ಪುಷ್ಪ 2 ಚಿತ್ರದಲ್ಲಿ ರಶ್ಮಿಕಾ ಮಂದಣ್ಣ 'ಪೀಲಿಂಗ್ಸ್' ನೋಡಿ ಹೇಳಿದ್ದೇನು ಭಾವಿ ಅತ್ತೆ..?
ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ ರಶ್ಮಿಕಾ ಮಂದಣ್ಣ, ಆ ನಂತರ ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳಿ ತೆಲುಗು ಚಿತ್ರರಂಗವನ್ನು ಪ್ರವೇಶಿಸಿದರು. ಬೆರಳಣಿಕೆಯ ದಿನಗಳಲ್ಲಿಯೇ ಬಹುಬೇಡಿಕೆಯ ನಾಯಕಿಯಾಗಿ ಬೆಳೆದರು. ತೆಲುಗು ಜೊತೆ ಹಿಂದಿಯಲ್ಲಿ ಕೂಡ ದೊಡ್ಡ ದೊಡ್ಡ ಸ್ಟಾರ್‌ಗಳಿಗೆ ನಾಯಕಿಯಾದರು.
ಇಂಥಾ ರಶ್ಮಿಕಾ ಮಂದಣ್ಣ ಈಗ ಪುಷ್ಪ 2 ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ಶ್ರೀವಲ್ಲಿಯ ಪಾತ್ರದ ಮೂಲಕ ಅನೇಕರ ಹೃದಯವನ್ನು ಗೆಲ್ಲುತ್ತಿದ್ದಾರೆ. ನಿಜಾ. ರಶ್ಮಿಕಾ ಮಂದಣ್ಣ ಅವರನ್ನು ಗೌರಮ್ಮನಂತೆ ನೋಡಲು ಬಯಸುವವರು ಪುಷ್ಪ 2ದಲ್ಲಿ ರಶ್ಮಿಕಾ ಮಂದಣ್ಣ ಅವರ 'ಎದೆ'ಗಾರಿಕೆಯನ್ನು ಕಂಡು ತಮ್ಮ ಎದೆ ಬಡಿದುಕೊಳ್ಳುತ್ತಿದ್ದಾರೆ. ಪೀಲಿಂಗ್ಸ್ ಹಾಡಿನಲ್ಲಿ ಹಂಗಾ ಕುಣಿಯೋದು ಎಂದು ಕೆಂಡ ಕಾರುತ್ತಿದ್ದಾರೆ.

ಆದರೆ ರಶ್ಮಿಕಾ ವ್ಯಕ್ತವಾಗುತ್ತಿರುವ ನೆಗೆಟಿವ್ ಅಭಿಪ್ರಾಯಗಳಿಗೆ ತಲೆ ಕೆಡಿಸಿಕೊಂಡಿಲ್ಲ. ಬದಲಿಗೆ ಸಕ್ಸಸ್‌ನ ಎಂಜಾಯ್ ಮಾಡುತ್ತಿದ್ದಾರೆ. ಪುಷ್ಪ 2 ಗೆದ್ದ ಸಂಭ್ರಮದಲ್ಲಿ ತೇಲುತ್ತಿದ್ದಾರೆ. ಇದರ ನಡುವೆ ಬಿಡುವು ಮಾಡಿಕೊಂಡು ತಮ್ಮ ಅತ್ಯಾಪ್ತ ಸ್ನೇಹಿತ ವಿಜಯ್ ದೇವರಕೊಂಡ ಅವರ ಕುಟುಂಬಕ್ಕೆ ತಮ್ಮ ಪುಷ್ಪ 2 ಚಿತ್ರವನ್ನು ರಶ್ಮಿಕಾ ಮಂದಣ್ಣ ತೋರಿಸಿದ್ದಾರೆ. ಹೈದರಾಬಾದ್‌ನಲ್ಲಿ ಮಹೇಶ್ ಬಾಬು ಒಡೆತನದ ಎಎಂಬಿ ಚಿತ್ರಮಂದಿರಕ್ಕೆ ವಿಜಯ್ ದೇವರಕೊಂಡ ಅವರ ಅಮ್ಮ ಮಾಧವಿ ಹಾಗೂ ಅವರ ಸಹೋದರ ಆನಂದ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಪುಷ್ಪ 2 ಚಿತ್ರವನ್ನು ಕಣ್ತುಂಬಿಕೊಂಡಿದ್ದಾರೆ.
ಇನ್ನು ಎಲ್ಲರಿಗೆ ಗೊತ್ತಿರುವಂತೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕೇವಲ ಸ್ನೇಹಿತರಲ್ಲ ಎನ್ನುವ ಅನುಮಾನ ಅನೇಕರಲ್ಲಿದೆ. ಹೀಗಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಅವರ ಕಾಲೆಳೆಯುತ್ತಿರುವ ಅನೇಕರು, ಪುಷ್ಪ 2 ಚಿತ್ರದಲ್ಲಿ ನಿಮ್ಮ ಪೀಲಿಂಗ್ಸ್ ನೋಡಿ ನಿಮ್ಮ ಅತ್ತೆ ಏನಂದರು ಎಂದು ಕೇಳುತ್ತಿದ್ದಾರೆ. ವಿಜಯ್ ದೇವರಕೊಂಡ ಜೊತೆ ಚಿತ್ರ ನೋಡಿದ್ದರೆ ಸ್ನೇಹಿತೆಯ ಚಿತ್ರ ನೋಡಲು ಬಂದಿದ್ದಾರೆ ಎಂದುಕೊಳ್ಳಬಹುದಿತ್ತು. ಆದರೆ ದೇವರಕೊಂಡ ಮನೆತನದ ಜೊತೆ ಕುಳಿತು ಚಿತ್ರವನ್ನು ರಶ್ಮಿಕಾ ನೋಡಿದ್ದಾರೆ ಎಂದರೆ ಸಂಬಂಧ ಗಾಡವಾದದ್ದು ಎಂದೇ ಅರ್ಥ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಅಂದ್ಹಾಗೇ ವಿಜಯ್ ದೇವರಕೊಂಡ ತಮ್ಮ ಸ್ವಂತ ಬಟ್ಟೆಯ ಬ್ರ್ಯಾಂಡ್ ಶುರು ಮಾಡಿದ್ದಾರೆ. ಅದಕ್ಕೆ ರೌಡಿ ಎಂದು ಹೆಸರನ್ನು ಕೂಡ ಇಟ್ಟಿದ್ದಾರೆ. ಈ ಮೂಲಕ ಬಟ್ಟೆ ಉದ್ಯಮಕ್ಕೆ ಧುಮುಕಿದ ಮೊದಲ ತೆಲುಗು ಸ್ಟಾರ್ ಎನ್ನುವ ಹೆಗ್ಗಳಿಕೆಗೆ ಕೂಡ ವಿಜಯ್ ದೇವರಕೊಂಡ ಪಾತ್ರವಾಗಿದ್ದಾರೆ. ವಿಶೇಷ ಅಂದರೆ ಮೊನ್ನೆಯ ದಿವಸ ರಶ್ಮಿಕಾ ಮಂದಣ್ಣ ಇದೇ ವಿಜಯ್ ದೇವರಕೊಂಡ ಅವರ ರೌಡಿ ಬ್ರ್ಯಾಂಡ್‌ನ ಬಟ್ಟೆಯನ್ನು ಹಾಕಿಕೊಂಡ ವಿಜಯ್ ದೇವರಕೊಂಡ ಅವರ ತಾಯಿಯ ಜೊತೆ ಚಿತ್ರ ನೋಡಲು ಬಂದಿದ್ದರು. ರಶ್ಮಿಕಾ ಅವರ ಈ ಬಟ್ಟೆ ಈಗ ಅನೇಕರ ಗಮನ ಸೆಳೆದಿದೆ. ಬಟ್ಟೆಯ ಕುರಿತು ಕೂಡ ಚರ್ಚೆ ನಡೆಯುತ್ತಿದೆ.
ಇನ್ನುಳಿದಂತೆ ಪುಷ್ಪ 2 ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಹೆಚ್ಚಿನ ತೆರೆ ಅವಧಿ ದೊರಕಿದೆ. ಸಿಕ್ಕ ಈ ಅವಕಾಶವನ್ನು ರಶ್ಮಿಕಾ ಮಂದಣ್ಣ ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯೂ ಆಗಿದ್ದಾರೆ. ಗಂಗಮ್ಮ ಜಾತ್ರೆಯ ಭಾಗದ ಒಂದು ದೃಶ್ಯದಲ್ಲಿ ಇಡೀ ಚಿತ್ರಮಂದಿರ ಸೈಲೆಂಟ್ ಆಗುವಂತೆ ಡೈಲಾಗ್ ಹೊಡೆದು ತಮ್ಮ ಅಭಿನಯದ ಸಾಮರ್ಥ್ಯವನ್ನು ರಶ್ಮಿಕಾ ಮಂದಣ್ಣ ತೋರಿಸಿದ್ದಾರೆ. ಆದರೂ ಚಿತ್ರದ ಒಟ್ಟಾರೆ ಅವಧಿ 200 ನಿಮಿಷ ಇದೆ. ಹೀಗಾಗಿ ಪೀಲಿಂಗ್ಸ್ ಜೊತೆ ಚಿತ್ರ ನೋಡಲು ತಾಳ್ಮೆ ಕೂಡ ಬೇಕು.


Click it and Unblock the Notifications











