ನಾಳೆ ರಶ್ಮಿಕಾ ಮಂದಣ್ಣ ಅವರನ್ನು ಗರ್ಲ್‌ಫ್ರೆಂಡ್ ಆಗಿ ಪರಿಚಯಿಸಲಿದ್ದಾರೆ ವಿಜಯ್ ದೇವರಕೊಂಡ...!
ಚಿತ್ರರಂಗದಲ್ಲಿ ಕೆಲ ನಾಯಕ-ನಾಯಕಿಯರು ಜೊತೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅವರ ನಡೆ ಮತ್ತು ನುಡಿಯ ಮೇಲೆ ಕೂಡ ಯಾರಿಗೂ ಅನುಮಾನ ಬರಲ್ಲ. ಇನ್ನೂ ಕೆಲವರು ಎಲ್ಲೆಂದರಲ್ಲಿ ಓಡಾಡುತ್ತಾರೆ. ಕದ್ದು ಮುಚ್ಚಿ ಓಡಾಡಲು ಹೋಗಿ ಸಿಲುಕಿಕೊಳ್ಳುತ್ತಾರೆ. ಆದರೂ ಕೂಡ ತಮ್ಮ ಸಂಬಂಧವನ್ನು ಅಧಿಕೃತವಾಗಿ ಹೇಳುವುದಿಲ್ಲ. ಬದಲಿಗೆ ತಮ್ಮ ನಡುವೆ ಇರುವುದು ಕೇವಲ ಸ್ನೇಹ ಸೇತುವೆಯಷ್ಟೇ ಎಂದು ಹೇಳುತ್ತಾ ತಮ್ಮ ಜೊತೆ ಬೇರೆಯವರ ಕಾಲಹರಣವನ್ನು ಮಾಡುತ್ತಾರೆ. ಇದಕ್ಕೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮತ್ತೊಂದು ಉದಾಹರಣೆ.
ಹೌದು, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಡುವೆ ಇರುವುದು ಸ್ನೇಹ ಅಲ್ಲ ಬದಲಿಗೆ ಪ್ರೇಮ ಎನ್ನುವ ಗುಮಾನಿ ಅನೇಕರಲ್ಲಿದೆ. ಇದಕ್ಕೆ ಪೂರಕವಾಗಿ ಇಬ್ಬರು ಭಾರತದಿಂದ ಹಿಡಿದು ಸಪ್ತಸಾಗರದವರೆಗೆ ಜೊತೆಯಲ್ಲಿ ಓಡಾಡಿಕೊಂಡು ಬಂದಿದ್ದಾರೆ. ಕದ್ದು ಮುಚ್ಚಿ ಓಡಾಡುವ ಪ್ರಯತ್ನವನ್ನು ಮಾಡಿ ಸಿಲುಕಿ ಹಾಕಿಕೊಂಡಿದ್ದಾರೆ. ಆದರೂ ಕೂಡ ಇಬ್ಬರು ತಮ್ಮ ಸಂಬಂಧದ ಕುರಿತು ಎದ್ದ ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಗೋಜಿಗೆ ಹೋಗಿಲ್ಲ.

ಹೀಗಿರುವಾಗ ಈಗ ವಿಜಯ್ ದೇವರಕೊಂಡ ಈಗ ರಶ್ಮಿಕಾ ಮಂದಣ್ಣ ಅವರನ್ನು ಗರ್ಲ್‌ಫ್ರೆಂಡ್ ಎಂದು ಪರಿಚಯಿಸಲು ಮುಂದಾಗಿದ್ದಾರೆ. ಹಾಗಂಥ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಧಿಕೃತವಾಗಿ ತಮ್ಮ ಪ್ರೇಮ ಪುರಾಣವನ್ನು ಸವಿಸ್ತಾರವಾಗಿ ಹೇಳಲಿದ್ದಾರೆ ಎಂದುಕೊಳ್ಳಬೇಡಿ. ಯಾಕೆಂದರೆ. ರಶ್ಮಿಕಾ ಮಂದಣ್ಣ ಅವರನ್ನು ವಿಜಯ್ ದೇವರಕೊಂಡ ಗರ್ಲ್‌ಫ್ರೆಂಡ್ ಎಂದು ಪರಿಚಯವೇನೋ ಮಾಡಿಕೊಡಲಿದ್ದಾರೆ. ಆದರೆ ಅದು ರಿಯಲ್ ನಲ್ಲಿ ಅಲ್ಲ ಬದಲಿಗೆ ರೀಲ್‌ನಲ್ಲಿ.
ಹೌದು, ಪುಷ್ಪ 2 ಚಿತ್ರದ ಗೆಲುವಿನ ಗುಂಗಿನಲ್ಲಿರುವ ರಶ್ಮಿಕಾ ಮಂದಣ್ಣ ಈ ಹಿಂದೆ ಗರ್ಲ್‌ಫ್ರೆಂಡ್ ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದರು. ಈ ಚಿತ್ರದ ಟೀಸರ್‌ನ ನಾಳೆ { ಡಿಸೆಂಬರ್ 9 } ವಿಜಯ್ ದೇವರಕೊಂಡ ಬೆಳ್ಳಗ್ಗೆ 11;07ಕ್ಕೆ ಬಿಡುಗಡೆ ಮಾಡಲಿದ್ದಾರೆ. ಇನ್ನು ವಿಶೇಷ ಅಂದರೆ ಈ ಟೀಸರ್‌ಗೆ ವಿಜಯ್ ದೇವರಕೊಂಡ ತಮ್ಮ ಧ್ವನಿಯನ್ನು ಕೂಡ ನೀಡಿದ್ದಾರೆ.
ಇನ್ನು ಗರ್ಲ್‌ಫ್ರೆಂಡ್ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿರುವ ಸಿಹಿ ಸುದ್ದಿಯನ್ನು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಅವರ ಅಭಿಮಾನಿಗಳಿಗೆ ನೀಡಿದ ಬೆನ್ನಲ್ಲೇ ಅನೇಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಗರ್ಲ್‌ಫ್ರೆಂಡ್ ಟೀಸರ್ ಕಥೆ ಬಿಟ್ಟಾಕಿ ರಶ್ಮಿಕಾ ಮಂದಣ್ಣ ಅವರನ್ನು ಅಧಿಕೃತವಾಗಿ ನಮಗೆಲ್ಲ ನನ್ನ ಗರ್ಲ್‌ಫ್ರೆಂಡ್ ಎಂದು ಯಾವಾಗ ಪರಿಚಯ ಮಾಡಿಕೊಡ್ತೀರಾ ಎಂದು ಪ್ರಶ್ನೆಯನ್ನು ವಿಜಯ್ ದೇವರಕೊಂಡಗೆ ಕೇಳುತ್ತಿದ್ದಾರೆ.
ಇನ್ನುಳಿದಂತೆ ರೊಮ್ಯಾಂಟಿಕ್ ಡ್ರಾಮಾ ಚಿತ್ರವಾದ ದಿ ಗರ್ಲ್‌ಫ್ರೆಂಡ್ ಚಿತ್ರವನ್ನು ರಾಹುಲ್ ರವೀಂದ್ರನ್ ನಿರ್ದೇಶನ ಮಾಡಿದ್ದಾರೆ. GA2 ಪಿಕ್ಚರ್ಸ್, ಮಾಸ್ ಮೂವಿ ಮೇಕರ್ಸ್ ಮತ್ತು ಧೀರಜ್ ಮೊಗಿಲ್‌ನೇನಿ ಎಂಟ್ರಟೈನ್ಮೆಂಟ್ ಸಂಸ್ಥೆಗಳು ಈ ಚಿತ್ರಕ್ಕೆ ಹಣ ಹೂಡಿವೆ. ಇನ್ನು ವಿಶೇಷ ಅಂದರೆ ಈ ಚಿತ್ರದಲ್ಲಿ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಕೂಡ ತುಂಬಾನೇ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿದ್ದಾರೆ.


Click it and Unblock the Notifications











