'ಪುಷ್ಪ' ಚಿತ್ರ ತಂಡದಿಂದ ಬಂತು ಮತ್ತೊಂದು ಸರ್ಪ್ರೈಸ್!
ಭಾರತೀಯ ಚಿತ್ರರಂಗದ 'ಪುಷ್ಪ' ಇದೇ ಡಿಸೆಂಬರ್ 17ಕ್ಕೆ ತೆರೆಗೆ ಬರುತ್ತಿದೆ. ಆದ್ರೆ ಸಿನಿಮಾದ ಮೇಲೆ ನಿರೀಕ್ಷೆ ಹುಟ್ಟಿಸುವಲ್ಲಿ ಚಿತ್ರದ ಹಾಡುಗಳ ಪಾತ್ರ ಮಹತ್ತರವಾಗಿದೆ. ಈಗ ರಿಲೀಸ್ ಆಗಿರುವ ಹಾಡುಗಳು ಸೂಪರ್ ಹಿಟ್ ಆಗಿವೆ.
ಪುಷ್ಪ ಸಿನಿಮಾ ಪಂಚ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಚಿತ್ರದ ಹಾಡುಗಳು ಕೂಡ ಕನ್ನಡ, ತೆಲುಗು, ಹಿಂದಿ ಸೇರಿದಂತೆ ಪಂಚ ಭಾಷೆಗಳಲ್ಲೂ ರಿಲೀಸ್ ಆಗಿವೆ. ಕೇವಲ ಹಾಡುಗಳೆ ಸಿನಿಮಾ ಬಗ್ಗೆ ಎಲ್ಲಿಲ್ಲದ ನಿರೀಕ್ಷೆ ಹುಟ್ಟು ಹಾಕಿವೆ.
ಸಾಮಿ ಸಾಮಿ, ಶ್ರೀವಲ್ಲಿ, ಜೋಕೆ ಜೋಕೆ ಮೇಕೆ ಈ ಮೂರೂ ಹಾಡುಗಳು ವಿಭಿನ್ನ ಫ್ಲೇವರ್‌ನಲ್ಲಿ ಬಂದು ಸದ್ದು ಮಾಡುತ್ತಿವೆ.

ನಾಲ್ಕನೇ ಹಾಡಿಗೆ ಸಜ್ಜಾದ ಪುಷ್ಪ ಚಿತ್ರದ ತಂಡ!
ಸಾಮಿ ಸಾಮಿ, ಶ್ರೀವಲ್ಲಿ, ಜೋಕೆ ಜೋಕೆ ಮೇಕೆ ಈ ಮೂರೂ ಹಾಡುಗಳ ನಂತರ ಈಗ ನಾಲ್ಕನೇ ಹಾಡು ರಿಲೀಸ್‌ಗೆ ಸಜ್ಜಾಗಿದೆ. ಈ ಮೂರು ಹಾಡುಗಳು ಕೂಡ ಭಾರಿ ಜನ ಪ್ರಿಯತೆಯನ್ನು ಪಡೆದು ಕೊಂಡಿರುವ ಹಾಡುಗಳು ಹಾಗಾಗಿ ಮುಂದಿನ ಹಾಡು ಯಾವಾಗ ರಿಲೀಸ್ ಆಗುತ್ತದೆ ಮತ್ತು ಆ ಹಾಡು ಹೇಗೆ ಇರುತ್ತದೆ ಎನ್ನುವ ನಿರೀಕ್ಷೆಯಲ್ಲಿ ಸಿನಿ ಪ್ರೇಮಿಗಳು ಇದ್ದಾರೆ.
ಇದೀಗ ಈ ಚಿತ್ರದ ನಾಲ್ಕನೇ ಹಾಡು ಇದೇ ನವೆಂಬರ್ 19 ಕ್ಕೆ ಬಿಡುಗಡೆಯಾಗಲಿದೆ. 'ಏ ಮಗಾ ಇದು ನನ್ನ ಜಾಗ' ಎನ್ನು ಸಾಹಿತ್ಯ ಕನ್ನಡ ಹಾಡಿನಲ್ಲಿ ಇರಲಿದೆ. ಈ ಹಾಡು ಕೂಡ ೫ ಭಾಷೆಗಳಲ್ಲಿ ರಿಲೀಸ್ ಆಗಲಿದೆ.

ಹಾಡುಗಳ ಸಕ್ಸಸ್ ಖುಷಿಯಲ್ಲಿ ಪುಷ್ಪ ಚಿತ್ರ ತಂಡ!
ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಮೂರು ಹಾಡುಗಳು ಭಾರಿ ಜನಪ್ರಿಯತೆ ಪಡೆದು, ಸೂಪರ್‌ಹಿಟ್ ಆಗಿರುವುದರಿಂದ ಚಿತ್ರ ತಂಡ ಬಹಳ ಖುಷಿಯಾದೆ. ಇದೇ ಖುಷಿಯಲ್ಲಿ ಚಿತ್ರತಂಡ ನಾಲ್ಕನೇ ಹಾಡನ್ನು ರಿಲಿಸ್ ಮಾಡು ಮುಂದಾಗಿದೆ. ಈ ವಿಚಾರವನ್ನು ಹಂಚಿಕೊಳ್ಳುವುದರ ಜೊತೆಗೆ ಧನ್ಯವಾದ ತಿಳಿಸಿದೆ 'ಪುಷ್ಪ' ಚಿತ್ರದ 'ಜೋಕೆ ಜೋಕೆ ಮೇಕೆ', 'ಶ್ರೀವಲ್ಲಿ' ಮತ್ತು 'ಸಾಮಿ ಸಾಮಿ' ಈ ಮೂರು ಹಾಡುಗಳು ಈಗಾಗಲೇ 250 ಮಿಲಿಯನ್ ವೀವ್ಸ್ ಪಡೆದು ಮುನ್ನುಗುತ್ತಿವೆ.

ಸಂಗೀತ ಪ್ರಿಯರಿಗೆ ದೇವಿಶ್ರೀ ಪ್ರಸಾದ್ ಧನ್ಯವಾದ!
'ಪುಷ್ಪ' ಚಿತ್ರದ ಹಾಡುಗಳು ಪ್ರೇಕ್ಷಕರ ಮನಸ್ಸನ್ನ ಗೆದ್ದಿರುವುದರಿಂದ ಚಿತ್ರತಂಡ ಸಂತಸಗೊಂಡಿದೆ. ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ 'ಪುಷ್ಪ' ಚಿತ್ರದ ಹಾಡುಗಳನ್ನು ಗೆಲ್ಲಿಸಿದ ಸಂಗೀತ ಪ್ರಿಯರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಜೊತೆಗೆ 2021 ನೇ ವರ್ಷ ತಮಗೆ ಯಶಸ್ವಿ ವರ್ಷವಾಗಿದೆ ಎಂದಿದ್ದಾರೆ. ಇದೇ ವೇಳೆ ಹಿಂದಿಯ 'ರಾಧೆ' ಚಿತ್ರದ 'ಸಿಟಿಮಾರ್', ತೆಲುಗಿನ 'ಉಪ್ಪೆನ' ಚಿತ್ರದ ಹಾಡುಗಳನ್ನು ಮೆಚ್ಚಿದ ಎಲ್ಲಾ ವೀಕ್ಷಕರಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ. ಇದರ ಜೊತೆಗೆ ಪುಷ್ಪ ಚಿತ್ರದ ನಾಲ್ಕನೇ ಹಾಡು ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿದೆ.
ಸುಕುಮಾರ್ ನಿರ್ದೇಶನದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್, ನಟಿ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ್ ಅಭಿನಯದ 'ಪುಷ್ಪ' ಚಿತ್ರ ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಡಿಸೆಂಬರ್ 17ಕ್ಕೆ ಬಿಡುಗಡೆಯಾಗುತ್ತಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ ಅವರ ಲುಕ್‌ಗಳಿಂದಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿವೆ. ಇನ್ನೂ ಸುಕುಮಾರ್ ನಿರ್ದೇಶನ ಆಗಿರುವುದರಿಂದ ಚಿತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆ ಹುಟ್ಟಿಕೊಂಡಿವೆ. ಇದೆಲ್ಲದ್ದಕ್ಕೂ ಡಿಸೆಂಬರ್ 17ಕ್ಕೆ ತೆರೆ ಬೀಳಲಿದೆ.


Click it and Unblock the Notifications











