twitter
    For Quick Alerts
    ALLOW NOTIFICATIONS  
    For Daily Alerts

    ಬಾಲಿವುಡ್‌ನಲ್ಲಿ ಮೊದಲ ದಿನ ಪ್ಯಾನ್ ಇಂಡಿಯಾ ಸಿನಿಮಾಗಳ ಹಣೆ ಬರಹವೇನು? 'ಪುಷ್ಪ' ಗಳಿಸಿದ್ದು ಎಷ್ಟು?

    |

    ಬಾಹುಬಲಿ ಬಳಿಕ ಪ್ಯಾನ್ ಇಂಡಿಯಾ ಸಿನಿಮಾ ಮೇಲೆ ಇಡೀ ಭಾರತೀಯ ಚಿತ್ರರಂಗವೇ ಕಣ್ಣಿಟ್ಟಿದೆ. ಅದರಲ್ಲೂ ದಕ್ಷಿಣ ಭಾರತದ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗುತ್ತಿದೆ ಅಂದರೆ, ಬಾಕ್ಸಾಫೀಸ್ ಗಳಿಕೆ ಮೇಲೆನೇ ಎಲ್ಲರ ಗಮನ ನೆಟ್ಟಿರುತ್ತೆ. 'ಪುಷ್ಪ' ಬಿಡುಗಡೆಯಾದ ಬಳಿಕವೂ ಈ ಟ್ರೆಂಡ್ ಹಾಗೇ ಮುಂದುವರೆದಿದೆ. ಪುಷ್ಪ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆನೇ ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ.

    'ಪುಷ್ಪ' ಹೈಪ್ ಕ್ರಿಯೇಟ್ ಮಾಡಿದಷ್ಟು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದೆ ಹೋದರೂ, ಸಿನಿಮಾದ ಮೊದಲ ದಿನದ ಗಳಿಕೆ ಮೆಚ್ಚುವಂತಹದ್ದೇ. ದಕ್ಷಿಣ ಭಾರತದ ಬಾಕ್ಸಾಫೀಸ್‌ನಲ್ಲಿ 'ಪುಷ್ಪ' ಮೊದಲ ದಿನ ಆರಾಮಾಗಿ ಗೆದ್ದು ಬೀಗಿದೆ. ಆದರೆ, ಹಿಂದಿ ಬಾಕ್ಸಾಫೀಸ್‌ನಲ್ಲಿ 'ಪುಷ್ಪ' ಸಿನಿಮಾದ ಗಳಿಕೆ ಹೇಗಿರುತ್ತೆ? ಕೆಜಿಎಫ್, ಬಾಹುಬಲಿ, ಸಾಹೋ ದಾಖಲೆಗಳನ್ನು ಮುರಿಯುತ್ತಾ? ಅನ್ನುವ ನಿರೀಕ್ಷೆಯತ್ತು. ಆದರೆ, ಆ ನಿರೀಕ್ಷೆಗಳನ್ನು ಸುಳ್ಳು ಮಾಡಿದ್ದು, ಕೇವಲ ಒಂದೇ ಒಂದು ಸಿನಿಮಾವನ್ನು ಹಿಂದಿಕ್ಕಿದೆ. ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾ ಮೊದಲ ದಿನ ಗಳಿಸಿದ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.

    ಹಿಂದಿಯಲ್ಲಿ 'ಪುಷ್ಪ'ದ ಮೊದಲ ದಿನದ ಗಳಿಕೆ ಎಷ್ಟು?

    ಹಿಂದಿಯಲ್ಲಿ 'ಪುಷ್ಪ'ದ ಮೊದಲ ದಿನದ ಗಳಿಕೆ ಎಷ್ಟು?

    'ಪುಷ್ಪ' ದಕ್ಷಿಣ ಭಾರತದ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿದೆ. ಮೊದಲ ದಿನ ಕೇವಲ ದಕ್ಷಿಣ ಭಾರತದಲ್ಲಿ 35 ಕೋಟಿ ಲೂಟಿ ಮಾಡಿದೆ ಎಂದು ವರದಿಯಾಗಿದೆ. ಈ ಮಧ್ಯೆ ಹಿಂದಿಯಲ್ಲೂ ತೆರೆಕಂಡಿರುವ 'ಪುಷ್ಪ' ಅಲ್ಲಿನ ಬಾಕ್ಸಾಫೀಸ್‌ನಲ್ಲಿ ಎಷ್ಟು ಲೂಟಿ ಮಾಡಿದೆ ಎನ್ನುವ ಕುತೂಹಲಕ್ಕೂ ತೆರೆಬಿದ್ದಿದೆ. ಮೊದಲ ದಿನ ಹಿಂದಿಯಲ್ಲಿ ಟಾಲಿವುಡ್‌ನ ಮೂರು ಸಿನಿಮಾಗಳನ್ನು ಹಿಂದೆ ಹಾಕಲು ಸೋತಿದೆ. ಬಾಹುಬಲಿ 1 , ಬಾಹುಬಲಿ 2 ಹಾಗೂ ಸಾಹೋ ಸಿನಿಮಾವನ್ನು ಬಾಕ್ಸಾಫೀಸ್‌ನಲ್ಲಿ ಸೋಲಿಸಲು ಸೋತಿದೆ. 'ಪಷ್ಪ' ಮೊದಲ ದಿನದ ಬಾಲಿವುಡ್ ಬಾಕ್ಸಾಫೀಸ್ ಕಲೆಕ್ಷನ್ 3 ಕೋಟಿ. ಇದು 'ಪುಷ್ಪ' ತಂಡಕ್ಕೆ ದೊಡ್ಡ ರಿಲೀಫ್ ಅಂತಲೇ ಭಾವಿಸಲಾಗಿದೆ.

    ರಾಜಮೌಳಿಯ 'ಬಾಹುಬಲಿ 2' ಹಿಂದಿ ಗಳಿಕೆ ಎಷ್ಟು?

    ರಾಜಮೌಳಿ ಬಾಹುಬಲಿ 2 ಬಾಲಿವುಡ್ ಬಾಕ್ಸಾಫೀಸ್‌ ಅನ್ನೇ ಚಿಂದಿ ಉಡಾಯಿಸಿತ್ತು. ಒಂದು ಡಬ್ಬಿಂಗ್ ಸಿನಿಮಾಗೆ ಇದೇ ಮೊದಲ ಬಾರಿಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿತ್ತು. ಸಿನಿಮಾಗಳ ಟ್ರೇಡ್ ಅನಲಿಸ್ಟ್ ತರನ್ ಆದರ್ಶ ಪ್ರಕಾರ, ಬಾಹುಬಲಿ ಹಿಂದಿ ಅವತರಣೆಯ ಮೊದಲ ದಿನದ ಗಳಿಕೆ ಬರೋಬ್ಬರಿ 41 ಕೋಟಿ. ಇಂತಹದ್ದೊಂದು ಓಪನಿಂಗ್ ಬೇರಾವುದೇ ಸಿನಿಮಾಗಳಿಗೂ ಇದೂವರೆಗೂ ಸಿಕ್ಕಿಲ್ಲ. ಈ ದಾಖಲೆಯನ್ನು ಯಾರು ಅಳಿಸಿ ಹಾಕಲೂ ಸಾಧ್ಯವಾಗಿಲ್ಲ. ವಿಶೇಷ ಅಂದ್ರೆ, ಬಾಹುಬಲಿ 2 ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ 500 ಕೋಟಿ ದಾಖಲಿಸಿದೆ. ಇದೂ ಒಂದು ದಾಖಲೆಯೇ.

    ಡಾರ್ಲಿಂಗ್ ಪ್ರಭಾಸ್ 'ಸಾಹೋ' ಗಳಿಕೆ ಎಷ್ಟು?

    ಬಾಹುಬಲಿ ಯಶಸ್ಸಿನ ಬಳಿಕ ಡಾರ್ಲಿಂಗ್ ಪ್ರಭಾಸ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದರು. ಬಾಹುಬಲಿ 2 ಯಶಸ್ಸಿನ ಬಳಿಕ ತೆರೆಕಂಡ ಸಿನಿಮಾ 'ಸಾಹೋ'. ಬಾಲಿವುಡ್‌ನಲ್ಲಿ ಬಾರೀ ಅಬ್ಬರದೊಂದಿಗೆ ತೆರೆಕಂಡಿದ್ದ ಈ ಸಿನಿಮಾ ಗಳಿಸಿದ್ದು, ಬರೋಬ್ಬರಿ 24.40 ಕೋಟಿ. ತಾನೇ ನಟಿಸಿದ ಬಾಹುಬಲಿ 2 ಸಿನಿಮಾದ ಮೊದಲ ದಿನದ ಗಳಿಕೆಯನ್ನು ಅಳಿಸಿಹಾಕಲು ಪ್ರಭಾಸ್ ಸೋತಿದ್ದರು. ಆದರೆ, ಸಾಹೋ ಗಳಿಕೆ ಪ್ಯಾನ್ ಇಂಡಿಯಾ ಮಟ್ಟಿಗೆ ಬಿಗ್ ಕಲೆಕ್ಷನ್ ಎನ್ನಲಾಗಿತ್ತು.

    ಪುಷ್ಪ ಸೋಲಿಸಿದ್ದು ಕೆಜಿಎಫ್ ಸಿನಿಮಾವನ್ನು ಮಾತ್ರ

    ಪುಷ್ಪ ಸೋಲಿಸಿದ್ದು ಕೆಜಿಎಫ್ ಸಿನಿಮಾವನ್ನು ಮಾತ್ರ

    'ಪುಷ್ಪ' ಮೊದಲ ದಿನ 3 ಕೋಟಿ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಗಳಿಸಿದೆ. ಈ ಮೂಲಕ ಕೆಜಿಎಫ್ ಚಾಪ್ಟರ್ 1 ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ದಾಖಲಿಸಿದ್ದ ಮೊದಲ ದಿನ ಕಲೆಕ್ಷನ್ 2.10 ಕೋಟಿಯ ರೆಕಾರ್ಡ್ ಅನ್ನು ಬ್ರೇಕ್ ಮಾಡಿದೆ. ಆದರೆ, ಕೇವಲ 90 ಲಕ್ಷದ ಅಂತರ ಅಷ್ಟೇ. ಹೀಗಾಗಿ ಇದು ದೊಡ್ಡ ಸಾಧನೆ ಅಲ್ಲವೆಂದು ಬಿಂಬಿಸಲಾಗುತ್ತಿದೆ. 'ಕೆಜಿಎಫ್ ಚಾಪ್ಟರ್ 2' ಬಾಲಿವುಡ್ ಬಾಕ್ಸಾಫೀಸ್‌ನಲ್ಲೂ ಹೊಸ ದಾಖಲೆಯನ್ನು ಬರೆಯುತ್ತೆ ಎಂದು ಭವಿಷ್ಯ ನುಡಿಯಲಾಗುತ್ತಿದೆ.

    English summary
    Allu Arjun starrer Pushpa failed to beat Baahubali, Baahubali 2 and Sahoo in Hindi version. Pushpa only beated KGF chapter 1 in Hindi version.
    Saturday, December 18, 2021, 15:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X