ಅಲ್ಲು ಅರ್ಜುನ್ 'ಪುಷ್ಪ'-2 ಚಿತ್ರದಿಂದ ಭಾರೀ ನಷ್ಟ; ಲೆಕ್ಕ ತಪ್ಪಿದ್ದೆಲ್ಲಿ?

ಸುಕುಮಾರ್ ನಿರ್ದೇಶನದ 'ಪುಷ್ಪ'-2 ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಸಿನಿಮಾ ಈಗಾಗಲೇ 1700 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡವೇ ಹೇಳಿದೆ. ಆದರೂ ಕೂಡ ಸಿನಿಮಾ ಕೆಲವಡೆ ಭಾರೀ ನಷ್ಟ ತಂದೊಡ್ಡಿದೆ. ಚಿತ್ರ ನಿರ್ಮಾಣ ಸಂಸ್ಥೆಯ ಅತಿ ಆಸೆ ಕೂಡ ಇದಕ್ಕೆ ಕಾರಣ ಎನ್ನಬಹುದು.

ಗಣನೀಯವಾಗಿ ಟಿಕೆಟ್ ದರ ಹೆಚ್ಚಿಸಿದ್ದರಿಂದ ಮೊದಲ ವಾರದಲ್ಲೇ 'ಪುಷ್ಪ'-2 ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು. ಕೇವಲ 6 ದಿನಗಳಲ್ಲಿ ಸಿನಿಮಾ 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡ ಘೋಷಿಸಿತ್ತು. ಇದೀಗ ಸಿನಿಮಾ 25 ದಿನ ಪೂರೈಸಿ ಮುನ್ನುಗುತ್ತಿದೆ. HD ಪ್ರಿಂಟ್ ಲೀಕ್ ಆಗಿದ್ದರೂ ಓಟಿಟಿಗೆ ಬಿಡದೇ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರೆಸಲಾಗುತ್ತಿದೆ.

Amid BoxOffice success Allu Arjun s Pushpa-2 faces loss in andhra pradesh

ಕೇರಳ ಬಿಟ್ಟು ದೇಶಾದ್ಯಂತ 'ಪುಷ್ಪ'-2 ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಮುಖ್ಯವಾಗಿ ಹಿಂದಿ ಬೆಲ್ಟ್‌ನಲ್ಲಿ 'ಪುಷ್ಪ'ರಾಜ್ ಹವಾ ಜೋರಾಗಿದೆ. ಬಾಲಿವುಡ್ ಸಿನಿಮಾಗಳ ದಾಖಲೆಗಳನ್ನೆಲ್ಲಾ ಹಿಂದಿಕ್ಕಿ ತೆಲುಗು ಸಿನಿಮಾ ಸದ್ದು ಮಾಡುತ್ತಿದೆ. ಶೀಘ್ರದಲ್ಲೇ 'ಬಾಹುಬಲಿ-2' ಹಾಗೂ 'ದಂಗಲ್' ಚಿತ್ರಗಳ ದಾಖಲೆಯನ್ನು 'ಪುಷ್ಪ'-2 ಮುರಿಯುತ್ತದೆ ಎನ್ನಲಾಗ್ತಿದೆ.

ಕರ್ನಾಟಕದಲ್ಲಿ ಕೂಡ 'ಪುಷ್ಪ'-2 ಆರ್ಭಟ ಜೋರಾಗಿದೆ. 25 ದಿನ ಕಳೆದರೂ ಕೆಲವೆಡೆ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೆಲ್ಲದರ ನಡುವೆ ಚಿತ್ರ ಭಾರೀ ನಷ್ಟ ತಂದೊಡ್ಡಿರುವುದಾಗಿ ಟಾಲಿವುಡ್‌ನಲ್ಲಿ ಚರ್ಚೆ ಆಗುತ್ತಿದೆ. ನಿರ್ಮಾಪಕರ ಅತಿಯಾದ ಆಸೆಯಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಭಾರೀ ಮೊತ್ತಕ್ಕೆ ಡಿಸ್ಟ್ರಿಬ್ಯೂಷನ್ ರೈಟ್ಸ್ ಕೊಂಡುಕೊಂಡ ವಿತರಕರು ನಷ್ಟ ಅನುಭವಿಸುವಂತಾಗಿದೆ ಎಂದು ಹೇಳಲಾಗುತ್ತಿದೆ.

ದೀಪದ ಕೆಳಗೆ ಕತ್ತಲು ಎನ್ನುವಂತೆ ಆಂಧ್ರದಲ್ಲೇ ಚಿತ್ರಕ್ಕೆ ನಷ್ಟ ಎದುರಾಗುವ ಭೀತಿ ಶುರುವಾಗಿದೆ. ಸೀಡೆಡ್ ಏರಿಯಾದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ ಸಿನಿಮಾ. ಆದರೆ ಆಂಧ್ರದ ಕೆಲವು ಭಾಗಗಳಲ್ಲಿ ವಿತರಕರು ನಷ್ಟ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಡಿಮ್ಯಾಂಡ್ ನೋಡಿ ಭಾರೀ ಮೊತ್ತಕ್ಕೆ ವಿತರಕರು ರೈಟ್ಸ್ ಕೊಂಡುಕೊಂಡಿದ್ದರು. ಆದರೆ ಅಷ್ಟು ಗಳಿಕೆ ಕಂಡುಬಂದಿಲ್ಲ ಎಂದು ಚರ್ಚೆ ಆಗುತ್ತಿದೆ.

ಸೀಡೆಡ್ ಏರಿಯಾದಲ್ಲಿ 'ಪುಷ್ಪ'-2 ಒಟ್ಟು 32 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಶೀಘ್ರದಲ್ಲೇ 'ಬಾಹುಬಲಿ- 2' ದಾಖಲೆ ಮುರಿಯುವ ಲೆಕ್ಕಾಚಾರ ನಡೀತಿದೆ. ಆಂಧ್ರದಲ್ಲಿ ವಿತರಕರು ನಷ್ಟ ಅನುಭವಿಸುವಂತಾಗಿದೆ ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕಾಚಾರ ಮಾಡುತ್ತಿದ್ದಾರೆ. ನೈಜಾಂನಲ್ಲಿ ಮಾತ್ರ ಸಿನಿಮಾ ಕಲೆಕ್ಷನ್ ಜೋರಾಗಿದೆ.

ಅಚ್ಚರಿ ಎನ್ನುವಂತೆ 'ಪುಷ್ಪ'-2 ಹಿಂದಿ ವರ್ಷನ್ 25 ದಿನಕ್ಕೆ 770 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಕರ್ನಾಟಕದಲ್ಲಿ ಸಿನಿಮಾ 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ನೇಪಾಳದಲ್ಲಿ ಕೂಡ ಸಿನಿಮಾ 24 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಹೊರ ದೇಶದ ಚಿತ್ರವೊಂದು ಅಲ್ಲಿ ಇಷ್ಟು ಕಲೆಕ್ಷನ್ ಮಾಡಿರುವುದು ಇದೇ ಮೊದಲು.

56 ದಿನಗಳ ಬಳಿಕವೇ ಓಟಿಟಿಯಲ್ಲಿ ಸಿನಿಮಾ ಬರುತ್ತದೆ ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ. ಹಾಗಾಗಿ ಸಿನಿಮಾ ಮುಂದೆ 2000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಗಡಿ ದಾಟುತ್ತಾ ಕಾದು ನೋಡಬೇಕಿದೆ. ನೆಟ್‌ಫ್ಲಿಕ್ಸ್ ಸಂಸ್ಥೆ 'ಪುಷ್ಪ'- 2 ಓಟಿಟಿ ರೈಟ್ಸ್ ಕೊಂಡುಕೊಂಡಿದೆ. ದೊಡ್ಡ ಸಿನಿಮಾ ಆಗಿರುವುದರಿಂದ ದೊಡ್ಡಪರದೆಯಲ್ಲೇ ಸಿನಿಮಾ ನೋಡಿ ಪ್ರೇಕ್ಷಕರು ಎಂಜಾಯ್ ಮಾಡುತ್ತಿದ್ದಾರೆ.

ಮೊದಲ ದಿನಕ್ಕೆ 'ಪುಷ್ಪ'- 2 ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಆದರೂ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಕ್ಸಸ್ ಆಗಿತ್ತು. 3 ವರ್ಷಗಳ ಹಿಂದೆ 'ಪುಷ್ಪ' ಚಿತ್ರ ಬಂದು ಗೆದ್ದಿತ್ತು. ಹಾಗಾಗಿ ಪ್ರೇಕ್ಷಕರು ಸೀಕ್ವೆಲ್ ನೋಡಲು ಕಾದು ಕೂತಿದ್ದರು. ಹಾಗಾಗಿ ಚಿತ್ರದ ಬಗ್ಗೆ ಹೈಪ್ ಕ್ರಿಯೇಟ್ ಆಗಿತ್ತು. ಅದಕ್ಕೆ ತಕ್ಕಂತೆ ಬಾಕ್ಸಾಫೀಸ್ ಗಳಿಕೆ ಕಂಡು ಬಂದಿದೆ.

More from Filmibeat

English summary
Some Pushpa-2 film distributors faces loss;
Read more about: allu arjun pushpa box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X