For Quick Alerts
  ALLOW NOTIFICATIONS  
  For Daily Alerts

  'ಬಾಹುಬಲಿ' ಪ್ರಭಾಸ್ ರೆಕಾರ್ಡ್ ನ ಪೀಸ್ ಪೀಸ್ ಮಾಡಿದ ಅಲ್ಲು ಅರ್ಜುನ್.!

  |
  ನ್ಯೂಝೀಲ್ಯಾಂಡ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲ್ಲು ಅರ್ಜುನ್ | ALLU ARJUN | NEWZEALAND | FILMIBEAT KANNADA

  ಸಾಮಾನ್ಯವಾಗಿ ಸಿನಿಮಾಗಳು ಬಿಡುಗಡೆ ಆಗುವುದು ಗುರುವಾರ ಅಥವಾ ಶುಕ್ರವಾರ. ಆದ್ರೆ, ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ 'ಅಲಾ ವೈಕುಂಠಪುರಮುಲೋ' ಭಾನುವಾರ ಬಿಡುಗಡೆ ಆಗಿ ಹೊಸ ಇತಿಹಾಸ ನಿರ್ಮಿಸಿದೆ.

  ಮಕರ ಸಂಕ್ರಾಂತಿ ಹಬ್ಬದ ಹೊಸ್ತಿಲಲ್ಲಿ ತೆರೆಗೆ ಬಂದಿರುವ 'ಅಲಾ ವೈಕುಂಠಪುರಮುಲೋ' ಚಿತ್ರಕ್ಕೆ ಉತ್ತಮ ಓಪನಿಂಗ್ ಸಿಕ್ಕಿದೆ. ಎಲ್ಲೆಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ 'ಅಲಾ ವೈಕುಂಠಪುರಮುಲೋ' ಚಿತ್ರದ ಬಗ್ಗೆ ಪಾಸಿಟೀವ್ ಟಾಕ್ ಕೇಳಿಬರುತ್ತಿದೆ.

  ಹಾಗೇ, ಚಿತ್ರದ ಕಲೆಕ್ಷನ್ ಕೂಡ ಜೋರಾಗಿದೆ. ಎಷ್ಟರಮಟ್ಟಿಗೆ ಅಂದ್ರೆ, ಪ್ರಭಾಸ್ ಅಭಿನಯದ ಬ್ಲಾಕ್ ಬಸ್ಟರ್ 'ಬಾಹುಬಲಿ-2' ಚಿತ್ರದ ರೆಕಾರ್ಡ್ ನ ಅಲ್ಲು ಅರ್ಜುನ್ ನಟನೆಯ 'ಅಲಾ ವೈಕುಂಠಪುರಮುಲೋ' ಸಿನಿಮಾ ಪೀಸ್ ಪೀಸ್ ಮಾಡಿದೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ವಿದೇಶಗಳಲ್ಲೂ ಭರ್ಜರಿ ಓಪನಿಂಗ್.!

  ವಿದೇಶಗಳಲ್ಲೂ ಭರ್ಜರಿ ಓಪನಿಂಗ್.!

  ಅಲ್ಲು ಅರ್ಜುನ್ ಮತ್ತು ಪೂಜಾ ಹೆಗ್ಡೆ ನಟನೆಯ 'ಅಲಾ ವೈಕುಂಠಪುರಮುಲೋ' ಚಿತ್ರಕ್ಕೆ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಮಾತ್ರ ಅಲ್ಲ, ಭಾರತದಾದ್ಯಂತ ಉತ್ತಮ ಓಪನಿಂಗ್ ಲಭಿಸಿದೆ. ವಿದೇಶಗಳಲ್ಲೂ 'ಅಲಾ ವೈಕುಂಠಪುರಮುಲೋ' ಚಿತ್ರವನ್ನು ವೀಕ್ಷಿಸಲು ಪ್ರೇಕ್ಷಕರು ಮುಗಿಬೀಳುತ್ತಿದ್ದಾರೆ. ಅದಕ್ಕೆ ಸಾಕ್ಷಿ 'ಅಲಾ ವೈಕುಂಠಪುರಮುಲೋ' ಸಿನಿಮಾದ ಪ್ರೀಮಿಯರ್ ಕಲೆಕ್ಷನ್.!

  ಫಸ್ಟ್ ಮಹೇಶ್ ಬಾಬು, ನೆಕ್ಸ್ಟ್ ಅಲ್ಲು ಅರ್ಜುನ್: ಧೂಳೆಬ್ಬಿಸುತ್ತಿರುವ ತೆಲುಗು ನಟರು.!ಫಸ್ಟ್ ಮಹೇಶ್ ಬಾಬು, ನೆಕ್ಸ್ಟ್ ಅಲ್ಲು ಅರ್ಜುನ್: ಧೂಳೆಬ್ಬಿಸುತ್ತಿರುವ ತೆಲುಗು ನಟರು.!

  ಹೊಸ ಇತಿಹಾಸ ಬರೆದ ಅಲ್ಲು ಅರ್ಜುನ್

  ಹೊಸ ಇತಿಹಾಸ ಬರೆದ ಅಲ್ಲು ಅರ್ಜುನ್

  ತೆಲುಗಿನ 'ಅಲಾ ವೈಕುಂಠಪುರಮುಲೋ' ಚಿತ್ರಕ್ಕೆ ನ್ಯೂಝೀಲ್ಯಾಂಡ್ ನಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ನ್ಯೂಝೀಲ್ಯಾಂಡ್ ನ ಮೂರು ಪ್ರದೇಶಗಳಲ್ಲಿ 5 ಪ್ರೀಮಿಯರ್ ಪ್ರದರ್ಶನಗಳನ್ನು ಕಂಡಿರುವ 'ಅಲಾ ವೈಕುಂಠಪುರಮುಲೋ' ಚಿತ್ರ NZD 34,625 ಕಲೆಕ್ಷನ್ ಮಾಡಿದೆ. ಆ ಮೂಲಕ ದಾಖಲೆ ನಿರ್ಮಿಸಿ ನ್ಯೂಝೀಲ್ಯಾಂಡ್ ನಲ್ಲಿ ಅತಿ ಹೆಚ್ಚು ಪ್ರೀಮಿಯರ್ ಕಲೆಕ್ಷನ್ ಮಾಡಿದ ತೆಲುಗಿನ ಚಿತ್ರ ಎಂಬ ಖ್ಯಾತಿಗೆ 'ಅಲಾ ವೈಕುಂಠಪುರಮುಲೋ' ಪಾತ್ರವಾಗಿದೆ.

  'ಅಲ ವೈಕುಂಠಪುರಂ ಲೋ' ಟ್ವಿಟ್ಟರ್ ವಿಮರ್ಶೆ: ಅಲ್ಲು ಅರ್ಜುನ್ ಸಿನಿಮಾ ನೋಡಿ ಪ್ರೇಕ್ಷಕರು ಹೇಳಿದ್ದೇನು?'ಅಲ ವೈಕುಂಠಪುರಂ ಲೋ' ಟ್ವಿಟ್ಟರ್ ವಿಮರ್ಶೆ: ಅಲ್ಲು ಅರ್ಜುನ್ ಸಿನಿಮಾ ನೋಡಿ ಪ್ರೇಕ್ಷಕರು ಹೇಳಿದ್ದೇನು?

  ಪ್ರಭಾಸ್ 'ಬಾಹುಬಲಿ-2' ದಾಖಲೆ ಮುರಿದ ಅಲ್ಲು ಅರ್ಜುನ್

  ಪ್ರಭಾಸ್ 'ಬಾಹುಬಲಿ-2' ದಾಖಲೆ ಮುರಿದ ಅಲ್ಲು ಅರ್ಜುನ್

  ಪ್ರಭಾಸ್ ಅಭಿನಯದ 'ಬಾಹುಬಲಿ-2' ಚಿತ್ರ NZD 21,290 ಪ್ರೀಮಿಯರ್ ಕಲೆಕ್ಷನ್ ಮಾಡಿತ್ತು. ಇದೀಗ 'ಅಲಾ ವೈಕುಂಠಪುರಮುಲೋ' NZD 34,625 ಪ್ರೀಮಿಯರ್ ಕಲೆಕ್ಷನ್ ಮಾಡಿ ನ್ಯೂಝೀಲ್ಯಾಂಡ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.

  ಮಹೇಶ್ ಬಾಬು ಚಿತ್ರದ ಕಲೆಕ್ಷನ್ ಕಥೆ ಏನು.?

  ಮಹೇಶ್ ಬಾಬು ಚಿತ್ರದ ಕಲೆಕ್ಷನ್ ಕಥೆ ಏನು.?

  ಇನ್ನೂ, ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಚಿತ್ರ NZD 19,531 ಪ್ರೀಮಿಯರ್ ಕಲೆಕ್ಷನ್ ಮಾಡಿದೆ. ಹೀಗಾಗಿ, ನ್ಯೂಝೀಲ್ಯಾಂಡ್ ನಲ್ಲಿ ಮಾತ್ರ ಪ್ರಭಾಸ್ ಅಭಿನಯದ 'ಬಾಹುಬಲಿ-2' ದಾಖಲೆಯನ್ನ ಅಲ್ಲು ಅರ್ಜುನ್ ಬ್ರೇಕ್ ಮಾಡಿದಂತಾಗಿದೆ.

  'ಅಲಾ ವೈಕುಂಠಪುರಮುಲೋ' ಚಿತ್ರದ ಕುರಿತು...

  'ಅಲಾ ವೈಕುಂಠಪುರಮುಲೋ' ಚಿತ್ರದ ಕುರಿತು...

  'ಅಲಾ ವೈಕುಂಠಪುರಮುಲೋ' ಚಿತ್ರದಲ್ಲಿ ರಫ್ ಅಂಡ್ ಟಫ್ ಆಗಿ ಅಲ್ಲು ಅರ್ಜುನ್ ನಟಿಸಿದ್ದರೆ, ಅವರಿಗೆ ಜೋಡಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಟಬು, ಜಯರಾಮ್, ರಾಜೇಂದ್ರ ಪ್ರಸಾದ್, ಸಮುದ್ರಖಣಿ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಅಲ್ಲು ಅರವಿಂದ್, ಎಸ್.ರಾಧಾಕೃಷ್ಣ ನಿರ್ಮಾಣ ಮಾಡಿರುವ 'ಅಲಾ ವೈಕುಂಠಪುರಮುಲೋ' ಚಿತ್ರಕ್ಕೆ ತ್ರಿವಿಕ್ರಮ್ ಆಕ್ಷನ್ ಕಟ್ ಹೇಳಿದ್ದಾರೆ.

  English summary
  Allu Arjun starrer Ala Vaikunthapurramuloo beats Prabhas Baahubali 2 record in New Zealand premieres collections.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X