For Quick Alerts
  ALLOW NOTIFICATIONS  
  For Daily Alerts

  ಫಸ್ಟ್ ಮಹೇಶ್ ಬಾಬು, ನೆಕ್ಸ್ಟ್ ಅಲ್ಲು ಅರ್ಜುನ್: ಧೂಳೆಬ್ಬಿಸುತ್ತಿರುವ ತೆಲುಗು ನಟರು.!

  |

  ಟಾಲಿವುಡ್ ಹೀರೋ ಅಲ್ಲು ಅರ್ಜುನ್ ಅಭಿನಯದ 'ಅಲಾ ವೈಕುಂಠಪುರಮುಲೋ' ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಜನವರಿ 12, 2020 ರಂದು ಬಿಡುಗಡೆ ಆಗುತ್ತಿರುವ 'ಅಲಾ ವೈಕುಂಠಪುರಮುಲೋ' ಚಿತ್ರದ ಟ್ರೈಲರ್ ನಿನ್ನೆ ಸಂಜೆಯಷ್ಟೇ ಬಿಡುಗಡೆ ಆಗಿದ್ದು, ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.

  'ಅಲಾ ವೈಕುಂಠಪುರಮುಲೋ' ಚಿತ್ರದ ಟ್ರೈಲರ್ ಬಿಡುಗಡೆ ಆಗಿ ಇನ್ನೂ 24 ಗಂಟೆಗಳಾಗಿಲ್ಲ. ಅಷ್ಟು ಬೇಗ ಐವತ್ತು ಲಕ್ಷಕ್ಕೂ ಅಧಿಕ ಮಂದಿ ಚಿತ್ರದ ಟ್ರೈಲರ್ ವೀಕ್ಷಿಸಿದ್ದಾರೆ. ಎರಡುವರೆ ಲಕ್ಷಕ್ಕೂ ಅಧಿಕ ಮಂದಿ 'ಅಲಾ ವೈಕುಂಠಪುರಮುಲೋ' ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಅಲ್ಲು ಅರ್ಜುನ್ ಮತ್ತು ಪೂಜಾ ಹೆಗ್ಡೆ ಅಭಿನಯದ 'ಅಲಾ ವೈಕುಂಠಪುರಮುಲೋ' ಚಿತ್ರದ ಟ್ರೈಲರ್ ಸದ್ಯ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿದೆ.

  ತನ್ನದೇ ಸಿನಿಮಾ ಬಗ್ಗೆ ಟ್ವೀಟ್ ಮಾಡಿ ಟ್ರೋಲ್ ಆದ ಅಲ್ಲು ಅರ್ಜುನ್ತನ್ನದೇ ಸಿನಿಮಾ ಬಗ್ಗೆ ಟ್ವೀಟ್ ಮಾಡಿ ಟ್ರೋಲ್ ಆದ ಅಲ್ಲು ಅರ್ಜುನ್

  ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂಬರ್ 1 ಸ್ಥಾನದಲ್ಲಿ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಚಿತ್ರದ ಟ್ರೈಲರ್ ಇದ್ದರೆ, ನಂ.2 ಸ್ಥಾನಕ್ಕೇರಿದೆ ಅಲ್ಲು ಅರ್ಜುನ್ ನಟನೆಯ 'ಅಲಾ ವೈಕುಂಠಪುರಮುಲೋ' ಟ್ರೈಲರ್.

  'ಅಲಾ ವೈಕುಂಠಪುರಮುಲೋ' ಚಿತ್ರದಲ್ಲಿ ರಫ್ ಅಂಡ್ ಟಫ್ ಆಗಿ ಅಲ್ಲು ಅರ್ಜುನ್ ನಟಿಸಿದ್ದರೆ, ಅವರಿಗೆ ಜೋಡಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಟಬು, ಜಯರಾಮ್, ರಾಜೇಂದ್ರ ಪ್ರಸಾದ್, ಸಮುದ್ರಖಣಿ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

  ಅಲ್ಲು ಅರವಿಂದ್, ಎಸ್.ರಾಧಾಕೃಷ್ಣ ನಿರ್ಮಾಣ ಮಾಡಿರುವ 'ಅಲಾ ವೈಕುಂಠಪುರಮುಲೋ' ಚಿತ್ರಕ್ಕೆ ತ್ರಿವಿಕ್ರಮ್ ಆಕ್ಷನ್ ಕಟ್ ಹೇಳಿದ್ದಾರೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ 'ಅಲಾ ವೈಕುಂಠಪುರಮುಲೋ' ತೆರೆಗೆ ಬರಲಿದೆ.

  English summary
  Tollywood Actor Allu Arjun starrer Ala Vaikunthapurramuloo trailer trending No.2 in Youtube.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X