35 ವರ್ಷಕ್ಕೆ ಮಗು ಮಾಡ್ಕೊಂಡ್ರೆ ಕಷ್ಟಕಷ್ಟ ಎಂದಿದ್ದ ಸಮಂತಾ; ಬೇಬಿ ಬಂಪ್ ವೀಡಿಯೋ ವೈರಲ್
ತೆಲುಗು ನಟಿ ಸಮಂತಾ ತಾಯಿಯಾಗುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. 6 ತಿಂಗಳ ಹಿಂದೆ ನಿರ್ದೇಶಕ ರಾಜ್ ನಿಡುಮೊರು ಜೊತೆ ಸ್ಯಾಮ್ ಮದುವೆ ನಡೆದಿತ್ತು. ಸದ್ಯ ಆಕೆ ನಟಿಸಿರುವ 'ಮಾ ಇಂಟಿ ಬಂಗಾರಂ' ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಇದರ ಬೆನ್ನಲ್ಲೇ ಗರ್ಭಿಣಿ ಆಗಿದ್ದಾರೆ ಎನ್ನುವ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ಸಮಂತಾ ಗರ್ಭಿಣಿ ಆಗಿದ್ದಾರೆ ಎಂದು ತೆಲುಗು ಮಾಧ್ಯಮಗಳಲ್ಲಿ ಕೂಡ ಚರ್ಚೆ ಆಗ್ತಿದೆ. ಸ್ಯಾಮ್ ಸೀರೆ ಉಟ್ಟು 'ಮಾ ಇಂಟಿ ಬಂಗಾರಂ' ಸಿನಿಮಾ ಪ್ರಚಾರದಲ್ಲಿ ಭಾಗಿ ಆಗಿದ್ದರು. ಬೇಬಿ ಬಂಪ್ ಮುಚ್ಚಿಡಲು ಆಕೆ ಹೀಗೆ ಮಾಡುತ್ತಿದ್ದಾರೆ ಎಂದು ಕೆಲವರು ಭಾವಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಕಾಮೆಂಟ್ಸ್ ವೈರಲ್ ಆಗಿತ್ತು. ಕೆಲವರು ಸಮಂತಾಗೆ ಕಂಗ್ರಾಟ್ಸ್ ಹೇಳಲು ಆರಂಭಿಸಿದ್ದರು. ಸದ್ಯ ಚಿತ್ರದ ಸಕ್ಸಸ್ ಸಂಭ್ರಮಾಚರಣೆ ವೇಳೆ ಸಮಂತಾ ಬೇಬಿ ಬಂಪ್ ಗಮನಿಸಿ ಅಭಿಮಾನಿಗಳು ವೀಡಿಯೋ ವೈರಲ್ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಯಾವ ಸಮಯದಲ್ಲಿ ಮಕ್ಕಳು ಮಾಡಿಕೊಂಡ್ರೆ ಉತ್ತಮ ಎಂದು ಸ್ಯಾಮ್ ಹೇಳಿದ್ದ ವೀಡಿಯೋ ಹರಿದಾಡ್ತಿದೆ.

30 ವರ್ಷಕ್ಕೂ ಮುನ್ನ ಮಕ್ಕಳು ಮಾಡಿಕೊಳ್ಳಬೇಕು ಎಂದು ವೈದ್ಯರು ಕೂಡ ಸಲಹೆ ನೀಡುತ್ತಾರೆ. ಆಧುನಿಕ ಜೀವನಶೈಲಿ, ಗಂಡ- ಹೆಂಡತಿ ಇಬ್ಬರೂ ದುಡಿಯಲು ಆರಂಭಿಸಿರುವುದರಿಂದ ಕೆಲವರು ಪ್ರೆಗ್ನೆನ್ಸಿಯನ್ನು ಮುಂದೂಡುತ್ತಾರೆ. ನಾನಾ ಕಾರಣಗಳಿಂದ ಇದು ಸರಿಯಲ್ಲ ಎಂದು ವೈದ್ಯರು ಹೇಳುತ್ತಾರೆ. ಸಾಮಾನ್ಯವಾಗಿ ಮಹಿಳೆಯರಿಗೆ 20 ರಿಂದ 30 ಅತ್ಯುತ್ತಮ ಫಲವತ್ತತೆಯ ವಯಸ್ಸು. ಈ ಅವಧಿಯಲ್ಲಿ ಗರ್ಭಧಾರಣೆಯ ಸಾಧ್ಯತೆ. 35ನೇ ವಯಸ್ಸಿನ ನಂತರ ಫಲವತ್ತತೆ ಕುಸಿಯಲು ಆರಂಭವಾಗುತ್ತದೆ. ಅದೇ ರೀತಿ 45ರ ನಂತರ ಗರ್ಭಧಾರಣೆ ಕಷ್ಟಕರವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಮಕ್ಕಳು ಚಿಕ್ಕವರಾಗಿದ್ದು ಪೋಷಕರಿಗೆ ವಯಸ್ಸಾಗಿಬಿಟ್ಟರೆ ಕಷ್ಟ ಎನ್ನುವ ವಾದವೂ ಇದೆ. ಸಮಂತಾ ಇದೇ ವಿಚಾರದ ಬಗ್ಗೆ ಹಳೇ ಸಂದರ್ಶನವೊಂದರಲ್ಲಿ ಹೇಳಿದ್ದರು.
"ಇನ್ನೆರಡು ವರ್ಷದಲ್ಲಿ ನನಗೆ 30 ವರ್ಷ ವಯಸ್ಸಾಗುತ್ತೆ. 30 ವರ್ಷಕ್ಕೆ ಮಕ್ಕಳು ಇರ್ಬೇಕು ಎನ್ನುವ ಆಸೆ ನನಗೆ. 35 ವರ್ಷಕ್ಕೂ ಮಗು ಹುಟ್ಟಬಹುದು. ಆದ್ರೆ ಮಗುವಿಗೆ 15 ವರ್ಷ ತುಂಬುವಷ್ಟರಲ್ಲಿ ನನಗೆ 50-60 ವರ್ಷ ವಯಸ್ಸಾಗಿರುತ್ತದೆ. ಅಮ್ಮ ಆಟ ಆಡೋಣ ಬಾ ಎಂದು ಮಗು ಕರೆದರೂ ನಮ್ಮ ಕೈಯಲ್ಲಿ ಎದ್ದು ಹೋಗಿ ಆಡೋಕೆ ಸಾಧ್ಯವಾಗಬೇಕಲ್ಲ. ಆಮೇಲೆ ಮಗು ಬೇರೆ ಯಾರನ್ನೋ ಮಮ್ಮಿ ಎನ್ನಬಹುದು. ಹಾಗಾಗಿ 30 ವರ್ಷಕ್ಕೆ ಮಕ್ಕಳು ಮಾಡಿಕೊಳ್ಳಬೇಕು" ಎಂದು ಸಮಂತಾ ಜೀ- ತೆಲುಗು ಸಂದರ್ಶನದ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.
ಅಂದಹಾಗೆ ನಟಿ ಸಮಂತಾಗೆ ಈಗ ವಯಸ್ಸು 39 ವರ್ಷ. ಈ ಹಿಂದೆ ನಟ ನಾಗಚೈತನ್ಯಾ ಜೊತೆ ಸ್ಯಾಮ್ ಮದುವೆ ನಡೆದಿತ್ತು. ಏಳೆಂಟು ವರ್ಷ ಇಬ್ಬರೂ ಪರಸ್ಪರ ಪ್ರೀತಿಸಿ ಹಸೆಮಣೆ ಏರಿದ್ದರು. ಆದರೆ ಬಳಿಕ ಕೆಲ ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಪಡೆದು ದೂರಾಗಿದ್ದರು. ಅವರಿಗೆ ಮಕ್ಕಳು ಇರಲಿಲ್ಲ. ಡಿವೋರ್ಸ್ ಬಳಿಕೆ ಬೇರೆ ವ್ಯಕ್ತಿಗಳ ಜೊತೆ ಇಬ್ಬರೂ 2ನೇ ಮದುವೆ ಆಗಿದ್ದಾರೆ.
ತಮಿಳು ನಟಿ ಶೋಭಿತಾ ಜೊತೆ ನಾಗಚೈತನ್ಯ 2ನೇ ಮದುವೆ ಆಗಿದ್ದರು. ಇಬ್ಬರೂ ಪರಸ್ಪರ ಪ್ರೀತಿಸಿ ಹೊಸಬಾಳಿಗೆ ಕಾಲಿಟ್ಟಿದ್ದರು. ನಿರ್ದೇಶಕ ರಾಜ್ ನಿಡುಮೊರು ಜೊತೆ ಸಮಂತಾಗೆ ಮತ್ತೊಮ್ಮೆ ಲವ್ ಆಗಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಇಬ್ಬರು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರ. ಕೊಂಬಯತ್ತೂರಿನ ಇಶಾ ಫೌಂಡೇಷನ್‌ನಲ್ಲಿ ಮದುವೆ ನೆರವೇರಿತ್ತು. ಅದಕ್ಕೂ ಮುನ್ನ ರಾಜ್ ನಿಡುಮೊರು ಬೇರೆ ಮಹಿಳೆಯನ್ನು ಮದುವೆಯಾಗಿ ದೂರಾಗಿದ್ದರು. ಸಮಂತಾ ನಟಿಸಿದ 'ಫ್ಯಾಮಿಲಿಮ್ಯಾನ್- 2' ವೆಬ್ ಸೀರಿಸ್‌ಗೆ ರಾಜ್ ಆಕ್ಷನ್ ಕಟ್ ಹೇಳಿದ್ದರು.


Click it and Unblock the Notifications