'KGF-2', 'RRR' ಹಿಂದಿಕ್ಕಿದ 'ಪುಷ್ಪ'-2? ಆದ್ರೂ ಇದು ರಿಸ್ಕ್ ಬಿಡಿ!

ಅಲ್ಲು ಅರ್ಜುನ್ ನಟನೆಯ 'ಪುಷ್ಪ-2' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಆಗಸ್ಟ್ 15ಕ್ಕೆ ಮತ್ತೆ ತೆರೆಮೇಲೆ ಪುಷ್ಪರಾಜ್ ಆರ್ಭಟ ಶುರುವಾಗಲಿದೆ. ಇತ್ತೀಚೆಗೆ ಸ್ಟೈಲಿಶ್ ಸ್ಟಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಟೀಸರ್ ರಿಲೀಸ್ ಆಗಿ ಸದ್ದು ಮಾಡಿತ್ತು. ಸದ್ಯ ಚಿತ್ರದ ಹಿಂದಿ ರೈಟ್ಸ್ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ.

ಸುಕುಮಾರ್ ನಿರ್ದೇಶನದ 'ಪುಷ್ಪ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಅಚ್ಚರಿ ಎನ್ನುವಂತೆ ಹಿಂದಿ ಬೆಲ್ಟ್‌ನಲ್ಲಿ ಕೂಡ ಸಿನಿಮಾ ಸಖತ್ ಸದ್ದು ಮಾಡಿತ್ತು. ಇದೀಗ ಸೀಕ್ವೆಲ್ ಬಗ್ಗೆ ಉತ್ತರ ಭಾರತದಲ್ಲಿ ಭಾರೀ ಕ್ರೇಜ್ ಇದೆ. ಅದಕ್ಕೆ ತಕ್ಕಂತೆ ಅಲ್ಲಿ ಸಿನಿಮಾ ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ. ಪ್ರೀಕ್ವೆಲ್ ರೈಟ್ಸ್ ಕೊಂಡುಕೊಂಡಿದ್ದ ಎಎ ಫಿಲ್ಮ್ಸ್ ಸೀಕ್ವೆಲ್ ರೈಟ್ಸ್ ಕೂಡ ಸ್ವಂತ ಮಾಡಿಕೊಂಡಿದೆ.

Allu arjun s Pushpa 2 in Hindi distribution rights sold for whopping price

'ಬಾಹುಬಲಿ' ಹಾಗೂ 'ಕೆಜಿಎಫ್' ರೀತಿಯಲ್ಲೇ 'ಪುಷ್ಪ' ಸೀಕ್ವೆಲ್ ಲೆಕ್ಕಾಚಾರವೂ ನಡೀತಿದೆ. 'ಬಾಹುಬಲಿ' ಮತ್ತು 'ಕೆಜಿಎಫ್'-2 ಚಿತ್ರಗಳಿಗೆ ಹಿಂದಿನ ಸಿನಿಮಾ ಸಕ್ಸಸ್ ಪ್ಲಸ್ ಆಗಿತ್ತು. ಪ್ರೀಕ್ವೆಲ್ ಹಿಟ್ ಆದ ಬಳಿಕ ಹಲವು ಪಟ್ಟು ದೊಡ್ಡದಾಗಿ ಸೀಕ್ವೆಲ್ ಮೂಡಿ ಬಂದಿತ್ತು. ಅದಕ್ಕೆ ತಕ್ಕಂತೆ ಹೈಪ್ ಕ್ರಿಯೇಟ್ ಆಗಿತ್ತು. 'ಪುಷ್ಪ'-2 ವಿಚಾರದಲ್ಲೂ ಅದೇ ಲೆಕ್ಕಾಚಾರ, ವ್ಯವಹಾರ ಶುರುವಾಗಿದೆ.

'ಪುಷ್ಪ-2' ಚಿತ್ರದ 5 ಭಾಷೆಗಳ ಓಟಿಟಿ ರೈಟ್ಸ್ ನೆಟ್‌ಫ್ಲಿಕ್ಸ್ ಕೊಂಡುಕೊಂಡಿದೆ ಎನ್ನಲಾಗ್ತಿದೆ. 275 ಕೋಟಿ ರೂ.ಗೆ ಡೀಲ್ ನಡೆದಿರುವುದಾಗಿ ಬಾಲಿವುಡ್ ಅಂಗಳಲ್ಲಿ ಗುಲ್ಲಾಗಿದೆ. ಬರೀ ಓಟಿಟಿ ರೈಟ್ಸ್‌ 275 ಕೋಟಿನಾ ಎಂದು ಅಭಿಮಾನಿಗಳು ಶಾಕ್ ಆಗುತ್ತಿದ್ದಾರೆ. ಇನ್ನು ಈಗಾಗಲೇ ಸಿನಿಮಾ ಥ್ರಿಯೇಟ್ರಿಕಲ್ ರೈಟ್ಸ್ ಡೀಲ್ ಕೂಡ ಆರಂಭವಾಗಿದೆ.

Allu arjun s Pushpa 2 in Hindi distribution rights sold for whopping price

ಬರೋಬ್ಬರಿ 200 ಕೋಟಿ ರೂ.ಗೆ 'ಪುಷ್ಪ-2' ಹಿಂದಿ ರೈಟ್ಸ್ ಸೇಲಾಗಿದೆ ಎನ್ನುವ ಚರ್ಚೆ ಶುರುವಾಗಿದೆ. ಎಎ ಫಿಲ್ಮ್ಸ್ ಸಂಸ್ಥೆ ವ್ಯವಹಾರ ಕುದುರಿಸಿಕೊಂಡಿದ್ದು ಭಾರೀ ಲಾಭದ ನಿರೀಕ್ಷೆಯಲ್ಲಿರುವುದಾಗಿ ಹೇಳಲಾಗುತ್ತಿದೆ. ಈ ಹಿಂದೆ ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಹಿಂದಿ ವರ್ಷನ್ ರೈಟ್ಸ್ 140 ಕೋಟಿ ರೂ. ಮಾರಾಟವಾಗಿದ್ದೇ ಅಧಿಕ ಎನ್ನಲಾಗಿತ್ತು.

'ಕೆಜಿಎಫ್‌-2' ಚಿತ್ರದ ಹಿಂದಿ ರೈಟ್ಸ್ ಇದೇ ಎಎ ಫಿಲ್ಮ್ಸ್ 100 ಕೋಟಿ ರೂ.ಗೆ 2 ವರ್ಷದ ಹಿಂದೆ ಕೊಂಡುಕೊಂಡಿದ್ದಾಗಿ ವರದಿಯಾಗಿತ್ತು. ಇದೀಗ 'RRR' ಹಾಗೂ 'ಕೆಜಿಎಫ್‌-2' ದಾಖಲೆ ಮುರಿದು 'ಪುಷ್ಪ-2' ಸದ್ದು ಮಾಡ್ತಿದೆ. ಆದರೆ ನಿಜಕ್ಕೂ ಸಿನಿಮಾ ತೆರೆಮೇಲೆ 'ಕೆಜಿಎಫ್‌-2' ಮೀರಿ ದಾಖಲೆ ಬರೆಯುತ್ತಾ? ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ.

ಇತ್ತೀಚೆಗೆ ಬಂದ 'ಪುಷ್ಪ-2' ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. 'ಕೆಜಿಎಫ್‌-2' ಬಳಿಕ ಆ ಮಟ್ಟಕ್ಕೆ ಸೌತ್ ಸಿನಿಮಾಗಳು ಹಿಂದಿ ಬೆಲ್ಟ್‌ನಲ್ಲಿ ಸದ್ದು ಮಾಡುತ್ತಿಲ್ಲ. 'ಕಾಂತಾರ', 'ಕಾರ್ತಿಕೇಯ-2', 'ಹನುಮಾನ್' ರೀತಿಯ ಸಣ್ಣ ಸಿನಿಮಾಗಳು ಮಾತ್ರ ಭರ್ಜರಿ ಲಾಭ ಮಾಡಿವೆ. 'ಪುಷ್ಪ-2' ನಂಬಿ ಇಷ್ಟು ವಿತರಕರು ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಚರ್ಚೆ ನಡೀತಿದೆ.

'ಪುಷ್ಪ'-2 ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಈ ವರ್ಷ ಬಾಲಿವುಡ್‌ ಸ್ಟಾರ್ ನಟರ ಸಿನಿಮಾಗಳು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಪುಷ್ಪರಾಜ್ ಕ್ರೇಜ್ ಕೂಡ ಇರುವುದರಿಂದ ಭರ್ಜರಿ ಕಲೆಕ್ಷನ್ ಆಗಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸೀಕ್ವೆಲ್ ಸಿನಿಮಾ ಕಟ್ಟಿಕೊಡಲಾಗುತ್ತಿದೆ.

ಪ್ರೀಕ್ವೆಲ್‌ಗೆ ಕೆಲಸ ಮಾಡಿದ ಬಹುತೇಕ ಕಲಾವಿದರು, ತಂತ್ರಜ್ಞರು ಸೀಕ್ವೆಲ್‌ನಲ್ಲಿ ಇದ್ದಾರೆ. ಸಿನಿಮಾ ಬಜೆಟ್ ಮಾತ್ರವಲ್ಲ ಎಲ್ಲರ ಸಂಭಾವನೆ ಕೂಡ ಹೆಚ್ಚಾಗಿದೆ. ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಇನ್ನು ಚಿತ್ರದಲ್ಲಿ ಗಂಗಮ್ಮ ಜಾತ್ರೆ ಎಪಿಸೋಡ್ ಬಗ್ಗೆ ಕುತೂಹಲವಿದೆ.

More from Filmibeat

English summary
Pushpa 2 North India theatrical Rights sold for an all time Record;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X