ಗದ್ದರ್ ಅವಾರ್ಡ್ ಮುಡಿಗೇಡಿಸಿಕೊಂಡ 'ಪುಷ್ಪ'ರಾಜ್; ಅಟ್ಲಿ- ಅಲ್ಲು ಪ್ರಾಜೆಕ್ಟ್ ಮೇಲೆ ಎಲ್ಲರ ಕಣ್ಣು!

ತೆಲಂಗಾಣ ಸರ್ಕಾರ 2024ರಲ್ಲಿ ಬಿಡುಗಡೆಯಾದ ತೆಲುಗು ಚಿತ್ರಗಳಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಿಸಿದೆ. 'ಪುಷ್ಪ'-2 ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಆರು ತಿಂಗಳ 'ಪುಷ್ಪ' ಸಿನಿಮಾ ರಿಲೀಸ್ ವೇಳೆ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅಲ್ಲು ಅರ್ಜುನ್ ವಿರುದ್ಧ ತಿರುಗಿ ಬಿದ್ದಿದ್ದರು.

ಭಾರೀ ವಿವಾದಕ್ಕೆ ಗುರಿಯಾಗಿದ್ದ ಅಲ್ಲುಅರ್ಜುನ್ ಒಂದು ದಿನ ಜೈಲಿನಲ್ಲಿ ಕೂಡ ಕಾಲ ಕಳೆಯುವಂತಾಗಿತ್ತು. ಇದೇ ಅದೇ ಚಿತ್ರದ ನಟನೆಗಾಗಿ ಐಕಾನ್ ಸ್ಟಾರ್ ರಾಜ್ಯ ಪ್ರಶಸ್ತಿ ಸ್ವೀಕರಿಸುವಂತಾಗಿದೆ. ಇದು ಸಹಜವಾಗಿಯೇ ಅಲ್ಲು ಫ್ಯಾನ್ಸ್ ಸಂತಸಕ್ಕೆ ಕಾರಣವಾಗಿದೆ. ಅವಮಾನ ಮಾಡಿದವರಿಂದಲೇ ಸನ್ಮಾನ ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ 'ಪುಷ್ಪ' ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಕೂಡ ಅಲ್ಲು ಅರ್ಜುನ್‌ಗೆ ಲಭಿಸಿತ್ತು.

Allu Arjun Wins Gaddar Award for Pushpa-2 raises expectation for Pan-World Film with Atlee

'ಪುಷ್ಪ' ಸರಣಿ ಬಳಿಕ ಅಲ್ಲು ಅರ್ಜುನ್ ಹೊಸ ಸಿನಿಮಾ ಘೋಷಿಸಿದ್ದಾರೆ. ಸ್ಟೈಲಿಶ್ ಸ್ಟಾರ್ 22ನೇ ಚಿತ್ರವನ್ನು ಅಟ್ಲಿ ನಿರ್ದೇಶನ ಮಾಡಲಿದ್ದಾರೆ. ಸನ್ ಪಿಕ್ಚರ್ಸ್ ಸಂಸ್ಥೆ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ಚಿತ್ರಕ್ಕಾಗಿ ಕಲಾವಿದರ ಆಯ್ಕೆ ನಡೀತಿದೆ. ಚಿತ್ರದಲ್ಲಿ ಹಿಂದೆಂದೂ ಕಾಣಿಸಿಕೊಂಡಿರದಂತಹ ಪಾತ್ರದಲ್ಲಿ ವಿಭಿನ್ನ ಲುಕ್‌ನಲ್ಲಿ ಸ್ಟೈಲಿಶ್ ಸ್ಟಾರ್ ಮಿಂಚಲಿದ್ದಾರೆ. ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

ಈ ಹಿಂದೆ ಆಂಧ್ರ ಸರ್ಕಾರ ನಂದಿ ಪ್ರಶಸ್ತಿ ಹೆಸರಿನಲ್ಲಿ ರಾಜ್ಯಚಲನಚಿತ್ರ ಪ್ರಶಸ್ತಿ ವಿತರಿಸುತ್ತಿತ್ತು. ಆದರೆ ಆಂಧ್ರ ರಾಜ್ಯ ಎರಡು ಭಾಗಗಳಾಗಿ ವಿಂಗಡನೆಯಾಗಿದೆ. 14 ವರ್ಷಗಳ ಬಳಿಕ ತೆಲಂಗಾಣ ಸರ್ಕಾರ 'ಗದ್ದರ್ ಅವಾರ್ಡ್' ಹೆಸರಿನಲ್ಲಿ ಮತ್ತೆ ಚಲನಚಿತ್ರ ರಾಜ್ಯಪ್ರಶಸ್ತಿ ನೀಡಲು ಮುಂದಾಗಿದೆ. ಹಿರಿಯ ನಟಿ ಜಯಸುಧಾ ನೇತೃತ್ವದಲ್ಲಿ 15 ಜನ ಜ್ಯೂರಿ ಸದಸ್ಯರು ವಿವಿಧ ವಿಭಾಗಗಳಲ್ಲಿ ವಿಜೇತರನ್ನು ಆಯ್ಕೆ ಮಾಡಿದ್ದಾರೆ.

ಪ್ರಭಾಸ್ ನಟನೆಯ 'ಕಲ್ಕಿ 2898AD' ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಕ್ಕಿದೆ. ಅದೇ ಚಿತ್ರದ ನಿರ್ದೇಶನಕ್ಕಾಗಿ ನಾಗ್ ಅಶ್ವಿನ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ಲಕ್ಕಿ ಭಾಸ್ಕರ್ ಚಿತ್ರಕ್ಕಾಗಿ ದುಲ್ಕರ್ ಸಲ್ಮಾನ್ ತೀರ್ಪುಗಾರರ ವಿಶೇಷ ಪ್ರಶಸ್ತಿ, 'ಸರಿಪೋದ ಸನಿವಾರಂ' ಚಿತ್ರದ ನಟನೆಗಾಗಿ ಎಸ್. ಜೆ ಸೂರ್ಯ ಅತ್ಯುತ್ತ, ಪೋಷಕ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೀಗೆ ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

Allu Arjun Wins Gaddar Award for Pushpa-2 raises expectation for Pan-World Film with Atlee

ಪ್ರಶಸ್ತಿ ಸಿಕ್ಕಿರುವ ಬಗ್ಗೆ ನಟ ಅಲ್ಲು ಅರ್ಜುನ್ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. "ಪುಷ್ಪ-2 ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಗದ್ದರ್ ಅವಾರ್ಡ್ ಪಡೆಯುತ್ತಿರುವುದು ಹೆಮ್ಮೆ ಎನಿಸುತ್ತಿದೆ. ಇದಕ್ಕಾಗಿ ತೆಲಂಗಾಣ ಸರ್ಕಾರಕ್ಕೆ ಧನ್ಯವಾದ. ಈ ಎಲ್ಲಾ ಕ್ರೆಡಿಟ್ 'ಪುಷ್ಪ' ಚಿತ್ರದ ನಿರ್ದೇಶಕ ಸುಕುಮಾರ್, ನಿರ್ಮಾಪಕರು ಹಾಗೂ ತಂಡಕ್ಕೆ ಸಲ್ಲುಬೇಕು" ಎಂದಿದ್ದಾರೆ.

'ಪುಷ್ಪ'-2 ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿ 1600 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು. ಇದು ಅಲ್ಲು ಅರ್ಜುನ್ ನೇಮು ಫೇಮು ಹೆಚ್ಚುವಂತೆ ಮಾಡಿದೆ. ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಸದ್ದು ಮಾಡಿದ್ದಾರೆ. ಹಾಗಾಗಿ ಅಟ್ಲಿ ಜೊತೆಗಿನ ಮುಂದಿನ ಸಿನಿಮಾ ಮತ್ತಷ್ಟು ಕುತೂಹಲ ಮೂಡಿಸಿದೆ. ಈಗಾಗಲೇ ಚಿತ್ರದ ಪ್ರೀಪ್ರೊಡಕ್ಷನ್ ವರ್ಕ್ ಶುರುವಾಗಿದ್ದು ಶೀಘ್ರದಲ್ಲೇ ಮುಹೂರ್ತ ನಡೆಯಲಿದೆ.

More from Filmibeat

English summary
After winning the Gaddar Award for Best Actor for 'Pushpa-2', Expectations soar for this atlee project
Read more about: allu arjun pushpa award
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X