ಆರ್‌ಸಿಬಿ ಕಪ್ ಗೆದ್ದಿದ್ದು ನೋಡಿ ಹೆಂಗೆಂಗೋ ಆಡಿದ ಅಲ್ಲು ಅರ್ಜುನ್ ಮಗ!

ಅಂತೂ ಇಂತೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಲ್ ಕಪ್ ಎತ್ತಿ ಹಿಡಿದಿದೆ. ವಿರಾಟ್ ಕೊಹ್ಲಿ ಅಭಿಮಾನಿಗಳ ಸಂಭ್ರಮವಂತೂ ಮುಗಿಲು ಮುಟ್ಟಿದೆ. ದೇಶದ ಹೊರರಾಜ್ಯಗಳಲ್ಲಿ ಇರುವ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿದೆ. ಅಹಮದಾಬಾದ್‌ನಲ್ಲಿ ಪಂಜಾಬ್ ಕಿಂಗ್ಸ್ ಫೈನಲ್ ಪಂದ್ಯದಲ್ಲಿ ಪಟಿದಾರ್ ನೇತೃತ್ವದ ಆರ್‌ಸಿಬಿ ತಂಡ ಗೆದ್ದು ಸಂಭ್ರಮಿಸಿದೆ.

ಸಿನಿಮಾ ತಾರೆಯರು ಕೂಡ ಆರ್‌ಸಿಬಿ ಅಭಿಮಾನಿಗಳಾಬಿಟ್ಟಿದ್ದಾರೆ. ಬರೀ ಕನ್ನಡ ಸಿನಿಮಾ ತಾರೆಯರು ಮಾತ್ರವಲ್ಲ ಪರಭಾಷಾ ಕಲಾವಿದರು ಕೂಡ ಆರ್‌ಸಿಬಿ ಗೆಲುವನ್ನು ಸ್ವಾಗತಿಸಿದ್ದಾರೆ. ಮನೆಗಳಲ್ಲಿ, ಪಬ್‌ಗಳಲ್ಲಿ, ಚಿತ್ರಮಂದಿರಗಳಲ್ಲಿ ಸಾಕಷ್ಟು ಜನ ನಿನ್ನೆ ರಾತ್ರಿ ನಡೆದ ಫೈನಲ್ ಪಂದ್ಯವನ್ನು ವೀಕ್ಷಿಸಿದ್ದಾರೆ. ಕೆಲವೆಡೆ ದೊಡ್ಡ ದೊಡ್ಡ ಪರದೆಗಳನ್ನು ಹಾಕಿ ಅಭಿಮಾನಿಗಳು ಪಂದ್ಯ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ಆರ್‌ಸಿಬಿ ಪಂದ್ಯ ಗೆಲ್ಲುತ್ತಿದ್ದಂತೆ ತೆಲುಗು ನಟ ಅಲ್ಲು ಅರ್ಜುನ್ ಪುತ್ರ ಅಲ್ಲು ಅಯಾನ್ ಖುಷಿಯಾಗಿದ್ದಾನೆ.

Allu Arjun s Son Allu Ayaan s Emotional Reaction to RCB s Historic IPL Win Melts Hearts

ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿಯಾಗಿರುವ ಅಯಾನ್ ಸಂಭ್ರಮಾಚರಣೆಯನ್ನು ಅಲ್ಲು ಅರ್ಜುನ್ ಸೆರೆಹಿಡಿದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 11 ವರ್ಷ ವಯಸ್ಸಿನ ಅಯಾನ್ ಆರ್‌ಸಿಬಿ ಪಂದ್ಯ ಗೆಲ್ಲುತ್ತಿದ್ದಂತೆ ಮಾತನಾಡಲಾಗದೇ ಭಾವುಕನಾಗಿದ್ದಾನೆ. "ಐ ಲವ್ ಕೊಹ್ಲಿ.. ನಾನು ಕೊಹ್ಲಿಯನ್ನು ಬಹಳ ಇಷ್ಟಪಡುತ್ತೇನೆ, ಆತನನ್ನು ನೋಡಿ ನಾನು ಕ್ರಿಕೆಟ್ ಆಡಲು ಆರಂಭಿಸಿದೆ ಎಂದಿದ್ದಾನೆ. ಬಳಿಕ ಟಿವಿ ಮುಂದೆ ಅಯಾನ್ ಮಲಗಿದ್ದಾನೆ. ಬಳಿಕ ನೀರಿನ ಬಾಟಲ್‌ ತೆಗೆದುಕೊಂಡು ತಣ್ಣೀರು ಮೈ ಮೇಲೆ ಸುರಿದುಕೊಂಡಿದ್ದಾನೆ. ಅಲ್ಲು ಅರ್ಜುನ್ ಏನ್‌ ಆಯ್ತು ಎಂದು ನಗುತ್ತಾ ಕೇಳುತ್ತಿದ್ದಂತೆ "ಫೈನಲಿ 18 ವರ್ಷಗಳ ಬಳಿಕ ಕಪ್ ಗೆದ್ದುಬಿಟ್ವಿ" ಎಂದು ಅಯಾನ್ ಸಂಭ್ರಮಿಸಿರುವುದನ್ನು ನೋಡಬಹುದು.

"ಅಯಾನ್ ತುಂಬಾ ಭಾವುಕನಾಗುತ್ತಿದ್ದಾನೆ. ವಿರಾಟ್ ಕೊಹ್ಲಿ ಅಭಿಮಾನಿಯ ಸಂತಸದ ಕ್ಷಣ. ಬಹಳ ಕ್ಯೂಟ್ ಆಗಿದೆ ಕಂದ ಎಂದು ಅಲ್ಲು ಅರ್ಜುನ್ ಕ್ಯಾಪ್ಷನ್ ಕೊಟ್ಟು ವೀಡಿಯೋ ಹಂಚಿಕೊಂಡಿದ್ದಾರೆ. ಸದ್ಯ ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ. ಆರ್‌ಸಿಬಿ ತಂಡದ ಮೇಲಿನ ಅಭಿಮಾನ ಎಂಥದ್ದು ನೋಡಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಅಲ್ಲು ಅರ್ಜುನ್ ಕೂಡ ಆರ್‌ಸಿಬಿ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. "ಕಾಯುವಿಕೆ ಮುಗಿದಿದೆ. ಕೊನೆಗೂ "ಈ ಸಲ ಕಪ್ ನಮ್ದೆ". ನಾವು ಇದಕ್ಕಾಗಿ 18 ವರ್ಷಗಳಿಂದ ಕಾಯುತ್ತಿದ್ದೆವು. ಆರ್‌ಸಿಬಿ ತಂಡಕ್ಕೆ ಅಭಿನಂದನೆ" ಎಂದು ಬರೆದುಕೊಂಡಿದ್ದಾರೆ.

ಸಿನಿಮಾ ತಾರೆಯರು ತಮ್ಮದೇ ಶೈಲಿಯಲ್ಲಿ ಆರ್‌ಸಿಬಿ ಗೆಲುವನ್ನು ಸಂಭ್ರಮಿಸಿದ್ದಾರೆ. ಹೈದರಾಬಾದ್‌ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪ್ರಶಾಂತ್ ನೀಲ್ ಹಾಗೂ ಜ್ಯೂ. ಎನ್‌ಟಿಆರ್ ಜೋಡಿಯ ಸಿನಿಮಾ ಚಿತ್ರೀಕರಣ ನಡೀತಿದೆ. ಅದೇ ಸೆಟ್‌ನಲ್ಲೊ ದೊಡ್ಡ ಸ್ಕ್ರೀನ್ ಹಾಕಿ ಚಿತ್ರತಂಡ ಪಂದ್ಯ ವೀಕ್ಷಿಸಿದೆ. ಆರ್‌ಸಿಬಿ ಪಂದ್ಯ ಗಲ್ಲುತ್ತಿದ್ದಂತೆ ನಿರ್ದೇಶಕ ಪ್ರಶಾಂತ್ ನೀಲ್ ಚಿಕ್ಕ ಮಗುವಿನಂತೆ ಕುಣಿದು ಕುಪ್ಪಳಿಸಿದ್ದಾರೆ. ಆ ವೀಡಿಯೋ ಸಹ ವೈರಲ್ ಆಗುತ್ತಿದೆ.

ನಿರ್ದೇಶಕ ಸಿಂಪಲ್ ಸುನಿ, ನಟ ಸಾಯಿ ಕುಮಾರ್ ಸೇರಿದಂತೆ ಕೆಲ ತಾರೆಯರು ಅಹಮದಾಬ್‌ಗೆ ತೆರಳಿ ಮೋದಿ ಮೈದಾನದಲ್ಲಿ ಪಂದ್ಯ ವೀಕ್ಷಿಸಿ ಸಂಭ್ರಮಿಸಿದ್ದಾರೆ. ನಟ ಕಿಚ್ಚ ಸುದೀಪ್, ನಟಿ ರಮ್ಯಾ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವರು ಸೋಶಿಯಲ್ ಮೀಡಿಯಾದಲ್ಲಿ ಆರ್‌ಸಿಬಿ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.

More from Filmibeat

English summary
Allu Arjun's son, Allu Ayaan, gets emotional after RCB lifts the IPL trophy for the first time in 18 years. The young Kohli fan's adorable celebration goes viral;
Read more about: allu arjun tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X