Pushpa- 2: ಪಾರ್ಟಿ ಮಾಡ್ತಿದ್ದಾನೆ 'ಪುಷ್ಪ'ರಾಜ್: ಎಲ್ಲಿ? ಯಾರೆಲ್ಲಾ ಸೇರಿದ್ದಾರೆ?

ಅಲ್ಲು ಅರ್ಜುನ್ ನಟನೆಯ 'ಪುಷ್ಪ'- 2 ಸಿನಿಮಾ ಚಿತ್ರೀಕರಣ ಭರದಿಂದ ಸಾಗ್ತಿದೆ. 2 ವರ್ಷದ ಹಿಂದೆ ಬಂದ ಸರಣಿಯ ಮೊದಲ ಸಿನಿಮಾ ಸೂಪರ್ ಹಿಟ್ ಆಗಿತ್ತು. ಹಾಗಾಗಿ ಸಹಜವಾಗಿಯೇ ಸೀಕ್ವೆಲ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸುಕುಮಾರ್ ಮೊದಲ ಭಾಗಕ್ಕಿಂತ ಬಹಳ ಅದ್ಧೂರಿಯಾಗಿ 2ನೇ ಭಾಗ ಕಟ್ಟಿಕೊಡುವ ಪ್ರಯತ್ನದಲ್ಲಿದ್ದಾರೆ. ಸದ್ಯ ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೀತಿದೆ.

'ಪುಷ್ಪ' ಚಿತ್ರದಲ್ಲಿ ಬಡ ಕುಟುಂಬದ 'ಪುಷ್ಪ'ರಾಜ್ ರಕ್ತಚಂದನ ಸ್ಮಗ್ಲರ್ ಆಗಿ ಬೆಳೆಯುವ ಕಥೆಯನ್ನು ಹೇಳಲಾಗಿತ್ತು. ತನ್ನ ಚಾಕಚಕ್ಯತೆಯಿಂದ ಆತ ಹೇಗೆ ದೊಡ್ಡ ರಕ್ತಚಂದನ ಸ್ಮಗ್ಲಿಂಗ್ ಸಿಂಡಿಕೇಟ್‌ ಮಾಸ್ಟರ್‌ ಮೈಂಡ್ ಆಗ್ತಾನೆ ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಡಲಾಗಿತ್ತು. ಇದೀಗ ಮುಂದಿನ ಚಿತ್ರದಲ್ಲಿ ಮತ್ತಷ್ಟು ದೊಡ್ಡ ಸ್ಲಗ್ಲರ್ ಆಗಿ ಆತ ಹೇಗೆ ದರ್ಬಾರ್ ಮಾಡ್ತಾನೆ? ಆತನ ಆರ್ಭಟಕ್ಕೆ ಪೊಲೀಸ್ ಆಫೀಸರ್ ಭನ್ವರ್ ಸಿಂಗ್ ಶೇಖಾವತ್ ಹೇಗೆ ಅಡ್ಡಗಾಲು ಹಾಕುತ್ತಾನೆ? ಮುಂದೆ ಏನೆಲ್ಲಾ ಆಗುತ್ತದೆ ಅನ್ನೋದನ್ನು ನೋಡಲು ಸಿನಿರಸಿಕರು ಕಾಯ್ತಿದ್ದಾರೆ.

Allu -Arjun- Pushpa -Shotting

ಅಲ್ಲು ಅರ್ಜುನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ರಿಲೀಸ್ ಆಗಿದ್ದ ಪುಷ್ಪ ಎಲ್ಲಿ? ಫಸ್ಟ್ ಗ್ಲಿಂಪ್ಸ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಸೂಪರ್ ಹಿಟ್ ಆಗಿತ್ತು. ಇದರಿಂದ ಪಾರ್ಟ್-2 ಮತ್ತಷ್ಟು ಮಜಾ ಕೊಡುವ ಸುಳಿವು ಸಿಗುತ್ತಿದೆ. ಇತ್ತೀಚೆಗೆ ನಟಿ ರಶ್ಮಿಕಾ ಕೂಡ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿರುವ ವಿಚಾರ ರಿವೀಲ್ ಆಗಿತ್ತು. ಇದೀಗ ಹೈದರಾಬಾದ್ ಶೂಟಿಂಗ್ ಬಗ್ಗೆ ಕ್ರೇಜಿ ಅಪ್‌ಡೇಟ್ ಸಿಕ್ತಿದೆ.

ಪಾರ್ಟಿ ಮಾಡ್ತಿದ್ದಾನೆ 'ಪುಷ್ಪ'

ಮೊದಲ ಭಾಗದಲ್ಲಿ ಭನ್ವರ್ ಸಿಂಗ್ ಶೇಖಾವತ್ ಪಾತ್ರದಲ್ಲಿ ಫಹಾದ್ ಫಾಸಿಲ್ 'ಪಾರ್ಟಿ ಇಲ್ವಾ ಪುಷ್ಪ'? ಎನ್ನುವ ಡೈಲಾಗ್ ವೈರಲ್ ಆಗಿತ್ತು. ಇದೀಗ ಹೈದರಾಬಾದ್ ರೆಸಾರ್ಟ್‌ವೊಂದರಲ್ಲಿ ಪಾರ್ಟಿಗೆ ಸಂಬಂಧಿಸಿದ ಸನ್ನಿವೇಶಗಳನ್ನು ಚಿತ್ರೀಕರಿಸಲಾಗುತ್ತಿದೆ. ಇದೇ ವಿಚಾರ ಟಾಲಿವುಡ್‌ನಲ್ಲಿ ಗುಲ್ಲಾಗಿದೆ. ಶೂಟಿಂಗ್‌ನಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಕೂಡ ಭಾಗಿ ಆಗಿದ್ದಾರೆ ಎನ್ನಲಾಗ್ತಿದೆ. ಪಾರ್ಟಿ ಸೆಟ್‌ ಹಾಕಿ ಬಹಳ ಅದ್ಧೂರಿಯಾಗಿ ಸುಕುಮಾರ್ ದೃಶ್ಯಗಳನ್ನು ಸೆರೆ ಹಿಡಿಯುತ್ತಾರೆ ಎನ್ನಲಾಗ್ತಿದೆ.

Allu -Arjun- Pushpa -Shotting

ಪಾರ್ಟಿಯಲ್ಲಿ ಸ್ಪೆಷಲ್ ಸಾಂಗ್?

ಹಿಂದಿನ ಸಿನಿಮಾದಲ್ಲಿ ಮಂಗಳಂ ಸೀನು ಪಾರ್ಟಿ ಕೊಡುವ ಸನ್ನಿವೇಶ ಇತ್ತು. ಅದರಲ್ಲಿ ಸಮಂತಾ 'ಊ ಅಂಟಾವಾ ಮಾವ' ಎಂದು ಕುಣಿದು ರಂಗೇರಿಸಿದ್ದರು. ದೇವಿಶ್ರೀ ಪ್ರಸಾದ್ ಟ್ಯೂನ್‌ಗೆ ಬೋಲ್ಡ್ ಲುಕ್‌ನಲ್ಲಿ ಜಬರ್ದಸ್ತ್‌ ಸ್ಟೆಪ್ಸ್‌ ಹಾಕಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಅಲ್ಲು ಅರ್ಜುನ್ ಕೂಡ ಸ್ಯಾಮ್ ಜೊತೆ ಹೆಜ್ಜೆ ಹಾಕಿದ್ದರು. ಇದೀಗ ಸೀಕ್ವೆಲ್‌ನಲ್ಲಿ ಪಾರ್ಟಿ ಸೀನ್, ಸ್ಪೆಷಲ್ ಸಾಂಗ್ ಇದೆ ಎನ್ನಲಾಗ್ತಿದೆ. ಹಾಗಾದ್ರೆ ಈ ಬಾರಿ ಯಾರು ಡ್ಯಾನ್ಸ್ ನಂಬರ್‌ಗೆ ಹೆಜ್ಜೆ ಹಾಕುತ್ತಾರೆ ಎನ್ನುವ ಕುತೂಹಲ ಮೂಡಿದೆ. ಈ ಬಗ್ಗೆ ಚಿತ್ರತಂಡ ರಹಸ್ಯ ಕಾಪಾಡಿಕೊಂಡಿದೆ.

ಅದ್ಧೂರಿಯಾಗಿ ಸಿನಿಮಾ ನಿರ್ಮಾಣ

'ಪುಷ್ಪ' ಸಿನಿಮಾ 350 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಆ ಮಟ್ಟಿಗಿನ ಸಕ್ಸಸ್ ಚಿತ್ರತಂಡ ಕೂಡ ನಿರೀಕ್ಷೆ ಮಾಡಿರಲಿಲ್ಲ. ಇದೀಗ ಸೀಕ್ವೆಲ್‌ ಬಗ್ಗೆ ನಿರೀಕ್ಷೆ ಹೆಚ್ಚಾದ ಹಿನ್ನೆಲೆಯಲ್ಲಿ ಅದನ್ನು ಮೀರಿಸುವ ರೀತಿಯಲ್ಲಿ ಸಿನಿಮಾ ಕಟ್ಟಿಕೊಡುವ ಕೆಲಸ ನಡೀತಿದೆ. ಕಲಾವಿದರು, ತಂತ್ರಜ್ಞರ ಸಂಭಾವನೆ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಬಹಳ ಅದ್ಧೂರಿಯಾಗಿ ಸಿನಿಮಾ ತೆರೆಗೆ ಬರುತ್ತಿದೆ. ಪ್ರೀಕ್ವೆಲ್‌ನಲ್ಲಿ ಮಿಂಚಿದ್ದ ಡಾಲಿ ಧನಂಜಯ್, ಅನಸೂಯ ಭಾರಧ್ವಜ್, ಸುನಿಲ್ ಸೀಕ್ವೆಲ್‌ನಲ್ಲೂ ಕಾಣಿಸಿಕೊಳ್ಳಲಿದ್ದಾರೆ.

1000 ಕೋಟಿ ಕಲೆಕ್ಷನ್ ಟಾರ್ಗೆಟ್

'KGF' ಮೊದಲ ಭಾಗ 250 ಕೋಟಿ ರೂ. ಗಳಿಸಿತ್ತು. ಆದರೆ ಚಾಪ್ಟರ್- 2 ಬರೋಬ್ಬರಿ 1200 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿತ್ತು. ಹಾಗಾಗಿ 'ಪುಷ್ಪ' ತಂಡ ಕೂಡ 1000 ಕೋಟಿ ರೂ. ಬಾಕ್ಸಾಫೀಸ್ ಟಾರ್ಗೆಟ್ ಮಾಡಿ ಸಿನಿಮಾ ತೆರೆಗೆ ತರ್ತಿದೆ. ಉತ್ತರ ಭಾರತದಲ್ಲೂ ಸಿನಿಮಾ ಕ್ರೇಜ್ ಜೋರಾಗಿದ್ದು ಅದನ್ನು ಎನ್‌ಕ್ಯಾಶ್‌ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಿನಿಮಾ ಕೆಲಸಗಳು ನಡೀತಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.

More from Filmibeat

English summary
Allu Arjun's Pushpa-2 the Rule shooting going on full swing in hyderabad. team shoot party episode in city Resort. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X