ಅಲ್ಲು ಅರ್ಜುನ್‌ಗೆ ಸರ್‌ಪ್ರೈಸ್ ಗಿಫ್ಟ್ ಕೊಟ್ಟ ರಶ್ಮಿಕಾ; ಆ ವಸ್ತು ಸ್ಟೈಲಿಶ್ ಸ್ಟಾರ್ ಲಕ್ ಬದಲಿಸುತ್ತಾ?
ಸುಕುಮಾರ್ ನಿರ್ದೇಶನದ 'ಪುಷ್ಪ'-2 ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದ ಬಗ್ಗೆ ದಿನಕ್ಕೊಂದು ಸುದ್ದಿ ಸದ್ದು ಮಾಡ್ತಿದೆ. ಸದ್ಯ ಸ್ಪೆಷಲ್ ಸಾಂಗ್ ಶೂಟಿಂಗ್ ನಡೀತಿದೆ ಎನ್ನಲಾಗ್ತಿದೆ. ಮತ್ತೊಂದು ಕಡೆ ಟ್ರೈಲರ್ ರಿಲೀಸ್ ಆಗಿ ಪ್ರೀ ರಿಲೀಸ್ ಈವೆಂಟ್ ಪ್ಲ್ಯಾನ್ ನಡೀತಿದೆ.
ಅಲ್ಲು ಅರ್ಜುನ್ ಜೊತೆ ಮತ್ತೊಮ್ಮೆ ರಶ್ಮಿಕಾ ಈ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. 'ಪುಷ್ಪ'ರಾಜ್ ಮಡದಿ ಶ್ರೀವಲ್ಲಿ ಆಗಿ ಕೊಡಗಿನ ಬೆಡಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ 'ಕಪಲ್ ಸಾಂಗ್'ನಲ್ಲಿ ಇವರಿಬ್ಬರನ್ನು ಕೆಮೆಸ್ಟ್ರಿ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ತೆರೆಮೇಲೆ ಕಂಪ್ಲೀಟ್ ಸಾಂಗ್ ನೋಡಲು ಕಾಯುವಂತಾಗಿದೆ. ಡಿಸೆಂಬರ್ 5ಕ್ಕೆ ಸಿನಿಮಾ ತೆರೆಗೆ ಬರಲಿದೆ.

'ಪುಷ್ಪ'-2 ಸಿನಿಮಾ ಅಂದಾಜು 1000 ಕೋಟಿ ರೂ. ಕಲೆಕ್ಷನ್ ಮಾಡುವ ಲೆಕ್ಕಾಚಾರ ಶುರುವಾಗಿದೆ. ಇದೆಲ್ಲದರ ನಡುವೆ ಸಿನಿಮಾ ಬಿಡುಗಡೆಗೂ ಮುನ್ನ ನಟಿ ರಶ್ಮಿಕಾ ಸಹ ಅಲ್ಲು ಅರ್ಜುನ್‌ಗೆ ವಿಶೇಷ ಉಡುಗೊರೆ ನೀಡಿದ್ದಾರೆ. ದೀಪಾವಳಿ ಸಂಭ್ರಮದಲ್ಲಿ ರೋಶ್ ಕೊಟ್ಟಿರುವ ಉಡುಗೊರೆ ಬಗ್ಗೆ ಅಲ್ಲು ಅರ್ಜುನ್ ಪೋಸ್ಟ್ ಮಾಡಿ ಹಂಚಿಕೊಂಡಿದ್ದಾರೆ.
ಯಾರಿಗಾದರೂ ಬೆಳ್ಳಿ ವಸ್ತು ಉಡುಗೊರೆಯಾಗಿ ಕೊಟ್ಟರೆ ಅವರಿಗೆ ಅದೃಷ್ಟ ಬರುತ್ತದೆ ಎಂದು ನನ್ನ ತಾಯಿ ಆಗಾಗ್ಗೆ ಹೇಳುತ್ತಿರುತ್ತಾರೆ. ಈ ಸಣ್ಣ ಬೆಳ್ಳಿಯ ವಸ್ತು, ಸ್ವೀಟ್ಸ್, ನಿಮಗೆ ಹೆಚ್ಚಿನ ಅದೃಷ್ಟವನ್ನು ತರಲಿ ಎಂದು ನಾನು ಭಾವಿಸುತ್ತೇನೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು' ಎಂದು ಚಿಕ್ಕ ಪತ್ರ ಬರೆದು ಅಲ್ಲು ಅರ್ಜುನ್‌ಗೆ ರಶ್ಮಿಕಾ ಉಡುಗೊರೆ ಕಳುಹಿಸಿಕೊಟ್ಟಿದ್ದಾರೆ.
ರಶ್ಮಿಕಾ ಉಡುಗೊರೆ ಬಗ್ಗೆ ಪ್ರತಿಕ್ರಿಯಿಸಿರುವ ಅಲ್ಲು ಅರ್ಜುನ್ "ಧನ್ಯವಾದಗಳು ನನ್ನ ಪ್ರೀತಿಯ ರಶ್ಮಿಕಾ.. ಈಗ ನನಗೆ ಹೆಚ್ಚು ಅದೃಷ್ಟ ಬೇಕು" ಎಂದು ಬರೆದಿದ್ದಾರೆ. ಇದಕ್ಕೆ ಪುನಃ ರಿಪ್ಲೇ ಮಾಡಿರುವ ರಶ್ಮಿಕಾ, "ಬಾಕ್ಸಾಫೀಸ್‌ನಲ್ಲಿ ಖಂಡಿತ 'ಪುಷ್ಪ'ನ ರೂಲ್ ನಡೆಯುತ್ತದೆ. ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ನಮ್ಮ ಪರಿಶ್ರಮವನ್ನು ಪ್ರೇಕ್ಷಕರು ಗುರುತಿಸುತ್ತಾರೆ. ಆ ವಿಷಯದಲ್ಲಿ ನನಗೆ ತುಂಬಾ ವಿಶ್ವಾಸವಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

'ಪುಷ್ಪ' ಚಿತ್ರದಲ್ಲಿ ರಕ್ತ ಚಂದನ ಸ್ಮಗ್ಲರ್ ಆಗಿ ಅಲ್ಲು ಅರ್ಜುನ್ ನಟಿಸಿದ್ದರು. ಆತನ ಪ್ರೇಯಸಿ ಶ್ರೀವಲ್ಲಿಯಾಗಿ ರಶ್ಮಿಕಾ ಕಾಣಿಸಿಕೊಂಡಿದ್ದರು. ಚಿತ್ರದ ಕ್ಲೈಮ್ಯಾಕ್ಸ್ ವೇಳೆಗೆ ಇಬ್ಬರಿಗೂ ಮದುವೆ ಸಹ ಆಗುತ್ತದೆ. ಸೀಕ್ವೆಲ್‌ನಲ್ಲಿ ಗಂಡ- ಹೆಂಡತಿಯಾಗಿ ಪುಷ್ಪ- ಶ್ರೀವಲ್ಲಿ ಪಾತ್ರಗಳು ಮುಂದುವರೆಯಲಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ.
3 ವರ್ಷಗಳ ಹಿಂದೆ ಬಂದಿದ್ದ 'ಪುಷ್ಪ' ಚಿತ್ರ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಹಾಗಾಗಿ ಸಹಜವಾಗಿಯೇ ಸೀಕ್ವೆಲ್ ನಿರೀಕ್ಷೆ ಹುಟ್ಟಾಕ್ಕಿದೆ. ಕಾರಣಾಂತರಗಳಿಂದ ಪದೇ ಪದೆ ಸಿನಿಮಾ ರಿಲೀಸ್ ಡೇಟ್ ಮುಂದೂಡುತ್ತಾ ಬಂದಿತ್ತು ಚಿತ್ರತಂಡ. ಅಂತೂ ಇಂತೂ ಈ ಬಾರಿ ಸಿನಿಮಾ ತೆರೆಗೆ ಬರುವುದು ಪಕ್ಕಾ ಆಗಿದೆ. ಚಿತ್ರದಲ್ಲಿ ಶ್ರೀಲೀಲಾ ಐಟಂ ಸಾಂಗ್‌ಗೆ ಹೆಜ್ಜೆ ಹಾಕ್ತಾರೆ ಎನ್ನಲಾಗ್ತಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ 6 ಭಾಷೆಗಳಲ್ಲಿ 'ಪುಷ್ಪ'-2 ಸಿನಿಮಾ ತೆರೆಗೆ ಬರಲಿದೆ. ಪಾಟ್ನ, ಕೊಲ್ಕತ್ತಾ, ಚೆನ್ನೈ, ಕೊಚ್ಚಿ, ಬೆಂಗಳೂರು, ಮುಂಬೈ ಹಾಗೂ ಹೈದರಾಬಾದ್‌ನಲ್ಲಿ ಚಿತ್ರದ ಈವೆಂಟ್‌ಗಳನ್ನು ನಡೆಸಿ ಪ್ರಚಾರ ಮಾಡಲು ಚಿತ್ರತಂಡ ಮುಂದಾಗಿದೆ. 'ಪುಷ್ಪ'-2 ಸಿನಿಮಾ ಬಿಡುಗಡೆ ಮರುದಿನವೇ ರಶ್ಮಿಕಾ ನಟನೆಯ 'ಚಾವ' ಚಿತ್ರ ಕೂಡ ತೆರೆಗೆ ಬರಲಿದೆ.


Click it and Unblock the Notifications











