'ಪುಷ್ಪ'ರಾಜ್ ಅಲ್ಲು ಅರ್ಜುನ್‌ಗೆ ಮಗ ಅಲ್ಲು ಅಯಾನ್‌ನಿಂದ ಸ್ಪೆಷಲ್ ಗಿಫ್ಟ್
ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ಬಾಕ್ಸಾಫೀಸ್‌ನಲ್ಲಿ 350 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಚಿತ್ರದ ಸೀಕ್ವೆಲ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ವಿದೇಶದಲ್ಲಿ ಒಂದು ಶೆಡ್ಯೂಲ್ ಶೂಟಿಂಗ್ ಕೂಡ ಮುಗಿಸಿ ಬಂದಿದೆ ಚಿತ್ರತಂಡ. ಈ ವರ್ಷಾಂತ್ಯಕ್ಕೆ 'ಪುಷ್ಪ'ರಾಜ್‌ನ ಮತ್ತೆ ಅಖಾಡಕ್ಕೆ ಇಳಿಸುವ ಪ್ರಯತ್ನ ನಡೀತಿದೆ.
'ಪುಷ್ಪ' ಚಿತ್ರದಲ್ಲಿ ಅಲ್ಲು ಅರ್ಜುನ್ ರಕ್ತಚಂದನ ಸ್ಮಗ್ಲರ್ 'ಪುಷ್ಪ'ರಾಜ್ ಆಗಿ ನಟಿಸಿದ್ದರು. ಮಾಸ್ ಮಸಾಲಾ ಎಂಟರ್‌ಟೈನರ್ ಚಿತ್ರದಲ್ಲಿ ತಮ್ಮ ವಿಭಿನ್ನ ಮ್ಯಾನರಿಸಂ ಹಾಗೂ ಸ್ಟೈಲ್‌ನಿಂದ ಮೋಡಿ ಮಾಡಿದ್ದರು. ಸುಕುಮಾರ್ ನಿರ್ದೇಶನದ ಸಿನಿಮಾ ಬಾಲಿವುಡ್ ಬಾಕ್ಸಾಫೀಸ್‌ನಲ್ಲೂ ಧೂಳೆಬ್ಬಿಸಿತ್ತು. ಹಿಂದಿ ಬೆಲ್ಟ್‌ನಲ್ಲಿ ಸೂಪರ್ ಹಿಟ್ ಆಗಿ ಸರಣಿಯ ಮುಂದಿನ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಇದೀಗ ಅಲ್ಲು ಅರ್ಜುನ್ ಮಗ ತಮ್ಮ ತಂದೆ ವಿಶೇಷ ಗಿಫ್ಟ್ ನೀಡಿದ್ದಾನೆ. ಅದನ್ನು ಸ್ಟೈಲಿಶ್ ಸ್ಟಾರ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ 'ಪುಷ್ಪ' ಚಿತ್ರದಲ್ಲಿ ಅಲ್ಲು ಅರ್ಜುನ್ ಲಾರಿಯಲ್ಲಿ ರಕ್ತಚಂದನ ಸಾಗಿಸುವ ಸನ್ನಿವೇಶಗಳು ಹೈಲೆಟ್ ಆಗಿತ್ತು. ಅದಕ್ಕಾಗಿ ಬಣ್ಣ ಬಣ್ಣದ ಲಾರಿಯನ್ನು ತೋರಿಸಲಾಗಿತ್ತು. ಇದೀಗ ಅದೇ ರೀತಿಯ ಗೊಂಬೆ ಲಾರಿಯೊಂದನ್ನು ಅಲ್ಲು ಅರ್ಜುನ್‌ಗೆ ಮಗ ಅಲ್ಲು ಅಯಾನ್ ಉಡುಗೊರೆಯಾಗಿ ನೀಡಿದ್ದಾನೆ. ಅದರಲ್ಲಿ 'ಪುಷ್ಪ'ರಾಜ್ ಎಂದು ಬರೆಯಲಾಗಿದೆ. ನನ್ನ ಮಗ ಬಹಳ ಕ್ಯೂಟ್ ಆಗಿರುವ ಗಿಫ್ಟ್ ಕೊಟ್ಟಿದ್ದಾನೆ ಎಂದು ಅಲ್ಲು ಅರ್ಜುನ್ ಬರೆದುಕೊಂಡಿದ್ದಾರೆ.

'ಪುಷ್ಪ- 2' ಶೂಟಿಂಗ್ ಭರದಿಂದ ಸಾಗಿದೆ. ಪ್ರೀಕ್ವೆಲ್‌ನಲ್ಲಿ ಇದ್ದ ಬಹುತೇಕ ಕಲಾವಿದರು, ತಂತ್ರಜ್ಞರು ಸೀಕ್ವೆಲ್ ಚಿತ್ರದಲ್ಲಿದ್ದಾರೆ. ಫಹಾದ್ ಫಾಸಿಲ್ ನೆಗೆಟಿವ್ ಶೇಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ಮಿಂಚಿದ್ದಾರೆ. ಪ್ರೀಕ್ವೆಲ್‌ಗಿಂತ ಹಲವು ಪಟ್ಟು ದೊಡ್ಡದಾಗಿ ಸೀಕ್ವೆಲ್ ನಿರ್ಮಾಣವಾಗುತ್ತಿದೆ.


Click it and Unblock the Notifications











