ಸ್ವಾಮಿ ಸ್ವಾಮಿ ಹಾಡಿನಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮೋಡಿ: ಹೇಗಿದೆ ನೋಡಿ

ತೆಲುಗಿನ ಪುಷ್ಪ ಸಿನಿಮಾ ಸೆಟ್ಟೇರಿದಾಗಿನಿಂದಲೂ ಸುದ್ದಿಯಲ್ಲಿದೆ. ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಾಯಕಿ ಆಗಿ ಅಭಿನಯಿಸುತ್ತಿರುವುದಕ್ಕೆ ಅಭಿಮಾನಿಗಳ ನಿರೀಕ್ಷೆ ಕೂಡ ಹೆಚ್ಚಾಗಿದೆ. ಚಿತ್ರದ ಪೋಸ್ಟರ್, ಟ್ರೈಲರ್ ನೋಡಿದ ಸಿನಿಪ್ರೀಯರು, ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾತುರಾಗಿದ್ದಾರೆ. ಪುಷ್ಪ ಸಿನಿಮಾದ ರಿಲೀಸ್ ದಿನಾಂಕ ಕೂಡ ನಿಗದಿ ಆಗಿದ್ದು, ಅದರ ಬೆನ್ನಲ್ಲೆ ಚಿತ್ರದ ಒಂದೊಂದೆ ಹಾಡುಗಳು ಕೂಡ ಇದೀಗ ರಿಲೀಸ್ ಮಾಡುತ್ತಿದೆ ಚಿತ್ರತಂಡ.

ಪುಷ್ಟ ಸಿನಿಮಾದಿಂದ ಈ ಹಿಂದೆ ಡಾಕ್ಕೋ ಡಾಕ್ಕೋ ಮೇಕಾ ಹಾಡು ರಿಲೀಸ್ ಆಗಿ ವೈರಲ್ ಆಗಿತ್ತು. ಇದೀಗ ಚಿತ್ರದ ಸ್ವಾಮಿ ಸ್ಮಾಮಿ ಹಾಡನ್ನು ಚಿತ್ರತಂಡ ರಿಲೀಸ್ ಮಾಡಿದೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ವೀವ್ಸ್ ಪಡೆದುಕೊಳ್ತಿದೆ. ಸ್ವಾಮಿ ಸ್ವಾಮಿ ಎಂದು ರಶ್ಮಿಕಾ ತನ್ನ ಪ್ರೀತಿಯನ್ನು ಅಲ್ಲು ಅರ್ಜುನ್‌ಗೆ ಹೇಳುವ ರೀತಿಯಲ್ಲಿ ಈ ಹಾಡು ಮೂಡಿಬಂದಿದೆ. ಚಿತ್ರದಲ್ಲಿ ಡಿಗ್ಲಾಮ್ ಲುಕ್‌ನಲ್ಲಿ ರಶ್ಮಿಕ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಹಳ್ಳಿ ಹುಡುಗಿ ಗೆಟಪ್‌ನಲ್ಲಿ ಕಾಣಿಸಿಕೊಂಡಿರೋ ರಶ್ಮಿಕಾ, ಈ ಹಾಡಿನಲ್ಲಿಯೂ ಸೀರೆ ಉಟ್ಟು ಪಕ್ಕಾ ಹಳ್ಳಿ ಹುಡುಗೆ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಮೈಮಾಟದಿಂದ ನೋಡುಗರನ್ನು ಆಕರ್ಷಿಸುವಂತೆ ಮಾಡಿದ್ದಾರೆ ರಶ್ಮಿಕಾ.

ಈ ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಗೆಟಪ್‌ ಕೂಡ ತುಂಬಾ ವಿಭಿನ್ನವಾಗಿದೆ. ಹಿಂದೆಂದೂ ಕಾಣಿಸಿಕೊಂಡಿರದ ಅವತಾರದಲ್ಲಿ ಅಲ್ಲು ಅರ್ಜುನ್ ಗೆಟಪ್ ಚೇಂಜ್ ಮಾಡಿದ್ದಾರೆ. ಸ್ವಾಮಿ ಸ್ವಾಮಿ ಹಾಡಿನಲ್ಲು ಇದೇ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಅಲ್ಲು. ಈ ಹಾಡಿನಲ್ಲಿ ರಶ್ಮಿಕಾ ತುಂಬಾ ಚೆನ್ನಾಗಿ ಸೊಂಟ ಬಳುಕಿಸಿದ್ದು, ಲಂಗ ರವಿಕೆಯಲ್ಲಿ ವಿಭಿನ್ನ ಸ್ಟೆಪ್ಸ್‌ಗಳನ್ನು ಹಾಕಿದ್ದಾರೆ. ಹಾಗೇ ಸ್ವಾಮಿ ಸ್ವಾಮಿ ಹಾಡನ್ನು ವರದರಾಜ್ ಚಿಕ್ಕಬಳ್ಳಾಪುರ ಬರೆದಿದ್ದಾರೆ. ಶೇಖರ್ ವಿ.ಜೆ ಹಾಡಿಗೆ ತಕ್ಕಂತೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಹಾಡು ಕೇಳುಗನಿಗೆ ತುಂಬ ಹಿಡಿಸಿದ್ದು, ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ವೀವ್ಸ್ ಆಗಿದೆ.

 Allu Arjun Starrer Pushpa Movie Third Single Saami Saami Song Released

ಈ ಸ್ವಾಮಿ ಸ್ವಾಮಿ ಹಾಡು ತೆಲುಗು ಸೇರಿ ಕನ್ನಡ ಮಲಯಾಳಂ, ತಮಿಳಿನಲ್ಲೂ ರಿಲೀಸ್ ಆಗಿದೆ. ಎಲ್ಲಾ ಭಾಷೆಯ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದ್ದು, ತೆಲುಗಿನ ಹಾಡು ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ಸ್ಥಾನ ಪಡೆದುಕೊಂಡಿದೆ. ದೇವಿಶ್ರೀ ಪ್ರಸಾದ್‌ ಸಂಗೀತ ನಿರ್ದೇಶನ ಮಾಡಿದ್ದು, ಕನ್ನಡದ ಹಾಡನ್ನ ಅನನ್ಯ ಭಟ್ ಹಾಡಿದ್ದಾರೆ.

 Allu Arjun Starrer Pushpa Movie Third Single Saami Saami Song Released

ಅಲ್ಲು ಅರ್ಜುನ್ ಸಿನಿಮಾದಲ್ಲಿ ಪುಷ್ಪ ರಾಜ್ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಪುಷ್ಪ ಸಿನಿಮಾ ಎರಡು ಭಾಗಗಳಾಗಿ ರಿಲೀಸ್ ಆಗಲಿದೆ. ಪುಷ್ಪ ಸಿನಿಮಾದ ಮೊದಲ ಭಾಗವು 2021 ಡಿಸೆಂಬರ್ 17ಕ್ಕೆ ತೆರೆಕಂಡರೆ, ಎರಡನೇ ಭಾಗ ಬಿಡುಗಡೆ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು. ಪುಷ್ಪಾ ಸಿನಿಮಾದಿಂದ ಈಗಾಗಲೇ ಟ್ರೈಲರ್, ಟೀಸರ್, ಹಾಡುಗಳು ರಿಲೀಸ್ ಆಗಿದ್ದು, ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಹಾಗೇ ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಇದೇ ಮೊದಲ ಬಾರಿಗೆ ಒಂದಾಗುತ್ತಿದ್ದು, ಇವರಿಬ್ಬರ ಕೆಮಿಸ್ಟ್ರಿ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

 Allu Arjun Starrer Pushpa Movie Third Single Saami Saami Song Released

ಪುಷ್ಪ ಚಿತ್ರದ ಮೂಲಕ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಜೋಡಿ ಮೂರನೇ ಬಾರಿಗೆ ಒಂದಾಗುತ್ತಿದೆ. ಈ ಹಿಂದೆ ಬ್ಲಾಕ್ ಬಸ್ಟರ್ ಚಲನಚಿತ್ರಗಳಾದ ಆರ್ಯ, ಮತ್ತು ಆರ್ಯ 2, ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿ ಇಡೀ ಟಾಲಿವುಡ್‍ ನಲ್ಲಿ ಈ ಜೋಡಿ ಕಮಾಲ್ ಮಾಡಿತ್ತು.ಈಗ ಮತ್ತೆ ಪುಷ್ಪ ಸಿನಿಮಾದಿಂದ ಬಾಕ್ಸ್ ಆಫೀಸ್ ಶೇಕ್ ಮಾಡಲು ಸಿದ್ದವಾಗಿದ್ದಾರೆ. ಇನ್ನುಳಿದಂತೆ ಪುಷ್ಪ ಚಿತ್ರದಲ್ಲಿ ಜಗಪತಿ ಬಾಬು, ಅನಸೂಯಾ ಭಾರದ್ವಾಜ್, ವೆನ್ನೆಲಾ ಕಿಶೋರ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಫಹದ್ ಫಾಸಿಲ್ ಎದುರಾಳಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಮುತ್ತಮ್ಸೆಟ್ಟಿ ಮೀಡಿಯಾ ಜಂಟಿಯಾಗಿ ನಿರ್ಮಿಸಿವೆ.

More from Filmibeat

English summary
Allu Arjun and Rashmika Mandanna starrer Pushpa Movie Third Single Saami Saami Song Released. The film is directed by Sukumar. Movie releasing in december.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X