'ಗೀತಾ ಗೋವಿಂದಂ' ಸಿನಿಮಾ ರಿಜೆಕ್ಟ್ ಮಾಡಿದ್ದ ಅಲ್ಲು ಅರ್ಜುನ್: ಕಾರಣ ಇದೆ
ದಕ್ಷಿಣ ಭಾರತೀಯ ಚಿತ್ರರಂಗದ ಸೆನ್ಸೇಷನ್ ಸ್ಟಾರ್ ವಿಜಯ್ ದೇವರಕೊಂಡ ಅಭಿನಯದ ಗೀತಾ ಗೋವಿಂದಂ ಸಿನಿಮಾ ರೀಲಿಸ್ ಆಗಿ ಎರಡು ವರ್ಷಗಳಾಗಿದೆ. ಅರ್ಜುನ್ ರೆಡ್ಡಿ ಸಿನಿಮಾ ನಂತರ ವಿಜಯ್ ಗೆ ದೊಡ್ಡ ಮಟ್ಟದಲ್ಲಿ ಸಕ್ಸಸ್ ತಂದು ಕೊಟ್ಟ ಸಿನಿಮಾವಿದು.
Recommended Video
ಕೇವಲ ವಿಜಯ್ ದೇವರಕೊಂಡ ಮಾತ್ರವಲ್ಲ, ನಟಿ ರಶ್ಮಿಕಾ ಮಂದಣ್ಣಗೂ ಖ್ಯಾತಿ ತಂದುಕೊಂಡ ಸಿನಿಮಾ, ಜೊತೆಗೆ ಈ ಚಿತ್ರದ ಸಕ್ಸಸ್ ರಶ್ಮಿಕಾಗೆ ತೆಲುಗು ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಲು ಸಹಕಾರಿಯಾಯಿತು. ಈ ಸಿನಿಮಾ ಮೂಲಕ ವಿಜಯ್ ಮತ್ತು ರಶ್ಮಿಕಾ ಜೋಡಿ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಈ ಸೂಪರ್ ಹಿಟ್ ಸಿನಿಮಾಗೆ ಮೊದಲು ಆಯ್ಕೆಯಾಗಿದ್ದು, ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್. ಮುಂದೆ ಓದಿ...

'ಗೀತಾ ಗೋವಿಂದಂ' ಸಿನಿಮಾ ಮಾಡಬೇಕಿತ್ತು ಸ್ಟೈಲಿಶ್ ಸ್ಟಾರ್
ರೊಮ್ಯಾಂಟಿಕ್ ಕಥಾಹಂದರ ಹೊಂದಿದ್ದ ಗೀತಾ ಗೋವಿಂದಂ ಚಿತ್ರದ ಕಥೆ ಜೊತೆಗೆ ಹಾಡುಗಳು ಸಹ ಅಭಿಮಾನಿಗಳ ಮನ ಗೆದ್ದಿತ್ತು. ತೆಲುಗಿನಲ್ಲಿ ಅದ್ಭುತ ಯಶಸ್ಸು ಕಂಡ ಈ ಸಿನಿಮಾಗೆ ಮೊದಲು ಆಯ್ಕೆ ಆಗಿದ್ದು ವಿಜಯ್ ದೇವರಕೊಂಡ ಅಲ್ಲವಂತೆ. ವಿಜಯ್ ಗೂ ಮೊದಲು ನಿರ್ದೇಶಕ ಪರಶುರಾಮ್ ಈ ಚಿತ್ರಕ್ಕೆ ಮೊದಲು ಆಯ್ಕೆ ಮಾಡಿದ್ದು, ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ಅವರನ್ನು.

ಸಿನಿಮಾ ರೆಜೆಕ್ಟ್ ಮಾಡಿದ ಅಲ್ಲು
ತೆಲುಗಿನಲ್ಲಿ ಸೂಪರ್ ಹಿಟ್ ಆದ ಗೀತಾ ಗೋವಿಂದಂ ಸಿನಿಮಾ ಕಥೆಯನ್ನು ನಿರ್ದೇಶಕ ಪರಶುರಾಮ್ ಮೊದಲು ತೆಗೆದುಕೊಂಡು ಹೋಗಿದ್ದು ನಟ ಅಲ್ಲು ಅರ್ಜುನ್ ಬಳಿ. ಆದರೆ ಅಲ್ಲು ಅರ್ಜುನ್ ಈ ಸಿನಿಮಾವನ್ನು ರಿಜೆಕ್ಟ್ ಮಾಡುತ್ತಾರೆ. ನಿರ್ದೇಶಕ ಪರಶುರಾಮ್ ಮೊದಲು ಕಥೆಯನ್ನು ಸಿದ್ಧಪಡಿಸಿಕೊಂಡು ಅಲ್ಲು ಅರವಿಂದ್ ಬಳಿ ಹೋಗುತ್ತಾರೆ. ಅಲ್ಲು ಅರವಿಂದ್ ಮೂಲಕ ಅಲ್ಲು ಅರ್ಜುನ್ ಬಳಿ ಹೋದ ಕಥೆ ರಿಜೆಕ್ಟ್ ಆಗಿ ವಾಪಸ್ ಬರುತ್ತೆ.

ರಿಜೆಕ್ಟ್ ಮಾಡಲು ಕಾರಣವೇನು?
ಅಲ್ಲು ಅರ್ಜುನ್ ಗೆ ಸ್ಕ್ರಿಪ್ಟ್ ಇಷ್ಟವಾದರು ಸಿನಿಮಾ ರಿಜೆಕ್ಟ್ ಮಾಡುತ್ತಾರೆ. ಕಾರಣ ರೊಮ್ಯಾಂಟಿಕ್ ಸಿನಿಮಾ ಎನ್ನುವ ಕಾರಣಕ್ಕೆ ಅಲ್ಲು ನಟಿಸಲು ಹಿಂದೇಟು ಹಾಕುತ್ತಾರೆ. ಮಾಸ್ ಸಿನಿಮಾಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಕ್ಸಸ್ ಕಂಡ ಅಲ್ಲು ಅರ್ಜುನ್ ಅವರನ್ನು ರೊಮ್ಯಾಂಟಿಕ್ ಸಿನಿಮಾ ಮಾಡಿದರೆ ಅಭಿಮಾನಿಗಳು ಒಪ್ಪಿಕೊಳ್ಳುವುದಿಲ್ಲ ಎನ್ನುವ ಕಾರಣಕ್ಕೆ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆ.

ಪುಷ್ಪಾ ಸಿನಿಮಾದಲ್ಲಿ ಅಲ್ಲು ಅರ್ಜುನ್
ಅಲ್ಲು ಅರ್ಜುನ್ ಸದ್ಯ ಪುಷ್ಪಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸುಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಲ್ಲು ಅರ್ಜುನ್ ಜೊತೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ವಿಭಿನ್ನ ಪಾತ್ರದಲ್ಲಿ ಅಲ್ಲು ಅರ್ಜುನ್ ನಟಿಸುತ್ತಿದ್ದು, ಫಸ್ಟ್ ಲುಕ್ ವೈರಲ್ ಆಗಿದೆ.


Click it and Unblock the Notifications











