ಮಗನನ್ನು ಹೊಗಳುವ ಭರದಲ್ಲಿ ನ್ಯಾಷನಲ್ ಅವಾರ್ಡ್ ಬಗ್ಗೆ ಚಿರಂಜೀವಿ ಇದೆಂಥಾ ಮಾತು; ಭಾರೀ ಆಕ್ರೋಶ

ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ಸೂಪರ್ ಹಿಟ್ ಆಗಿದೆ. 3 ವಾರಗಳ ಬಳಿಕ ಕೂಡ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. 'ಪೆದ್ದಿ' ಮೆಗಾ ಬ್ಲಾಕ್‌ಬಸ್ಟರ್ ಈವೆಂಟ್ ಹೆಸರಿನಲ್ಲಿ ಹೈದರಾಬಾದ್‌ನಲ್ಲಿ ಸಿನಿಮಾ ಸಕ್ಸಸ್ ಸೆಲಬ್ರೇಷನ್ ಮಾಡಲಾಯಿತು. ರಾಮ್‌ಚರಣ್ ತಂದೆ ಚಿರಂಜೀವಿ, ನಿರ್ದೇಶಕ ಸುಕುಮಾರ್ ಸೇರಿ ಹಲವು ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

'ಪೆದ್ದಿ' ಚಿತ್ರದ ಗೆಲುವು ಹಾಗೂ ರಾಮ್‌ಚರಣ್ ನಟನೆಯ ಬಗ್ಗೆ ಪ್ರೇಕ್ಷಕರ ಮೆಚ್ಚುಗೆಯ ಮಾತುಗಳನ್ನು ಕೇಳಿ ಚಿರು ಫಿದಾ ಆಗಿದ್ದಾರೆ. ಮಗನನ್ನು ಮೆಚ್ಚಿ ಕೊಂಡಾಡುವ ಭರದಲ್ಲಿ ರಾಷ್ಟ್ರಪ್ರಶಸ್ತಿ ಬಗ್ಗೆ ವೇದಿಕೆಯಲ್ಲಿ ಮೆಗಾಸ್ಟಾರ್ ಆಡಿದ ಅದೊಂದು ಮಾತು ವೈರಲ್ ಆಗ್ತಿದೆ. ಇದೇ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ. ಕೆಲವರು ಟ್ರೋಲ್ ಮಾಡಿ ಬೇಸರ ಹೊರ ಹಾಕುತ್ತಿದ್ದಾರೆ.

Amid Peddi success Chiranjeevi s National Award Remarks Trigger Fresh Debate

'ಪೆದ್ದಿ' ಸಕ್ಸಸ್. ತಂತ್ರಜ್ಞರು, ಕಲಾವಿದರ ಶ್ರಮದ ಬಗ್ಗೆ ಚಿರಂಜೀವಿ ಮಾತನಾಡಿದ್ದಾರೆ. ಬಳಿಕ ರಾಮ್‌ಚರಣ್ ನಟನೆಯನ್ನು ಮೆಚ್ಚಿ ಕೊಂಡಾಡಿದ್ದಾರೆ. ಮಗನ ಬಗ್ಗೆ ತಂದೆ ಮಾತನಾಡುವುದು ವಿಶೇಷ ಎನಿಸುವುದಿಲ್ಲ. ಆದ್ರೆ ಚಿತ್ರರಂಗದ ಸಹ ಕಲಾವಿದನಾಗಿ ನಾನು ಮಾತನಾಡ್ತೀನಿ. ಇಷ್ಟು ಅದ್ಭುತವಾಗಿ ಬಹಳ ಪರಿಪೂರ್ಣವಾಗಿ ಚರಣ್ ನಟಿಸಿದ್ದಾನೆ. ಮನಸ್ಫೂರ್ತಿಯಾಗಿ ಅಭಿನಂದಿಸುತ್ತೀನಿ. ಒಬ್ಬ ತಂದೆಯಾಗಿ ಹೆಮ್ಮೆ ಪಡ್ತೀನಿ ಎಂದಿದ್ದಾರೆ.

ಬಳಿಕ ಮಾತು ಮುಂದುವರೆಸಿ "ರಂಗಸ್ಥಳಂ ಚಿತ್ರದಲ್ಲೇ ಚರಣ್ ಎಷ್ಟು ಅದ್ಭುತವಾಗಿ ನಟಿಸಿದ್ದಾನೆ ಎಂದುಕೊಂಡಿದ್ದೆವು. ಆ ಬಳಿಕ 'ಆರ್‌ಆರ್‌ಆರ್' ಈಗ 'ಪೆದ್ದಿ' ಹೀಗೆ ನಾಲ್ಕೈದು ವರ್ಷಗಳಲ್ಲಿ ಇಂತಹ ಪಾತ್ರಗಳು ಸಿಗುತ್ತೆ ಎಂದುಕೊಂಡಿರಲಿಲ್ಲ. ನಾನು, ಪತ್ನಿ ಸುರೇಖಾ ಸಿನಿಮಾ ನೋಡುವಾಗ ಚರಣ್ ಕಾಣಲಿಲ್ಲ. 'ಪೆದ್ದಿ' ಮಾತ್ರ ಕಾಣ್ತಿದ್ದ. ಪಾತ್ರದಲ್ಲಿ ಪರಕಾಶ ಪ್ರವೇಶ ಮಾಡಿ ನಟಿಸಿದರೆ ಮಾತ್ರ ಅದು ಸಾಧ್ಯ. ಒಬ್ಬ ಸ್ಟಾರ್ ಮಗ, ಗೋಲ್ಡನ್ ಸ್ಪೂನ್ ಜೊತೆ ಹುಟ್ಟಿದ್ದವನು. ಚರಣ್‌ಗೆ ಇಷ್ಟಪಟ್ಟು ಕಷ್ಟಪಟ್ಟು ನಟಿಸಿದ್ದಾನೆ" ಎಂದಿದ್ದಾರೆ.

ರಾಷ್ಟ್ರಪ್ರಶಸ್ತಿ ಕೊಡುವಂತಹ ಅಭಿನಯ ಇದು ಎಂದು ಎಲ್ಲರೂ ಹೇಳ್ತಿದ್ದಾರೆ. ರಾಷ್ಟ್ರಪ್ರಶಸ್ತಿ ಸಿಗಲಿ, ಸಿಗದೇ ಇರಲಿ ಅದು ದೊಡ್ಡ ಸಮಸ್ಯೆ ಅಲ್ಲ. 'ರಂಗಸ್ಥಳಂ' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬರಬೇಕು ಎಂದು ಸುಕುಮಾರ್ ಹೇಳುತ್ತಿದ್ರು. ಆದ್ರೆ ಪ್ರಶಸ್ತಿ ಬರಲೇಬೇಕು ಅಂತೇನು ಇಲ್ಲ. ಪ್ರಶಸ್ತಿ ಬರುವುದಕ್ಕೆ ನಾನಾ ದಾರಿಯಿದೆ. ಅದ್ಭುತ ನಟನೆ ಮಾಡಿದ್ದಾನೆ ಎಂದು ಪ್ರೇಕ್ಷಕರು ಹೇಳುವುದಕ್ಕಿತ ದೊಡ್ಡ ಪ್ರಶಸ್ತಿ ಬೇಕಿಲ್ಲ. ಅವಾರ್ಡ್ ವಿನ್ನಿಂಗ್ ಪರ್ಫಾರ್ಮೆನ್ಸ್ ಮಾಡಿದ್ದಾನೆ ಎಂದು ಎಲ್ಲರೂ ಹೇಳುವುದು ಸಾಕು ಚಿರಂಜೀವಿ ತಿಳಿಸಿದ್ದಾರೆ.

ಪ್ರಶಸ್ತಿ ಬರುವುದಕ್ಕೆ ನಾನಾ ದಾರಿಗಳಿವೆ ಎಂದು ಚಿರಂಜೀವಿ ಹೇಳಿರುವುದು ಈಗ ಚರ್ಚೆಗೆ ಕಾರಣವಾಗಿದೆ. ರಾಷ್ಟ್ರಪ್ರಶಸ್ತಿ ಆಯ್ಕೆಯನ್ನೇ ಚಿರಂಜೀವಿ ಪ್ರಶ್ನಿಸುತ್ತಿದ್ದಾರಾ? ಹಾಗಿದ್ರೆ ಇಷ್ಟು ದಿನ ಪ್ರಶಸ್ತಿ ಅರ್ಹರಿಗೆ ಸಿಗಲಿಲ್ಲವೇ ಎಂದು ತಿರುಗೇಟು ನೀಡುತ್ತಿದ್ದಾರೆ. 'ಪುಷ್ಪ'-2 ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಹಾಗಿದ್ರೆ ಅದು ಸಿಕ್ಕಿದ್ದೇಗೆ? ಈ ವಿಚಾರದಲ್ಲಿ ನಿಮಗೆ ಅಸೂಯೆ ಇದ್ಯಾ? ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲು ಫ್ಯಾಮಿಲಿ ಹಾಗೂ ಮೆಗಾ ಫ್ಯಾಮಿಲಿ ನಡುವೆ ಎಲ್ಲವೂ ಸರಿಯಿಲ್ಲ. ಇದೇ ಕಾರಣಕ್ಕೆ ಅಲ್ಲು ಅರ್ಜುನ್ ಬಗ್ಗೆ ಚಿರು ಪರೋಕ್ಷವಾಗಿ ಮಾತನಾಡಿದ್ದಾರೆ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸ್ವತಃ ಚಿರಂಜೀವಿ ಅವರಿಗೂ ಸಾಕಷ್ಟು ಪ್ರಶಸ್ತಿ ಗೌರವ ಲಭಿಸಿದೆ. ಅದನ್ನು ಯಾವ ದಾರಿಯಲ್ಲಿ ಗಳಿಸಿದ್ರು. ಇವರಿಗೆ, ಇವರ ಮಕ್ಕಳಿಗೆ ಪ್ರಶಸ್ತಿ ಕೊಟ್ಟರೆ ಸರಿ, ಬೇರೆಯವರಿಗೆ ಕೊಟ್ಟರೆ ತಪ್ಪಾ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಮೆಗಾ ಫ್ಯಾನ್ಸ್ ಮಾತ್ರ ಇದಕ್ಕೆ ತಿರುಗೇಟು ನೀಡುತ್ತಿದ್ದಾರೆ. ಅವ್ರು ಹೇಳಿದ್ದನ್ನು ಸರಿಯಾಗಿ ಅರ್ಥ ಮಾಡಿಕೊಡು ಮಾತಾಡಿ ಎನ್ನುತ್ತಿದ್ದಾರೆ.

Read more about: chiranjeevi award ramcharan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X