Pushpa-2 Teaser; ಸೆರಗು ಸೊಂಟಕ್ಕೆ ಸುತ್ತಿಕೊಂಡು ಕಿಡಿಗೇಡಿಗಳ ಮೂಳೆ ಮುರಿದ 'ಪುಷ್ಪ'ರಾಜ್
ತೆಲುಗು ನಟ ಅಲ್ಲು ಅರ್ಜುನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು, ಆಪ್ತರು ನೆಚ್ಚಿನ ನಟನಿಗೆ ಶುಭಾಶಯ ಕೋರುತ್ತಿದ್ದಾರೆ. 'ಪುಷ್ಪ' ಚಿತ್ರತಂಡ ಅಭಿಮಾನಿಗಳು ಭರ್ಜರಿ ಗಿಫ್ಟ್ ಸಿನಿಮಾ. ಈ ಸಂಭ್ರಮದಲ್ಲೇ 'ಪುಷ್ಪ'-2 ಚಿತ್ರದ ಟೀಸರ್ ಬಿಡುಗಡೆ ಮಾಡಿದೆ.
ಆಗಸ್ಟ್ 15ಕ್ಕೆ 'ಪುಷ್ಪ'-2; ದಿ ರೂಲ್ ಸಿನಿಮಾ ತೆರೆಗೆ ಬರಲಿದೆ. ಎರಡು ವರ್ಷಗಳ ಹಿಂದೆ ಪ್ರೀಕ್ವೆಲ್ ರಿಲೀಸ್ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆದ್ದಿತ್ತು. ಇದೀಗ ಸೀಕ್ವೆಲ್ ಸರದಿ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಬಹಳ ಅದ್ಧೂರಿಯಾಗಿ ಸೀಕ್ವೆಲ್ ತರಲಾಗುತ್ತಿದೆ. ಇನ್ನು ಈಗಾಗಲೇ 'ಪುಷ್ಪ'-2 ಪೋಸ್ಟರ್‌ನಲ್ಲಿ ಗಂಗಮ್ಮ ವೇಷದಲ್ಲಿ ಸೀರೆ ಹುಟ್ಟು ಕಾಣಿಸಿಕೊಂಡಿದ್ದ ಅಲ್ಲು ಅರ್ಜುನ್ ಲುಕ್ ವೈರಲ್ ಆಗಿತ್ತು. ಈಗ ಅದೇ ಲುಕ್‌ನಲ್ಲಿ ಸ್ಟೈಲಿಶ್ ಸ್ಟಾರ್ ಅಬ್ಬರಿಸಿರುವ ಝಲಕ್ ರಿಲೀಸ್ ಮಾಡಲಾಗಿದೆ.

ಗಂಗಮ್ಮ ಜಾತ್ರೆ ಸಂಭ್ರಮದಲ್ಲೇ ಕಿಡಿಗೇಡಿಗಳು ಪುಷ್ಪರಾಜ್ ಮೇಲೆ ಮುಗಿಬಿದ್ದಿದ್ದಾರೆ. ತನ್ನದೇ ಸ್ಟೈಲ್‌ನಲ್ಲಿ ಎಲ್ಲರನ್ನು ಹೊಡೆದುರುಳಿಸಿರುವುದನ್ನು ಟೀಸರ್‌ನಲ್ಲಿ ನೋಡಬಹುದು. ಚಿತ್ರತಂಡ ಇದನ್ನು ಟೀಸರ್ ಅಂತ ಹೇಳಿತ್ತು. ಆದರೆ ಯಾವುದೇ ಡೈಲಾಗ್ ಇಲ್ಲ. ಬಳಿ ಸಣ್ಣ ಝಲಕ್ ಮಾತ್ರ ಬಿಟ್ಟಿದ್ದು ಇದು ಜಸ್ಟ್ ಗ್ಲಿಂಪ್ಸ್ ಅಷ್ಟೇ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಗಂಗಮ್ಮ ವೇಷಧಾರಿಯಾಗಿ ಅಲ್ಲು ಅರ್ಜುನ್ ಲುಕ್, ಬಾಡಿ ಲಾಂಗ್ವೇಜ್ ಅಭಿಮಾನಿಗಳಿಗೆ ಕಿಕ್ ಕೊಡುತ್ತಿದೆ.
ರೇಷ್ಮೆ ಸೀರೆ ಉಟ್ಟು, ನಿಂಬೆ ಹಣ್ಣಿನ ಮಾಲೆ ಧರಿಸಿ, ಮೈತುಂಬಾ ಚಿನ್ನದ ಆಭರಣ ಧರಿಸಿ, ಕಾಲಿಗೆ ಗೆಜ್ಜೆ ಕಟ್ಟಿ ದೇವಿ ಗೆಟಪ್‌ನಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಕಾಲಿನಿಂದ ಸೆರಗನ್ನು ಮೇಲೆತ್ತಿ, ಸೊಂಟಕ್ಕೆ ಸುತ್ತಿಕೊಂಡು ಖಡಲ್ ಲುಕ್‌ನಲ್ಲಿ ಅಬ್ಬರಿಸುವ ಸ್ಟೈಲ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಯಾವುದೇ ಡೈಲಾಗ್ ಇಲ್ಲದೇ ಇರುವುದರಿಂದ ಕೇವಲರ ಒಂದೇ ಟೀಸರ್ ರಿಲೀಸ್ ಆಗಿದೆ. ಬಹಳ ಅದ್ಧೂರಿಯಾಗಿ ಗಂಗಮ್ಮ ಜಾತ್ರೆ ಸೆಟ್ ಹಾಕಿ ಆಕ್ಷನ್ ಎಪಿಸೋಡ್ ಚಿತ್ರೀಕರಿಸಿರುವುದು ಗೊತ್ತಾಗುತ್ತಿದೆ.
ತಿರುಪತಿಯಲ್ಲಿ ಪ್ರತಿ ವರ್ಷ ಗಂಗಮ್ಮ ತಾಯಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಯಲ್ಲಿ ಪುರುಷರು, ಮಹಿಳೆಯರ ರೀತಿ ವೇಷಭೂಷಣ ಧರಿಸುವ ಆಚಾರ ಇದೆ. ಅದೇ ಆಚಾರವನ್ನು ನಿರ್ದೇಶಕ ಸುಕುಮಾರ್ 'ಪುಷ್ಪ'-2 ಚಿತ್ರಕ್ಕೆ ಮಾಸ್ ಎಲಿಮೆಂಟ್ ಆಗಿ ಬಳಸಿಕೊಂಡಿದ್ದಾರೆ. ಅಲ್ಲು ಅರ್ಜುನ್ ಕೂಡ ಸಾಥ್ ಕೊಟ್ಟಿದ್ದು ಪ್ರೇಕ್ಷಕರಿಗೆ ಸಖತ್ ಥ್ರಿಲ್ ಕೊಡುವ ಲೆಕ್ಕಾಚಾರ ನಡೀತಿದೆ.
ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ 'ಪುಷ್ಪ'-2 ಸಿನಿಮಾ ನಿರ್ಮಾಣವಾಗುತ್ತಿದೆ. ಪ್ರೀಕ್ವೆಲ್‌ನಲ್ಲಿದ್ದ ಬಹುತೇಕರು ಸೀಕ್ವೆಲ್‌ನಲ್ಲಿ ತಮ್ಮ ತಮ್ಮ ಪಾತ್ರಗಳನ್ನು ಮುಂದುವರೆಸಲಿದ್ದಾರೆ. ಸಾಮಾನ್ಯ ರಕ್ತಚಂದನ ಸ್ಮಗ್ಲರ್ ಆಗಿದ್ದ ಪುಷ್ಪರಾಜ್ ಕ್ಲೈಮ್ಯಾಕ್ಸ್ ವೇಳೆಗೆ ದೊಡ್ಡ ಡಾನ್ ಆಗಿದ್ದ. ಅಲ್ಲಿಂದ ಮುಂದೆ ಆ ಮಾಫಿಯಾವನ್ನು ಹೇಗೆ ಮುಂದುವರೆಸುತ್ತಾನೆ ಎನ್ನುವ ಕಥೆ ಸೀಕ್ವೆಲ್‌ನಲ್ಲಿ ಇರಲಿದೆ.

ಈ ಬಾರಿ ಪುಷ್ಪರಾಜ್ ಕಥೆ ವಿದೇಶಕ್ಕೂ ಸಾಗಲಿದೆ. ಮತ್ತಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಸೇರಿಸಿ ಸುಕುಮಾರ್ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಪುಷ್ಪರಾಜ್ ಹಾಗೂ ಪೊಲೀಸ್ ಅಧಿಕಾರಿ ಭನ್ವರ್‌ಸಿಂಗ್ ಶೇಖಾವತ್ ಕಾದಾಟ ಕುತೂಹಲ ಮೂಡಿಸಿದೆ. ಫಹಾದ್ ಫಾಸಿಲ್ ಪಾತ್ರಕ್ಕೆ ಈ ಚಿತ್ರದಲ್ಲಿ ಹೆಚ್ಚು ಸ್ಕೋಪ್ ಇರಲಿದೆ. ಇನ್ನು ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ಮುಂದುವರೆಲಿದ್ದಾರೆ.
ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ತೆರೆಗೆ ತರುತ್ತಿದೆ. ಸಿನಿಮಾ ಬಜೆಟ್, ಕಲಾವಿದರು- ತಂತ್ರಜ್ಞರ ಸಂಭಾವನೆಯೂ ಹೆಚ್ಚಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ದೇವಿಶ್ರೀ ಪ್ರಸಾದ್ ಸಂಗೀತ, ಮಿರೋಸ್ಲಾ ಕುಬಾ ಬ್ರೋಜೆಕ್ ಛಾಯಾಗ್ರಹಣ ಚಿತ್ರಕ್ಕಿದೆ.


Click it and Unblock the Notifications











