ಹೆಂಡತಿ ಪಕ್ಕ ಇರುವಾಗಲೇ ಬೇರೊಬ್ಬಳ ಜೊತೆ ಏನ್ ಮಾಡ್ತಿದ್ದೀರಾ ಅಲ್ಲು ಅರ್ಜುನ್? ವಿಡಿಯೋ ವೈರಲ್!
ಫೋನು, ಸೋಶಿಯಲ್ ಮೀಡಿಯಾ ಇಲ್ಲದೇ ಇದ್ದಾಗಲೇ ಪ್ರಪಂಚ ಚೆನ್ನಾಗಿತ್ತು ಅಂತ ಕೆಲವರು ಹೇಳುತ್ತಿರುತ್ತಾರೆ. ಈ ಸೋಶಿಯಲ್ ಮೀಡಿಯಾದಲ್ಲಿ ಜಮಾನದಲ್ಲಿ ಏನು ಮಾಡಿದರೂ ತಪ್ಪು ಅನ್ನುವಂತಾಗಿಬಿಟ್ಟಿದೆ. ಒಂದೊಂದು ಎಕ್ಸ್‌ಪ್ರೆಷನ್‌ಗೆ ಒಂದು ಅರ್ಥ ಕಲ್ಪಿಸಿ ಮಾತನಾಡುತ್ತಾರೆ ಅನ್ನುವುದು ಕೆಲವರ ಆರೋಪ. ಸದ್ಯ ಅಲ್ಲು ಅರ್ಜುನ್ ಹಾಗೂ ಪತ್ನಿ ಸ್ನೇಹರೆಡ್ಡಿ ನ್ಯೂಯಾರ್ಕ್‌ನಲ್ಲಿ ನಡೆದ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿ ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡುತ್ತಿದ್ದಾರೆ.
ನ್ಯೂಯಾರ್ಕ್‌ನಲ್ಲಿ ನಡೆದ ಆಜಾದಿ ಕಾ ಅಮೃತ್ ಮಹೋತ್ಸವ ಪರೇಡ್‌ನಲ್ಲಿ ಅಲ್ಲು ಅರ್ಜುನ್ ಭಾಗಿ ಆಗಿದ್ದರು. ಜೊತೆಯಲ್ಲಿ ಪತ್ನಿ ಸ್ನೇಹ ರೆಡ್ಡಿ ಕೂಡ ಇದ್ದರು. ಇದೇ ವೇಳೆ ಅಲ್ಲಿಗೆ ಮಿಸ್ ಯೂನಿವರ್ಸ್ 2021 ಹರ್ನಾಜ್ ಕೌರ್ ಸಂಧು ಆಗಮಿಸಿದ್ದರು. ಅಲ್ಲು ಅರ್ಜುನ್‌ನ ನೋಡಿ ಹಾಯ್ ಎಂದು ಕೈ ಕುಲುಕಿ ಮಾತನಾಡಿಸುತ್ತಿದ್ದಂತೆ ಅಲ್ಲುಅರ್ಜುನ್ ಕೂಡ ನಗುತ್ತಾ ಮಾತನಾಡಿಸಿದ್ದಾರೆ.

ಈ ಸೀನ್ ನೋಡಿದ ಅಲ್ಲು ಅರ್ಜುನ್ ಪತ್ನಿ ಸ್ನೇಹ ರೆಡ್ಡಿ ಮುಖ ತಿರುಗಿಸಿಕೊಂಡು ನಿಂತುಕೊಂಡಂತೆ ಕಂಡಿದೆ. ಇಷ್ಟೇ ಆಗಿದ್ದು. ಆದರೆ ಈ ವಿಡಿಯೋ ಸಖತ್ ವೈರಲ್ ಆಗಿದೆ. ಆ ಸನ್ನಿವೇಶದಲ್ಲಿ ಸ್ನೇಹರೆಡ್ಡಿ ಮುನಿಸಿಕೊಂಡರೋ ಏನೋ ಗೊತ್ತಿಲ್ಲ. ಆಕೆ ಕ್ಯಾಶ್ಯುವಲ್ ಆಗಿ ನೋಡಿದ್ದನ್ನು ಕೆಲವರು ಪ್ರೊಸೆಸಿವ್‌ನೆಸ್ ಎನ್ನುತ್ತಿದ್ದಾರೆ. "ಹೆಂಡತಿ ಪಕ್ಕದಲ್ಲಿರುವಾಗ ಅಲ್ಲು ಅರ್ಜುನ್ ನೀನು ಏನ್ ಮಾಡ್ತಿದ್ದೀಯಾ?" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು 'ಅಯ್ಯೋ ಸುಮ್ಮನಿರಿ ಆಕೆ ಮಾತನಾಡಿಸಿದ್ದಕ್ಕೆ ಅಲ್ಲು ಅರ್ಜುನ್ ಮಾತನಾಡಿದ್ದಾರೆ. ಅದೇ ಸಮಯಕ್ಕೆ ಪತ್ನಿ ಬೇರೆ ಕಡೆ ತಿರುಗಿದ್ದಾರೆ. ಅದಕ್ಕೆ ಹೋಗಿ ಏನೇನೋ ಅರ್ಥ ಕಲ್ಪಿಸಿಬೇಡಿ' ಎಂದು ಹೇಳುತ್ತಿದ್ದಾರೆ.

ಮಹಿಳೆಯರಿಗೆ ಪ್ರೊಸೆಸಿವ್‌ನೆಸ್ ಜಾಸ್ತಿ, ತಾವು ಪ್ರೀತಿಸುವವರು ಬೇರೆಯವರ ಜೊತೆ ಮಾತನಾಡಿದರೆ ಅವರಿಗೆ ಕೋಪ ಬರುತ್ತದೆ ಎನ್ನುವ ವಿಷಯ ಗೊತ್ತಿರೋದೆ. ಇದಕ್ಕೆ ಸೆಲೆಬ್ರೆಟಿಗಳು ಹೊರತಲ್ಲ. ಹಿಂದೆ ಒಮ್ಮೆ ನಟ ರಿತೇಶ್ ದೇಶ್‌ಮುಖ್, ನಟಿ ಪ್ರೀತಿ ಜಿಂಟಾನ ತಬ್ಬಿ ಮಾತನಾಡುತ್ತಿದ್ದರೆ ಪತ್ನಿ ಜೆನಿಲಿಯಾ ಕೊಟ್ಟಿದ್ದ ರಿಯಾಕ್ಷನ್ ವೈರಲ್ ಆಗಿತ್ತು. ಇದೀಗ ಅಲ್ಲು ಅರ್ಜುನ್ ಪತ್ನಿ ಸ್ನೇಹರೆಡ್ಡಿ ಎಕ್ಸ್‌ಪ್ರೆಷನ್ ಕೂಡ ಅದೇ ತರ ಇದೆ ಅನ್ನುವುದು ಕೆಲವರ ವಾದ. ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ಅಲ್ಲು ಅರ್ಜುನ್ 'ಪುಷ್ಪ'-2 ಚಿತ್ರದಲ್ಲಿ ನಟಿಸಬೇಕಿದೆ. ಸದ್ಯ ಮುಹೂರ್ತ ನೆರವೇರಿಸಿ ಚಿತ್ರಕ್ಕೆ ಚಾಲನೆ ಕೊಡಲಾಗಿದೆ. ಅಲ್ಲು ಅರ್ಜುನ್ ಪತ್ನಿ ಸ್ನೇಹರೆಡ್ಡಿ ಕಲರ್‌ಫುಲ್ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.


Click it and Unblock the Notifications










