For Quick Alerts
  ALLOW NOTIFICATIONS  
  For Daily Alerts

  'ಬಾಹುಬಲಿ' ಬಿಟ್ಟರೆ ಟಾಲಿವುಡ್ ಕಲೆಕ್ಷನ್ ನಲ್ಲಿ ಅಲ್ಲು ಅರ್ಜುನ್ 'ಕಿಂಗ್'.!

  |
  ಅಲಾ ವೈಕುಂಠಪುರಮುಲೋ ಚಿತ್ರ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ..? | FILMIBEAT KANNADA

  ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆ ಆದ ತೆಲುಗಿನ 'ಅಲಾ ವೈಕುಂಠಪುರಮುಲೋ' ಸಿನಿಮಾ ಕಲೆಕ್ಷನ್ ವಿಷಯದಲ್ಲಿ ರೆಕಾರ್ಡ್ ಮೇಲೆ ರೆಕಾರ್ಡ್ ಕ್ರಿಯೇಟ್ ಮಾಡುತ್ತಿದೆ. ಹಳೆ ದಾಖಲೆಗಳನ್ನೆಲ್ಲಾ ಪುಡಿ ಪುಡಿ ಮಾಡಿ, ಹೊಸ ಇತಿಹಾಸ ಸೃಷ್ಟಿಸುತ್ತಿದೆ.

  ಅಲ್ಲು ಅರ್ಜುನ್ ಅಭಿನಯದ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ 'ಅಲಾ ವೈಕುಂಠಪುರಮುಲೋ' ಸಿನಿಮಾ ಬಿಡುಗಡೆ ಆಗಿ 15 ದಿನಗಳು ಕಳೆದರೂ, ಇನ್ನೂ ಎಷ್ಟೋ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಪರಿಣಾಮ, ಬಾಕ್ಸ್ ಆಫೀಸ್ ನಲ್ಲಿ 'ಅಲಾ ವೈಕುಂಠಪುರಮುಲೋ' ಸದ್ದು ಜೋರಾಗಿದೆ.

  ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ 'ಬಾಹುಬಲಿ' ಬಿಟ್ಟರೆ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾ 'ಅಲಾ ವೈಕುಂಠಪುರಮುಲೋ' ಎಂಬ ಖ್ಯಾತಿ ಪಡೆದಿದೆ. ಹಾಗಾದ್ರೆ, ಅಲ್ಲು ಅರ್ಜುನ್ ನಟನೆಯ 'ಅಲಾ ವೈಕುಂಠಪುರಮುಲೋ' ಇಲ್ಲಿಯವರೆಗೂ ಮಾಡಿರುವ ಕಲೆಕ್ಷನ್ ಎಷ್ಟು.? ಕಂಪ್ಲೀಟ್ ಲೆಕ್ಕ ಇಲ್ಲಿದೆ ನೋಡಿ...

  ಒಟ್ಟು ಕಲೆಕ್ಷನ್ ಎಷ್ಟು.?

  ಒಟ್ಟು ಕಲೆಕ್ಷನ್ ಎಷ್ಟು.?

  ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಮಾತ್ರ 15 ದಿನಗಳಲ್ಲಿ 116.44 ಕೋಟಿ ಕಲೆಕ್ಷನ್ ಮಾಡಿದೆ 'ಅಲಾ ವೈಕುಂಠಪುರಮುಲೋ' ಚಿತ್ರ. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಬಿಟ್ಟರೆ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಇಷ್ಟೊಂದು ಕಲೆಕ್ಷನ್ ಮಾಡಿರೋದು 'ಅಲಾ ವೈಕುಂಠಪುರಮುಲೋ' ಚಿತ್ರ ಮಾತ್ರ.

  ಅಲ್ಲು ಅರ್ಜುನ್ ಚಿತ್ರದಲ್ಲಿ ನಟಿಸಲು ಟಬು ಪಡೆದ ಸಂಭಾವನೆ ಅಬ್ಬಬ್ಬಾ ಇಷ್ಟೊಂದಾ.?!ಅಲ್ಲು ಅರ್ಜುನ್ ಚಿತ್ರದಲ್ಲಿ ನಟಿಸಲು ಟಬು ಪಡೆದ ಸಂಭಾವನೆ ಅಬ್ಬಬ್ಬಾ ಇಷ್ಟೊಂದಾ.?!

  ರೇಸ್ ನಲ್ಲಿ ಗೆದ್ದಿದ್ದು ಅಲ್ಲು ಅರ್ಜುನ್

  ರೇಸ್ ನಲ್ಲಿ ಗೆದ್ದಿದ್ದು ಅಲ್ಲು ಅರ್ಜುನ್

  ಸಂಕ್ರಾಂತಿ ಹಬ್ಬದ ಪ್ರಯುಕ್ತ ಅಲ್ಲು ಅರ್ಜುನ್ ಅಭಿನಯದ 'ಅಲಾ ವೈಕುಂಠಪುರಮುಲೋ' ಮತ್ತು ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಸಿನಿಮಾ ಒಂದು ದಿನದ ಅಂತರದಲ್ಲಿ ಬಿಡುಗಡೆ ಆಗಿತ್ತು. ಈ ಎರಡು ಚಿತ್ರಗಳ ಪೈಕಿ ಅತಿ ಹೆಚ್ಚು ಕಲೆಕ್ಷನ್ ಮಾಡುತ್ತಾ ಮುನ್ನುಗ್ಗುತ್ತಿರುವುದು 'ಅಲಾ ವೈಕುಂಠಪುರಮುಲೋ'.!

  ಕಲೆಕ್ಷನ್ ನಲ್ಲಿ ಮಹೇಶ್ ಬಾಬು ಸಿನಿಮಾ ಹಿಂದಿಕ್ಕಿ ದಾಖಲೆ ಬರೆದ ನಟ ಅಲ್ಲು ಅರ್ಜುನ್ಕಲೆಕ್ಷನ್ ನಲ್ಲಿ ಮಹೇಶ್ ಬಾಬು ಸಿನಿಮಾ ಹಿಂದಿಕ್ಕಿ ದಾಖಲೆ ಬರೆದ ನಟ ಅಲ್ಲು ಅರ್ಜುನ್

  'ಸರಿಲೇರು ನೀಕೆವ್ವರು' ಮಾಡಿರುವ ಕಲೆಕ್ಷನ್ ಎಷ್ಟು.?

  'ಸರಿಲೇರು ನೀಕೆವ್ವರು' ಮಾಡಿರುವ ಕಲೆಕ್ಷನ್ ಎಷ್ಟು.?

  ಬಿಡುಗಡೆ ಆದ 16 ದಿನಗಳಲ್ಲಿ ಮಹೇಶ್ ಬಾಬು ನಟನೆಯ 'ಸರಿಲೇರು ನೀಕೆವ್ವರು' ಚಿತ್ರ 109.94 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕಲೆಕ್ಷನ್ ರೇಸ್ ನಲ್ಲಿ ಅಲ್ಲು ಅರ್ಜುನ್ ನ ಹಿಂದಕ್ಕೆ ತಳ್ಳುವಲ್ಲಿ ಮಹೇಶ್ ಬಾಬು ಯಶಸ್ವಿ ಆಗಿಲ್ಲ.

  'ಬಾಹುಬಲಿ' ಪ್ರಭಾಸ್ ರೆಕಾರ್ಡ್ ನ ಪೀಸ್ ಪೀಸ್ ಮಾಡಿದ ಅಲ್ಲು ಅರ್ಜುನ್.!'ಬಾಹುಬಲಿ' ಪ್ರಭಾಸ್ ರೆಕಾರ್ಡ್ ನ ಪೀಸ್ ಪೀಸ್ ಮಾಡಿದ ಅಲ್ಲು ಅರ್ಜುನ್.!

  ವರ್ಲ್ಡ್ ವೈಡ್ ಕಲೆಕ್ಷನ್ ಎಷ್ಟು.?

  ವರ್ಲ್ಡ್ ವೈಡ್ ಕಲೆಕ್ಷನ್ ಎಷ್ಟು.?

  ವರದಿಯೊಂದರ ಪ್ರಕಾರ, ಭಾರತದಲ್ಲಿ 'ಅಲಾ ವೈಕುಂಠಪುರಮುಲೋ' ಚಿತ್ರದ ಕಲೆಕ್ಷನ್ 183.40 ಕೋಟಿ. ಇನ್ನೂ ವರ್ಲ್ಡ್ ವೈಡ್ ಲೆಕ್ಕಾಚಾರ ತೆಗೆದುಕೊಂಡರೆ 15 ದಿನಗಳಲ್ಲಿ ಅಲ್ಲು ಅರ್ಜುನ್ ಚಿತ್ರ 247 ಕೋಟಿ ಬಾಚಿಕೊಂಡಿದೆ. ಅಲ್ಲು ಅರ್ಜುನ್ ವೃತ್ತಿ ಜೀವದಲ್ಲಿಯೇ ಇದು ಹೊಸ ದಾಖಲೆ.

  ಹೈದರಾಬಾದ್ ನಲ್ಲಿ ತಲೆಯೆತ್ತಲಿದೆ ಅಲ್ಲು ಅರ್ಜುನ್ ಕನಸಿನ ಅರಮನೆ.!ಹೈದರಾಬಾದ್ ನಲ್ಲಿ ತಲೆಯೆತ್ತಲಿದೆ ಅಲ್ಲು ಅರ್ಜುನ್ ಕನಸಿನ ಅರಮನೆ.!

  ಅಲ್ಲು ಅರ್ಜುನ್ ಗೆ ಖುಷಿಯೋ ಖುಷಿ.!

  ಅಲ್ಲು ಅರ್ಜುನ್ ಗೆ ಖುಷಿಯೋ ಖುಷಿ.!

  'ನಾ ಪೇರು ಸೂರ್ಯ' ಫ್ಲಾಪ್ ಆದ್ಮೇಲೆ ಒಂದು ವರ್ಷ ಗ್ಯಾಪ್ ತೆಗೆದುಕೊಂಡು 'ಅಲಾ ವೈಕುಂಠಪುರಮುಲೋ' ಮೂಲಕ ಬಂದ ಅಲ್ಲು ಅರ್ಜುನ್ ಇದೀಗ ಚಿತ್ರದ ಯಶಸ್ಸಿನಿಂದ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಇದೇ ಖುಷಿಯಲ್ಲಿ ಚಿತ್ರತಂಡ, ಗೆಳೆಯರು ಮತ್ತು ಪತ್ರಿಕಾ-ಮಾಧ್ಯಮ ಮಿತ್ರರಿಗೆ ಲ್ಯಾವಿಶ್ ಪಾರ್ಟಿ ಕೊಡುತ್ತಿದ್ದಾರೆ ಅಲ್ಲು ಅರ್ಜುನ್.

  English summary
  Allu Arjun starrer Ala Vaikunthapurramuloo emerged as Non Baahubali highest earner in Telugu States.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X