ಬೇರೆಯವರ ಸಂಸಾರ ಹಾಳು ಮಾಡುತ್ತಿದ್ದಾರಾ ಸಮಂತಾ ? ಯಾಕೆ ಈ ನಿರ್ಮಾಪಕನ ಮೇಲೆ ಅಷ್ಟೊಂದು ಒಲವು..?

ಪ್ರೀತಿ ವಿಷಯದಲ್ಲಿ ಕೆಲವೊಮ್ಮೆ ಕೆಲವರು ಸೋತು ಹೋಗುತ್ತಾರೆ. ಯಾವುದೋ ಕಾರಣಕ್ಕೆ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ. ಯಾರದು ಸರಿ ಯಾರದು ತಪ್ಪು ಅಂತ ಇನ್ನೊಬ್ಬರೊಂದಿಗೆ ಹಂಚಿಕೊಂಡು ಕೂರುವ ಕಾಲ ಅದಾಗಿರುವುದಿಲ್ಲ. ಹಾಗಂಥ ಸುಮ್ಮನೆ ಕೂರಲು ಕೂಡ ಆಗುವುದಿಲ್ಲ. ಯಾಕೆಂದರೆ ಜಗವೇ ಒಂದು ನಾಟಕರಂಗ. ಸರಳ ರೇಖೆಯಂತೆ ಬದುಕು ಸಾಗುತ್ತಿರಬೇಕು.

ಇಂತಹ ಸಮಯದಲ್ಲಿ ಸುರಿಯುತ್ತಿರುವ ಕಣ್ಣೀರಿಗೆ ಹೆಗಲು ನೀಡಿದರೆ ಮನಸು ಸಮಾಧಾನಗೊಳ್ಳುತ್ತೆ. ನಮ್ಮ ಕಷ್ಟ ನಷ್ಟ ಆಲಿಸುವ ಜೀವವೊಂದು ಇನ್ನೂ ಇದೆ ಎಂಬ ಭಾವನೆ ಮೂಡುತ್ತೆ. ಸಮಂತಾ ಅವರಿಗೆ ಇದೇ ತರಹದ ಅನುಭವ ಆಗಿದೆಯಾ ಗೊತ್ತಿಲ್ಲ. ಆದರೆ, ಸಮಂತಾ ಮತ್ತು ನಿರ್ದೇಶಕ ರಾಜ್ ನಿಡಿಮೋರು ನಡುವೆ ಇರುವ ಆತ್ಮೀಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಬ್ಬರ ಸಂಬಂಧದ ಕುರಿತು ಅನೇಕರಿಗೆ ಅನುಮಾನ ಕೂಡ ಕಾಡಲು ಶುರುವಾಗಿದೆ.

Amid dating rumors Samantha Ruth Prabhu was spotted at a pickleball event with Raj Nidimoru

ಹೌದು, ಅಸಲಿಗೆ ಸದ್ಯ ಪಿಕಲ್ ಬಾಲ್ ಪಂದ್ಯಾವಳಿ ನಡೆಯುತ್ತಿದೆ. ಈ ಟೂರ್ನಾಮೆಂಟ್‌ನಲ್ಲಿ ಚೆನ್ನೈ ಸೂಪರ್ ಚಾಂಪ್ಸ್‌ನ ಒಡತಿ ಸಮಂತಾ. ಈ ಹಿನ್ನೆಲೆ ತನ್ನ ತಂಡಕ್ಕೆ ಪ್ರೋತ್ಸಾಹ ಮತ್ತು ಬೆಂಬಲ ನೀಡಲು ಸಮಂತಾ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಮಯದಲ್ಲಿ ಇವರ ಜೊತೆ ರಾಜ್ ನಿಡಿಮೋರು ಕೂಡ ಇದ್ದಾರೆ.

ಇನ್ನು ಸಮಂತಾ ಮನಸಾರೆ ನಕ್ಕು ನಲಿಯುವುದನ್ನು ಅವರ ಅಭಿಮಾನಿಗಳು ಕಂಡು ಅನೇಕ ವರ್ಷಗಳೇ ಆಗಿತ್ತು. ಈ ಕೊರಗನ್ನು ಕೂಡ ದೂರ ಮಾಡಿರುವ ಸಮಂತಾ ಪಿಕಲ್ ಬಾಲ್ ಪಂದ್ಯವನ್ನು ತುಂಬಾನೇ ಎಂಜಾಯ್ ಮಾಡಿದ್ದಾರೆ. ಇನ್ನು ಸಮಂತಾ ಖುಷಿಯನ್ನು ಕಂಡು ರಾಜ್ ನಿಡಿಮೋರುಗೆ ಆದ ಖುಷಿ ಫೋಟೊದಲ್ಲಿ ಎದ್ದು ಕಾಣುತ್ತಿದೆ. ಇದಲ್ಲದೇ ಮತ್ತೊಂದು ಕಡೆ ಇಬ್ಬರು ಕೈ ಕೈ ಹಿಡಿದು ಕ್ರೀಡಾಂಗಣದ ಪ್ರದಕ್ಷಣೆಯನ್ನು ಹಾಕಿದ್ದಾರೆ. ಇದೆಲ್ಲದರಿಂದ ಸಮಂತಾ ಮತ್ತು ರಾಜ್ ನಿಡಿಮೋರು ಅವರ ಸ್ನೇಹ ಮತ್ತು ಪ್ರೀತಿಯ ವಿಚಾರದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.

ಅಂದ್ಹಾಗೇ ನಿಮಗೆ ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿ ನಿಮಗೆ ನೆನಪಿರಬೇಕು. ಸಮಂತಾ ಅವರನ್ನು ಟಾಲಿವುಡ್‌ನಿಂದ ಬಾಲಿವುಡ್ಡಿಗೆ ಕರೆದೊಯ್ದ ಸಿನಿಮಾ ಇದು. 'ರಾಜಿ' ಪಾತ್ರದಲ್ಲಿ ಸಮಂತಾ ಅವರನ್ನು ಈ ಸರಣಿಯಲ್ಲಿ ನೋಡಿ ಅನೇಕರು ಬೆಕ್ಕಸ ಬೆರಗಾಗಿದ್ದರು. ಯಾಕೆಂದರೆ ಹಿಂದೆಂದೂ ಕಾಣಿಸದ ರೂಪದಲ್ಲಿ ಸ್ಯಾಮ್ ಇಲ್ಲಿ ಕಾಣಿಸಿಕೊಂಡಿದ್ದರು.ತಮ್ಮ ಸಾಹಸಗಾಥೆಯಿಂದ ಜನ ಮನ ಗೆದ್ದಿದ್ದರು. ಸದ್ಯಕ್ಕೆ ಸಮಂತಾ ಅವರ ಜೊತೆ ಥಳುಕು ಹಾಕಿಕೊಂಡಿರುವ ರಾಜ್ ನಿಡಿಮೋರು ಇದೇ ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯ ಸೃಷ್ಟಿಕರ್ತ ಕೂಡ ಹೌದು. ನಿರ್ಮಾಪಕ ಕೂಡ ಹೌದು.

ಇನ್ನುಳಿದಂತೆ ಕೃಷ್ಣ ಡಿ.ಕೆ ಜೊತೆ ಸೇರಿ ರಾಜ್ ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿ ಮಾಡುವಾಗ, ಸಮಂತಾ ಇವರ ಪಾಲಿಗೆ ಕೇವಲ ಸ್ನೇಹಿತೆಯಾಗಿದ್ದರು. ಇಬ್ಬರು ನಡುವೆ ನಿರ್ದೇಶಕ ಮತ್ತು ನಟಿಯ ನಡುವೆ ಇರಬೇಕಾದ ಸಂಬಂಧವೇ ಇತ್ತು. ಆದರೆ, ಅದ್ಯಾವಾಗ ರಾಜ್ ಮತ್ತೊಮ್ಮೆ ಸಮಂತಾ ಅವರನ್ನೇ ನಾಯಕಿಯ ಸ್ಥಾನದಲ್ಲಿ ಕೂರಿಸಿ 'ಸಿಟಾಡೆಲ್ ಹನಿ ಬನ್ನಿ' ಶುರುಮಾಡಿದರೋ ಅಲ್ಲಿಂದಾಚೆ ಎಲ್ಲವೂ ಬದಲಾಯಿತು. ಇಬ್ಬರ ನಡುವೆ ಇದ್ದ ಸ್ನೇಹದ ಸೇತುವೆ ಮರೆಯಾಗಿ ಪ್ರೇಮದ ಗೋಡೆ ಎದ್ದು ನಿಂತುಕೊಂಡಿತು ಎನ್ನುವುದು ಇವರ ಸಂಬಂಧದ ಕುರಿತು ಹಿಂದೆ ಕೇಳಿ ಬಂದಿದ್ದ ಸುದ್ದಿ.

ಇನ್ನೂ ವಿಶೇಷ ಅಂದರೆ ರಾಜ್ ಈಗಾಗಲೇ ವಿವಾಹಿತ. ಮೊನ್ನೆಯವರೆಗೆ ಬಾಲಿವುಡ್‌ನವರ ಕಣ್ಣಿಗೆ ರಾಜ್ ಆದರ್ಶ ವ್ಯಕ್ತಿಯಂತೆ ಕಾಣುತ್ತಿದ್ದರು. ರಾಜ್ ಮತ್ತು ಅವರ ಪತ್ನಿಯನ್ನು ಅನೇಕರು ಹಾಡಿ ಹೊಗಳುತ್ತಿದ್ದರು. ಆದರೆ ಈಗ ರಾಜ್ ಮತ್ತು ಸಮಂತಾ ನಡುವೆ ಕುಚ್ ಕುಚ್ ನಡೆಯುತ್ತಿದೆ ಅನ್ನುವ ವಿಚಾರ ಎಲ್ಲರ ಬಾಯಿಗೆ ಆಹಾರವಾಗಿದೆ. ಇದಕ್ಕೆ ಪೂರಕವಾಗಿ ಪಿಕಲ್ ಬಾಲ್‌ ಟೂರ್ನಾಮೆಂಟ್‌ನಲ್ಲಿ ಇಬ್ಬರು ಜೊತೆಯಲ್ಲಿ ಕಾಣಿಸಿಕೊಂಡ ಫೋಟೊಗಳು ವೈರಲ್ ಆಗಿವೆ. ಚರ್ಚೆಗೀಡಾಗುತ್ತಿವೆ. ಇನ್ನು ಸಮಂತಾ ರಕ್ತ ಬ್ರಹ್ಮಾಂಡ ಎಂಬ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕೂ ಈ ರಾಜ್ ನಿಡಿಮೋರು ಅವರದ್ದೇ ಸಾರಥ್ಯ ಇರುವುದು ಮತ್ತೊಂದು ವಿಶೇಷ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X