ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡು ಭಾವಿ ಪತಿ ಜೊತೆ ಆಸ್ಟ್ರೇಲಿಯಾಗೆ ಹೋದ ಸಮಂತಾ..?

ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಆದರೆ ಕೆಲ ಒಮ್ಮೆ ಈ ಜೀವನದಲ್ಲಿ ತಿರುವು ಬರುತ್ತವೆ. ನಂಬಿಕೆ-ಅಪನಂಬಿಕೆ ಇತ್ಯಾದಿ ವಿಚಾರಗಳಿಂದ ಈ ಸಂಬಂಧ ಮುರಿದು ಬೀಳುತ್ತೆ.

ಹಾಗಂಥ, ಜೀವನ ಮುಗಿದೇಹೋಯ್ತು ಅಂತೇನು ಇಲ್ಲ. ಕೆಲವರು ಬದುಕಿನಲ್ಲಿ ಹಳೆಯದನ್ನೆಲ್ಲ ಮರೆತು ಮುನ್ನಡೆಯುತ್ತಾರೆ. ಏಕಾಂಗಿಯಾಗಿರಲು ಬಯಸುತ್ತಾರೆ. ಇನ್ನು ಕೆಲವರು ಸಮಯ-ಸಂದರ್ಭ ಕೂಡಿ ಬಂದಾಗ ತಮ್ಮ ಇಷ್ಟದ ಹುಡುಗ ಸಿಕ್ಕಾಗ ಮರು ಮದುವೆಯ ಆಲೋಚನೆ ಮಾಡುತ್ತಾರೆ. ಎರಡನೇ ಮದುವೆಯಾಗುವುದರ ಮೂಲಕ ಹೊಸ ಜೀವನ ಆರಂಭ ಮಾಡುತ್ತಾರೆ. ಸಮಂತಾ ಕೂಡ ಈ ಸಾಲಿಗೆ ಸೇರಿಕೊಳ್ಳುತ್ತಾರಾ ಗೊತ್ತಿಲ್ಲ. ಆದರೆ ಸದ್ಯ ಸಮಂತಾ ಅವರ ನಡೆ ಹಲವರಲ್ಲಿ ಅನುಮಾನವನ್ನು ಮೂಡಿಸಿದೆ. ಸಮಂತಾ ಅವರ ಸಾಮಾಜಿಕ ಜಾಲತಾಣದ ಮೇಲೆ ಸದ್ಯ ಒಂದು ವರ್ಗ ಕಣ್ಣಿಟ್ಟಿದೆ. ಇದಕ್ಕೆ ಪೂರಕವಾಗಿ ಸ್ಯಾಮ್‌ಗೆ ಅಭಿಮಾನಿಯೊಬ್ಬ ನೇರಾನೇರವಾಗಿಯೇ ಪ್ರಶ್ನೆಯನ್ನು ಕೇಳಿದ್ದಾನೆ.

Amid engagement rumours Samantha Ruth Prabhu reveals her mystery photographer in Sydney

ಹೌದು, ಅಸಲಿಗೆ ಕಳೆದ ಕೆಲ ದಿನಗಳಿಂದ ತುಂಬಾನೇ ಖುಷಿ ಖುಷಿಯಾಗಿರುವ ಸಮಂತಾ ಸದ್ಯ ಆಸ್ಟ್ರೇಲಿಯಾದಲ್ಲಿ ಜಾಲಿ ಮಾಡುತ್ತಿದ್ದಾರೆ. ದಿನಕ್ಕೆ ಕಡಿಮೆ ಅಂದರು ತಮ್ಮ ಪ್ರವಾಸದ ಇಪ್ಪತ್ತು ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕಾಡು-ಮೇಡು-ಪ್ರಾಣಿ-ಪ್ರವಾಸ ಎಂದೆಲ್ಲ ತಮ್ಮ ಫೋಟೊಗಳಿಗೆ ಕ್ಯಾಪ್ಷನ್ ನೀಡುತ್ತಿದ್ದಾರೆ.

ಸಮಂತಾ ಅವರ ಈ ಹಾವ ಭಾವದಿಂದ ಸಹಜವಾಗಿ ಅನೇಕರಲ್ಲಿ ಅನುಮಾನ ಮೂಡಿದೆ. ಯಾಕೆಂದರೆ.. ತಮ್ಮ ನೆಚ್ಚಿನ ನಾಯಕಿ ಯಾವುದಾದರೂ ಹುಡುಗನ ಜೊತೆ ಕಾಣಿಸಿಕೊಂಡರೆ ಮಾತ್ರ ಅವರ ಅಭಿಮಾನಿಗಳು ತಲೆಯೆಲ್ಲ ಕೆದರಿಕೊಳ್ಳಲ್ಲ. ಬದಲಿಗೆ ಪ್ರವಾಸಕ್ಕೆ ತೆರಳಿದರು ಕೂಡ ತಲೆ ಕೆಡಿಸಿಕೊಳ್ಳುತ್ತಾರೆ. ತಮ್ಮ ನೆಚ್ಚಿನ ನಾಯಕಿ ಜೊತೆ ಯಾರೆಲ್ಲ ಪ್ರವಾಸಕ್ಕೆ ಹೋಗಿರಬಹುದು ಎಂದು ಲೆಕ್ಕಾಚಾರವನ್ನು ಹಾಕುತ್ತಾರೆ. ಸಮಂತಾ ವಿಚಾರದಲ್ಲಿ ಕೂಡ ಇದೇ ಆಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಮಂತಾ ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯ ನಿರ್ಮಾಪಕ ಮತ್ತು ನಿರ್ದೇಶಕರಲ್ಲಿ ಒಬ್ಬರಾದ ರಾಜ್ ನಿಡಿಮೋರು ಜೊತೆ ತಳುಕು ಹಾಕಿಕೊಂಡಿದೆ. ಹೀಗಾಗಿಯೇ ಅಭಿಮಾನಿಯೊಬ್ಬ ಹಿಂದೆ ಮುಂದೆ ನೋಡದೇ ಸಮಂತಾಗೆ ಯಾರ ಜೊತೆ ಹೋಗಿದ್ದೀರಾ ನಿಮ್ಮ ಈ ಫೋಟೊಗಳನ್ನೆಲ್ಲ ಯಾರು ತೆಗೆಯುತ್ತಿದ್ದಾರೆ ಎಂದು ನೇರವಾಗಿಯೇ ಪ್ರಶ್ನೆಯನ್ನು ಕೇಳಿದ್ದಾನೆ.

ಇನ್ನು ಸಾಮಾನ್ಯವಾಗಿ ಇಂತಹ ಪ್ರಶ್ನೆಗಳನ್ನೆಲ್ಲ ತಾರೆಯರು ಕಡೆಗಣಿಸುತ್ತಾರೆ. ಮತ್ತೂ ಕೆಲವರು ಕೋಪವನ್ನು ಮಾಡಿಕೊಳ್ಳುತ್ತಾರೆ. ಆದರೆ ವಿಶೇಷ ಅಂದರೆ ಅಭಿಮಾನಿ ಕೇಳಿದ ಈ ಪ್ರಶ್ನೆಗೆ ಸಮಂತಾ ಕೋಪ ಮಾಡಿಕೊಂಡಿಲ್ಲ. ವ್ಯೆಯಕ್ತಿಕ ಪ್ರಶ್ನೆ ಕೇಳಿದ ಅಭಿಮಾನಿಯನ್ನು ಬ್ಲಾಕ್ ಕೂಡ ಮಾಡಿಲ್ಲ. ಬದಲಿಗೆ ಸಮಾಧಾನದಿಂದ ಉತ್ತರವನ್ನು ನೀಡಿದ್ದಾರೆ. ಸಿಡ್ನಿ ಟೂರ್ ಗೈಡ್ ಸಂಸ್ಥೆಯ ನವೋಮಿ ನನ್ನ ಭಾವಚಿತ್ರಗಳನ್ನು ತೆಗೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಆದರೂ ಕೂಡ ಸಮಂತಾ ಅವರ ಈ ಉತ್ತರದಿಂದ ಅನೇಕರಿಗೆ ಸಮಾಧಾನವಾಗಿಲ್ಲ. ಯಾಕೆಂದರೆ ಕಳೆದ ಹತ್ತು ಹದಿನೈದು ದಿನದಿಂದ ರಾಜ್ ನಿಡಿಮೋರು ಜೊತೆ ಸಮಂತಾ ರಹಸ್ಯವಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಅಂತೆ ಕಂತೆಯ ಸಂತೆಯಲ್ಲಿ ಚಾಲ್ತಿಯಲ್ಲಿದೆ. ಸಾಲದಕ್ಕೆ ಕೈಯಲ್ಲಿ ಡೈಮಂಡ್ ರಿಂಗ್ ಹಾಕಿಕೊಂಡು ಸಾಂಪ್ರದಾಯಿಕ ಉಡುಗೆಯಲ್ಲಿ ಸಮಂತಾ ಕುಳಿತಿರುವ ಫೋಟೊ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎಂದಿನಂತೆ ಸಮಂತಾ ಈ ಗಾಳಿ ಸುದ್ದಿಗಳ ಕುರಿತು ಸ್ಪಷ್ಟೀಕರಣ ನೀಡಿಲ್ಲ.

ಹೀಗಾಗಿಯೇ ರಾಜ್ ನಿಡಿಮೋರು ಮತ್ತು ಸಮಂತಾ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ ಎಂಬ ಸುದ್ದಿಯನ್ನು ನಿಜಾ ಎಂದುಕೊಂಡಿರುವ ಅನೇಕರು ರಾಜ್ ನಿಡಿಮೋರು ಜೊತೆಯಲ್ಲಿಯೇ ಸಮಂತಾ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿರಬಹುದು, ರಾಜ್ ಅವರೇ ಸಮಂತಾ ಅವರ ಫೋಟೊಗಳನ್ನು ತೆಗೆಯುತ್ತಿರಬಹುದು ಎನ್ನುವ ಅನುಮಾನವನ್ನು ಸದ್ಯ ವ್ಯಕ್ತಪಡಿಸುತ್ತಿದ್ದಾರೆ. ಈ ವಿಷಯದ ಕುರಿತು ತಮ್ಮ ಸಮಯವನ್ನು ಹಾಳು ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಕೂಡ ಮಾಡುತ್ತಿದ್ದಾರೆ. ನಿಜಕ್ಕೂ ಸಮಂತಾ ಮತ್ತು ರಾಜ್ ನಿಡಿಮೋರು ಪ್ರೀತಿಸುತ್ತಿದ್ದಾರಾ ? ಇಬ್ಬರು ಮದುವೆಯಾಗ್ತಾರಾ ? ಉತ್ತರ ಸರಿಯಾದ ಸಮಯ ಬಂದಾಗಲೇ ಗೊತ್ತಾಗಲಿದೆ.

More from Filmibeat

Read more about: samantha filmibeat news affair
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X