ಮಾಲಿವುಡ್‌ನಲ್ಲಿ ಪಾತ್ರಕ್ಕಾಗಿ ಪಲ್ಲಂಗ ಕರಾಳ ಮುಖ; ನನಗೂ ಈ ಅನುಭವ ಆಗಿತ್ತು ಎಂದ ದಿಗ್ಗಜ ನಟನ ಪುತ್ರಿ

ಸಿನಿಮಾಗಳಲ್ಲಿ ಅವಕಾಶ ಕೊಡುವ ನೆಪದಲ್ಲಿ ಹೆಣ್ಣುಮಕ್ಕಳನ್ನು ಮಂಚಕ್ಕೆ ಕರೆಯುವ ಹೀನ ಸಂಸ್ಕೃತಿ ಚಿತ್ರರಂಗದಲ್ಲಿದೆ. ಸಾಕಷ್ಟು ನಟ-ನಟಿಯರು ಈ ಬಗ್ಗೆ ಮಾತನಾಡುತ್ತಿದ್ದಾರೆ. ಮೀಟು ಅಭಿಯಾನ ಶುರುವಾದ ಬಳಿಕ ಹಲವು ನಟಿಯರು ತಮಗಾದ ಕಹಿ ಅನುಭವಗಳ ಬಗ್ಗೆ ದನಿ ಎತ್ತಿದ್ದಾರೆ. ಪ್ರಕರಣಗಳು ದಾಖಲಾಗಿವೆ.

ಪಕ್ಕದ ಮಲಯಾಳಂ ಚಿತ್ರರಂಗದಲ್ಲೂ ಇಂತಹ ಕಾಮುಕರು ಇದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಲೇ ಇತ್ತು. ಹೀಗೆ ನಟಿಯರು ಲೈಂಗಿಕ ಶೋಷಣೆಗೆ ಗುರಿಯಾಗುತ್ತಿರುವ ಬಗ್ಗೆ ನಡೆಯುತ್ತಿದ್ದ ಚರ್ಚೆಯನ್ನು ಅಲ್ಲಿನ ಸರ್ಕಾರ ಗಂಭೀರವಾಗಿ ಪರಿಗಣಿಸಿತ್ತು. ಜಸ್ಟಿಸ್​ ಹೇಮಾ ನೇತೃತ್ವದ ಕಮಿಟಿಯೊಂದನ್ನು ರಚಿಸಿ ಈ ಬಗ್ಗೆ ವರದಿ ನೀಡುವಂತೆ ಹೇಳಿತ್ತು. ಸದ್ಯ ಹೇಮಾ ಕಮಿಟಿ ನೀಡಿದ ವರದಿಯದಲ್ಲಿ ಕೇಳಿ ಬರುತ್ತಿರುವ ಆರೋಪಗಳು ನಿಜ ಎಂದು ಹೇಳಲಾಗಿದೆ.

Amid Hema Committee report telugu actress Lakshmi Manchu talks about her bad experience

ಹೇಮಾ ಕಮಿಟಿ ವರದಿಯ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿದೆ. ಹಲವು ನಟ-ನಟಿಯರು ಈ ಬಗ್ಗೆ ಮಾತನಾಡುತ್ತಿದ್ದಾರೆ. ತೆಲುಗು ನಟಿ ಮಂಚು ಲಕ್ಷ್ಮಿ ಕೂಡ ಈ ಬಗ್ಗೆ ಮತ್ತೊಮ್ಮೆ ಮೌನ ಮುರಿದಿದ್ದಾರೆ. ಚಿತ್ರರಂಗದಲ್ಲಿರುವ ಇಂತಾದೊಂದು ಹೀನ ಸಂಸ್ಕೃತಿ ಬಗ್ಗೆ ಹಿಂದೆಯೂ ಆಕೆ ಮಾತನಾಡಿದ್ದರು. ತೆಲುಗಿನ ಖ್ಯಾತ ನಟ ಮೋಹನ್ ಬಾಬು ಪುತ್ರಿ ಈಕೆ.

ಸ್ಟಾರ್ ನಟನ ಮಗಳಾದರೂ ಚಿತ್ರರಂಗದಲ್ಲಿ ತಮಗೂ ಕಹಿ ಅನುಭವ ಆಗಿತ್ತು ಎಂದು ಆಕೆ ಹಿಂದೆ ಹೇಳಿದ್ದರು. ಹೇಮಾ ಕಮಿಟಿ ವರದಿ ಬೆನ್ನಲ್ಲೇ ಮಂಚು ಲಕ್ಷ್ಮಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. ಕರಿಯರ್ ಆರಂಭದಲ್ಲಿ ನನಗೂ ಕಿರುಕುಳ ಎದುರಾಗಿತ್ತು ಎಂದು ಆಕೆ ಹೇಳಿದ್ದಾರೆ. ನಾನು ಒಂದು ವಿಷಯ ಹೇಳುತ್ತೇನೆ. ಜೀವನದಲ್ಲಿ ಮಹಿಳೆಯರಿಗೆ ಅನ್ಯಾವಾಗುತ್ತಿದೆ ಎಂದಿದ್ದಾರೆ.

"ಚಿತ್ರರಂಗ ಮಾತ್ರವಲ್ಲ ಎಲ್ಲಾ ಕಡೆ ಮಹಿಳೆಯರು ಬಲಿಪಶು ಆಗುತ್ತಿದ್ದಾರೆ. ಇದನ್ನು ಹೇಗೆ ಬದಲಾಯಿಸಲು ಸಾಧ್ಯ. ಮಹಿಳೆಯರು ನಿಮಗೆ ನೀವೇ ಹೋರಾಡಬೇಕು. ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ನನ್ನನ್ನು ಕೆಲವರು ತುಳಿಯಲು ನೋಡಿದರು. ಇದರಿಂದ ನಾನು ಒಂದಷ್ಟು ಕಳೆದುಕೊಂಡಿರಬಹುದು. ಆದರೆ ನನ್ನನ್ನು ತುಳಿಯಲು ಬಯಸಿದವರಿಗೆ ನಾನು ಬೆಳೆಯುತ್ತಿದ್ದೇನೆ ಎಂದು ಗೊತಿತ್ತು."

Amid Hema Committee report telugu actress Lakshmi Manchu talks about her bad experience

"ನಾನು ಆ ವಿಷಯವನ್ನು ಹೊರಗೆ ಹೇಳುವುದಿಲ್ಲ ಎನ್ನುವ ಧೈರ್ಯದಿಂದಲೇ ಮಹಿಳೆಯರ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ. ಅಂತಹವರಿಗೆ ಸರಿಯಾಗಿ ಬುದ್ದಿ ಕಲಿಸಬೇಕು. ಆದರೆ ಎಚ್ಚರಿಕೆಯಿಂದ ವರ್ತಿಸಬೇಕು. ನನಗೆ ಆರಂಭದಲ್ಲಿ ಇಂತಹ ಪರಿಸ್ಥಿತಿ ಎದುರಾದಾಗ ನಾನು ಬಹಳ ಅವರೊಟ್ಟಿಗೆ ಕಠಿಣವಾಗಿ ನಡೆದುಕೊಂಡೆ. ಅದಕ್ಕೆ ಒಂದಷ್ಟು ಅವಕಾಶಗಳು ಮಿಸ್ ಆಯಿತು" ಎಂದು ಮಂಚು ಲಕ್ಷ್ಮಿ ಹೇಳಿದ್ದಾರೆ.

ಇನ್ನು ಮಂಚು ಲಕ್ಷ್ಮಿ ಎರಡು ವರ್ಷಗಳ ಹಿಂದೆ 'ಮಾನ್ಸ್ಟರ್' ಚಿತ್ರದ ಮೂಲಕ ಮಲಯಾಳಂ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು. ತಮ್ಮ ಅನುಭವದ ಬಗ್ಗೆ ಮಾತನಾಡುತ್ತಾ, "ನನ್ನ ಪರಿಸ್ಥಿತಿ ವಿಭಿನ್ನವಾಗಿತ್ತು ಏಕೆಂದರೆ ನನ್ನ ತಂದೆ (ಮೋಹನ್ ಬಾಬು) ಹಾಗೂ ಮೋಹನ್ ಲಾಲ್ ಒಳ್ಳೆ ಸ್ನೇಹಿತರು. ನಾನು ಮೋಹನ್ ಲಾಲ್ ಅವರೊಂದಿಗೆ ಕೆಲಸ ಮಾಡಿದ್ದೇನೆ. ಅಲ್ಲಿದ್ದವರೆಲ್ಲರೂ ನನ್ನ ತಂದೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅವರು ನನಗೆ ಆ ಗೌರವ ನೀಡಿದರು" ಎಂದು ನೆನಪಿಸಿಕೊಂಡಿದ್ದಾರೆ.

ತೆಲುಗು ನಟಿ ಮಂಚು ಲಕ್ಷ್ಮಿ ಅಮೆರಿಕಾದಲ್ಲಿ ಓದಿ ಬೆಳೆದವರು. ತಂದೆ ಮೋಹನ್ ಬಾಬು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ನಿರ್ಮಾಪಕರು ಆಗಿದ್ದಾರೆ. ಆದರೂ ಲಕ್ಷ್ಮಿ ಅವಕಾಶಗಳನ್ನು ನೀಡಲು ಕೆಲವರ ಕೆಟ್ಟದಾಗಿ ನಡೆಸಿಕೊಳ್ಳುವ ಪ್ರಯತ್ನ ಮಾಡಿದ್ದರು ಎನ್ನುವುದು ಅಚ್ಚರಿ ಮೂಡಿಸುತ್ತದೆ.

More from Filmibeat

English summary
Tollywood actress opens up about her Casting Couch;
Read more about: malayalam metoo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X