'ಪುಷ್ಪ'-2 ಚಿತ್ರಕ್ಕೆ ಬಿತ್ತು ಭಾರೀ ಹೊಡೆತ; 'ಬಾಹುಬಲಿ- 2' ದಾಖಲೆ ಸೇಫ್?

ತೆಲುಗಿನ 'ಪುಷ್ಪ'-2 ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರಗಪ್ಪಳಿಸಿ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಈಗಾಗಲೇ ಸಿನಿಮಾ 1500 ಕೋಟಿ ರೂ. ಗಡಿ ದಾಟಿ ಕಲೆಕ್ಷನ್ ಮಾಡುತ್ತಿದೆ. ಈ ವಿಚಾರವನ್ನು ಸ್ವತಃ ಚಿತ್ರತಂಡವೇ ಪೋಸ್ಟ್ ಮಾಡಿ ತಿಳಿಸಿದೆ. ಶೀಘ್ರದಲ್ಲೇ 'ಬಾಹುಬಲಿ- 2' ದಾಖಲೆ ಅಳಿಸಿ ಪುಷ್ಪರಾಜ್ ಹೊಸ ದಾಖಲೆ ಬರೆಯುತ್ತಾನೆ ಎನ್ನಲಾಗ್ತಿದೆ.

ಟಿಕೆಟ್ ದರವನ್ನು ಗಣನೀಯವಾಗಿ ಹೆಚ್ಚಿಸಿದ ಕಾರಣ 'ಪುಷ್ಪ'-2 ಕಲೆಕ್ಷನ್ ಊಹಿಸಿದ್ದಕ್ಕಿಂತ ಹೆಚ್ಚಾಗಿತ್ತು. ಪಾರ್ಟ್‌-1 ನೋಡಿದವರು ಪಾರ್ಟ್‌-2 ನೋಡಲು ಮುಗಿಬಿದ್ದರು. ಅದೇ ಕಾರಣಕ್ಕೆ ಮಿಶ್ರ ಪ್ರತಿಕ್ರಿಯೆ ನಡುವೆಯೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ನೂರಾರು ಕೋಟಿ ಕೊಳ್ಳೆ ಹೊಡೆದಿದೆ.

Allu Arjun Starrer Pushpa-2 HD Print Leaked Before OTT Streaming

ಬಹಳ ಬೇಗ 1500 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ ಭಾರತದ ಸಿನಿಮಾ ಎನ್ನುವ ಹೆಗ್ಗಳಿಕೆಗೆ 'ಪುಷ್ಪ'-2 ಪಾತ್ರವಾಗಿದೆ. ಕರ್ನಾಟಕದಲ್ಲಿ ಕೂಡ ಚಿತ್ರ ಭರ್ಜರಿ ಸಕ್ಸಸ್ ಕಂಡಿದೆ. ಕನ್ನಡಕ್ಕೆ ಡಬ್ ಆಗಿ ಕೂಡ ಸಿನಿಮಾ ತೆರೆಗೆ ಬಂದಿತ್ತು. ಬರೀ ಕನ್ನಡ ವರ್ಷನ್ 7ರಿಂದ 8 ಕೋಟಿ ರೂ. ಕಲೆಕ್ಷನ್ ಮಾಡಿರುವ ಅಂದಾಜಿದೆ. ಇನ್ನು ಹಿಂದಿ ವರ್ಷನ್‌ 645 ಕೋಟಿ ರೂ. ಗಳಿಸಿ ಹೊಸ ದಾಖಲೆ ನಿರ್ಮಾಣವಾಗಿದೆ.

7 ವರ್ಷಗಳ ಹಿಂದೆ ಪ್ರಭಾಸ್ ನಟನೆಯ 'ಬಾಹುಬಲಿ'-2 ಸಿನಿಮಾ 1800 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಆ ಲೆಕ್ಕದಲ್ಲಿ ಇನ್ನೊಂದು ವಾರದಲ್ಲಿ 'ಪುಷ್ಪ'-2 ಆ ದಾಖಲೆ ಮುರಿಯುವ ಲೆಕ್ಕಾಚಾರ ಶುರುವಾಗಿದೆ. ಆದರೆ ಅಷ್ಟರಲ್ಲೇ ಚಿತ್ರಕ್ಕೆ ಭಾರೀ ಪೆಟ್ಟು ಬಿದ್ದಿದೆ. ಹೌದು, ಇತ್ತೀಚೆಗೆ ಎಲ್ಲಾ ಸಿನಿಮಾಗಳಿಗೆ ಎದುರಾಗುವ ಸಮಸ್ಯೆ 'ಪುಷ್ಪ'-2ಗೂ ಬಂದೊದಗಿದೆ.

Allu Arjun Starrer Pushpa-2 HD Print Leaked Before OTT Streaming

'ಪುಷ್ಪ'-2 ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ. HD ಪ್ರಿಂಟ್ ಸಿನಿಮಾ ಇದೀಗ ಕೆಲ ಸೈಟ್‌ಗಳಲ್ಲಿ ಹರಿದಾಡುತ್ತಿದೆ. ಸಿನಿಮಾ ಓಟಿಟಿಗೆ ಬರುವ ಮುನ್ನವೇ ಈ ಶಾಕ್ ಎದುರಾಗಿದೆ. ಚಿತ್ರರಂಗಕ್ಕೆ ಪೈರಸಿ ಪೆಡಂಭೂತವಾಗಿ ಕಾಡುತ್ತಿದೆ. ಸಿನಿಮಾ ನೋಡುವಾಗಲೇ ಕೆಲವರು ಮೊಬೈಲ್‌ನಲ್ಲಿ ಸಣ್ಣ ಸಣ್ಣ ದೃಶ್ಯಗಳನ್ನು ಚಿತ್ರಿಸಿ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಾರೆ. ಕಿಡಿಗೇಡಿಗಳು ಇಡೀ ಸಿನಿಮಾ ಶೂಟ್ ಮಾಡಿ ಲೀಕ್ ಮಾಡುತ್ತಿದ್ದಾರೆ.

ಓಟಿಟಿ ಟ್ರೆಂಡ್ ಶುರುವಾಗದ ಬಳಿಕ ಸಿನಿಮಾ ತೆರೆಕಂಡ 30 ದಿನಕ್ಕೆಲ್ಲಾ HD ಪ್ರಿಂಟ್ ಲೀಕ್ ಆಗುತ್ತದೆ. ಆದರೆ ಇತ್ತೀಚೆಗೆ ಸಿನಿಮಾ ಓಟಿಟಿಗೆ ಬರುವ ಮುನ್ನವೇ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. 'ಪುಷ್ಪ'-2 ಸಂಪೂರ್ಣ ಚಿತ್ರವನ್ನು ಯೂಟ್ಯೂಬ್‌ನಲ್ಲಿ ಕೂಡ ಅಪ್‌ಲೋಡ್‌ ಮಾಡಿಬಿಟ್ಟಿದ್ದಾರೆ. ಇದು ಸಹಜವಾಗಿಯೇ ಚಿತ್ರದ ಕಲೆಕ್ಷನ್ ಮೇಲೆ ಪರಿಣಾಮ ಬೀರಲಿದೆ.

ಸುಕುಮಾರ್ ನಿರ್ದೇಶನದ 'ಪುಷ್ಪ'-2 ಸಿನಿಮಾ ಡಿಸೆಂಬರ್ 5ಕ್ಕೆ ತೆರಗಪ್ಪಳಿಸಿತ್ತು. ಅದಕ್ಕಿಂತ ಒಂದು ದಿನ ಮುನ್ನ ಪೇಯ್ಡ್ ಪ್ರೀಮಿಯರ್‌ ಶೋಗಳು ನಡೆದವು. ಡಿಸೆಂಬರ್ 4ರಂದು ರಾತ್ರಿಯೇ ಸಾಕಷ್ಟು ಜನ ಸಿನಿಮಾ ವೀಕ್ಷಿಸಿದ್ದರು. ಪ್ರೀಮಿಯರ್ ಶೋಗಳಿಂದಲೇ ಸಿನಿಮಾ 10 ಕೋಟಿ ರೂ. ಕಲೆಕ್ಷನ್ ಮಾಡಿದ್ದಾರೆ ಹೇಳಲಾಗಿತ್ತು. ಕರ್ನಾಟಕದಲ್ಲಿ ಕೂಡ ಪ್ರೀಮಿಯರ್ ಶೋಗಳು ಹಿಟ್ ಆಗಿತ್ತು.

ಮೊದಲ ಒಂದು ವಾರ 'ಪುಷ್ಪ'-2 ಸಿನಿಮಾ ಸಾಕಷ್ಟು ಕಡೆಗಳಲ್ಲಿ ಹೌಸ್‌ಫುಲ್ ಆಗಿತ್ತು. ಉತ್ತರ ಭಾರತದಲ್ಲಿ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿತ್ತು. ಇದನ್ನು ನೋಡಿ ಬಾಲಿವುಡ್ ಸ್ಟಾರ್‌ಗಳೇ ಶಾಕ್ ಆಗಿದ್ದಾರೆ. ಕೇರಳದಲ್ಲಿ ಮಾತ್ರ ಚಿತ್ರ ತಕ್ಕಮಟ್ಟಿಗೆ ಗೆಲ್ಲಲಿಲ್ಲ. ಇನ್ನುಳಿದಂತೆ ಎಲ್ಲಾ ಭಾಗಗಳಲ್ಲಿ ಚಿತ್ರಕ್ಕೆ ಒಳ್ಳೆ ಕಲೆಕ್ಷನ್ ಆಗಿದೆ. HD ಪ್ರಿಂಟ್ ಲೀಕ್ ಆಗಿದ್ದರೂ ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಅನುಭವವೇ ಬೇರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

More from Filmibeat

English summary
Big Shock for Allu Arjun's Pushpa-2 film team, HD Print Leaked;
Read more about: pushpa tollywood allu arjun
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X