುಮಾರ್ ಕೂಡ ಶೂಟಿಂಗ್ ಅನುಭವ ಬಿಚ್ಚಿಟ್ಟಿದ್ದಾರೆ. ಅಲ್ಲು ಅರ್ಜುನ್ ನನ್ನ ಮೊದಲ ಹೀರೋ ಎಂದಿದ್ದಾರೆ. 2 ದಶಕಗಳ ಹಿಂದೆ ಸುಕುಮಾರ್ ನಿರ್ದೇಶನದ 'ಆರ್ಯ' ಚಿತ್ರದಲ್ಲಿ ಸ್ಟೈಲಿಶ್ ಸ್ಟಾರ್ ನಟಿಸಿದ್ದರು. ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಆ ಬಳಿಕ 'ಆರ್ಯ'-2 ಚಿತ್ರಕ್ಕಾಗಿ ಇಬ್ಬರು ಒಂದಾಗಿದ್ದರು. 'ಪುಷ್ಪ' ಮೊದಲ ಭಾಗದಲ್ಲಿ ಈ ಜೋಡಿ ಮ್ಯಾಜಿಕ್ ಮಾಡಿತ್ತು. ಸೀಕ್ವೆಲ್‌ನಲ್ಲಿ ಅದನ್ನು ರಿಪೀಟ್ ಮಾಡುವ ಲೆಕ್ಕಾಚಾರದಲ್ಲಿದೆ.

ಮುಂದಿನ ವರ್ಷ ಮಾರ್ಚ್ 22ಕ್ಕೆ 'ಪುಷ್ಪ'-2 ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ. ಇನ್ನು ಈ ಸ್ಪೆಷಲ್ ಮೇಕಿಂಗ್ ವಿಡಿಯೋ ಜೊತೆಗೆ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಹೂಗಳ ಡಿಸೈನ್‌ ಇರುವ ಶರ್ಟ್ ತೊಟ್ಟು, ಕುತ್ತಿಗೆಯಲ್ಲಿ ಚಿನ್ನದ ಚೈನ್‌ಗಳನ್ನು ಧರಿಸಿ ಲಾರಿ ಮುಂದೆ 'ಪುಷ್ಪ'ರಾಜ್‌ನ ನೋಡಬಹುದು. ಈಗಾಗಲೇ ಚಿತ್ರದ ಸ್ಪೆಷಲ್ ಟೀಸರ್, ಫಸ್ಟ್ ಲುಕ್ ಪೋಸ್ಟರ್‌ಗಳು ರಿಲೀಸ್ ಆಗಿ ಸಿನಿಮಾ ಬಗ್ಗೆ ನಿರೀಕ್ಷೆ ಹುಟ್ಟಾಕ್ಕಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದೆ.

'ಪುಷ್ಪ' ಪ್ರೀಕ್ವೆಲ್‌ನಲ್ಲಿ ನಟಿಸಿದ್ದ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲೂ ನಾಯಕಿಯಾಗಿ ಮುಂದುವರೆಯಲಿದ್ದಾರೆ. ಭನ್ವರ್ ಸಿಂಗ್ ಶೇಖಾವತ್ ಆಗಿ ಫಹಾದ್ ಫಾಸಿಲ್ 'ಪುಷ್ಪ'ರಾಜ್‌ಗೆ ಸವಾಲ್ ಹಾಕಲಿದ್ದಾರೆ. ಇನ್ನುಳಿದಂತೆ ಡಾಲಿ ಧನಂಜಯ್, ಸುನಿಲ್, ಅನಸೂಯ ಭಾರಧ್ವಜ್ ತಾರಾಗಣದಲ್ಲಿ ಮುಂದುವರೆಯಲಿದ್ದಾರೆ. ಹೊಸ ಕಲಾವಿದರು ಸೇರಿಕೊಳ್ಳಲಿದ್ದಾರೆ. ಈ ಬಾರಿ ಸಿನಿಮಾ ಕಥೆ ವಿದೇಶಗಳಲ್ಲೂ ಮುಂದುವರೆಯಲಿದೆ ಎನ್ನಲಾಗ್ತಿದೆ. ಇನ್ನು ಗಂಗಮ್ಮ ತಲ್ಲಿ ಲುಕ್‌ನಲ್ಲಿ ಬಂದ ಫಸ್ಟ್ ಲುಕ್ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇನ್ನು ಇಡೀ ಸಿನಿಮಾ ನೋಡೋಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

More from Filmibeat

English summary
Allu Arjun shared Pushpa-2 the Rule Making video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X