'KGF' ಚಿತ್ರದ ಹಾದಿಯಲ್ಲಿ ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ

ತೆಲುಗು ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಚಿತ್ರೀಕರಣ ಹಂತದಲ್ಲಿದೆ. ಸದ್ಯ ಅಲ್ಲು ಅರ್ಜುನ್‌ಗೆ ಕೊರೊನಾ ಪಾಸಿಟಿವ್ ಬಂದ ಕಾರಣ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. ಪುಟ್ಟ ಟೀಸರ್ ಮೂಲಕ ನಿರೀಕ್ಷೆ ಇಮ್ಮಡಿಗೊಳಿಸಿರುವ ಪುಷ್ಪ ಸಿನಿಮಾದ ಬಗ್ಗೆ ಮತ್ತೊಂದು ಇಂಟರೆಸ್ಟಿಂಗ್ ಸುದ್ದಿ ಕೇಳಿಬರುತ್ತಿದೆ.

ಪುಷ್ಪ ಸಿನಿಮಾ ಬಾಹುಬಲಿ ಮತ್ತು ಕೆಜಿಎಫ್ ಚಿತ್ರಗಳ ಹಾದಿಯಲ್ಲೇ ಸಾಗುತ್ತಿದೆ. ಅಂದರೆ ದೇಶದ ಗಮನ ಸೆಳೆದ ಕೆಜಿಎಫ್ ಮತ್ತು ಬಾಹುಬಲಿಯಂತೆ ಎರಡು ಭಾಗಗಳಲ್ಲಿ ಪುಷ್ಟ ಚಿತ್ರ ಬಿಡುಗಡೆ ಮಾಡಲು ಸಿನಿಮಾತಂಡ ನಿರ್ಧರಿಸಿದೆಯಂತೆ. ಈಗಾಗಲೇ ಮೊದಲ ಭಾಗದ ಚಿತ್ರೀಕರಣ ಬಹುತೇಕ ಮುಗಿಸಿರುವ ಸಿನಿಮಾತಂಡ ಈ ವರ್ಷದ ಕೊನೆಯಲ್ಲಿ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆ ಇದೆ. ಮುಂದೆ ಓದಿ...

ಎರಡು ಭಾಗಗಳಲ್ಲಿ 'ಪುಷ್ಪ' ಸಿನಿಮಾ

ಎರಡು ಭಾಗಗಳಲ್ಲಿ 'ಪುಷ್ಪ' ಸಿನಿಮಾ

ಒಂದೇ ಭಾಗದಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಿ ಚಿತ್ರೀಕರಣ ಪ್ರಾರಂಭಿಸಿದ್ದ ಚಿತ್ರತಂಡ ಇದೀಗ 2 ಭಾಗಗಳಲ್ಲಿ ತೆರೆಗೆ ತರಲು ನಿರ್ಧರಿಸಿದೆಯಂತೆ. ಚಿತ್ರಕಥೆ ಬೆಳೆದು ದೊಡ್ಡದಾದ ಕಾರಣ ಮತ್ತು ಚಿತ್ರಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಆಧಾರದ ಮೇಲೆ ಚಿತ್ರವನ್ನು ಎರಡು ಭಾಗಗಳಲ್ಲಿ ಪ್ರೇಕ್ಷಕರ ಮುಂದೆ ತರುವ ಪ್ಲಾನ್ ಮಾಡಿದೆ ಚಿತ್ರತಂಡ.

ಚಿತ್ರಕ್ಕೆ ಮತ್ತಷ್ಟು ಇಂಟರೆಸ್ಟಿಂಗ್ ಅಂಶ ಸೇರ್ಪಡೆ

ಚಿತ್ರಕ್ಕೆ ಮತ್ತಷ್ಟು ಇಂಟರೆಸ್ಟಿಂಗ್ ಅಂಶ ಸೇರ್ಪಡೆ

ಚಿತ್ರೀಕರಣಕ್ಕೆ ಇನ್ನು ಸಮಯ ಸಿಕ್ಕ ಪರಿಣಾಮ ನಿರ್ದೇಶಕ ಸುಕುಮಾರ್ ಸ್ಕ್ರಿಪ್ಟ್‌ಗೆ ಮತ್ತಷ್ಟು ಇಂಟರೆಸ್ಟಿಂಗ್ ಅಂಶಗಳನ್ನು ಸೇರಿಸಿದ್ದಾರಂತೆ. ಈಗಾಗಲೇ ಅಲ್ಲು ಅರ್ಜುನ್ ಜೊತೆ ಚರ್ಚಿಸಿದ್ದಾದ್ದು, ಅಲ್ಲು ಅಂತಿಮ ನಿರ್ಧಾರವನ್ನು ನಿರ್ದೇಶಕ ಸುಕುಮಾರ್ ಅವರಿಗೆ ಬಿಟ್ಟಿದ್ದಾರಂತೆ. ನಿರ್ದೇಶಕ ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

ವರ್ಷದ ಕೊನೆಯಲ್ಲಿ ತೆರೆಗೆ ಬರುವ ಸಾಧ್ಯತೆ

ವರ್ಷದ ಕೊನೆಯಲ್ಲಿ ತೆರೆಗೆ ಬರುವ ಸಾಧ್ಯತೆ

ಈಗಾಗಲೇ ಮೊದಲ ಭಾಗದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ ಎನ್ನುವ ಮಾಹಿತಿ ಕೇಳಿಬಂದಿದೆ. ಅಂದುಕೊಂಡಂತೆ ಆಗಿದ್ದರೆ ಪುಷ್ಪ ಸಿನಿಮಾ ಆಗಸ್ಟ್ 13ಕ್ಕೆ ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಕಾರಣ ಸಿನಿಮಾ ಆಗಸ್ಟ್ ನಲ್ಲಿ ಬಿಡುಗಡೆಯಾಗುವುದು ಅನುಮಾನವಾಗಿದೆ. ಈ ವರ್ಷದ ಕೊನೆಯಲ್ಲಿ ಪುಷ್ಪ ಮೊದಲ ಭಾಗ ತೆರೆಗೆ ಬರುವ ಸಾಧ್ಯತೆ ಇದೆ. ಎರಡನೇ ಭಾಗ ಮುಂದಿನ ವರ್ಷ ರಿಲೀಸ್ ಮಾಡಲಿದೆ ಸಿನಿಮಾತಂಡ.

Recommended Video

ಕಂಬ್ಯಾಕ್ ಮಾಡೋಕೆ‌ ರೆಡಿಯಾದ ಜೆನಿಲಿಯಾ!!ರಿತೇಶ್ ಒಪ್ಕೊಂಡ್ರಾ? | Filmibeat Kanada
ಫಹಾದ್ ವಿಲನ್, ರಶ್ಮಿಕಾ ನಾಯಕಿ

ಫಹಾದ್ ವಿಲನ್, ರಶ್ಮಿಕಾ ನಾಯಕಿ

ಸುಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಮಲಯಾಳಂ ಖ್ಯಾತ ನಟ ಫಹಾದ್ ಫಾಸಿಲ್ ವಿಲನ್ ಆಗಿ ಬಣ್ಣಹಚ್ಚುತ್ತಿದ್ದಾರೆ. ಇನ್ನು ವಿಶೇಷ ಎಂದರೆ ಕನ್ನಡದ ನಟ ಧನಂಜಯ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ದೇವಿ ಶ್ರೀ ಪ್ರಸಾದ್ ಸಂಗೀತ ಚಿತ್ರಕ್ಕಿದೆ.

More from Filmibeat

English summary
Tollywood Actor Allu Arjun starrer Pushpa to have release in 2 parts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X