'ಪುಷ್ಪ' ಸಿನಿಮಾದ ಬಗ್ಗೆ ಹೀಗೊಂದು ಸುದ್ದಿ: ಬದಲಾಗುತ್ತಾ ಚಿತ್ರದ ಟೈಟಲ್?
ತೆಲುಗು ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷೆಯ ಪುಷ್ಪ ಸಿನಿಮಾ ಚಿತ್ರೀಕರಣ ಹಂತದಲ್ಲಿದೆ. ಸದ್ಯ ಕೊರೊನಾ ಹಾವಳಿ ಕಾರಣ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. ಇತ್ತೀಚಿಗಷ್ಟೆ ಪುಷ್ಪ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎನ್ನುವ ಸುದ್ದಿ ಬಹಿರಂಗವಾದ ಬೆನ್ನಲ್ಲೇ ಮತ್ತೊಂದು ಸುದ್ದಿ ಕೇಳಿಬರುತ್ತಿದೆ.
ಪುಟ್ಟ ಟೀಸರ್ ಮೂಲಕ ನಿರೀಕ್ಷೆ ಇಮ್ಮಡಿಗೊಳಿಸಿರುವ ಪುಷ್ಪ ಚಿತ್ರದ ಟೈಟಲ್ ಬದಲಾವಣೆ ಮಾಡುವ ಬಗ್ಗೆ ಚಿತ್ರತಂಡ ನಿರ್ಧರಿಸಿದೆ ಎನ್ನುವ ಮಾತು ಕೇಳಿಬರುತ್ತಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್, ಪುಷ್ಪರಾಜ್ ಎನ್ನುವ ಲಾರಿ ಡ್ರೈವರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಪುಷ್ಪ ಎಂದು ಟೈಟಲ್ ಇಡಲಾಗಿದೆ.
ಆದರೀಗ ಎರಡು ಪಾರ್ಟ್ ಗಳಲ್ಲಿ ಮೂಡಿಬರುತ್ತಿರುವ ಕಾರಣ ಪಾರ್ಟ್-2 ಗೆ ಹೆಸರು ಬದಲಾಯಿಸುವ ಸಾಧ್ಯತೆ ಇದೆ ಎನ್ನುವ ಗುಸುಗುಸು ಕೇಳಿಬರುತ್ತಿದೆ. ಮೊದಲ ಭಾಗಕ್ಕೆ ಪುಷ್ಪ ಎನ್ನುವ ಹೆಸರೇ ಇರಲಿದ್ದು, ಪಾರ್ಟ್-2ಗೆ ಬೇರೆ ಹೆಸರಿಡುವ ಬಗ್ಗೆ ಯೋಚಿಸಲಾಗಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಹಾಗಾಗಿ ಪಾರ್ಟ್-2ಗೆ ಹೆಸರು ಬದಲಾಗಲಿದ್ಯಾ, ಯಾವ ಹೆಸರು ಇಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಈಗಾಗಲೇ ಮೊದಲ ಭಾಗದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಇನ್ನು 30 ದಿನಗಳ ಚಿತ್ರೀಕರಣ ಬಾಕಿ ಇದೆ. ಕೊರೊನಾ ಹಾವಳಿಯಿಂದ ಚಿತ್ರೀಕರಣ ರದ್ದು ಮಾಡಲಾಗಿದೆ. ಮೊದಲ ಭಾಗ ಈ ವರ್ಷ ತೆರೆಗೆ ಬರಲಿದ್ದು, ಪಾರ್ಟ್-2 ಮುಂದಿನ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಚಿತ್ರದಲ್ಲಿ ಮಲಯಾಳಂ ಖ್ಯಾತ ನಟ ಫಹಾದ್ ಫಾಜಿಲ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದ ನಟ ಧನಂಜಯ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ.


Click it and Unblock the Notifications











