ರಶ್ಮಿಕಾ ಮಂದಣ್ಣ ಕೈ ಹಿಡಿಯುವ ಹುಡುಗ ಹೇಗಿರಬೇಕು ? ಮದ್ವೆ-ಪ್ರೀತಿಯ ಬಗ್ಗೆ ಶ್ರೀವಲ್ಲಿಯ ಮನದ ಮಾತು...!

ರಶ್ಮಿಕಾ ಮಂದಣ್ಣಗೆ ಈಗ ಚಿನ್ನದಂತಹ ಬೇಡಿಕೆ ಇದೆ. ಅದರಲ್ಲಿಯೂ ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣ ಜೊತೆ ಕೆಲಸ ಮಾಡಲು ತುದಿಗಾಲಿನಲ್ಲಿ ನಿಂತವರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಇನ್ನು, ಸದ್ಯ ಪುಷ್ಪ 2 ಚಿತ್ರ ಗೆದ್ದ ಸಂಭ್ರಮದಲ್ಲಿರುವ ರಶ್ಮಿಕಾ ಅವರ ವ್ಯೆಯಕ್ತಿಕ ಬದುಕು ಕೂಡ ಆಗಾಗ ಸುದ್ದಿಯಾಗುತ್ತೆ. ವಿಜಯ್ ದೇವರಕೊಂಡ ವಿಚಾರದಿಂದ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೀಡಾಗುತ್ತೆ.

ನಿಜಾ. ಇಲ್ಲಿಯವರೆಗೆ ರಶ್ಮಿಕಾ ಮಂದಣ್ಣ ಆಗಲಿ ವಿಜಯ್ ದೇವರಕೊಂಡ ಆಗಲಿ ತಮ್ಮ ಸಂಬಂಧದ ಮೇಲೆ ಅಧಿಕೃತ ಮುದ್ರೆಯನ್ನು ಒತ್ತಿಲ್ಲ. ಆದರೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ನಡುವೆ ಇರುವುದು ಕೇವಲ ಸ್ನೇಹ ಸಂಬಂಧ ಮಾತ್ರ ಅಲ್ಲ ಎನ್ನುವ ಅನುಮಾನ ಅನೇಕರಲ್ಲಿದೆ. ಹೀಗಿರುವಾಗ ರಶ್ಮಿಕಾ ಮಂದಣ್ಣ ಈಗ ತಮ್ಮ ಕನಸಿನ ಹುಡುಗನ ಬಗ್ಗೆ ಮಾತನಾಡಿದ್ದಾರೆ.

Amid dating rumors with Vijay Deverakonda Rashmika Mandanna opens up about her life partner

ಹೌದು, ಕಾಸ್ಮೋಪಾಲಿಟನ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಪ್ರೀತಿ, ಮದುವೆ, ಸಂಗಾತಿಯ ಬಗ್ಗೆ ಮಾತನಾಡಿರುವ ರಶ್ಮಿಕಾ ಮಂದಣ್ಣ ಜೀವನದ ಪ್ರತಿಯೊಂದು ಹಂತದಲ್ಲಿ ನನಗೆ ನನ್ನ ಸಂಗಾತಿ ಜೊತೆ ಇರಬೇಕು ಎಂದಿದ್ದಾರೆ. ನನಗೆ ನನ್ನ ಹುಡುಗನಿಂದ ಭದ್ರತೆ, ಸಹಾನುಭೂತಿ ಬೇಕು ಎಂದು ಹೇಳಿದ್ದಾರೆ.

ಮುಂದುವರೆದು ನನ್ನ ಕೈ ಹಿಡಿಯುವ ಹುಡುಗ ನನಗೆ ಗೌರವವನ್ನು ನೀಡಬೇಕು ಯಾಕೆಂದರೆ ಸಂಬಂಧಗಳಲ್ಲಿ ಒಬ್ಬರನ್ನೊಬ್ಬರು ಗೌರವಿಸಿದಾಗ, ಪ್ರಾಮಾಣಿಕವಾಗಿದ್ದಾಗ, ಕಾಳಜಿ ವಹಿಸಿದಾಗ ಜವಾಬ್ಧಾರಿ ಇರುತ್ತೆ ಎಂದಿರುವ ರಶ್ಮಿಕಾ ಮಂದಣ್ಣ ಸಮಾನ ಮನಸ್ಕರಾಗಿರುವ ಯಾರ ಜೊತೆಯಾದರೂ ಕೂಡ ನಾನು ಇರಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಹೊಂದಾಣಿಕೆ ಇಲ್ಲದಿದ್ದರೆ ಜೊತೆಯಾಗಿ ಬದುಕಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಇನ್ನು ಜೀವನದ ವಿವಿಧ ಹಂತಗಳಲ್ಲಿ ನಿಮ್ಮ ಜೊತೆ ಯಾರಾದರೂ ಇರುವುದೇ ಪ್ರೀತಿ ಕೇವಲ ಸುಖದಲ್ಲಿ ಮಾತ್ರ ಅಲ್ಲ ಕಷ್ಟದಲ್ಲಿ ಕೂಡ ಅವರು ನಮ್ಮ ಜೊತೆ ಇರಬೇಕು ಬಂಡೆಯಂತೆ ಸದಾ ಕಾಲ ನಿಲ್ಲಬೇಕು ಎಂದಿರುವ ರಶ್ಮಿಕಾ ಗಟ್ಟಿಯಾದ ಬಾಂಧವ್ಯವೇ ಪ್ರೀತಿಯೆಂದು ಹೇಳಿದ್ದಾರೆ.

ಅಂದ್ಹಾಗೇ ಕಳೆದ ಕೆಲ ದಿನಗಳ ಹಿಂದೆಯಷ್ಟೇ ವಿಜಯ್ ದೇವರಕೊಂಡ ನಾನು ಸಿಂಗಲ್ ಅಲ್ಲ ಎಂದು ಹೇಳಿದ್ದರು. ನನಗೆ ಈಗ 35 ವರ್ಷ, ನಾನು ಇನ್ನೂ ಒಬ್ಬಂಟಿಯಾಗಿದ್ದೇನೆ ಎಂದು ನಿಮಗೆ ಅನ್ಸುತ್ತಾ ಎಂದು ಸಂದರ್ಶನದಲ್ಲಿ ಪ್ರಶ್ನೆ ಕೇಳಿದ್ದ ವಿಜಯ್ ದೇವರಕೊಂಡ ನಾನು ಒಬ್ಬರನ್ನೂ ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದರು. ಪ್ರೀತಿಸುವುದು ಹೇಗೆ ಎನ್ನುವುದು ನನಗೆ ಗೊತ್ತು ಎಂದಿದ್ದರು.

ವಿಜಯ್ ದೇವರಕೊಂಡ ನಾನು ಸಿಂಗಲ್ ಅಲ್ಲ ಎಂದು ಹೇಳಿದ ಕೆಲ ದಿನಗಳ ಬಳಿಕ ಪುಷ್ಪ 2 ಚಿತ್ರದ ಪ್ರಚಾರದ ಸಮಯದಲ್ಲಿ ಕೂಡ ರಶ್ಮಿಕಾ ಮಂದಣ್ಣ ತಮ್ಮ ಹುಡುಗನ ಬಗ್ಗೆ ಕೇಳಿದ್ದಕ್ಕೆ ನಾಚಿ ನೀರಾಗಿದ್ದರು. ನೀವು ಸಿನಿಮಾ ಇಂಡಸ್ಟ್ರಿಯನ್ನು ಮದುವೆ ಆಗ್ತೀರಾ ಅಥವಾ ಹೊರಗಿನವರನ್ನು ಮದುವೆ ಆಗ್ತೀರಾ? ನೀವು ಕ್ಲ್ಯಾರಿಟಿ ಕೊಟ್ಟರೆ ನಾವು ಹುಡುಗನನ್ನು ಹುಡುಕುತ್ತೇವೆ ಎಂದು ನಿರೂಪಕರು ಕೇಳಿದಾಗ ನಸು ನಕ್ಕಿದ್ದ ರಶ್ಮಿಕಾ ಎಲ್ಲರಿಗೂ ಈ ವಿಷಯ ಗೊತ್ತು ಎಂದಿದ್ದರು. ಆ ನಂತರ ಕೂಡ ನಮಗೆ ಗೊತ್ತಿಲ್ಲ. ಒಂದು ಸಣ್ಣ ಸುಳಿವು ಕೊಡಿ ಎಂದು ಮತ್ತೆ ಪ್ರಶ್ನಿಸಿದಾಗ ಹಾಗೆ ಹೇಳುವುದು ಬೇಡ. ನಾನೇ ಖುದ್ದಾಗಿ ಒಂದು ದಿನ ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳಿದ್ದರು. ನಿಮಗೆ ಯಾವ ಉತ್ತರ ಬೇಕು ಎಂಬುದು ನಂಗೆ ಗೊತ್ತು. ನನಗೆ ಚೆನ್ನಾಗಿ ಗೊತ್ತು ಎಂದು ಕೂಡ ರಶ್ಮಿಕಾ ಮಂದಣ್ಣ ಹೇಳಿದ್ದರು. ಹೀಗಾಗಿ ಅನೇಕರು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಪ್ರೀತಿಸುತ್ತಿರುವುದು ನಿಜಾ ಎಂದುಕೊಂಡಿದ್ದರು. ಇದರ ನಡುವೆ ರಶ್ಮಿಕಾ ಈಗ ಮದ್ವೆ ಮತ್ತು ಮದ್ವೆಯಾಗುವ ಕನಸಿನ ಹುಡುಗನ ಬಗ್ಗೆ ಮಾತನಾಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X