ವಿಜಯ್ ದೇವರಕೊಂಡ ಜೊತೆ ಮತ್ತೆ ಸಿಕ್ಕಿ ಬಿದ್ದ ರಶ್ಮಿಕಾ ಮಂದಣ್ಣ, ಕ್ಯಾಮೆರಾ ನೋಡಿ ಮುಖ ಮುಚ್ಚಿಕೊಂಡ ಜೋಡಿ..!

ಕಿರಿಕ್ ಪಾರ್ಟಿ ಚಿತ್ರದ ನಂತರ ರಶ್ಮಿಕಾ ಮಂದಣ್ಣ ಬೆಳೆದು ನಿಂತ ರೀತಿ ಕಂಡು ಈ ಕ್ಷಣಕ್ಕೂ ಕನ್ನಡದ ಪ್ರೇಕ್ಷಕರಲ್ಲೊಂದು ಅಚ್ಚರಿಯಿದೆ. ಯಾಕೆಂದರೆ ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮಿಂಚುವುದರ ಜೊತೆ ಕೈ ತುಂಬಾ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ ಅಲ್ಲ.ಆದರೆ .. ರಶ್ಮಿಕಾ ವಿಚಾರದಲ್ಲಿ ಇದೆಲ್ಲವೂ ಸಲೀಸು ಎಂಬಂತೆ ನಡೆದು ಹೋಗಿದೆ.

ಇಂಥಾ ರಶ್ಮಿಕಾ ಮಂದಣ್ಣ ಆಂಧ್ರದ ರೌಡಿ ವಿಜಯ್ ದೇವರಕೊಂಡ ಜೊತೆ ಲವ್ವಲ್ಲಿ ಬಿದ್ದಿದ್ದಾರೆ ಎನ್ನುವ ಅನುಮಾನ ಅನೇಕರಿಗೆ ಇದೆ. ಇಬ್ಬರ ನಡುವೆ ಇರುವುದು ಸ್ನೇಹ ಅಲ್ಲ ಬದಲಿಗೆ ಪ್ರೇಮ ಎನ್ನುವ ಮಾತು ಆಗಾಗ ಕೇಳಿ ಬರುತ್ತೆ. ಇದಕ್ಕೆ ಪೂರಕವಾಗಿ ಇಬ್ಬರ ನಡಾವಳಿ ಕೂಡ ಹಾಗೇ ಇದೆ. ಗೋವಾದಿಂದ ಹಿಡಿದು ಅಮೆರಿಕಾದವರೆಗೆ ಜೊತೆ ಜೊತೆಯಾಗಿಯೇ ಪ್ರವಾಸಕ್ಕೆ ತೆರಳುವ ಇಬ್ಬರು ದೀಪಾವಳಿ ಹಬ್ಬವನ್ನು ಪ್ರತಿ ವರ್ಷ ಜೊತೆಯಲ್ಲಿ ಆಚರಿಸುತ್ತಾ ಬಂದಿದ್ದಾರೆ. ಜೊತೆಯಲ್ಲಿ ಕುಳಿತು ಬೊಂಬಾಟ್ ಭೋಜನ ಸವಿದಿದ್ದಾರೆ. ಕಾಲ ಕಾಲಕ್ಕೆ ದೇಶವ್ಯಾಪಿ ಇಬ್ಬರು ಚರ್ಚೆಗೀಡಾಗಿದ್ದಾರೆ.

Amid dating rumours Rashmika Mandanna and Vijay Deverakonda were spotted in Mumbai for a lunch date

ಹೀಗಿರುವಾಗ ಇದೀಗ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮತ್ತೊಮ್ಮೆ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ. ಕದ್ದು ಮುಚ್ಚಿ ಓಡಾಡುವ ತಮ್ಮ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ. ಹೌದು, ಅಸಲಿಗೆ ಸಿಕಂದರ್ ಚಿತ್ರ ಬಿಡುಗಡೆಯಾದ ಹಿನ್ನೆಲೆ ರಶ್ಮಿಕಾ ಮಂದಣ್ಣ ಚಿತ್ರದ ಪ್ರಚಾರಕ್ಕೆ ಮುಂಬೈನಲ್ಲಿ ಬಿಡಾರ ಹೂಡಿದ್ದಾರೆ. ಇನ್ನು ವಿಜಯ್ ದೇವರಕೊಂಡ ಕೂಡ ಮುಂಬೈನಲ್ಲಿದ್ದಾರೆ.

ಹೀಗಾಗಿಯೇ ಯುಗಾದಿ ಹಬ್ಬದ ಪ್ರಯುಕ್ತ ನಿನ್ನೆ ಹೋಟೆಲ್‌ಗೆ ಊಟ ಮಾಡಲು ತೆರಳಿದ್ದಾರೆ. ಅನುಮಾನ ಬರಬಾರದೆಂದು ಬೇರೆ ಬೇರೆ ಕಾರಿನಲ್ಲಿ ಬಂದಿಳಿದಿದ್ದಾರೆ. ಪಾಪರಾಜಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದ ರಶ್ಮಿಕಾ ಅಲ್ಲಿದ್ದ ಕ್ಯಾಮರಾಗಳಿಗೆ ಮಾಸ್ಕ್ ತೆಗೆದು ಪೋಸ್ ನೀಡಿದ್ದಾರೆ. ಆ ನಂತರ ಪಾಪರಾಜಿಗಳಿಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ಹೇಳಿ ಹೋಗಿದ್ದಾರೆ.

ರಶ್ಮಿಕಾ ಹಿಂದೆ ಹಿಂದೆಯೇ ತಲೆಗೆ ಸ್ಕಾರ್ಫ್ ಮತ್ತು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಗುರುತು ಸಿಗದಂತೆ ವಿಜಯ್ ದೇವರಕೊಂಡ ಮುಂಬೈನ ಹೋಟೆಲ್‌ ಒಳಗೆ ಹೋಗುವ ಪ್ರಯತ್ನ ಮಾಡಿದ್ದಾರೆ. ಆದರೆ, ಅಲ್ಲಿದ್ದ ಪಾಪರಾಜಿಗಳು ವಿಜಯ್ ದೇವರಕೊಂಡ ಅವರನ್ನು ಗುರುತಿಸಿ ಫೋಟೊ ಕ್ಲಿಕಿಸಿಕೊಂಡಿದ್ದಾರೆ. ವಿಡಿಯೋಗಳನ್ನು ಮಾಡಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳಿಂದ ನಾನಾ ರೀತಿಯ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ. ನಿಮ್ಮ ಇಬ್ಬರ ಸಂಬಂಧವನ್ನು ಇನ್ನಾದರೂ ಅಧಿಕೃತಗೊಳಿಸಿ, ಸುಮ್ಮನೆ ಯಾಕೆ ಹೀಗೆ ಕದ್ದು ಮುಚ್ಚಿ ಓಡಾಡುತ್ತೀರಾ ಎಂದು ಸಲಹೆಯನ್ನು ನೀಡುತ್ತಿದ್ದಾರೆ. ಇಬ್ಬರದ್ದು ಹೇಳಿ ಮಾಡಿಸಿದ ಜೋಡಿಯೆನ್ನುತ್ತಿದ್ದಾರೆ.

ಇನ್ನುಳಿದಂತೆ ಕಳೆದ ವರ್ಷದ ಅಂತ್ಯದಿಂದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಲೇ ಇದೆ. ಇದಕ್ಕೆ ರಶ್ಮಿಕಾ ಮಂದಣ್ಣ ಆಗಲಿ ವಿಜಯ್ ದೇವರಕೊಂಡ ಉತ್ತರವನ್ನು ನೀಡದಿದ್ದರು ಕೂಡ ಅನೇಕರು ಹಬ್ಬಿರುವ ಸುದ್ದಿ ನಿಜಾ ಎಂದೇ ವಾದ ಮಾಡುತ್ತಿದ್ದಾರೆ. ಈ ವಾದಕ್ಕೆ ಪುಷ್ಠಿ ನೀಡುವಂತೆ ಅನೇಕ ವೇದಿಕೆಗಳಲ್ಲಿ ರಶ್ಮಿಕಾ ತಾವು ಪ್ರೀತಿಯಲ್ಲಿ ಬಿದ್ದಿರುವ ವಿಚಾರವನ್ನು ಪರೋಕ್ಷವಾಗಿ ಹೇಳಿದ್ದಾರೆ.

ಪುಷ್ಪ 2 ಚಿತ್ರದ ಬಿಡುಗಡೆ ಸಮಯದಲ್ಲಿ ರಶ್ಮಿಕಾಗೆ ನಿರೂಪಕರು ನೀವು ಸಿನಿಮಾ ಇಂಡಸ್ಟ್ರಿಯನ್ನು ಮದುವೆ ಆಗ್ತೀರಾ ಅಥವಾ ಹೊರಗಿನವರನ್ನು ಮದುವೆ ಆಗ್ತೀರಾ? ನೀವು ಕ್ಲ್ಯಾರಿಟಿ ಕೊಟ್ಟರೆ ನಾವು ಹುಡುಗನನ್ನು ಹುಡುಕುತ್ತೇವೆ ಎಂದು ಕೇಳಿದಾಗ ನಸು ನಕ್ಕ ರಶ್ಮಿಕಾ ಎಲ್ಲರಿಗೂ ಈ ವಿಷಯ ಗೊತ್ತು ಎಂದು ಹೇಳಿದ್ದರು.

ಆ ನಂತರ ಕಾಸ್ಮೋಪಾಲಿಟನ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಪ್ರೀತಿ, ಮದುವೆ, ಸಂಗಾತಿಯ ಬಗ್ಗೆ ಮಾತನಾಡಿರುವ ರಶ್ಮಿಕಾ ಮಂದಣ್ಣ ಜೀವನದ ಪ್ರತಿಯೊಂದು ಹಂತದಲ್ಲಿ ನನಗೆ ನನ್ನ ಸಂಗಾತಿ ಜೊತೆ ಇರಬೇಕು ಎಂದಿದ್ದರು. ನನಗೆ ನನ್ನ ಹುಡುಗನಿಂದ ಭದ್ರತೆ, ಸಹಾನುಭೂತಿ ಬೇಕು ಎಂದು ಹೇಳಿದ್ದರು. ರಶ್ಮಿಕಾ ಅವರ ಈ ಹೇಳಿಕೆ ಮದುವೆಯ ಕುರಿತ ಸುದ್ದಿಗಳಿಗೆ ಇನ್ನಷ್ಟು ರೆಕ್ಕೆ ಪುಕ್ಕ ಮೂಡಿದಂತಾಗಿತ್ತು. ಈಗ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಕ್ಯಾಮರಾ ಕಣ್ಣಿಗೆ ಸಿಕ್ಕಿ ಬಿದ್ದಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X