For Quick Alerts
  ALLOW NOTIFICATIONS  
  For Daily Alerts

  ಅಲ್ಲು ಅರ್ಜುನ್ ಸಹೋದರನ 'ಪ್ರೇಮ ಕಾದಂಟ': ರೊಮ್ಯಾಂಟಿಕ್ ಸೆಲ್ಫಿ ವೈರಲ್

  |

  ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ಗೆ ಇಂದು (ಮೇ 30) ಹುಟ್ಟುಹಬ್ಬದ ಸಂಭ್ರಮ. ಇತ್ತೀಚಿಗೆ ಸಿಕ್ಸ್ ಪ್ಯಾಕ್ ಮೂಲಕ ಗಮನ ಸೆಳೆದಿದ್ದ ಅಲ್ಲು ಸಿರೀಶ್ ಹುಟ್ಟುಹಬ್ಬದ ದಿನ ರೊಮ್ಯಾಂಟಿಕ್ ಲುಕ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.

  ಸಿನಿಮಾಗಾಗಿ ಸಿಕ್ಕಾಪಟ್ಟೆ ತಯಾರಿ ನಡೆಯುತ್ತಿರುವ ಅಲ್ಲು ಸಿರೀಶ್ ಜಿಮ್ ನಲ್ಲಿ ಬೆವರಿಳಿಸಿ ಕಟ್ಟುಮಸ್ತಾದ ದೇಹದ ಬೆಳೆಸಿದ್ದಾರೆ. ಮುಂದಿನ ಸಿನಿಮಾಗಾಗಿ ಸಿಕ್ಕಾಪಟ್ಟೆ ಶ್ರಮಿಸಿರುವ ಸಿರೀಶ್ ಇಂದು ಹುಟ್ಟುಹಬ್ಬದ ಪ್ರಯುಕ್ತ ಫಸ್ಟ ಲುಕ್ ಮತ್ತು ಟೈಟಲ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.

  ಅಲ್ಲು ಅರ್ಜುನ್ ಸಹೋದರನ ಹೊಸ ಲುಕ್: ಅಲ್ಲು ಸಿರೀಶ್ ಸಿಕ್ಸ್ ಪ್ಯಾಕ್‌ಗೆ ಫ್ಯಾನ್ಸ್ ಫಿದಾಅಲ್ಲು ಅರ್ಜುನ್ ಸಹೋದರನ ಹೊಸ ಲುಕ್: ಅಲ್ಲು ಸಿರೀಶ್ ಸಿಕ್ಸ್ ಪ್ಯಾಕ್‌ಗೆ ಫ್ಯಾನ್ಸ್ ಫಿದಾ

  ಅಲ್ಲು ಸಿರೀಶ್ ರೊಮ್ಯಾಂಟಿಕ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು ಚಿತ್ರಕ್ಕೆ ಪ್ರೇಮ ಕಾದಂಟ ಎಂದು ಟೈಟಲ್ ಇಡಲಾಗಿದೆ. ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ ಅಲ್ಲು ನಿರೀಶ್ ಗೆ ನಾಯಕಿಯಾಗಿ ಅನು ಇಮ್ಯಾನ್ಯುಯಲ್ ಕಾಣಿಸಿಕೊಂಡಿದ್ದಾರೆ.

  ಕನ್ನಡಿ ಮುಂದೆ ನಿಂತು ಅನು ಇಮ್ಯಾನ್ಯುಯಲ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ರೊಮ್ಯಾಂಟಿಕ್ ಲುಕ್ ವೈರಲ್ ಆಗಿದೆ. ಈಗಾಗಲೇ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಪ್ರೇಮ ಕಾದಂಟ ಚಿತ್ರಕ್ಕೆ ರಾಕೇಶ್ ಶಶಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ನ್ಯಾಷನಲ್ ಕ್ರಶ್ ರಶ್ಮಿಕಾಗೆ ಪ್ರಭಾಸ್ ಮೇಲೆ ಕ್ರಶ್ | Filmibeat Kannada

  ಅಲ್ಲು ಸಿರೀಶ್ ಬಣ್ಣದ ಲೋಕದಲ್ಲಿ ಸೂಪರ್ ಸಕ್ಸಸ್ ಗಾಗಿ ಕಾಯುತ್ತಿದ್ದಾರೆ. ಅಣ್ಣನಿಗೆ ಸಿಕ್ಕ ಖ್ಯಾತಿ ಅಲ್ಲು ಸಿರೀಶ್ ಗೆ ಸಿಕ್ಕಿಲ್ಲ. ಬಾಲ ಕಲಾವಿದನಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅಲ್ಲು ಸಿರೀಶ್, 2013ರಲ್ಲಿ ನಾಯಕನಾಗಿ ಚಿತ್ರಪ್ರೇಕ್ಷಕರ ಮುಂದೆ ಬಂದರು. ತೆಲುಗು ಸೇರಿದಂತೆ ತಮಿಳು ಮತ್ತು ಮಲಯಾಳಂ ಸಿಮಾದಲ್ಲೂ ಸಿರೀಶ್ ನಟಿಸಿದ್ದಾರೆ. ಇದೀಗ ಹೊಸ ಅಲ್ಲು ಸಿರೀಶ್ ಆಗಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಪ್ರೇಮ ಕಾದಂಟ ಮೂಲಕ ಟಾಲಿವುಡ್ ನಲ್ಲಿ ಸ್ಟಾರ್ ನಟನಾಗಿ ಹೊರಹೊಮ್ಮುತ್ತಾರಾ ಎಂದು ಕಾದುನೋಡಬೇಕು.

  English summary
  Tollywood Actor Allu Sirish reveals first look poster of Prema Kadantana on his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X