'ಕನ್ನಡ'ಕ್ಕೆ ಅಲ್ಲು ಅರ್ಜುನ್ ಮರ್ಯಾದೆ ಕೊಡ್ದೇ ಇದ್ದರೂ ಓಕೆ, 'ಪುಷ್ಪ 2' ನಾವು ನೋಡ್ತೇವೆ ಎಂದ ಬೆಂಗಳೂರಿಗರು..!

ಅಲ್ಲು ಅರ್ಜುನ್ ಕನ್ನಡಿಗರನ್ನು ಕಡೆಗಣಿಸಿದ್ದಾರೆ. ಎಲ್ಲೆಡೆ ಪ್ರಚಾರವನ್ನು ಮಾಡಿದ ಅಲ್ಲು ಅರ್ಜುನ್ ಕರುನಾಡಿನಲ್ಲಿ ಪ್ರಚಾರವನ್ನು ಮಾಡಿಲ್ಲ. ಇನ್ನೂ ಅಲ್ಲು ಅರ್ಜುನ್‌ಗೆ ತೆಲುಗು ಮಾತ್ರ ಅಲ್ಲ ಹಿಂದಿ, ತಮಿಳು, ಮಲಯಾಳಂ ಭಾಷೆ ಮಾತನಾಡುವುದು ಗೊತ್ತು. ಅರೇಬಿಕ್ ಭಾಷೆ ಕೂಡ ಗೊತ್ತು. ಆದರೆ, ನಾವು ಯಾವ ನೆಲದ ಮೇಲೆ ನಿಂತಿರುತ್ತೇವೋ ಆ ನೆಲಕ್ಕೆ ಗೌರವ ಕೊಡಿ ಎಂದು ಹೇಳುವ ಅಲ್ಲು ಅರ್ಜುನ್ ಕನ್ನಡ ಭಾಷೆಗೆ ಗೌರವ ಕೊಡಲಿಲ್ಲ. ಕನ್ನಡದಲ್ಲಿ ಕೂಡ ತಮ್ಮ ಚಿತ್ರ ಬರುತ್ತಿದೆ ಎನ್ನುವ ಮಾತನ್ನು ಕೂಡ ಹೇಳಿಲ್ಲ.

ಆದರೂ.. ನಾವು ಕನ್ನಡಿಗರು ವಿಶಾಲ ಹೃದಯದವರು. ಕಾಲ ಕಾಲಕ್ಕೆ ಈ ಮಾತನ್ನ ಸಾಬೀತು ಮಾಡಿದ ಹೆಗ್ಗಳಿಕೆ ಕೂಡ ಕನ್ನಡಿಗರದ್ದೇ. ಕನ್ನಡ ಚಿತ್ರಗಳನ್ನ ಕಡೆಗಣಿಸಿ ಹಿಂದಿ, ತೆಲುಗು, ತಮಿಳು, ಚಿತ್ರಗಳನ್ನ ಮೊದಲ ದಿನದಂದೆ ಕಣ್ತುಂಬಿಕೊಳ್ಳುವ 'ಹವ್ಯಾಸ'ವನ್ನ ಬೆಳೆಸಿಕೊಂಡಿರುವ ನಮ್ಮಲ್ಲಿನ ಅನೇಕರು ಈಗ ಇದೇ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರವನ್ನು ನೋಡಲು ಮುಗಿ ಬಿದ್ದಿರುವುದು ಈ ದಿನದ ಬಹುದೊಡ್ಡ ದುರಂತ.

Amid outrage against Pushpa 2 in Karnataka Bengaluru residents went crazy for the film s paid premi

ಹೌದು, ಪುಷ್ಪ 02 ಚಿತ್ರದ ಮೊದಲ ಪ್ರದರ್ಶನ ಬೆಂಗಳೂರಿನಲ್ಲಿ ಹೆಚ್ಚು ಕಡಿಮೆ 70 + ಚಿತ್ರಮಂದಿರಗಳಲ್ಲಿ ಇಂದು ರಾತ್ರಿ 09-30ರಿಂದ ಆರಂಭವಾಗುತ್ತಿದೆ. 800 ರೂಪಾಯಿಯಿಂದ ಶುರುವಾಗಿ 1600ವರೆಗೆ ಟಿಕೆಟ್ ದರವನ್ನು ನಿಗಧಿ ಮಾಡಲಾಗಿದೆ. ವಿಪರ್ಯಾಸ ಅಂದರೆ ಬಹುತೇಕ ಕಡೆ ಚಿತ್ರದ ಟಿಕೆಟ್‌ಗಳು ಬಿಕರಿಯಾಗಿವೆ. ಬನ್ನೇರಘಟ್ಟ ರಸ್ತೆಯಲ್ಲಿರುವ ಪಿವಿಆರ್ ವೆಗಾ ಸಿಟಿಯಲ್ಲಿ ರಾತ್ರಿ 09-45 ಮತ್ತು 10ರ ಪ್ರದರ್ಶನದ ಟಿಕೆಟ್ ಸೋಲ್ಡ್ ಔಟ್ ಆಗಿವೆ. ವೈಟ್‌ಫೀಲ್ಡ್ ನ ಪಿವಿಆರ್ ನಲ್ಲಿ ಕೂಡ ಕಥೆ ಭಿನ್ನ ಇಲ್ಲ. ಓರಾಯನ್ ಮಾಲ್ ಮತ್ತು ಕೋರಮಂಗಲದ ಪಿವಿಆರ್‌ನಲ್ಲಿ ಕೂಡ ಕಥೆ ಸೇಮ್ To ಸೇಮ್.

ಕೇವಲ ಇಷ್ಟೇ ಅಲ್ಲ ಮಾಗಡಿ ರಸ್ತೆಯ GT ವರ್ಲ್ಡ್ ಮಾಲ್, ಮಲ್ಲೇಶ್ವರಂನ ಮಂತ್ರಿ ಸ್ಕ್ವೈರ್, ರಾಯಲ್ ಮೀನಾಕ್ಷಿ ಮಾಲ್, ಮೈಸೂರು ರಸ್ತೆಯ ಗ್ಲೋಬಲ್ ಮಾಲ್, ಹೀಗೆ ಎತ್ತ ಕಣ್ಣಾಯಿಸಿದರೂ ಜನವೋ ಜನ. ಇದು ಕೇವಲ ಇದೊಂದು ದಿನ ಮಾತಲ್ಲ. ಒಂದೆರಡು ಪ್ರದರ್ಶನದ ಮಾತಲ್ಲ. ನಾಳೆಯ ಪ್ರದರ್ಶನಕ್ಕೂ ಕೂಡ ನಾ ಮುಂದು ತಾ ಮುಂದು ಎಂದು ಬೆಂಗಳೂರಿಗರು ಬುಕ್ ಮೈ ಶೋನ ಬಾಗಿಲು ಬಡೆಯುತ್ತಿದ್ದಾರೆ. ಟಿಕೆಟ್ ಖರೀದಿಸುತ್ತಿದ್ದಾರೆ.

ಇನ್ನೂ ಏಷ್ಯಾದ ದೊಡ್ಡ ಮಾಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಾಲ್ ಆಫ್ ಏಷ್ಯಾದವರ ಕಣ್ಣಿಗೆ ಪುಷ್ಪ ಎದುರು ಕನ್ನಡದ ಯಾವ ಚಿತ್ರ ಕೂಡ ಕಾಣುತ್ತಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಇದೊಂದೇ ಮಾಲ್‌ನಲ್ಲಿ ಪುಷ್ಪ 2ಗೆ ನಾಳೆ 35 ಪ್ರದರ್ಶನಗಳನ್ನು ಮೀಸಲಿಡಲಾಗಿದೆ. ದುರಂತ ಅಂದರೆ 09 ಪ್ರದರ್ಶನವನ್ನು ಹೊರತು ಪಡಿಸಿದರೆ ಮಿಕ್ಕೆಲ್ಲ ಶೋದ ಟಿಕೆಟ್ ಬಹುತೇಕ ಸೋಲ್ಡ್ ಔಟ್ ಆಗಿವೆ.

amid-outrage-against-pushpa-2-in-karnataka-bengaluru-residents-went-crazy-for-the-films-paid-premi

ಒಟ್ನಲ್ಲಿ ಕಾಲಾನುಕಾಲದಿಂದ ತಮಿಳು, ತೆಲುಗು ಮತ್ತು ಹಿಂದಿಯ ದೊಡ್ಡ ಸಿನಿಮಾಗಳು ಕನ್ನಡದ ಚಿತ್ರಗಳನ್ನು ತುಳಿದುತುಳಿದೇ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡಿವೆ. ಈಗ ಮಲಯಾಳಂ ಸಿನಿಮಾ ಅಬ್ಬರ ಆರಂಭವಾಗುತ್ತಿದೆ. ಬೆಂಗಳೂರಿನ ಅನೇಕ ಕಡೆ ಮಲಯಾಳಂ ಸಿನಿಮಾಗಳೂ ಯಥೇಚ್ಚವಾಗಿ ಪ್ರದರ್ಶನಗೊಳ್ಳುತ್ತಿವೆ. ಕೂಡ ಕನ್ನಡ ಚಿತ್ರರಂಗದ ಮೇಲೆ, ಕನ್ನಡ ಚಿತ್ರಗಳ ಮೇಲೆ ಹಿಡಿತವನ್ನ ಸಾಧಿಸುತ್ತಿವೆ . ಇದಕ್ಕೆ ಪುಷ್ಪ 2 ಸದ್ಯದ ಉದಾಹರಣೆ. ಇನ್ನಾದರೂ ಪರಭಾಷೆ ಸಿನಿಮಾಗಳ ಈ ಹಾವಳಿ ಬಗ್ಗೆ ಮೌನಕ್ಕೆ ಶರಣಾದ ಚಿತ್ರರಂಗದ ದಿಗ್ಗ ದಿಗ್ಗಜರು ಮಾತನಾಡ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Read more about: allu arjun tollywood ticket price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X